ಹಾರ್ಟೊಗ್ರಫಿ: ನಿಮ್ಮ ನಾಯಿಯ ಹೃದಯ ಬಡಿತ ಸಾಕು ಫೋಟೋ ಕ್ಲಿಕ್ಕಿಸಲು

By Shwetha
|

ಪ್ರಾಣಿಗಳು ನಿಮ್ಮ ಕ್ಯಾಮೆರಾ ತೆಗೆದುಕೊಂಡು ಫೋಟೋ ತೆಗೆಯುವ ಕ್ರಿಯಾತ್ಮಕತೆ ತಂತ್ರಜ್ಞಾನಕ್ಕೆ ಬಂದಲ್ಲಿ ಎಷ್ಟು ಒಳ್ಳೆಯದು ಅಲ್ಲವೇ? ಇನ್ನು ಈ ವಿಷಯದಲ್ಲಿ ಸೋಜಿಗವನ್ನು ಅನುಭವಿಸುವ ಸರದಿ ನಿಮ್ಮದಾಗಲಿ ಏಕೆಂದರೆ ನಿಮ್ಮ ಸಾಕು ನಾಯಿ ನಿಮ್ಮ ಫೋಟೋ ತೆಗೆಯುವ ವಿಶಿಷ್ಟ ತಂತ್ರಜ್ಞಾನ ಮಟ್ಟಕ್ಕೆ ನೀವು ತಲೆದೂಗಲೇಬೇಕು.

ಓದಿರಿ: ಸೋಲಿಗೆ ಸಡ್ಡುಹೊಡೆದ ಟೆಕ್ ಜಗದ ಮಿಂಚು ನಕ್ಷತ್ರಗಳು

ಹಾರ್ಟೊಗ್ರಫಿ: ನಿಮ್ಮ ನಾಯಿಯ ಹೃದಯ ಬಡಿತ ಸಾಕು ಫೋಟೋ ಕ್ಲಿಕ್ಕಿಸಲು

ನಿಕೋನ್ ಇತ್ತೀಚೆಗೆ ತಾನೇ ವಿಶ್ವದ ಪ್ರಥಮ ಕ್ಯಾನಿನ್ ಫೋಟೋಗ್ರಾಫರ್ ಪ್ರಾಜೆಕ್ಟ್ ಆದ ಹಾರ್ಟೊಗ್ರಫಿಯನ್ನು ಚಾಲನೆಗೆ ತಂದಿದೆ. ಅಂದರೆ ಇದನ್ನು ಬಳಸಿ ಇನ್ನು ನಿಮ್ಮ ಪ್ರೀತಿಯ ನಾಯಿ ಕೂಡ ನಿಮ್ ಫೋಟೋ ತೆಗೆಯಬಹುದಾಗಿದೆ.

ಓದಿರಿ: ನಿಮ್ಮನ್ನು ಸ್ಮಾರ್ಟ್ ಆಗಿಸುವ ಟಾಪ್ 10 ಟೆಕ್ ಉತ್ಪನ್ನಗಳು

ಇಂತಹುದೇ ಒಂದು ಡಿವೈಸ್ ಅನ್ನು ನಿಕೋನ್ ಅಭಿವೃದ್ಧಿಪಡಿಸಿದೆ. ಇದನ್ನು ನಿಮ್ಮ ನಾಯಿಯ ಕೊರಳಿಗೆ ನೇತು ಹಾಕಿದರೆ ಸಾಕು ಡಿವೈಸ್ ತನ್ನಷ್ಟಕ್ಕೆ ತಾನೇ ಫೋಟೋವನ್ನು ತೆಗೆಯುತ್ತದೆ.

ಹಾರ್ಟೊಗ್ರಫಿ: ನಿಮ್ಮ ನಾಯಿಯ ಹೃದಯ ಬಡಿತ ಸಾಕು ಫೋಟೋ ಕ್ಲಿಕ್ಕಿಸಲು

ನಾಯಿಯ ಹೃದಯ ಬಡಿತಕ್ಕೆ ಅನುಗುಣವಾಗಿ ಡಿವೈಸ್‌ಗೆ ಸಂದೇಶವನ್ನು ಕಳುಹಿಸಿ ಫೋಟೋವನ್ನು ತೆಗೆಯುತ್ತದೆ. ಇದರಲ್ಲಿರುವ ಇಲಾಸ್ಟಿಕ್ ಬ್ಯಾಂಡ್ ನಾಯಿಯ ಹೃದಯ ಬಡಿತವನ್ನು ಪತ್ತೆಹಚ್ಚುತ್ತದೆ ಬ್ಲ್ಯೂಟೂತ್ ಅನ್ನು ಬಳಸಿಕೊಂಡು ಇದು ಮಾಹಿತಿಯನ್ನು ಹಾರ್ಟೊಗ್ರಫಿ ಸ್ಮಾರ್ಟ್‌ಕೇಸ್‌ಗೆ ಕಳುಹಿಸುತ್ತದೆ ಇದು ಕ್ಯಾಮೆರಾದಲ್ಲಿದೆ.

ಓದಿರಿ: ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?

ಹಾರ್ಟೊಗ್ರಫಿ: ನಿಮ್ಮ ನಾಯಿಯ ಹೃದಯ ಬಡಿತ ಸಾಕು ಫೋಟೋ ಕ್ಲಿಕ್ಕಿಸಲು

ನಾಯಿಯ ಹೃದಯ ಬಡಿತದ ಏರಿಳಿತಕ್ಕೆ ಅನುಗುಣವಾಗಿ ಕೇಸ್‌ನಲ್ಲಿರುವ ಮೈಕ್ರೋಕಂಟ್ರೋಲರ್ ಸಕ್ರಿಯಗೊಳ್ಳುತ್ತದೆ ಮತ್ತು ಶಟರ್ ಅನ್ನು ಒತ್ತುತ್ತದೆ, ಇದು ಶಾಟ್ ಅನ್ನು ಫೋಕಸ್ ಮಾಡಿ ಫೋಟೋ ತೆಗೆಯುತ್ತದೆ.

Best Mobiles in India

English summary
Nikon recently introduced what it's calling the world's first canine photographer in a project called Heartography (notice my deliberately avoiding the use of the term phodographer).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X