ಭಾರತದಲ್ಲಿ ಮೈಕ್ರೋಮ್ಯಾಕ್ಸ್‌ ಇನ್‌ 2b ಸ್ಮಾರ್ಟ್‌ಫೋನ್ ಲಾಂಚ್‌ ಡೇಟ್‌ ಅಧಿಕೃತ!

|

ಸ್ವದೇಶಿ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಮೈಕ್ರೋಮ್ಯಾಕ್ಸ್ ಕೆಲ ತಿಂಗಳ ಹಿಂದೆ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಮೂಲಕ ಸಂಚಲನ ಸೃಷ್ಟಿಸಿತ್ತು. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಪ್ರಿಯರ ಮನ ಗೆಲ್ಲುವುದಕ್ಕೆ ಮುಂದಾಗಿತ್ತು. ಇದೇ ಕಾರಣಕ್ಕೆ ಹೊಸದಾಗಿ ಮೈಕ್ರೋಮ್ಯಾಕ್ಸ್‌ ಇನ್‌ ಸರಣಿ ಪರಿಚಯಿಸಿತ್ತು. ಸದ್ಯ ಇದಿಗ ಇನ್‌ ಸರಣಿಯಲ್ಲಿ ಹೊಸದಾಗಿ ಮೈಕ್ರೋಮ್ಯಾಕ್ಸ್‌ ಇನ್‌ 2b ಸ್ಮಾರ್ಟ್‌ಫೋನ್ ಪರಿಚಯಿಸಲು ಮುಂದಾಗಿದೆ. ಇದು ಇದೇ ಜುಲೈ 30 ರಂದು ಭಾರತದಲ್ಲಿ ಲಾಂಚ್‌ ಆಗಲಿದೆ.

ಮೈಕ್ರೋಮ್ಯಾಕ್ಸ್‌

ಹೌದು, ಮೈಕ್ರೋಮ್ಯಾಕ್ಸ್‌ ಕಂಪೆನಿ ಭಾರತದಲ್ಲಿ ಹೊಸ ಮೈಕ್ರೋಮ್ಯಾಕ್ಸ್‌ ಇನ್‌ 2b ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಲಿದೆ. ಕಂಪನಿಯು ಲಾಂಚ್ ಟೀಸರ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ ಬಿಡುಗಡೆ ದಿನಾಂಕ ಮಾತ್ರವಲ್ಲದೆ ಫೋನ್‌ನ ಫೀಚರ್ಸ್‌ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಹಾಗಾದ್ರೆ ಮೈಕ್ರೋಮ್ಯಾಕ್ಸ್‌ ಇನ್‌ 2b ಸ್ಮಾರ್ಟ್‌ಫೋನ್‌ ಹೇಗಿರಲಿದೆ? ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೈಕ್ರೋಮ್ಯಾಕ್ಸ್‌

ಮೈಕ್ರೋಮ್ಯಾಕ್ಸ್‌ ಹೊಸ ಮೈಕ್ರೊಮ್ಯಾಕ್ಸ್ ಇನ್ 2b ಯ ಕೆಲವು ವೈಶಿಷ್ಟ್ಯಗಳನ್ನು ಸಹ ಬಹಿರಂಗಪಡಿಸಿದೆ. ಮುಂಬರುವ ಸ್ಮಾರ್ಟ್‌ಫೋನ್ ಅಘೋಷಿತ "ಹೈ-ಪವರ್" ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದನ್ನು ಮಾಲಿ ಜಿ 52 ಜಿಪಿಯು ಬೆಂಬಲಿಸುತ್ತದೆ, ಇದು "ಸ್ಪರ್ಧೆಗೆ" ಹೋಲಿಸಿದರೆ 30 ಪ್ರತಿಶತದಷ್ಟು ಉತ್ತಮ ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಳ್ಳುತ್ತಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ವಾಟರ್‌ಡ್ರಾಪ್-ಶೈಲಿಯ ನೋಚ್ಡ್ ಡಿಸ್ಪ್ಲೇ ಹೊಂದಿದೆ. ಹಿಂಭಾಗದಲ್ಲಿ, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ, ಇದನ್ನು ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ನಲ್ಲಿ ಇರಿಸಲಾಗಿದೆ. ಅಲ್ಲದೆ ಟೀಸರ್ ಪ್ರಕಾರ ಇದು ರಿಯರ್‌ ಫಿಂಗರ್ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ. ವಾಲ್ಯೂಮ್‌ ಮತ್ತು ಪವರ್‌ ಬಟನ್‌ಗಳನ್ನು ಸ್ಕ್ರೀನ್‌ನ ರೈಟ್‌ ಎಡ್ಜ್‌ನಲ್ಲಿ ಇರಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ ರಿಯರ್‌ ಗ್ರೇಡಿಯಂಟ್ ಬ್ರೈಟ್‌ನೆಸ್‌ ಎಂಡ್‌ ಅನ್ನು ಹೊಂದಿರಲಿದೆ.

ಮೈಕ್ರೋಮ್ಯಾಕ್ಸ್

ಇದಲ್ಲದೆ ಮೈಕ್ರೋಮ್ಯಾಕ್ಸ್ ಇನ್ 2b 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಸಹ ಹೊಂದಿದೆ. ಇದು 160 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್, 20 ಗಂಟೆಗಳ ವೆಬ್ ಬ್ರೌಸಿಂಗ್, 15 ಗಂಟೆಗಳ ವಿಡಿಯೋ ಸ್ಟ್ರೀಮಿಂಗ್ ಮತ್ತು 50 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಮೈಕ್ರೋಮ್ಯಾಕ್ಸ್ ಇನ್ 2 ಬಿ ಭಾರತದಲ್ಲಿ ಜುಲೈ 30 ರಂದು ಮಧ್ಯಾಹ್ನ 12:00 ಗಂಟೆಗೆ (ಮಧ್ಯಾಹ್ನ) ಲಾಂಚ್‌ ಆಗಲಿದೆ. ಇದು ಫ್ಲಿಪ್‌ಕಾರ್ಟ್ ಮತ್ತು ಮೈಕ್ರೋಮ್ಯಾಕ್ಸಿನ್‌ಫೊ.ಕಾಮ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಫೋನ್‌ ಕಪ್ಪು, ನೀಲಿ ಮತ್ತು ಹಸಿರು ಸೇರಿದಂತೆ ಮೂರು ಬಣ್ಣ ಆಯ್ಕೆಗಳಲ್ಲಿ ನೀಡಲಾಗುವುದು.

Best Mobiles in India

English summary
Ahead of the launch, Flipkart has also published a dedicated Micromax In 2b page, confirming availability on the e-commerce platform.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X