Subscribe to Gizbot

ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?

Written By:

ಹೆಚ್ಚು ಜನಪ್ರಿಯವಾದ ಮೊಬೈಲ್ ಅಪ್ಲಿಕೇಶನ್ ಆಗಿ ಪ್ರಖ್ಯಾತಿಯನ್ನು ಹೊಂದಿರುವ ವಾಟ್ಸಾಪ್‌ನ ಕೆಲವೊಂದು ಅನೂಹ್ಯ ಅಂಶಗಳನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ ಮಾತ್ರವಲ್ಲದೆ ಐಫೋನ್, ಬ್ಲ್ಯಾಕ್‌ಬೆರ್ರಿ ಮೊಬೈಲ್ ಫೋನ್‌ಗಳಿಗೂ ಸಿಸ್ಟಮ್‌ಗಳಿಗೂ ವಾಟ್ಸಾಪ್ ಲಭ್ಯವಿದೆ.

ಓದಿರಿ: ಸೋಲಿಗೆ ಸಡ್ಡುಹೊಡೆದ ಟೆಕ್ ಜಗದ ಮಿಂಚು ನಕ್ಷತ್ರಗಳು

ಕೆಳಗಿನ ಸ್ಲೈಡರ್‌ಗಳಲ್ಲಿ ವಾಟ್ಸಾಪ್‌ನ ಕೆಲವೊಂದು ಸಲಹೆ ಸೂಚನೆಗಳನ್ನು ನಾವು ನೀಡುತ್ತಿದ್ದು ಇದು ಅತಿ ವಿಶೇಷ ಎಂದೆನಿಸಿದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸದೇ ವಾಟ್ಸಾಪ್ ಬಳಸುವುದು ಹೇಗೆ ಎಂಬುದೇ ಇಂದಿನ ವಾಟ್ಸಾಪ್ ವಿಶೇಷತೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅನ್‌ಇನ್‌ಸ್ಟಾಲ್

ಹಂತ: 1

ನಿಮ್ಮ ಮೊಬೈಲ್‌ನಿಂದ ವಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಿ

ಪ್ಲೇ ಸ್ಟೋರ್‌

ಹಂತ: 2

ಪ್ಲೇ ಸ್ಟೋರ್‌ನಿಂದ ಪುನಃ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ಇನ್‌ಸ್ಟಾಲ್ ಮಾಡಿ (ಇದು ಹೆಚ್ಚು ಪ್ರಮುಖವಾಗಿದೆ)

ಸಂದೇಶ ಸೇವೆ

ಹಂತ: 3

ಸಂದೇಶ ಸೇವೆಯನ್ನು ನಿಷ್ಕ್ರಿಯಗೊಳಿಸಿ (ಫ್ಲೈಟ್ ಮೋಡ್ ಸಕ್ರಿಯಗೊಳಿಸಿ)

ಮೊಬೈಲ್ ಸಂಖ್ಯೆಯನ್ನು ನಮೂದಿಸಿ

ಹಂತ: 4

ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಫ್ಲೈಟ್ ಮೋಡ್

ಹಂತ: 5

ಇದೀಗ ತನ್ನ ಸರ್ವರ್‌ಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಲು ಸಾಧ್ಯವಾಗದು. ನಿಮ್ಮ ಮೊಬೈಲ್‌ನಲ್ಲಿ ಫ್ಲೈಟ್ ಮೋಡ್ ಸಕ್ರಿಯಗೊಂಡಿದೆ ಎಂಬುದನ್ನು ಖಾತ್ರಿಪಡಿಸಿ.

ಪರ್ಯಾಯ ವ್ಯವಸ್ಥೆ

ಹಂತ: 6

ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ನಿಮಗೆ ಪರ್ಯಾಯ ವ್ಯವಸ್ಥೆಯನ್ನು ವಾಟ್ಸಾಪ್ ಕಲ್ಪಿಸುತ್ತದೆ.

ಇಮೇಲ್ ವಿಳಾಸ

ಹಂತ: 7

"ಚೆಕ್ ತ್ರು ಎಸ್‌ಎಮ್‌ಎಸ್" ಎಂಬುದನ್ನು ಆರಿಸಿ ಮತ್ತು ನಿಮ್ಮ ಇಮೇಲ್ ವಿಳಾಸ ನಮೂದಿಸಿ.

ದೃಢೀಕರಣ ಪ್ರಕ್ರಿಯೆ

ಹಂತ: 8

ಕಳುಹಿಸು ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಕೂಡಲೇ ಕ್ಯಾನ್ಸಲ್ ಬಟನ್ ಅನ್ನು ಒತ್ತಿರಿ. ದೃಢೀಕರಣ ಪ್ರಕ್ರಿಯೆಯನ್ನು ಅಂತ್ಯಗೊಳಿಸಲು ಇದು ಅಗತ್ಯವಾಗಿದೆ.

ಸ್ಪೂಫ್ ಸಂದೇಶ

ಹಂತ: 9

ನಿಮ್ಮ ಮೊಬೈಲ್‌ನಲ್ಲಿ ಸ್ಪೂಫ್ ಸಂದೇಶಗಳ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಔಟ್‌ಬಾಕ್ಸ್‌ಗೆ ಹೋಗಿ ಮತ್ತು ಸಂದೇಶ ವಿವರಗಳನ್ನು ನಕಲಿಸಿಕೊಳ್ಳಿ ಮತ್ತು ಅದನ್ನು ಸ್ಪೂಫ್‌ಡ್ ಪರಿಶೀಲನೆಗೆ ಕಳುಹಿಸಿ.

ಸ್ನೇಹಿತರೊಂದಿಗೆ ಸಂಪರ್ಕ

ಹಂತ: 10

ನಿಮ್ಮ ದೇಶದ ಕೋಡ್ ಮೊಬೈಲ್ ಸಂಖ್ಯೆ ನಿಮ್ಮ ಇಮೇಲ್ ವಿಳಾಸ ಮಾಹಿತಿಗಳನ್ನು ಸ್ಪೂಫ್‌ಡ್ ಸಂದೇಶಗಳಲ್ಲಿ ನಮೂದಿಸಿ ಇದರ ನಂತರ ಸ್ಪೂಫ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಲಾಗುತ್ತದೆ ಮತ್ತು ಈ ಸಂಖ್ಯೆಯನ್ನು ಬಳಸಿಕೊಂಡು ವಾಟ್ಸಾಪ್‌ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕವನ್ನು ನಡೆಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the Top secret whatsapp tips for your mobile. These tips are considered as best tips for your mobile. Without mentioning mobile number in whatsapp how can we install whatsapp this is the thing here we discussed.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot