ಭಾರತದಲ್ಲಿ ಸನ್ಹೈಸರ್‌ CX400BT ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್ ಲಾಂಚ್‌!

|

ಸನ್ಹೈಸರ್‌ ಕಂಪೆನಿ ಜನಪ್ರಿಯ ಇಯರ್‌ ಬಡ್ಸ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಇಯರ್‌ಬಡ್ಸ್‌ಗಳನ್ನ ಪರಿಚಯಿಸಿರುವ ಸನ್ಹೈಸರ್‌ ಸಂಸ್ಥೆ ಇದೀಗ ಸೆನ್ಹೈಸರ್ CX400BT ಟ್ರೂ ವಾಯರ್‌ಲೆಸ್ ಇಯರ್‌ಬಡ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು CX400BT ಟ್ರೂ ವಾಯರ್‌ಲೆಸ್ ಇಯರ್‌ಬಡ್‌ಗಳು ಕಸ್ಟಮೈಸ್‌ಬಲ್‌ ಮಾಡಬಹುದಾದ ಟಚ್‌ ಕಂಟ್ರೋಲ್‌ ಅನ್ನು ಹೊಂದಿವೆ. ಜೊತೆಗೆ ಇಡೀ ದಿನದ ಕಂಫರ್ಟ್‌ ನೀಡುವುದಲ್ಲದೆ, ಎರ್ಗೊನೊಮಿಕ್ ವಿನ್ಯಾಸವನ್ನು ಹೊಂದಿವೆ.

ಸನ್ಹೈಸರ್‌

ಹೌದು, ಸನ್ಹೈಸರ್‌ ಸಂಸ್ಥೆ ತನ್ನ ಹೊಸ CX400BT ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ಈ ಇಯರ್‌ಬಡ್ಸ್‌ನಲ್ಲಿ ಮೊಮೆಂಟಮ್ ಟ್ರೂ ವೈರ್‌ಲೆಸ್ 2 ಇಯರ್‌ಬಡ್‌ಗಳಲ್ಲಿ ಇರುವ ಅದೇ 7mm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಅಲ್ಲದೆ ನಿಮ್ಮ ವೈಯಕ್ತಿಕ ಆದ್ಯತೆಗೆ ಅನುಗುಣವಾಗಿ ಸೌಂಡ್‌ ಅನ್ನು ಸೆಟ್‌ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುವ ಅಪ್ಲಿಕೇಶನ್ ಬೆಂಬಲವನ್ನೂ ಸಹ ಇದು ಒಳಗೊಂಡಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೆನ್ಹೈಸರ್ CX400BT ಟ್ರೂ ವಾಯರ್‌ಲೆಸ್ ಇಯರ್‌ ಬಡ್ಸ್

ಸೆನ್ಹೈಸರ್ CX400BT ಟ್ರೂ ವಾಯರ್‌ಲೆಸ್ ಇಯರ್‌ ಬಡ್ಸ್‌ ಫೀಚರ್ 7mm ಆಡಿಯೋ ಡೈನಾಮಿಕ್ ಡ್ರೈವರ್‌ ಅನ್ನು ಹೊಂದಿದ್ದು, ಉತ್ತಮ ಸೌಂಡ್‌ ಸಿಸ್ಟಂ ಅನುಭವ ಸಿಗಲಿದೆ. ಇನ್ನು ಇವುಗಳನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳ ಜೊತೆಗೆ ಕನೆಕ್ಟಿವಿಟಿ ಸಾಧಿಸಲು ಬ್ಲೂಟೂತ್ 5.1 ಅನ್ನು ನೀಡಲಾಗಿದೆ. ಜೊತೆಗೆ ಗುಣಮಟ್ಟದ ಆಡಿಯೊವನ್ನು ಉತ್ತಮವಾಗಿ ಟ್ಯೂನ್ ಮಾಡಲು ಇದರಲ್ಲಿ ಸ್ಮಾರ್ಟ್ ಕಂಟ್ರೋಲ್ ಅಪ್ಲಿಕೇಶನ್ ಅನ್ನು ನೀಡಲಾಗಿದೆ. ಅಲ್ಲದೆ ಸ್ಮಾರ್ಟ್ ಕಂಟ್ರೋಲ್ ಅಪ್ಲಿಕೇಶನ್ ಮೂಲಕ ಆಂಡ್ರಾಯ್ಡ್ ಆವೃತ್ತಿ 7.0 ಮತ್ತು ಐಒಎಸ್ ಆವೃತ್ತಿ 11.0 ನಲ್ಲಿ ಕಾರ್ಯನಿರ್ವಹಿಸಲಿದೆ.

CX400BT

ಇನ್ನು CX400BT ಇಯರ್‌ಬಡ್‌ಗಳು ಸಿಂಗಲ್‌ ಚಾರ್ಜ್‌ನಲ್ಲಿ ಏಳು ಗಂಟೆಗಳವರೆಗೆ ಪ್ಲೇ ಟೈಂ ಅನ್ನು ಹೊಂದಿದೆ. ಚಾರ್ಜಿಂಗ್‌ ಕೇಸ್‌ ಜೊತೆಗೆ ಬ್ಯಾಟರಿ ಅವಧಿಯನ್ನು 20 ಗಂಟೆಗಳವರೆಗೆ ವಿಸ್ತರಿಸಬಹುದು ಎಂದು ಸೆನ್‌ಹೈಸರ್ ಸಂಸ್ಥೆ ಹೇಳಿಕೊಂಡಿದೆ. ಇನ್ನು ಸೆನ್ಹೈಸರ್ CX400BT ಟ್ರೂ ವಾಯರ್‌ಲೆಸ್ ಇಯರ್‌ಬಡ್‌ಗಳನ್ನು 1.5 ಗಂಟೆಗಳಲ್ಲಿ ಫುಲ್‌ ಚಾರ್ಜ್ ಮಾಡಬಹುದಾಗಿದ್ದು,10 ನಿಮಿಷಗಳ ಚಾರ್ಜ್‌ನಲ್ಲಿ ಒಂದು ಗಂಟೆ ಪ್ಲೇ ಟೈಂ ಅನ್ನು ನೀಡಲಿದೆ. ಸನ್ಹೈಸರ್‌ ಇಯರ್‌ ಬಡ್ಸ್‌ ಚಾರ್ಜಿಂಗ್‌ ಕೇಸ್‌ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ.

ಇಯರ್‌ಬಡ್‌ಗಳು

ಸದ್ಯ ಈ ಇಯರ್‌ಬಡ್‌ಗಳು ಉತ್ತಮ ಗುಣಮಟ್ಟದ ಆಡಿಯೊಗೆ ಎಸ್‌ಬಿಸಿ, ಎಎಸಿ, ಆಪ್ಟಿಎಕ್ಸ್ ಕೊಡೆಕ್ ಅನ್ನು ಬೆಂಬಲಿಸಲಿದೆ. ಅಲ್ಲದೆ ನಿಮ್ಮ ಸಂಪರ್ಕಿತ ಡಿವೈಸ್‌ನಲ್ಲಿ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಆಕ್ಟಿವ್‌ ಮಾಡಲು ಟಚ್‌ ಕಂಟ್ರೋಲ್‌ ಅನ್ನು ಬಳಸಬಹುದಾಗಿದೆ. ಇನ್ನು ಸೆನ್ಹೈಸರ್ CX400BT ಟ್ರೂ ವಾಯರ್‌ಲೆಸ್ ಇಯರ್‌ಬಡ್‌ಗಳ ಬೆಲೆ ಭಾರತದಲ್ಲಿ 16,990ರೂ. ಆಗಿದ್ದು, ಇದೇ ಸೆಪ್ಟೆಂಬರ್ 28 ರಿಂದ ಮಾರಾಟವಾಗಲಿದೆ. ಇನ್ನು ಈ ಇಯರ್‌ಬಡ್ಸ್‌ ಬ್ಲ್ಯಾಕ್‌ ಮತ್ತು ವೈಟ್‌ ಕಲರ್‌ ಆಯ್ಕೆಗಳಲ್ಲಿ ಲಬ್ಯವಾಗಲಿದ್ದು, ಅಮೆಜಾನ್, ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Sennheiser CX 400BT True Wireless earbuds are priced at Rs. 16,990 and come in two colour options.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X