ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಸೂಪರ್ ಫೋನ್‌ಗಳು

By Shwetha
|

ಸ್ಮಾರ್ಟ್‌ಫೋನ್‌ಗಳು ನಿಮ್ಮ ನಿತ್ಯ ಬಳಕೆಯಲ್ಲಿ ಮಾತ್ರವೇ ಅತ್ಯುಪಯುಕ್ತ ಎಂದೆನಿಸದೇ ವಿಶ್ವ ದಾಖಲೆಯಲ್ಲೂ ಸೈ ಎಂದೆನಿಸಿದೆ ಎಂಬುದು ನಿಮಗೆ ಗೊತ್ತೇ? ಅತ್ಯುತ್ತಮ ಸೆಲ್ಫಿ ಕ್ಯಾಮೆರಾ, ತೆಳು ಸ್ಮಾರ್ಟ್‌ಫೋನ್, ಲಾರ್ಜ್ ಅನಿಮೇಶನ್ ಫೋನ್, ಹೀಗೆ ಬೇರೆ ಬೇರೆ ವರ್ಗೀಕರಣಕ್ಕೆ ಅನುಸಾರವಾಗಿ ಈ ಡಿವೈಸ್‌ಗಳು ವಿಶ್ವ ಮಾನ್ಯತೆಯನ್ನು ಗಳಿಸಿಕೊಂಡಿವೆ.

ಓದಿರಿ: ಸ್ಮಾರ್ಟ್‌ಫೋನ್ ಭದ್ರತೆಗೆ ಇರಲಿ ಈ ಟಾಪ್ ಟಿಪ್ಸ್

ದೈನಂದಿನ ಜೀವನದಲ್ಲಿ ಸ್ಮಾರ್ಟ್‌ಫೋನ್‌ಗಳು ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತಿವೆ. ಸ್ಮಾರ್ಟ್‌ಫೋನ್ ತಯಾರಕರು ಕೂಡ ಈ ಬಗೆಯಲ್ಲಿ ಫೋನ್‌ಗಳನ್ನು ನಿರ್ಮಿಸಿ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಅವರುಗಳ ಸತತ ಪರಿಶ್ರಮ ಈ ಡಿವೈಸ್‌ಗಳನ್ನು ವಿಶ್ವದಲ್ಲೇ ಗುರುತಿಸುವಂತೆ ಮಾಡಿದೆ. ಇಂದಿನ ಲೇಖನದಲ್ಲಿ ಈ ಡಿವೈಸ್‌ಗಳ ಕುರಿತು ವಿವರವಾದ ಮಾಹಿತಿಯನ್ನು ನೀಡುತ್ತಿದ್ದು ಸ್ಲೈಡರ್ ನೋಡಿ.

ಎಲ್‌ಜಿ ಜಿ4

ಎಲ್‌ಜಿ ಜಿ4

ವಿಶ್ವದ ಅತಿ ದೊಡ್ಡ ಸೆಲ್ಫಿ ರಿಲೇ ಚೈನ್ ಎಂಬ ಬಿರುದಿಗೆ ಎಲ್‌ಜಿ ಜಿ4 ಭಾಜನವಾಗಿದೆ. ಮೆಕ್ಸಿಕೊ ನಗರದಲ್ಲಿ 2,500 ಜನರು ಸಾಲುಗಟ್ಟಿ ನಿಂತು ಏಕೈಕ ಎಲ್‌ಜಿ ಜಿ4 ಅನ್ನು ಅವರು ರವಾನಿಸಿದರು. ಎರಡು ಗಂಟೆಗಳಲ್ಲಿ ಈ ಸ್ಮಾರ್ಟ್‌ಫೋನ್ 746 ಸೆಲ್ಫಿಗಳನ್ನು ತೆಗೆಯಿತು. 10 ಸೆಕೆಂಡ್‌ಗಳಲ್ಲಿ ಫೋಟೋ ತೆಗೆದುಕೊಳ್ಳುತ್ತಾ ತನ್ನದೇ ಹಿಂದಿನ ದಾಖಲೆಯನ್ನು ಮುರಿಯಿತು.

ಸೆಲ್ಫಿ ದಾಖಲೆ

ಸೆಲ್ಫಿ ದಾಖಲೆ

ಗ್ಯಾಲಕ್ಸಿ ಎ3 ಮತ್ತು ಎ5 ನಲ್ಲಿ ತೆಗೆದ 531 ಸೆಲ್ಫಿ ದಾಖಲೆಯನ್ನು ಇದು ಮುರಿಯಿತು. ಎಲ್‌ಜಿ ಜಿ4 ಬ್ಯಾಟರಿ ಮತ್ತು ರೀಚಾರ್ಜ್ ಮಾಡಿಕೊಳ್ಳದೆಯೇ ಈ ಸಾಧನೆಯನ್ನು ಮಾಡಿದೆ.

ತೆಳು ಫೋನ್ - ಜಿಯೋನಿ ಇಲೈಫ್ S5.1

ತೆಳು ಫೋನ್ - ಜಿಯೋನಿ ಇಲೈಫ್ S5.1

ಚೀನಾದ ತಯಾರಕ ಜಿಯೋನಿ 0.2 (5.1mm-ತೆಳು) ಸ್ಮಾರ್ಟ್‌ಫೋನ್ ಆದ ಇಲೈಫ್ S5.1 ಅನ್ನು ಕಂಪನಿ ಸಿದ್ಧಪಡಿಸಿದ್ದು, ಇದು 6020mAh ಬ್ಯಾಟರಿಯನ್ನು ಒಳಗೊಂಡಿದೆ.

ಒಪ್ಪೊ ಆರ್5

ಒಪ್ಪೊ ಆರ್5

ಜಿಯೋನಿಯೇ ತೆಳುವಾದ ಫೋನ್ ಎಂಬುದಾಗಿ ದಾಖಲೆಯನ್ನು ಬರೆದಿದ್ದ ಸಂದರ್ಭದಲ್ಲಿಯೇ ಜಿಯೋನಿ ನಂತರ ಬಂದ ಒಪ್ಪೊ, ತೆಳು ಫೋನ್‌ಗೆ ಭರ್ಜರಿ ಪೈಪೋಟಿಯನ್ನೇ ನೀಡಿತು. ಒಪ್ಪೊ ಆರ್5 ಹೆಚ್ಚು ತೆಳು ಫೋನ್ ಎಂಬುದಾಗಿ ಇದು ಕರೆಯಿಸಿಕೊಂಡಿದ್ದು ಗಿನ್ನೀಸ್ ದಾಖಲೆಯ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.

ತೆಳು ಫೋನ್

ತೆಳು ಫೋನ್

ತೆಳು ಫೋನ್ ಎಂಬುದೇ ನಿಮ್ಮ ಖರೀದಿ ಗುರಿಯಾಗಿದ್ದರೆ, ಆರ್5 ಉತ್ತಮ ಆಯ್ಕೆಯಾಗಿದೆ. ಉತ್ತಮ ಆಡಿಯೊ ಗುಣಮಟ್ಟ ಇದರಲ್ಲಿದ್ದು, ಹೆಚ್ಚುವರಿ ಬಳಕೆಗೆ ಇದು ಪೂರಕವಾಗಿಲ್ಲ. ಕಡಿಮೆ ಆಂತರಿಕ ಸಂಗ್ರಹ ಅಂತೆಯೇ ಹೆಚ್ಚುವರಿ ವಿಸ್ತರಣೆಯಾಗುವುದಿಲ್ಲ.

ಅನಿಮೇಟೆಡ್ ಮೊಬೈಲ್ ಫೋನ್

ಅನಿಮೇಟೆಡ್ ಮೊಬೈಲ್ ಫೋನ್

ಎಚ್‌ಟಿಸಿ ಒಂದು ಅನಿಮೇಟೆಡ್ ಮೊಬೈಲ್ ಫೋನ್ ಎಂದೆನಿಸಿದ್ದು, ಚಿತ್ರಗಳನ್ನು ನೀಡುವುದರಲ್ಲಿ ಎತ್ತಿದ ಕೈ ಎಂದೆನಿಸಿದೆ. ಅನಿಮೇಟೆಡ್ ಚಿತ್ರಗಳನ್ನು ನಿಮಗಿದರಲ್ಲಿ ಉತ್ತಮವಾಗಿ ಕಂಡುಕೊಳ್ಳಬಹುದಾಗಿದೆ.

ಎಲ್‌ಜಿ ಆಪ್ಟಿಮಸ್ ಡ್ಯುಯಲ್ ಕೋರ್ ಸ್ಮಾರ್ಟ್‌ಫೋನ್

ಎಲ್‌ಜಿ ಆಪ್ಟಿಮಸ್ ಡ್ಯುಯಲ್ ಕೋರ್ ಸ್ಮಾರ್ಟ್‌ಫೋನ್

ಎಲ್‌ಜಿ ಆಪ್ಟಿಮಸ್ 2 ಎಕ್ಸ್ ಡ್ಯುಯಲ್ ಕೋರ್ ಪ್ರೊಸೆಸರ್‌ನಲ್ಲಿ ವಿಶ್ವ ದಾಖಲೆಯನ್ನು ಮಾಡಿದ್ದು ನಂತರ ಇದರಲ್ಲಿ ಹಲವಾರು ಆವೃತ್ತಿ ಬಂದಿದ್ದರೂ 2011 ರಲ್ಲಿ ಇದು ದಾಖಲೆಯನ್ನು ಮಾಡಿತ್ತು.

Best Mobiles in India

English summary
In this article we can see some phones that make world records we can find here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X