Subscribe to Gizbot

ಇನ್ನು ನಿಮ್ಮ ಫೋನ್ ಮುಟ್ಟುವ ಧೈರ್ಯ ಯಾರಿಗೂ ಇಲ್ಲ ಬಿಡಿ

Posted By: Staff

ನೀವು ಎಷ್ಟು ದುಬಾರಿ ಸ್ಮಾರ್ಟ್‌ಫೋನ್ ಅನ್ನು ಹೊಂದಿದ್ದೀರಿ ಎಂಬುದಕ್ಕಿಂತಲೂ ನಿಮ್ಮ ಫೋನ್ ಏನೆಲ್ಲಾ ಭದ್ರತೆಗಳನ್ನು ಹೊಂದಿದೆ ಎಂಬುದನ್ನು ಕಂಡುಕೊಳ್ಳಬೇಕು. ಇಂಟರ್ನೆಟ್ ಇದ್ದೆಡೆಯಲ್ಲೆಲ್ಲಾ ಫೋನ್ ಮೂಲಕ ಆನ್‌ಲೈನ್ ಸೌಲಭ್ಯವನ್ನು ಪಡೆದುಕೊಳ್ಳುವುದು, ಆಂಟಿವೈರಸ್ ಅಪ್‌ಡೇಟ್ ಅನ್ನು ಫೋನ್‌ನಲ್ಲಿ ಮಾಡಿಕೊಳ್ಳದೇ ಇರುವುದು, ಡೇಟಾ ಬ್ಯಾಕಪ್ ಅನ್ನು ಹೊಂದಿಲ್ಲದೇ ಇರುವುದು ನಿಮ್ಮ ಫೋನ್ ಅನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಕ್ಕಿಸಿಬಿಡುತ್ತದೆ.

ಓದಿರಿ: ಬಳಕೆದಾರರನ್ನು ಸೆಳೆಯಲು ಫೇಸ್‌ಬುಕ್ ತಂತ್ರ ಏನು ಗೊತ್ತೇ?

ಆದ್ದರಿಂದ ನಿಮ್ಮ ಫೋನ್‌ನ ಭದ್ರತಾ ಕವಚಗಳು ಹೇಗಿರಬೇಕು ಎಂಬುದನ್ನು ಕುರಿತು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈಫೈ

ಸಾರ್ವಜನಿಕ ವೈಫೈ

ನೀವು ಸಾರ್ವಜನಿಕ ವೈಫೈ ಪ್ರವೇಶವನ್ನು ನಿಮ್ಮ ಫೋನ್‌ಗೆ ಪಡೆದುಕೊಳ್ಳುತ್ತಿದ್ದೀರಿ ಎಂದಾದಲ್ಲಿ ಪಾಸ್‌ವರ್ಡ್ ಹೊಂದಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

ಫೋನ್‌ನ ಭದ್ರತೆ

ಆಂಟಿ ಥೆಪ್ಟ್ ಆಪ್ಸ್

ನಿಮ್ಮ ಫೋನ್‌ನ ಭದ್ರತೆಗಾಗಿ ಆಂಟಿ ಥೆಪ್ಟ್ ಆಪ್ಸ್ ಅನ್ನು ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಅವಾಸ್ತ್ ಆಂಟಿ ಥೆಪ್ಟ್ ಉತ್ತಮ ಆಪ್ಸ್ ಆಗಿದೆ.

ಅಪ್ಲಿಕೇಶನ್‌

ಆಂಟಿ ಮಾಲ್‌ವೇರ್ ಮತ್ತು ಆಂಟಿವೈರಸ್ ಅಪ್ಲಿಕೇಶನ್

ನಿಮ್ಮ ಸ್ಮಾರ್ಟ್‌ಫೋನ್‌ಗೆ ಈ ಎರಡೂ ಅಪ್ಲಿಕೇಶನ್‌ಗಳು ಅತಿಮುಖ್ಯವಾಗಿದೆ. ಇದು ಫೋನ್‌ನಲ್ಲಿರುವ ಅಪಾಯಗಳನ್ನು ನಿವಾರಿಸುತ್ತದೆ.

ಬ್ಯಾಕಪ್

ಡೇಟಾ ಬ್ಯಾಕಪ್ ಸಿದ್ಧಪಡಿಸಿ

ನಿಮ್ಮ ಅತಿಮುಖ್ಯವಾದ ಡೇಟಾದ ನಕಲಿ ಪ್ರತಿಗಳ ಬ್ಯಾಕಪ್ ಅನ್ನು ಇರಿಸಿಕೊಳ್ಳಿ. ನಿಮ್ಮ ಫೋನ್‌ಗೆ ಏನಾದರೂ ಹಾನಿಯಾದಲ್ಲಿ ಮುಖ್ಯ ಡೇಟಾ ನಷ್ಟಗೊಳ್ಳದೆ ಹಾಗೆಯೇ ಇರುತ್ತದೆ.

ಸಕ್ರಿಯ

ಅಪ್ಲಿಕೇಶನ್ ಅನುಮತಿಗಳು

ನೀವು ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಸಂದರ್ಭದಲ್ಲಿ, ಅಪ್ಲಿಕೇಶನ್ ಅನುಮತಿ ಸಕ್ರಿಯವಾಗಿರುವಂತೆ ಗಮನಿಸಿಕೊಳ್ಳಿ. ಅನುಮತಿ ಹೊಂದದೇ ಇರುವ ಅಪ್ಲಿಕೇಶನ್‌ಗಳು ಫೋನ್‌ನಲ್ಲಿರುವ ಅತಿಮುಖ್ಯ ಡಾಕ್ಯುಮೆಂಟ್‌ಗಳನ್ನು ಮಾರಿಬಿಡಬಹುದು.

ಅಧಿಕೃತ ಸ್ಟೋರ್‌

ಅಧಿಕೃತ ಸ್ಟೋರ್‌ಗಳಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ನೀವು ಪ್ರಮುಖವಾದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಿದ್ದೀರಿ ಎಂದಾದಲ್ಲಿ ಅದನ್ನು ಅಧಿಕೃತ ಸ್ಟೋರ್‌ಗಳಾದ ಅಂದರೆ ಆಪಲ್ ಸ್ಟೋರ್, ಗೂಗಲ್ ಪ್ಲೇ ಸ್ಟೋರ್‌ಗಳಿಂದಲೇ ಡೌನ್‌ಲೋಡ್ ಮಾಡಿಕೊಳ್ಳಿ.

ರಿಮೋಟ್ ವೈಪ್

ರಿಮೋಟ್ ವೈಪ್ ಆಯ್ಕೆ

ನಿಮ್ಮ ಫೋನ್ ಕಳೆದುಹೋದಲ್ಲಿ ರಿಮೋಟ್ ವೈಪ್ ಡೇಟಾ ಫೋನ್‌ನ ಎಲ್ಲಾ ಮಾಹಿತಿಯನ್ನು ಅಳಿಸಿ ಹಾಕುತ್ತದೆ. ನಿಮ್ಮ ಫೋನ್‌ನ ರಕ್ಷಾ ಕವಚವಾಗಿ ಇದು ಕಾರ್ಯನಿರ್ವಹಿಸುತ್ತದೆ.

ಆಫ್ ಮಾಡಿ

ಜಿಪಿಎಸ್, ವೈಫೈ, ಬ್ಲ್ಯೂಟೂತ್ ಆಫ್ ಮಾಡಿ

ನೀವು ಬಳಸುತ್ತಿಲ್ಲ ಎನ್ನುವ ಸಂದರ್ಭದಲ್ಲಿ ಜಿಪಿಎಸ್, ವೈಫೈ, ಬ್ಲ್ಯೂಟೂತ್ ಆಫ್ ಮಾಡಿ

ಉಳಿಸದಿರಲು ಪ್ರಯತ್ನಿಸಿ

ಪಾಸ್‌ವರ್ಡ್‌ಗಳನ್ನು ಉಳಿಸದಿರಲು ಪ್ರಯತ್ನಿಸಿ

ನಿಮ್ಮೆಲ್ಲಾ ಪಾಸ್‌ವರ್ಡ್‌ಗಳನ್ನು ಉಳಿಸುವುದರಿಂದ ಖಾತೆಗಳಿಗೆ ಇದು ಸುಲಭದ ಮಾರ್ಗ ಎಂದೆನಿಸುತ್ತದೆ. ಅತಿಮುಖ್ಯ ಪಾಸ್‌ವರ್ಡ್‌ಗಳು ಅಂದರೆ ಬ್ಯಾಂಕ್ ಖಾತೆ ದಾಖಲೆ ಹೊಂದಿರುವ ಪಾಸ್‌ವರ್ಡ್‌ಗಳನ್ನು ಉಳಿಸದಿರಿ.

ಲಾಗ್ ಔಟ್

ಶಾಪಿಂಗ್ ನಂತರ ಲಾಗ್ ಔಟ್ ಆಗಿ

ನಿಮ್ಮ ಫೋನ್‌ನಿಂದ ಬ್ಯಾಂಕಿಂಗ್ ಇಲ್ಲವೇ ಶಾಪಿಂಗ್ ಅನ್ನು ನೀವು ಮಾಡುತ್ತಿದ್ದೀರಿ ಎಂದಾದಲ್ಲಿ ಅದಾದ ಬಳಿಕ ಲಾಗ್ ಔಟ್ ಆಗಲು ಮರೆಯದಿರಿ.

ಪಾಪ್ ಅಪ್ ಜಾಹೀರಾತು

ಪಾಪ್ ಅಪ್ ಜಾಹೀರಾತುಗಳಿಂದ ದೂರವಿರಿ

ನೀವು ಡೌನ್‌ಲೋಡ್ ಮಾಡಿಕೊಳ್ಳುವಂತಹ ಅಪ್ಲಿಕೇಶನ್‌ಗಳು ಪಾಪ್ ಅಪ್ ಜಾಹೀರಾತುಗಳನ್ನು ಹೊಂದಿದೆ ಎಂದಾದಲ್ಲಿ ಆ ಅಪ್ಲಿಕೇಶನ್ ಕೈಬಿಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There are people and elements that can cost you your hard-earned money and privacy. There are also various ways to ensure that nobody gets your information. Here are 11 tips to strengthen the security of your smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot