ಮೈಕ್ರೋಸಾಫ್ಟ್‌‌,ಗೂಗಲ್‌ ಟ್ರೆಂಡ್ಸ್‌: ಭಾರತ ಸಿನಿ ಪ್ರಿಯರ ದೇಶ

Posted By:

ಗೂಗಲ್‌ ಮತ್ತು ಮೈಕ್ರೋಸಾಫ್ಟ್‌ ಗಳು ಈ ವರ್ಷ‌ ವಿವಿಧ ದೇಶಗಳಲ್ಲಿ ತಮ್ಮ ಸರ್ಚ್‌ ಎಂಜಿನ್‌ನಲ್ಲಿ ಹೆಚ್ಚು ಜನ ಹುಡುಕಿದ ವ್ಯಕ್ತಿ,ಸುದ್ದಿಗಳನ್ನು ಪ್ರಕಟಿಸಿವೆ. ಎಲ್ಲಾ ದೇಶಗಳಲ್ಲಿ ಬೇರೆ ಬೇರೆ ವಿಷಯಗಳ ಬಗ್ಗೆ ಜನ ಸರ್ಚ್ ಮಾಡಿದ್ದರೆ, ನಮ್ಮ ದೇಶದ ಜನರ ಆಸಕ್ತಿ ಮಾತ್ರ ಭಿನ್ನ.

ಈ ವರ್ಷ ಚುನಾವಣೆ,ಭ್ರಷ್ಚಚಾರ,ವಿವಾದದ ಸುದ್ದಿಗಳಿಗೆ ಏನು ಕೊರತೆ ಇರಲಿಲ್ಲ.ಆದರೆ ನಮ್ಮ ದೇಶದ ಜನ ಇಂಟರ್‌ನೆಟ್‌ನಲ್ಲಿ ಈ ವಿಚಾರವನ್ನು ಸರ್ಚ್‌ ಮಾಡುವುದರ ಜೊತೆಗೆ ಮನರಂಜನಾ ಕ್ಷೇತ್ರದ ವಿಚಾರವನ್ನೇ ಹೆಚ್ಚು ಸರ್ಚ್‌ ಮಾಡಿದ್ದಾರೆ. ಎರಡು ಕಂಪೆನಿಗಳ ಟ್ರೆಂಡ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮನರಂಜನಾ ಕ್ಷೇತ್ರ ಅದರಲ್ಲೂ ಬಾಲಿವುಡ್‌‌ ಸಿನಿಮಾ ಕ್ಷೇತ್ರವೊಂದೆ ಆಲಂಕರಿಸಿದೆ. ಈ ಮೂಲಕ ಮನರಂಜನಾ ವಿಷಯವನ್ನು ಹೆಚ್ಚು ಸರ್ಚ್‌ ಮಾಡಿದ ದೇಶವಾಗಿ ಭಾರತ ಹೊರಹೊಮ್ಮಿದೆ.

ಮೈಕ್ರೋಸಾಫ್ಟ್‌‌,ಗೂಗಲ್‌ ಟ್ರೆಂಡ್ಸ್‌: ಭಾರತ ಸಿನಿ ಪ್ರಿಯರ ದೇಶ

ಮೈಕ್ರೋಸಾಫ್ಟ್‌ ಬಿಡುಗಡೆ ಮಾಡಿದ ತನ್ನ ಟಾಪ್‌ ಟೆನ್‌ ಸೆಲೆಬ್ರಿಟಿ ಪಟ್ಟಿಯಲ್ಲಿ ಸಚಿನ್‌ ತೆಂಡೂಲ್ಕರ್‌‌ ಮಾತ್ರ ಸ್ಥಾನಗಳಿಸಿದ್ದರೆ, ಉಳಿದ ಒಂಭತ್ತು ರ್‍ಯಾಂಕ್‌ಗಳು ಬಾಲಿವುಡ್‌ ಸೆಲೆಬ್ರಿಟಿಗಳ ಪಾಲಾಗಿದೆ.

ಇನ್ನು ಗೂಗಲ್‌ ಟ್ರೆಂಡ್ಸ್‌  ಟಾಪ್‌ ಟ್ರೆಂಡಿಂಗ್‌‌ ಟಾಪಿಕ್‌ನಲ್ಲಿ ಚೆನ್ನೈ ಎಕ್ಸ್‌ಪ್ರೆಸ್‌ ಪ್ರಥಮ ಸ್ಥಾನಗಳಿಸಿದರೆ, ಅತಿ ಹೆಚ್ಚು ಹುಡುಕಿದ ವ್ಯಕ್ತಿಗಳ ಪೈಕಿ ಸನ್ನಿಲಿಯೋನ್‌ ಆದಿಯಾಗಿ ಒಂಭತ್ತು ಮಂದಿ ಬಾಲಿವುಡ್‌ ಸೆಲೆಬ್ರೆಟಿಗಳು ರ್‍ಯಾಂಕ್‌‌‌ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.

ಈ ಹಿಂದೆ ಸಂಸ್ಥೆಯೊಂದು ಯಾವ ದೇಶ ಯಾವುದಕ್ಕೆ ಫೇಮಸ್ಸು ಎನ್ನುವ ಒಂದು ಮ್ಯಾಪ್‌ ವರದಿಯನ್ನು ತಯಾರಿಸಿ ಭಾರತ ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ದವಾಗಿದೆ ಎಂದು ಹೇಳಿತ್ತು.ಈಗ ಗೂಗಲ್‌ ಮತ್ತು ಮೈಕ್ರೋಸಾಫ್ಟ್‌‌ ವರದಿಯಿಂದಾಗಿ ಈ ಸಂಸ್ಥೆ ಭಾರತಕ್ಕೆ ನೀಡಿದ ಸ್ಥಾನದ ವರದಿ ಮತ್ತೊಮ್ಮೆನಿಜವಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot