ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್‌ ಸಿಇಒ!

By Ashwath
|

ಮೈಕ್ರೋಸಾಫ್ಟ್‌ನ ಸಿಇಒ ಆಗಿ ಭಾರತೀಯ ಮೂಲದ ಸತ್ಯ ನಾಡೆಲ್ಲಾ ನೇಮಕವಾಗುವುದು ಬಹುತೇಕ ಖಚಿತವಾಗಿದೆ.ಮೈಕ್ರೋಸಾಫ್ಟ್‌ ಆಡಳಿತ ಮಂಡಳಿ ಈ ಸಂಬಂಧ ಅಂತಿಮ ಚರ್ಚೆ‌ ನಡೆಸಿ ಸತ್ಯ ನಾಡೆಲ್ಲಾ ಹೆಸರನ್ನು ಅಂತಿಮಗೊಳಿಸಿದ್ದು ಕೆಲವೇ ದಿನಗಳಲ್ಲಿ ಮೈಕ್ರೋಸಾಫ್ಟ್‌ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ವಿದೇಶಿ ಮಾಧ್ಯಮಗಳು ಸುದ್ದಿ ಪ್ರಕಟಿಸಿದೆ.

ಮೈಕ್ರೋಸಾಫ್ಟ್‌‌ನ ಸಿಇಒ ಸ್ವೀವ್‌ ಬಾಲ್ಮರ್‌‌ ನಿವೃತ್ತಿ ಹಿನ್ನೆಲೆಯಲ್ಲಿ,ಈ ಹುದ್ದೆಗೆ ಮೈಕ್ರೋಸಾಫ್ಟ್‌‌ ಶೋಧ ನಡೆಸುತ್ತಿದ್ದು ಅಂತಿಮವಾಗಿ ಮಣಿಪಾಲದಲ್ಲಿ ಇಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದ ಸತ್ಯ ನಾಡೆಲ್ಲಾ ಅಥವಾ ಫೋರ್ಡ್ ಮೋಟಾರ್ಸ್‌‌ನ ಅಲನ್‌ ಮುಲಲೆ(Alan Mulally)ಇಬ್ಬರಲ್ಲಿ ಒಬ್ಬರು ಮೈಕ್ರೋಸಾಫ್ಟ್‌‌‌‌‌ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತ ಎಂದು ಈ ಹಿಂದೆ ಬ್ಲೂಮ್‌ಬರ್ಗ್‌ ವರದಿ ಮಾಡಿತ್ತು.

ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್‌ ಸಿಇಒ!

ಅಮೆರಿಕದ ಕ್ಲೌಡ್‌ ಕಂಪೆನಿ ಬಾಕ್ಸ್‌ನ ಸಿಇಒ ಆರನ್ ಲಿವಿ (Aaron Levie) ಇಂದು ಟ್ವೀಟರಿನಲ್ಲಿ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್‌‌ ಸಿಇಒ ಆಗಲಿರುವ ಬಗ್ಗೆ ಸುಳಿವು ನೀಡಿದ್ದು, ಮೈಕ್ರೋಸಾಫ್ಟ್‌ ಪಟ್ಟವನ್ನು ಏರಲು ಸತ್ಯ ನಾಡೆಲ್ಲಾ ಸಮರ್ಥ ವ್ಯಕ್ತಿ ಎಂದು ಟ್ವೀಟ್‌ ಮಾಡಿದ್ದಾರೆ.

<blockquote class="twitter-tweet blockquote" lang="en"><p>Satya is a *very* strong pick for CEO. Understands how to build platforms, gets the cloud, and has a solid vision for the future.</p>— Aaron Levie (@levie) <a href="https://twitter.com/levie/statuses/429016750475071488">January 30, 2014</a></blockquote> <script async src="//platform.twitter.com/widgets.js" charset="utf-8"></script>

ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ 2000ರ ಜನವರಿಯಲ್ಲಿ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದು, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಿಲ್‌ ಗೇಟ್ಸ್‌ ನಂತರ ಮೈಕ್ರೋಸಾಫ್ಟ್‌ ಕಾರ್ಯ‌ನಿರ್ವ‌ಹಣಾಧಿಕಾರಿ ಪಟ್ಟ ಸ್ಟೀವ್‌ ಬಾಲ್ಮರ್‌ಗೆ ಲಭಿಸಿತ್ತು. ಬಿಲ್‌ ಗೇಟ್ಸ್‌ ಹೊರನಡೆದಾಗ ಮೈಕ್ರೋಸಾಫ್ಟ್‌ ಕಂಪನಿ 38 ಲಕ್ಷ ಕೋಟಿ ರೂ.ನಷ್ಟು ಮಾರುಕಟ್ಟೆ ಮೌಲ್ಯ ಹೊಂದಿತ್ತು. ಆದರೆ ಕಳೆದ 13 ವರ್ಷಗಳಲ್ಲಿ ಕಂಪನಿಯ ಮೌಲ್ಯ 17 ಲಕ್ಷ ಕೋಟಿ ರೂ.ಗೆ ಇಳಿದಿತ್ತು.

ಕಂಪೆನಿಯ 38 ವರ್ಷದ ಇತಿಹಾಸದಲ್ಲಿ ಮೈಕ್ರೋಸಾಫ್ಟ್‌ನ್ನು ಇದುವರೆಗೆ ಎರಡು ಸಿಇಒಗಳು ಮುನ್ನಡೆಸಿದ್ದರು. ಈಗ ಎರಡನೇ ಸಿಇಒ ಸ್ಟೀವ್‌ ಬಾಲ್ಮರ್‌ ಅಗಸ್ಟ್‌‌ ತಿಂಗಳಿನಲ್ಲಿ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಈಗ ಮೈಕ್ರೋಸಾಫ್ಟ್‌ ಆಡಳಿತ ಮಂಡಳಿ ಮೂರನೇ ಸಿಇಒ ನೇಮಕಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಈ ಪಟ್ಟವನ್ನು ಏರುವ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಐವರು ಮೈಕ್ರೋಸಾಫ್ಟ್‌ ಉದ್ಯೋಗಿಗಳು ಮುಂಚೂಣಿಯಲ್ಲಿದ್ದರು.

ಸತ್ಯ ನಾಡೆಲ್ಲಾ:
ಹೈದರಾಬಾದ್‌‌ನವರಾದ ಸತ್ಯ, ಮಣಿಪಾಲ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡಿದ್ದಾರೆ. ಸನ್‌ ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಯಾಗಿದ್ದ ಅವರು 1992ರಲ್ಲಿ ಮೈಕ್ರೋಸಾಫ್ಟ್ ಸೇರಿಕೊಂಡಿದ್ದರು. ಪ್ರಸ್ತುತ ಮೈಕ್ರೋಸಾಫ್ಟ್‌‌ ಕ್ಲೌಡ್‌ ಮತ್ತು ಎಂಟರ್‌ಪ್ರೈಸ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

ಇದನ್ನೂ ಓದಿ: ವಿಶ್ವದ ಪ್ರಶಂಸನೀಯ ವ್ಯಕ್ತಿ ಬಿಲ್‌ ಗೇಟ್ಸ್‌‌-ಪಟ್ಟಿಯಲ್ಲಿ ಸಚಿನ್‌,ಮೋದಿ ಹೆಸರು

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X