ವೇಟಿಂಗ್ ಲಿಸ್ಟ್‌ನಲ್ಲಿರುವ ಟಿಕೆಟ್ ಕನ್‌ಫರ್ಮ್ ಆದ್ರೆ ಮೆಸೇಜ್ ಬರುತ್ತೆ
ವೇಟಿಂಗ್ ಲಿಸ್ಟ್‌ನಲ್ಲಿರುವ ಟಿಕೆಟ್ ಕನ್‌ಫರ್ಮ್ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಇನ್ನು ಮುಂದೆ ಪದೇ ಪದೇ ರೈಲ್ವೇ ವೆಬ್‌ಸೈಟ್‌ಗೆ ಹೋಗಿ ಪರೀಕ್ಷಿಸಬೇಕಾಗಿಲ್ಲ. ರೈಲ್ವೇ ಇಲಾಖೆಯೇ ಟಿಕೆಟ್ ಕನ್‌ಫರ್ಮ್ ಆಗಿರುವ ಬಗ್ಗೆ ಪ್ರಯಾಣಿಕರಿಗೆ ಮೆಸೇಜ್ ಮೂಲಕ ಮಾಹಿತಿ ಕಳುಹಿಸಲು ಮುಂದಾಗುತ್ತಿದೆ.
ವೇಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರ ಟಿಕೆಟ್ ಕನ್‌ಫರ್ಮ್ ಆದ ಕೂಡಲೇ ಸ್ವಯಂ ಚಾಲಿತವಾಗಿ ಮೆಸೇಜ್ ಕಳುಹಿಸುವ ಹೊಸ ಸಾಫ್ಟ್‌ವೇರ್ ಭಾರತೀಯ ರೈಲ್ವೇ ಅಳವಡಿಸಿಕೊಂಡಿದೆ.ಈ ಸಾಫ್ಟ್‌ವೇರ್ ವೇಟಿಂಗ್ ಲಿಸ್ಟ್‌ನನಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕನ್‌ಫರ್ಮ್ ಆದ ಕೂಡಲೇ ಎಸ್‌ಎಂಎಸ್ ಕಳುಹಿಸುತ್ತದೆ.
ಒಂದು ವೇಳೆ ಈ ವ್ಯವಸ್ಥೆ ಜಾರಿಗೆಯಾಗಿರದಿದ್ದಲ್ಲಿ ವೇಟಿಂಗ್ ಲಿಸ್ಟ್‌ನಲ್ಲಿದ್ದ ಪ್ರಯಾಣಿಕರು ಟಿಕೆಟ್ ಕನ್‌ಫರ್ಮ್ ಮಾಡಿಕೊಳ್ಳಲು ರೈಲ್ವೇ ವೆಬ್‌ಸೈಟ್‌ಗೆ ಹೋಗಿ ಪರೀಕ್ಷಿಸಬೇಕಿತ್ತು, ಇಲ್ಲವೇ 139ಕ್ಕೆ ಎಸ್‌ಎಎಸ್ ಮಾಡಿ ತಿಳಿದುಕೊಳ್ಳಬೇಕಿತ್ತು. ಈ ಎರಡು ವಿಚಾರಗಳ ಮಾಹಿತಿ ಇಲ್ಲದವರು ರೈಲ್ವೇ ಸ್ಟೇಷನ್ ಹೋಗಿ ಕನ್‌ಫರ್ಮ್ ಮಾಡಬೇಕಿತ್ತು. ಸದ್ಯಕ್ಕೆ ಈ ಸೇವೆ ಆರಂಭಗೊಂಡಿಲ್ಲ,ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

ಭಾರತೀಯ ರೈಲ್ವೇ ಕಳೆದ ವರ್ಷದ ಬಜೆಟ್‌ನಲ್ಲಿ irctc ವೆಬ್ ಸೈಟ್ ತೊಂದರೆ ವರ್ಷಾಂತ್ಯಕ್ಕೆ ನಿವಾರಣೆ ಮಾಡುವುದಾಗಿ ಹೇಳಿತ್ತು.ಆದರಂತೆ ಕಳೆದ ವರ್ಷದಿಂದ ರೇಲ್ವೇ ಇಲಾಖೆ ಪ್ರಯಾಣಿಕರಿಗೆ ಸುಲಭವಾಗಿ ಟೆಕೆಟ್ ಬುಕ್ಕಿಂಗ್ ಮಾಡಲು ಎಸ್‌ಎಂಎಸ್ ಬುಕ್ಕಿಂಗ್, ಸ್ಮಾರ್ಟ್‌ಫೋನ್‌ನಲ್ಲಿ ಟಿಕೆಟ್ ಬುಕ್ ಮಾಡಲು ಆಂಡ್ರಾಯ್ಡ್,ವಿಂಡೋಸ್ ಆಪ್‌ಗಳನ್ನು ಬಿಡುಗಡೆ ಮಾಡಿತ್ತು.
ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.


Click it and Unblock the Notifications