ಭಾರತದಲ್ಲಿ ಸಂಚರಿಸಲಿರುವ ಉಚಿತ ವೈಫೈ ಒಪೇರಾ ಕಾರು
ಒಪೇರಾ ಸಾಫ್ಟ್‌ವೇರ್, ವೆಬ್ ಆನ್ ವೀಲ್ಸ್ ಅಂದರೆ ವಿಶೇಷ ತಾಂತ್ರಿಕ ವ್ಯವಸ್ಥೆಯುಳ್ಳ ಡಬ್ಲ್ಯೂಒಡಬ್ಲ್ಯೂ ಕಾರನ್ನು ಸಿದ್ಧಪಡಿಸಿದೆ. ಇದು ಉಚಿತ ವೈಫೈಯನ್ನು ಒದಗಿಸುವ ಕಾರು ಆಗಿದೆ. ಹೊಸ ಬಳಕೆದಾರರಿಗೆ ಇಂಟರ್ನೆಟ್‌ನ ಸರ್ವ ವಿಧದ ಪ್ರಯೋಜನವೂ ಲಭಿಸಬೇಕೆಂಬ ಬಯಕೆಯಿಂದ ಸಂಸ್ಥೆ ಈ ರೀತಿಯ ಕಾರನ್ನು ಸಿದ್ಧಪಡಿಸಿದೆ.

ಮುಂದಿನ ಹತ್ತು ತಿಂಗಳಲ್ಲಿ ಡಬ್ಲ್ಯೂಒಡಬ್ಲ್ಯೂ ಕಾರು ಭಾರತದಾದ್ಯಂತ ಸಂಚರಿಸಲಿದ್ದು, 20 ನಗರಗಳನ್ನು ಇದು ಕವರ್ ಮಾಡಲಿದೆ. ಆಗ್ರಾ, ಮೊದಲ ಸ್ಟಾಪ್ ಎಂದೆನಿಸಿದೆ.
ಓದಿರಿ: ಏಲಿಯನ್‌ಗಳನ್ನು ಹುಡುಕುತ್ತಾ ಒಂದು ಸತ್ಯಾನ್ವೇಷಣೆ
ಇನ್ನು ಡಬ್ಲ್ಯೂಒಡಬ್ಲ್ಯೂ ಕಾರಿನಲ್ಲಿರುವ ಉಚಿತ ಇಂಟರ್ನೆಟ್ ಪ್ರವೇಶಿಸಲು ಮೊಬೈಲ್ ಬಳಕೆದಾರರು ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ
ಓದಿರಿ: ಇನ್ನು ನಿಮ್ಮ ಫೋನ್ ಮುಟ್ಟುವ ಧೈರ್ಯ ಯಾರಿಗೂ ಇಲ್ಲ ಬಿಡಿ
ಫೋನ್‌ನ ವೈಫೈ ಸೆಟ್ಟಿಂಗ್ ಅನ್ನು ಆನ್ ಮಾಡಿಟ್ಟುಕೊಂಡಿರಬೇಕು ಮತ್ತು ತಮ್ಮ ವೈರ್‌ಲೆಸ್ ನೆಟ್‌ವರ್ಕ್ ಆಯ್ಕೆಗಳಿಂದ ಒಪೇರಾ ಮಿನಿ ಉಚಿತ ವೈಫೈಯನ್ನು ಆಯ್ಕೆಮಾಡಬೇಕು
.ಒಪೇರಾ ಮಿನಿ ಬ್ರೌಸರ್ ಅನ್ನು ತೆರೆಯಿರಿ. ಸೈನ್ ಇನ್ ಸ್ಕ್ರೀನ್ ಗೋಚರಿಸುತ್ತದೆ
.ನಿಮ್ಮ ಡೀಟೈಲ್‌ಗಳನ್ನು ಸೈನ್ ಇನ್ ಮಾಡಿ ಮತ್ತು ಒನ್ ಟೈಮ್ ಪಾಸ್‌ವರ್ಡ್ ನಮೂದಿಸಿ.
ಓದಿರಿ: ಫೇಸ್‌ಬುಕ್‌ನಲ್ಲಿ 30 ಬಿಲಿಯನ್ ಮೃತ ವ್ಯಕ್ತಿಗಳ ಖಾತೆ!!!
ಸೈನ್ ಇನ್ ಆದ ನಂತರ ಬಳಕೆದಾರರು 20 ನಿಮಿಷಗಳ ಉಚಿತ ಇಂಟರ್ನೆಟ್ ಸೌಲಭ್ಯವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಸಮಯದಲ್ಲಿ ಇವರು ಖರ್ಚು ಮಾಡುವ ಡೇಟಾಗೆ ಯಾವುದೇ ಮಿತಿ ಇರುವುದಿಲ್ಲ ಅಂತೆಯೇ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳಬಹುದಾಗಿದೆ.


Click it and Unblock the Notifications








