ರಿಲಯನ್ಸ್ ಬಳಕೆದಾರರಿಗೆ ಆ್ಯಪ್ ಟು ಆ್ಯಪ್ ಕರೆ ಮಾಡುವ ಯೋಜನೆ.

|

ಗ್ರಾಹಕರು ಉತ್ತಮ ಕರೆ ಗುಣಮಟ್ಟದೊಂದಿಗೆ ಆ್ಯಪ್ ಟು ಆ್ಯಪ್ ಕರೆ ಮಾಡಲು ಮತ್ತು ತನ್ನ ಗ್ರಾಹಕರಿಗೆ ಶೀಘ್ರ ಸಂಪರ್ಕಿಸಲು ಸಾಧ್ಯವಾಗುವಂತೆ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್.ಕಾಮ್) 'ಕರೆ ಮಾಡುವ ಹೊಸ ವಿಧಾನ’ (ಕಾಲಿಂಗ್ ಕಾ ನಯಾ ತರೀಕಾ)ವನ್ನು ಚಾಲ್ತಿಗೆ ತಂದಿದೆ. ಇದು ಈಗಾಗಲೇ ಇರುವ ಗ್ರಾಹಕರಿಗೆ ಮತ್ತು ಹೊಸ ಗ್ರಾಹಕರಿಗೂ ಲಭ್ಯವಾಗಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ರಿಲಯನ್ಸ್ ಬಳಕೆದಾರರಿಗೆ ಆ್ಯಪ್ ಟು ಆ್ಯಪ್ ಕರೆ ಮಾಡುವ ಯೋಜನೆ.

ಭಾರತದಾದ್ಯಂತ 'ಕರೆ ಮಾಡುವ ಹೊಸ ವಿಧಾನ’ (ಕಾಲಿಂಗ್ ಕಾ ನಯಾ ತರೀಕಾ) ಯೋಜನೆಯನ್ನು ಬಿಡುಗಡೆಗೊಳಿಸಿರುವ ಆರ್.ಕಾಮ್ ಆ್ಯಪ್ ಟು ಆ್ಯಪ್ ಕರೆಯನ್ನು ಭಾರತದೊಳಗೆ ಮತ್ತು ವಿಶ್ವದಾದ್ಯಂತ 39 ರುಪಾಯಿಗೆ 300 ನಿಮಿಷಗಳಷ್ಟು ಮಾತನಾಡುವ ಸೌಲಭ್ಯವನ್ನು ಪರಿಚಯಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ಲೀಕೊ ಸೂಪರ್ ಫೋನ್ಸ್ ಮೇಲೆ ವಿಶೇಷ ಆಫರ್

“ಆರ್.ಕಾಮ್ ನ 850MHz ಬ್ಯಾಂಡಿನ 4ಜಿ ಎಲ್.ಟಿ.ಇ ನೆಕ್ಸ್ಟ್ ಜೆನ್ ಕರೆಗಳಿಗೆ ಮತ್ತು ಅಂತರ್ಜಾಲ ಬಳಕೆಗೆ ಅತ್ಯುತ್ತಮವಾದ ಬ್ಯಾಂಡ್ ಎಂದು ವಿಶ್ವದೆಲ್ಲೆಡೆ ಪರಿಗಣಿಸಲಾಗಿದೆ. ಇದು ಸರಿಸಾಟಿಯಿಲ್ಲದ ಬಳಕೆಯ ಅನುಭವವನ್ನು ನೀಡುತ್ತದೆ” ಎಂದು ಹೇಳಿಕೆಯು ತಿಳಿಸಿದೆ.

ಓದಿರಿ: ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಸೂಪರ್ ಫೋನ್‌ಗಳು

ಈ ಹೊಸ ಯೋಜನೆಯು ಆರ್.ಕಾಮ್ ಗ್ರಾಹಕರು ಜಿಯೋಚಾಟ್, ವಾಟ್ಸ್ ಅಪ್, ಎಫ್.ಬಿ ಮೆಸೆಂಜರ್, ಸ್ಕೈಪ್, ಗೂಗಲ್ ಹ್ಯಾಂಗ್ ಔಟ್, ಇಮೊ ಹಾಗೂ ವೈಬರ್ ನಂತರ ಆ್ಯಪ್ ಗಳನ್ನು ಉಪಯೋಗಿಸಿಕೊಂಡು ಪ್ರಪಂಚದ ಯಾವ ಮೂಲೆಗೆ ಬೇಕಾದರೂ ಕರೆ ಮಾಡುವ ಸೌಕರ್ಯವನ್ನು ಒದಗಿಸಿದೆ.

ರಿಲಯನ್ಸ್ ಬಳಕೆದಾರರಿಗೆ ಆ್ಯಪ್ ಟು ಆ್ಯಪ್ ಕರೆ ಮಾಡುವ ಯೋಜನೆ.

“ಆರ್.ಕಾಮ್ ಗೆ ಗುಜರಾತಿನೊಡನೆ ಯಾವತ್ತಿಗೂ ಒಂದು ಭಾವನಾತ್ಮಕ ಸಂಬಂಧವಿದೆ, ಈ ಹೊಸ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಬಿಡುಗಡೆಗೊಳಿಸುವುದಕ್ಕೆ ನಮಗೆ ಸಂತಸವಾಗುತ್ತಿದೆ, ಆ್ಯಪ್ ಟು ಆ್ಯಪ್ ಮೂಲಕ ಭಾರತದಾದ್ಯಂತ, ಪ್ರಪಂಚದೆಲ್ಲೆಡ ಕರೆ ಮಾಡಿ ಮಾತನಾಡಿ” ಎಂದು ರಿಲಯನ್ಸ್ ಕಮ್ಯುನಿಕೇಷನ್ಸಿನ ಗ್ರಾಹಕ ವ್ಯವಹಾರದ ಸಿ.ಇ.ಒ ಗುರುದೀಪ್ ಸಿಂಗ್ ಹೇಳಿದರು.

ಓದಿರಿ: ಪ್ರಪ್ರಥಮ ಆಕ್ಷನ್‌ ಕ್ಯಾಮೆರಾ ಫೋನ್‌ 'ಕ್ಯೋಸೆರಾ ಡ್ಯುರಾಫೋರ್ಸ್ ಪ್ರೊ'!

“ನಮ್ಮ ನೆಕ್ಸ್ಟ್ ಜೆನ್ 4ಜಿ ಎಲ್.ಟಿ.ಇ ನೆಟ್ ವರ್ಕನ್ನು ಬಳಸಿಕೊಂಡು, ಗ್ರಾಹಕರು ಹೆಚ್.ಡಿ ಗುಣಮಟ್ಟವನ್ನು ಅನುಭವಿಸಬಹುದು ಮತ್ತು ತತ್ ಕ್ಷಣದ ಸಂಪರ್ಕ ಪಡೆಯಬಹುದು, ನಿಧಾನಗತಿಯ ಅಂತರ್ಜಾಲದಿಂದ ಮತ್ತು ಡಿಜಿಟಲ್ ಸೂಪರ್ ಹೈವೇಯ ಡಾಟಾ ವೇಗದಿಂದ ಮುಕ್ತಿ ಪಡೆಯಬಹುದು. ಅಡೆತಡೆಯಿಲ್ಲದ ಹೆಚ್.ಡಿ ವೀಡಿಯೋ ಸ್ಟ್ರೀಮಿಂಗ್, ಅತಿ ವೇಗದ ಅಪ್ ಲೋಡಿಂಗ್ ಹಾಗೂ ಚಿತ್ರ, ಸಂಗೀತ, ಸಿನಿಮಾಗಳನ್ನು ಅತಿ ವೇಗದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು” ಎಂದವರು ಹೇಳಿದರು.

ರಿಲಯನ್ಸ್ ಬಳಕೆದಾರರಿಗೆ ಆ್ಯಪ್ ಟು ಆ್ಯಪ್ ಕರೆ ಮಾಡುವ ಯೋಜನೆ.

ಆರ್.ಕಾಮ್ ನ ನೆಕ್ಸ್ಟ್ ಜೆನ್ ಸೇವೆಗಳು ಸ್ಮಾರ್ಟ್ ಫೋನ್ ಉಪಯೋಗಿಸುವವರಿಗೆ ಮತ್ತು ವೈ ಪಾಡ್ ಡಾಟಾ ಆ್ಯಕ್ಸೆಸ್ ಸಾಧನವನ್ನು ಬಳಸುವವರಿಗೆ ಲಭ್ಯವಿದೆ. ದೇಶದಾದ್ಯಮತ ಇರುವ ಕಂಪನಿಯ ರಿಲಯನ್ಸ್ ಸ್ಟೋರ್ಸ್ ಗಳಲ್ಲಿ ಕಿಯೋಸ್ಕ್ ಗಳನ್ನು ಹಾಗೂ ಪ್ರಾತ್ಯಕ್ಷಿಕೆಯನ್ನು ಇಡಲಾಗಿದೆ.

ಮೂಲ: ಐ.ಎ.ಎನ್.ಎಸ್

Most Read Articles
Best Mobiles in India

English summary
Aiming to offer better app-to-app voice calls with high-definition quality and instant connections to its customers, Reliance Communications (RCOM) has launched 'Calling Ka Naya Tareeka' for its existing and new customers, a company statement said here on Wednesday.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more