ಫೇಸ್‌ಬುಕ್‌ನಲ್ಲಿ 30 ಬಿಲಿಯನ್ ಮೃತ ವ್ಯಕ್ತಿಗಳ ಖಾತೆ!!!

By Shwetha
|

ನಾವು ಇಂಟರ್ನೆಟ್‌ಗೆ ಪ್ರವೇಶಿಸಿದ್ದಲ್ಲಿ ಫೇಸ್‌ಬುಕ್‌ಗೆ ಒಂದು ಸುತ್ತು ಹಾಕದೇ ಹೊರಬರುವ ಮಾತೇ ಇರುವುದಿಲ್ಲ. ಸ್ನೇಹಿತರ ಹೊಸ ಹೊಸ ಫೋಟೋ, ಫೋಸ್ಟ್‌ಗಳಿಗೆ ಲೈಕ್, ಕಾಮೆಂಟ್, ಶೇರ್‌ಗಳನ್ನು ಮಾಡುವುದು ಮಾತ್ರವಲ್ಲದೆ ನಮಗೆ ತಿಳಿಯದೇ ಇರುವ ಸಾಕಷ್ಟು ಮಾಹಿತಿಗಳನ್ನು ಈ ಜಾಲತಾಣದಿಂದ ನಾವು ಪಡೆದುಕೊಳ್ಳುತ್ತೇವೆ.

ಓದಿರಿ: ಫೇಸ್‌ಬುಕ್ ಒಡೆಯನ ಶ್ವಾನಕ್ಕೆ 2 ಮಿಲಿಯನ್ ಫಾಲೋವರ್ಸ್ ಅಂತೆ

ಅಂತಹುದ್ದು ಇದರಲ್ಲಿ ಏನಿದೆ ಎಂದು ಮೂಗುಮುರಿಯುತ್ತಿದ್ದವರೇ ಇಂದು ಫೇಸ್‌ಬುಕ್‌ನ ಕಟ್ಟಾ ಅಭಿಮಾನಿಗಳಾಗಿರುವುದು ವಿಪರ್ಯಾಸ. ಇದರಲ್ಲೇನಿದೆ ಮಹಾ ಎಂಬ ಅಸಡ್ಡೆಯಲ್ಲಿಯೇ ನಮ್ಮನ್ನು ಅನ್ವೇಷಣೆಗೆ ತಳ್ಳುವ ತಾಕತ್ತನ್ನು ವಿಶ್ವದ ಅತಿದೊಡ್ಡ ಜಾಲತಾಣ ಹೊಂದಿದೆ ಎಂಬುದಾಗಿ ಎದೆಉಬ್ಬಿಸಿ ಹೇಳಬಹುದು.

ಓದಿರಿ: ಬಳಕೆದಾರರನ್ನು ಸೆಳೆಯಲು ಫೇಸ್‌ಬುಕ್ ತಂತ್ರ ಏನು ಗೊತ್ತೇ?

ಫೇಸ್‌ಬುಕ್ ಬಗ್ಗೆ ಎಲ್ಲವೂ ಗೊತ್ತಿದೆ ಎಂದು ಭಾವಿಸಿಕೊಂಡವರನ್ನು ಬೆಚ್ಚಿ ಬೀಳಿಸುವ ಕೆಲವೊಂದು ನಿಜ ಘಟನೆಗಳನ್ನು ಇಂದಿನ ಲೇಖನದಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಅದು ಏನು ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್ ಕ್ಲಿಕ್ ಮಾಡಿ.

4 ಸಂಖ್ಯೆಯ ಚಮತ್ಕಾರ

4 ಸಂಖ್ಯೆಯ ಚಮತ್ಕಾರ

ಫೇಸ್‌ಬುಕ್ ಯುಆರ್‌ಎಲ್‌ಗೆ 4 ಅಂಕೆಯನ್ನು ಸೇರಿಸುವುದು ನಿಮ್ಮನ್ನು ನೇರವಾಗಿ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಪುಟಕ್ಕೆ ಕೊಂಡೊಯ್ಯುತ್ತದೆ.

ನೀಲಿ ಬಣ್ಣ

ನೀಲಿ ಬಣ್ಣ

ಮಾರ್ಕ್ ಜುಕರ್‌ಬರ್ಗ್‌ಗೆ ಬಣ್ಣದ ಅಂಧತ್ವ ಇರುವುದರಿಂದ ಫೇಸ್‌ಬುಕ್ ಬಣ್ಣ ನೀಲಿಯಾಗಿದೆ.

ಫೇಸ್‌ಬುಕ್ ನೋಟಿಫಿಕೇಶನ್

ಫೇಸ್‌ಬುಕ್ ನೋಟಿಫಿಕೇಶನ್

ನಿಮ್ಮ ಸ್ಥಾನಕ್ಕೆ ಅನುಗುಣವಾಗಿ ಫೇಸ್‌ಬುಕ್ ನೋಟಿಫಿಕೇಶನ್ ಟ್ಯಾಬ್ ಗ್ಲೋಬ್ ಬದಲಾಗುತ್ತದೆ

ಫೇಸ್‌ಬುಕ್ ಮುಖ್ಯ ಪರದೆ

ಫೇಸ್‌ಬುಕ್ ಮುಖ್ಯ ಪರದೆ

ಫೇಸ್‌ಬುಕ್ ತನ್ನ ಮುಖ್ಯಪರದೆಯಲ್ಲಿ ಅಲ್ ಪೆಸಿನೊಸ್ ಮುಖವನ್ನು ಹೊಂದಿತ್ತು

ಹ್ಯಾಕಿಂಗ್ ಸಂಭವ

ಹ್ಯಾಕಿಂಗ್ ಸಂಭವ

ಹಲವಾರು ಫೇಸ್‌ಬುಕ್ ಖಾತೆಗಳಲ್ಲಿ ಪ್ರತೀ ದಿನ 6 ಲಕ್ಷ ಹ್ಯಾಕಿಂಗ್ ಸಂಭವಗಳು ನಡೆಯುತ್ತವೆಯಂತೆ

ಫೇಸ್‌ಬುಕ್ ಟ್ರ್ಯಾಕಿಂಗ್

ಫೇಸ್‌ಬುಕ್ ಟ್ರ್ಯಾಕಿಂಗ್

ನೀವು ಲಾಗ್ ಔಟ್ ಮಾಡಿದ ನಂತರ ಕೂಡ ನೀವು ಭೇಟಿ ನೀಡಿದ ವೆಬ್‌ಸೈಟ್‌ಗಳನ್ನು ಫೇಸ್‌ಬುಕ್ ಟ್ರ್ಯಾಕ್ ಮಾಡುತ್ತದೆ

ಸರ್ವರ್

ಸರ್ವರ್

ನಿಮ್ಮ ಸ್ಟೇಟಸ್ ಅಪ್‌ಡೇಟ್ ಬಾಕ್ಸ್‌ಗೆ ನೀವು ಹಾಕಿದ ಪ್ರತೀ ಪಠ್ಯವು ಫೇಸ್‌ಬುಕ್ ಸರ್ವರ್‌ಗೆ ಹೋಗುತ್ತದೆ. ನೀವು ಅದನ್ನು ಪೋಸ್ಟ್ ಮಾಡದೇ ಇದ್ದಲ್ಲೂ ಸರ್ವರ್ ಅನ್ನು ಅದು ತಲುಪುತ್ತದೆ

ಮೃತ ವ್ಯಕ್ತಿಗಳು

ಮೃತ ವ್ಯಕ್ತಿಗಳು

ಫೇಸ್‌ಬುಕ್‌ನಲ್ಲಿ 30 ಮಿಲಿಯನ್ ಮೃತ ವ್ಯಕ್ತಿಗಳ ಖಾತೆ ಇದೆ

ಚೀನಾದಲ್ಲಿ ನಿಷೇಧ

ಚೀನಾದಲ್ಲಿ ನಿಷೇಧ

2009 ರಿಂದೀಚೆಗೆ ಫೇಸ್‌ಬುಕ್ ಅನ್ನು ಚೀನಾದಲ್ಲಿ ನಿಷೇಧಿಸಲಾಗಿದೆ.

ಲೈಕ್ ಬಟನ್

ಲೈಕ್ ಬಟನ್

ಫೇಸ್‌ಬುಕ್‌ನಲ್ಲಿರುವ ಲೈಕ್ ಬಟನ್ ಅನ್ನು ಮೂಲತಃ ಅಸಾಮಾನ್ಯ (ಆಸಮ್) ಎಂಬುದಾಗಿ ಕರೆಯಲಾಗುತ್ತದೆ.

ಫೇಕ್ ಬಳಕೆದಾರರು

ಫೇಕ್ ಬಳಕೆದಾರರು

8.7% ದಷ್ಟು ಫೇಸ್‌ಬುಕ್ ಬಳಕೆದಾರರು ನಕಲಿಗಳಾಗಿದ್ದಾರೆ.

ಮಾರ್ಕ್ ಜುಕರ್‌ಬರ್ಗ್

ಮಾರ್ಕ್ ಜುಕರ್‌ಬರ್ಗ್

ಫೇಸ್‌ಬುಕ್‌ನಲ್ಲಿ ಮಾರ್ಕ್ ಜುಕರ್‌ಬರ್ಗ್ ಅನ್ನು ನಿಮಗೆ ಬ್ಲಾಕ್ ಮಾಡಲಾಗುವುದಿಲ್ಲ

ಜುಕರ್‌ಬರ್ಗ್ ಸಂಬಳ

ಜುಕರ್‌ಬರ್ಗ್ ಸಂಬಳ

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ $1 ಅನ್ನು ಸಂಬಳವನ್ನಾಗಿ ಪಡೆದುಕೊಳ್ಳುತ್ತಾರೆ

ಜನಪ್ರಿಯ ದೇಶ

ಜನಪ್ರಿಯ ದೇಶ

ಫೇಸ್‌ಬುಕ್ ಎಲ್ಲಿಯಾದರೂ ದೇಶವಾಗಿದ್ದಲ್ಲಿ ಇದು ವಿಶ್ವದಲ್ಲೇ ಅತಿ ಹೆಚ್ಚಿನ ಮನ್ನಣೀಯ ದೇಶವಾಗುತ್ತಿತ್ತು. ಏಕೆಂದರೆ ಪ್ರತೀ ತಿಂಗಳು 1.39 ಬಿಲಿಯ ಜನರು ಫೇಸ್‌ಬುಕ್‌ಗೆ ಲಾಗಿನ್ ಮಾಡುತ್ತಾರೆ.

ಕಡಲುಗಳ್ಳರ ಭಾಷೆ

ಕಡಲುಗಳ್ಳರ ಭಾಷೆ

ಕಡಲುಗಳ್ಳರಂತೆ ನಿಮಗೆ ಮಾತನಾಡಬೇಕೇ? ನಿಮ್ಮ ಖಾತೆಗೆ ಲಾಗಿನ್ ಮಾಡಿ. ಸೆಟ್ಟಿಂಗ್ಸ್‌ಗೆ ಹೋಗಿ. ಭಾಷೆಯನ್ನು ಎಡಿಟ್ ಮಾಡಿ ಮತ್ತು ಇಂಗ್ಲೀಷ್ (ಪೈರೇಟ್) ಆಯ್ಕೆಮಾಡಿ.

Best Mobiles in India

English summary
even though we spend most of our time on Facebook, do we really know everything about it? I mean apart from the name of the founder, that is. Check out these amazing facts about the world's favourite social networking website and get ready to be amazed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X