ಪ್ರಪ್ರಥಮ ಆಕ್ಷನ್‌ ಕ್ಯಾಮೆರಾ ಫೋನ್‌ 'ಕ್ಯೋಸೆರಾ ಡ್ಯುರಾಫೋರ್ಸ್ ಪ್ರೊ'!

By Suneel
|

ಪ್ರವಾಸಿ ತಾಣಕ್ಕೆ ಹೋಗಬೇಕಾದ್ರೆ ಜೊತೆಯಲ್ಲಿ ಒಂದು ಸ್ಮಾರ್ಟ್‌ಫೋನ್‌ ಇರಬೇಕು, ಆಗಾಗ ಒಳ್ಳೆ ಬ್ಯಾಕ್‌ಗ್ರೌಂಡ್ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿ ಕೊಳ್ಳೋಕೆ ಕ್ಯಾಮೆರಾ ಒಂದು ಇರಲೇ ಬೇಕು. ಈ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸೋಕೆ ಮತ್ತೊಬ್ಬರು ಬೇಕೇ ಬೇಕಲ್ಲಾ, ಈ ಸಮಸ್ಯೆಗೆ ಪರಿಹಾರ ಹುಡುಕಿದಾಗ ಸಿಕ್ಕಿದ್ದು ಸೆಲ್ಫಿ ಸ್ಟಿಕ್‌. ವೆಲ್.

ಸೆಲ್ಫಿ ಸ್ಟಿಕ್‌ ಎನೋ ಬಂತು ಆದ್ರೆ ಆದ್ರೂ ಸಹ ಸೆಲ್ಫಿ ಸ್ಟಿಕ್‌ನಲ್ಲಿ ಫ್ರೊಫೆಶನಲ್ ಫೋಟೋಗಳನ್ನು ಕ್ಲಿಕ್ಕಿಸೋಕೆ ಆಗೋದಿಲ್ಲಾ ಅಲ್ವಾ. ಈ ಕಾರಣದಿಂದಲೇ ಈಗ ಸ್ಮಾರ್ಟ್‌ಫೋನ್‌ ಒಂದು ಸೆಲ್ಫಿ ಕ್ಯಾಮೆರಾ, ಹಿಂಭಾಗ ಕ್ಯಾಮೆರಾ ಜೊತೆಗೆ ಆಕ್ಷನ್‌ ಕ್ಯಾಮೆರಾವನ್ನು ಸಹ ಒಳಗೊಂಡಂತೆ ಅಭಿವೃದ್ದಿಗೊಂಡಿದೆ.

ಸೆಲ್ಫಿ ಕ್ಯಾಮೆರಾ, ಹಿಂಭಾಗ ಕ್ಯಾಮೆರಾ ಜೊತೆಗೆ ವಿಶೇಷವಾಗಿ ಆಕ್ಷನ್‌ ಕ್ಯಾಮೆರಾ ಬಿಲ್ಟ್ ಆದ ಸ್ಮಾರ್ಟ್‌ಫೋನ್‌ ಹೆಸರು "ಕ್ಯೋಸೆರಾ ಡ್ಯುರಾಫೋರ್ಸ್ ಪ್ರೊ ಫೋನ್‌ ( Kyocera's DuraForce Pro phone). ಮಾರುಕಟ್ಟೆಯಲ್ಲಿರುವ ಇತರೆ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗಿಂತ ವಿಶೇಷವಾಗಿರುವ 'ಕ್ಯೋಸೆರಾ ಡ್ಯುರಾಫೋರ್ಸ್ ಪ್ರೊ ಫೋನ್' ಬಗೆಗಿನ ವಿಶೇಷಣಗಳು ಏನು ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

2016ರ ಅಗ್ಗದ ಬೆಲೆಯ ಉತ್ತಮ ಫೀಚರ್ ಫೋನ್‌ 'ಕೂಲ್‌ಪ್ಯಾಡ್‌ ಮೆಗಾ 2.5ಡಿ'

ಕ್ಯೋಸೆರಾ ಡ್ಯುರಾಫೋರ್ಸ್ ಪ್ರೊ ಫೋನ್‌

ಕ್ಯೋಸೆರಾ ಡ್ಯುರಾಫೋರ್ಸ್ ಪ್ರೊ ಫೋನ್‌

'ಕ್ರೋಸೆರಾ ಡ್ಯುರಾಪೋರ್ಸ್ ಪ್ರೊ' ಮಿಲಿಟರಿ ಗ್ರೇಡ್‌ ಆಂಡ್ರಾಯ್ಡ್‌ ಫೋನ್‌ ಆಗಿದ್ದು, 13MP ಸೆಲ್ಫಿ ಕ್ಯಾಮೆರಾ ಮತ್ತು 5MP ಹಿಂಭಾಗ ಕ್ಯಾಮೆರಾ ಫೀಚರ್ ಹೊಂದಿದೆ. ಈ ಎರಡು ಕ್ಯಾಮೆರಾ ಫೀಚರ್ ಜೊತೆಗೆ "ಆಕ್ಷನ್‌ ಕ್ಯಾಮೆರಾ"ವನ್ನು ಫೋನ್‌ ಹಿಂದೆ ಹೊಂದಿದ್ದು, 135 ಡಿಗ್ರಿ ಅಗಲ ಪ್ರದೇಶವನ್ನು ಕ್ಯಾಪ್ಚರ್‌ ಮಾಡುವ ಸೂಪರ್‌ ಲೆನ್ಸ್‌ ಹೊಂದಿದೆ.

ಆಕ್ಷನ್‌ ಕ್ಯಾಮೆರಾ

ಆಕ್ಷನ್‌ ಕ್ಯಾಮೆರಾ

ಆಕ್ಷನ್‌ ಕ್ಯಾಮೆರಾ 1080P ಸಂಪೂರ್ಣ HD ರೆಸಲ್ಯೂಶನ್‌ ವೀಡಿಯೊ ಕ್ಯಾಪ್ಚರ್ ಮಾಡುತ್ತದೆ. ಸ್ಲೋ-ಮೋಶನ್ ಸಪೋರ್ಟ್‌ ಜೊತೆಗೆ, ಕ್ರೀಡೆ, ಟೈಮ್‌ಲ್ಯಾಪ್ಸ್ ಮತ್ತು ಅಂಡರ್‌ ವಾಟರ್‌ ಶೂಟಿಂಗ್‌ ಸಪೋರ್ಟ್‌ ಮಾಡುತ್ತದೆ. ತೀವ್ರ ರೀತಿಯಲ್ಲಿ ಕ್ರೀಡೆಯನ್ನು ಕ್ಯಾಪ್ಚರ್ ಮಾಡುವ ಕ್ಯಾಮೆರಾ ಇದಾಗಿದೆ.

ಕ್ಯೋಸೆರಾ ಡ್ಯುರಾಫೋರ್ಸ್ ಪ್ರೊ

ಕ್ಯೋಸೆರಾ ಡ್ಯುರಾಫೋರ್ಸ್ ಪ್ರೊ

'ಡ್ಯುರಾಫೋರ್ಸ್ ಪ್ರೊ' IP68 ಫೊನ್‌ ಆಗಿದ್ದು, ಅಂದರೆ ಧೂಳು ಮತ್ತು ನೀರು ನಿರೋಧಕವಾಗಿದೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರಸ್ತುತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌7 ಮತ್ತು ನೋಟ್‌ 7 ಸ್ಮಾರ್ಟ್‌ಫೋನ್‌ಗಳು ಧೂಳು ಮತ್ತು ನೀರು ನಿರೋಧಕ ಫೋನ್‌ ಆಗಿವೆ. 6.5 ಅಡಿ ಆಳದಲ್ಲಿ 30 ನಿಮಿಷಗಳ ಕಾಲ ಆಕ್ಷನ್‌ ಕ್ಯಾಮೆರಾ ಫೋನ್‌ ಮುಳುಗಿರಬಹುದು.

ಸ್ಯಾಮ್‌ಸಂಗ್‌ ಫೋನ್‌ಗಳ ರೀತಿ ಅಲ್ಲ

ಸ್ಯಾಮ್‌ಸಂಗ್‌ ಫೋನ್‌ಗಳ ರೀತಿ ಅಲ್ಲ

'ಡ್ಯುರಾಫೋರ್ಸ್‌ ಪ್ರೊ' ಸ್ಯಾಮ್‌ಸಂಗ್‌ ಫೋನ್‌ ರೀತಿ ಅಲ್ಲ. ಕಾರಣ ವಿಪರೀತ ಶಾಕ್‌ ಅಪಘಾತಗಳು, ಒತ್ತಡ ಮತ್ತು ತಾಪಮಾನದ ವಿರುದ್ಧ ಹೆಚ್ಚು ಕಠಿಣತೆ ಹೊಂದಿದೆ. ಹೆಚ್ಚು ಅಪಘಾತಗಳಾಗುವ ಸಂಭವವಿರುವುದಿಲ್ಲ.

ಫೋನ್ ಮಧ್ಯಮ ಶ್ರೇಣಿ

ಫೋನ್ ಮಧ್ಯಮ ಶ್ರೇಣಿ

'ಡ್ಯುರಾಫೋರ್ಸ್‌ ಪ್ರೊ' ಫೋನ್‌ ಮಧ್ಯಮ ಶ್ರೇಣಿಯ ಫೋನ್‌ ಆಗಿದ್ದು, ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ ಚಾಲಿತವಾಗಿದೆ. 5 ಇಂಚಿನ HD ಸ್ಕ್ರೀನ್‌, ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 617 ಪ್ರೊಸೆಸರ್, 2GB RAM, 32GB ಸ್ಟೋರೇಜ್‌ ಮತ್ತು 3,240 mAh ಬ್ಯಾಟರಿ ಮತ್ತು ಕ್ವಿಕ್‌ ಚಾರ್ಜ್‌ 2.0 ಫೀಚರ್‌ ಹೊಂದಿದೆ.

ಇತರೆ

'ಆಕ್ಷನ್‌ ಕ್ಯಾಮೆರಾ' ಫೋನ್‌ ಫಿಂಗರ್‌ ಪ್ರಿಂಟ್‌ ಸೆನ್ಸಾರ್ ಹೊಂದಿದ್ದು, ಸಂಪೂರ್ಣ ರಬ್ಬರ್‌ ಕೋಟಿಂಗ್‌ ಹೊಂದಿದೆ. ವಿಶೇಷವಾಗಿ ಹೆಡ್‌ಫೋನ್‌ ಜಾಕ್‌ ಹೊಂದಿದೆ.

 ವಾಕಿ ಟಾಕಿ

ವಾಕಿ ಟಾಕಿ

ಫೋನ್‌ನ ಒಂದು ಸೈಡ್‌ನಲ್ಲಿ "Push To Talk"(PTT) ಬಟನ್ ಹೊಂದಿದೆ. ಇದು ಇತರೆ PTT ಸಪೋರ್ಟ್ ಫೋನ್‌ ರೀತಿಯಲ್ಲಿ ವಾಕಿ ಟಾಕಿ ಫೀಚರ್ ಹೊಂದಿದೆ. ಒಂದು ನಿರ್ದಿಷ್ಟ ಅಪ್ಲಿಕೇಶನ್‌ ಲಾಂಚ್‌ ಮಾಡಲು ಪ್ರೋಗ್ರಾಮ್‌ಗಾಗಿ ಸಪೋರ್ಟ್‌ ಮಾಡುತ್ತದೆ. ಇದುವರೆಗೂ ಸಹ ಬೆಲೆ ನಿಗದಿಪಡಿಸಿಲ್ಲ.

ಗಿಜ್‌ಬಾಟ್‌

ಗಿಜ್‌ಬಾಟ್‌

ಫ್ಲಿಪ್‌ಕಾರ್ಟ್‌ನಲ್ಲಿ ಲೀಕೊ ಸೂಪರ್ ಫೋನ್ಸ್ ಮೇಲೆ ವಿಶೇಷ ಆಫರ್ಫ್ಲಿಪ್‌ಕಾರ್ಟ್‌ನಲ್ಲಿ ಲೀಕೊ ಸೂಪರ್ ಫೋನ್ಸ್ ಮೇಲೆ ವಿಶೇಷ ಆಫರ್

10,000 ರೂ ಕೆಳಗೆ ಖರೀದಿಸಬಹುದಾದ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು 10,000 ರೂ ಕೆಳಗೆ ಖರೀದಿಸಬಹುದಾದ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್.ಕಾಂ

Best Mobiles in India

English summary
This rugged phone comes with a built-in action camera. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X