ನೆಟ್ ನ್ಯೂಟ್ರಲಿಟಿ: ಅಂತರ್ಜಾಲ ಉಳಿಸಿರಿ ಅಭಿಯಾನ

Written By:

ನೆಟ್ ನ್ಯೂಟ್ರಲಿಟಿ ಎಂಬ ಪದದ ಸುತ್ತ ಹಲವಾರು ಚರ್ಚೆಗಳು ನಡೆಯುತ್ತಿದೆ. ಸಮಾನ ರೀತಿಯಲ್ಲಿ ಎಲ್ಲಾ ವಿಷಯ ಮತ್ತು ಅಪ್ಲಿಕೇಶನ್‌ಗಳ ಪ್ರವೇಶವನ್ನು ಗ್ರಾಹಕರಿಗೆ ಇಂಟರ್ನೆಟ್ ಒದಗಿಸುವವರು ನೀಡಬೇಕು ಎಂಬುದು ಇದರ ಹಿಂದಿರುವ ತತ್ವವಾಗಿದೆ.

ನೆಟ್ ನ್ಯೂಟ್ರಲಿಟಿ: ಅಂತರ್ಜಾಲ ಉಳಿಸಿರಿ ಅಭಿಯಾನ

ಟೆಲಿಕಾಮ್ ರೆಗ್ಯುಲೇಟರ್‌ಗಳು ಇಂಟರ್ನೆಟ್ ಸೌಲಭ್ಯವನ್ನು ಪಡೆಯುವ ಗ್ರಾಹಕರ ಮೇಲೆ ಕೆಲವೊಂದು ಕಟ್ಟುಪಾಡುಗಳನ್ನು ಹೇರುತ್ತಿರುವುದು ನೆಟ್ ನ್ಯೂಟ್ರಲಿಟಿಯ ಉಗಮಕ್ಕೆ ಕಾರಣವಾಗಿದೆ.

ಓದಿರಿ: ಸ್ಮಾರ್ಟ್‌ಫೋನ್‌ನ ಸುರಕ್ಷಾ ಕವಚಗಳಾಗಿರುವ 10 ಸಲಹೆಗಳು

ನೆಟ್ ನ್ಯೂಟ್ರಾಲಿಟಿ ಎಂದರೇನು?
ಇಂಟರ್ನೆಟ್‌ನಲ್ಲಿರುವ ಎಲ್ಲಾ ಟ್ರಾಫಿಕ್ ಅನ್ನು ಸಮಾನವಾಗಿ ಕಾಣಬೇಕು ಎಂದಾಗಿದೆ. ನೀವು ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುತ್ತಿರಿ ಇಲ್ಲವೇ ಯೂಟ್ಯೂಬ್‌ನಲ್ಲಿ ವೀಡಿಯೊ ನೋಡುತ್ತಿರಿ, ವೆಬ್‌ನಲ್ಲಿ ಬರುವ ಎಲ್ಲಾ ಮಾಹಿತಿಯನ್ನು ಸಮಾನವಾಗಿ ಉಪಚರಿಸಬೇಕು ಎಂದಾಗಿದೆ. ಅಂದರೆ ನೆಟ್‌ವರ್ಕ್ ಒದಗಿಸುವವರಾದ ಏರ್‌ಟೆಲ್‌ನಂತಹ ಕಂಪೆನಿಗಳು ವೆಬ್‌ನಲ್ಲಿನ ನಿಮ್ಮ ವೆಬ್‌ಸೈಟ್ ಪ್ರವೇಶವನ್ನು ಬ್ಲಾಕ್ ಮಾಡುವುದು ಇಲ್ಲವೇ ನಿಧಾನಗೊಳಿಸುವಂತಿಲ್ಲ.

ಓದಿರಿ: ಉದ್ಯೋಗ ಅರಸುತ್ತಿರುವವರಿಗೆ ವರದಾಯಕ ಅಪ್ಲಿಕೇಶನ್‌ಗಳು

ಮುಕ್ತ ಅಂತರ್ಜಾಲ
ಐಎಸ್‌ಪಿ ಎಲ್ಲಾ ವಿಷಯಗಳು ಅಂತೆಯೇ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಒದಗಿಸಿದೆ. ಮತ್ತು ಯಾವುದೇ ವೆಬ್‌ಸೈಟ್ ಅಥವಾ ಉತ್ಪನ್ನಗಳಿಗೆ ನಿರ್ಬಂಧವನ್ನು ಹೇರಿಲ್ಲ. ಇಂಟರ್ನೆಟ್ ಸೇವೆ ಒದಗಿಸುವವರು (ಐಎಸ್‌ಪಿ) ಸ್ಕೈಪ್‌ನಂತಹ ಸಂಸ್ಥೆಗಳಿಗೆ ಟ್ರಾಫೀಕ್ ಬ್ಲಾಕ್ ಮಾಡುವಲ್ಲಿಂದ ನಿರ್ಬಂಧವನ್ನು ಹೇರಿದೆ. ತಮ್ಮ ಕಂಪ್ಯೂಟರ್ ಸೇವೆಗಳಿಗೆ ಲಾಭವಾಗುವಂತೆ ಇಂಟರ್ನೆಟ್ ವ್ಯವಸ್ಥೆಯನ್ನು ನಿಧಾನಗೊಳಿಸುವ ಯಾವುದೇ ಸೇವೆಗಳಲ್ಲಿ ಇದು ಮೂಗುತೂರಿಸುವಂತಿಲ್ಲ.

ಏರ್‌ಟೆಲ್ ಜೀರೊ ಮತ್ತು ನೆಟ್ ನ್ಯೂಟ್ರಾಲಿಟಿ
ಟೆಕ್ ಕಂಪೆನಿಗಳು ಅಂತೆಯೇ ದೊಡ್ಡ ಸಂಸ್ಥೆಗಳಿಂದ ಪಾವತಿಸುವ ಡೇಟಾ ಶುಲ್ಕಗಳಿಂದಾಗಿ ಉಚಿತವಾಗಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಏರ್‌ಟೆಲ್ ಜೀರೊ ಅನುಮತಿಸುತ್ತದೆ. ಉದಾಹರಣೆಗೆ ಏರ್‌ಟೆಲ್‌ನ ಏರ್‌ಟೆಲ್ ಜೀರೊ ಸೇವೆಗಾಗಿ ಸ್ನ್ಯಾಪ್‌ಡೀಲ್ ಕಂಪೆನಿಯೊಂದಿಗೆ ಪಾಲುದಾರನಾಗಿದೆ ಎಂದಲ್ಲಿ, ಸ್ನ್ಯಾಪ್‌ಡೀಲ್ ಅನ್ನು ನೀವು ಬಳಸುತ್ತಿರುವಾಗ ನೀವು ಬಳಸಿದ ಡೇಟಾಗೆ ನೀವು ಪಾವತಿಸುವಂತಿಲ್ಲ ಬದಲಿಗೆ ಸ್ನ್ಯಾಪ್‌ಡೀಲ್‌ಗೆ ಏರ್‌ಟೆಲ್ ಶುಲ್ಕ ವಿಧಿಸುತ್ತದೆ.

ಓದಿರಿ: ನಿಮ್ಮನ್ನೇ ಖೈದಿಯನ್ನಾಗಿಸುವ ವಿಚಿತ್ರ ವಾಟ್ಸಾಪ್ ತಂತ್ರ

ರೆಗ್ಯುಲೇಟರ್ ಎಂದರೆ ಯಾರು?
ಟ್ರೈ ಅಥವಾ ಟೆಲಿಕಾಮ್ ರೆಗ್ಯುಲೇಟರಿ ಅಥೊರಿಟಿ ಇಂಡಿಯಾ, ಭಾರತದಲ್ಲಿ ಎಲ್ಲಾ ಇಂಟರ್ನೆಟ್ ಪ್ರವೇಶವನ್ನು ನಿಯಂತ್ರಿಸುತ್ತದೆ. ಮತ್ತು ಇದೀಗ ಗ್ರಾಹಕರು ಅಂತೆಯೇ ವ್ಯವಹಾರಗಳಿಂದ ಹೆಚ್ಚು ಹಣವನ್ನು ಪಡೆದುಕೊಳ್ಳಲು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಏರ್‌ಟೆಲ್ ಮತ್ತು ವೊಡಾಪೋನ್‌ಗಳನ್ನು ಅನುಮತಿಸುವ ಯೋಜನೆಯಲ್ಲಿದೆ. ಇದು "ನೆಟ್ ನ್ಯೂಟ್ರಾಲಿಟಿಯ ತೀವ್ರ ಉಲ್ಲಂಘನೆಯಾಗಿದೆ".

ಯೋಜನೆಗೆ ಸೇರುವುದು ಹೇಗೆ #SaveTheInternet?
ನೀವು ಇಂಟರ್ನೆಟ್ ಬಳಕೆಯನ್ನು ಸರಿಯಾದ ವಿಧಾನದಲ್ಲಿ ಮಾಡುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಂಡು, ನೆಟ್ ನ್ಯೂಟ್ರಾಲಿಟಿಗಾಗಿ ಹೋರಾಡಿ
ಮೊದಲಿಗೆ ಗಿಜ್‌ಬಾಟ್ ಕನ್ನಡ Save The ಇಂಟರ್ನೆಟ್ ಮನವಿ ಪುಟಕ್ಕೆ ಹೋಗಿ.
ಸರಳ ಹಂತಗಳನ್ನು ಭರ್ತಿ ಮಾಡಿ ಮತ್ತು ಟ್ರೈ ಪರವಾಗಿ ನಾವು ನಿಮಗೆ ಇಮೇಲ್ ಕಳುಹಿಸುತ್ತೇವೆ.
ಸಲ್ಲಿಕೆಗೆ ಕೊನೆಯ ದಿನಾಂಕ ಶುಕ್ರವಾರ, ಏಪ್ರಿಲ್ 24 ಆಗಿದೆ.
ಇದೇ ಸಮಯದಲ್ಲಿ, ನಿಮ್ಮ ಪ್ರತಿಕ್ರಿಯೆಯನ್ನು advqos@trai.gov.in ಗೆ ಕೂಡ ಸಲ್ಲಿಸಬಹುದಾಗಿದೆ.
ಮನವಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ ಸೇವೆಗಳಿಗೆ ಪ್ರತ್ಯೇಕ ಬೆಲೆಯನ್ನು ನಿಗದಿಪಡಿಸದಿರಿ ಮತ್ತು ಇಂಟರ್ನೆಟ್ ಅನ್ನು ಹೇಗೆ ಬಳಸಬೇಕು ಎಂಬ ಆಯ್ಕೆಯನ್ನು ಗ್ರಾಹಕರಿಗೆ ನೀಡಿ.

English summary
Over the past few days, a lot has been said about the term ‘Net Neutrality'. Basically it is the principle that says internet providers should give consumers access to all content and applications on an equal basis.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot