2014: ಹಾಟ್‌ 8 ಟೆಕ್‌ ಉದ್ಯೋಗಗಳು

By Ashwath
|

ಐಟಿ ಕ್ಷೇತ್ರದ ಡಿಮ್ಯಾಂಡ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೆಕ್‌ ಕ್ಷೇತ್ರದ ದೊಡ್ಡ ಕಂಪೆನಿಗಳು ಹೆಚ್ಚು ಹೆಚ್ಚು ಸಂಬಳವನ್ನು ತನ್ನ ಉದ್ಯೋಗಿಗಳಿಗೆ ನೀಡುತ್ತಿವೆ. ಅಷ್ಟೇ ಅಲ್ಲದೇ ಇನ್ನು ವಿದ್ಯಾರ್ಥಿ‌ ಕಲಿಯುತ್ತಿರುವಾಗಲೇ ಅವನ/ಅವಳ ಪ್ರತಿಭೆ ತಿಳಿದು ದುಬಾರಿ ಬೆಲೆಯ ವೇತನದ ಆಫರ್‌ ನೀಡಿ ಕಂಪೆನಿಗಳು ಅವರನ್ನು ತನ್ನ ಉದ್ಯೋಗಿಗಳನ್ನಾಗಿ ಮಾಡುತ್ತಿವೆ.

ಹೀಗಾಗಿ ಬಹಳಷ್ಟು ಮಂದಿಗೆ ಒಂದು ಕುತೂಹಲವಿರುತ್ತದೆ. ಐಟಿಯಲ್ಲಿ ಯಾವ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಎಷ್ಟು ಲಕ್ಷ ಸಂಬಳವಿರುತ್ತದೆ? ಅವರ ಕೆಲಸದ ಜವಾಬ್ದಾರಿ ಏನು ಎಂದು ತಿಳಿಯುವ ಆಸಕ್ತಿ ಇರುತ್ತದೆ. ಈ ಕಾರಣಕ್ಕೆ ಇಲ್ಲಿ ವಿಶ್ವದ ಎಲ್ಲಾ ಕಂಪೆನಿ, ಅಲ್ಲಿರುವ ಉದ್ಯೋಗಗಳ ಬಗ್ಗೆ ಅಧ್ಯಯನ ಮಾಡುವ ಗ್ಲಾಸ್‌ಡೂರ್‌ ಮಾಹಿತಿಯಂತೆ ಸದ್ಯ ಹೆಚ್ಚು ಟ್ರೆಂಡಿಂಗ್‌ ಐಟಿ ಉದ್ಯೋಗ ಮತ್ತು ಆ ಉದ್ಯೋಗವನ್ನುಪಡೆದ ಎಂಜಿನಿಯರ್‌‌ಗಳ ಅರಂಭಿಕ ಸಂಬಳದ ವಿವರ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಭಾರತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಡವುತ್ತಿರುವುದು ಎಲ್ಲಿ?

2014: ಹಾಟ್‌ 8 ಟೆಕ್‌ ಉದ್ಯೋಗಗಳು

2014: ಹಾಟ್‌ 8 ಟೆಕ್‌ ಉದ್ಯೋಗಗಳು


ಸಾಫ್ಟ್‌ವೇರ್‌‌ ವಿನ್ಯಾಸ,ಅಭಿವೃದ್ಧಿ,ನಿರ್ವಹಣೆ ಮತ್ತು ಮೌಲ್ಯಮಾಪನ ಕೌಶಲ್ಯಗಳನ್ನು ಸಾಫ್ಟ್‌ವೇರ್‌‌ ಎಂಜಿನಿಯರ್‌ ತಿಳಿದಿರಬೇಕಾಗುತ್ತದೆ.ಜೊತೆಗೆ ಈಗಾಗಲೇ ಕಂಪೆನಿ ಅಭಿವೃದ್ಧಿ ಪಡಿಸಿದ ಸಾಫ್ಟ್‌ವೇರ್‌‌‌ಗಳನ್ನು ಅಪ್‌ಗ್ರೆಡ್‌, ಸುರಕ್ಷೆಯನ್ನು ನೋಡಿಕೊಳ್ಳಬೇಕಾಗುತ್ತದೆ.

ಸರಾಸರಿ ವಾರ್ಷಿಕ ಸಂಬಳ: 93 ಸಾವಿರ ಡಾಲರ್‌ (ಅಂದಾಜು 57 ಲಕ್ಷ ರೂಪಾಯಿ)

2014: ಹಾಟ್‌ 8 ಟೆಕ್‌ ಉದ್ಯೋಗಗಳು

2014: ಹಾಟ್‌ 8 ಟೆಕ್‌ ಉದ್ಯೋಗಗಳು

ಈ ಹುದ್ದೆಗೆ ಸೇರಬೇಕಾದವರು ಇಂಟರ್‌ನೆಟ್‌ ಮತ್ತು ಬ್ರೌಸರ್‌‌ ವಿಷಯದಲ್ಲಿ ಪರಿಣಿತಿ ಪಡೆದಿರಬೇಕಾಗುತ್ತದೆ.ಜೊತೆಗೆ ವೆಬ್‌ಸೈಟ್‌ ವಿನ್ಯಾಸ ಸಹ ಮಾಡಬೇಕಾಗುತ್ತದೆ.

ಸರಾಸರಿ ವಾರ್ಷಿಕ ಸಂಬಳ: ‌70 ಸಾವಿರ ಡಾಲರ್‌(ಅಂದಾಜು 43 ಲಕ್ಷ ರೂಪಾಯಿ)

2014: ಹಾಟ್‌ 8 ಟೆಕ್‌ ಉದ್ಯೋಗಗಳು

2014: ಹಾಟ್‌ 8 ಟೆಕ್‌ ಉದ್ಯೋಗಗಳು


ಕಂಪೆನಿಯ ಲೋಕಲ್‌‌ ಏರಿಯಾ ನೆಟ್‌ವರ್ಕ್‌‌,ವೈಡ್‌ ಏರಿಯಾ ನೆಟ್‌ವರ್ಕ್‌‌‌‌,ಇಂಟರ್‌ನೆಟ್‌‌‌ ಸಂಪರ್ಕ‌ಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನೆಟ್‌ವರ್ಕ್‌ ಎಂಜಿನಿಯರ್‌ಗಳ ಮೇಲಿರುತ್ತದೆ.

ಸರಾಸರಿ ವಾರ್ಷಿಕ ಸಂಬಳ: 76 ಸಾವಿರ ಡಾಲರ್‌(ಅಂದಾಜು 47 ಲಕ್ಷ ರೂಪಾಯಿ)

2014: ಹಾಟ್‌ 8 ಟೆಕ್‌ ಉದ್ಯೋಗಗಳು

2014: ಹಾಟ್‌ 8 ಟೆಕ್‌ ಉದ್ಯೋಗಗಳು


ಸಾರ್ಟ್‌‌ಫೋನ್‌ ಯುಗದಲ್ಲಿ ಅಪ್ಲಿಕೇಶನ್‌ ಜನ ಇಂದು ಹೆಚ್ಚು ಹೆಚ್ಚಾಗಿ ಡೌನ್‌ಲೋಡ್‌ ಮಾಡುತ್ತಿದ್ದಾರೆ. ಪ್ರತಿಯೊಂದು ಕಂಪೆನಿಯೂ ತನ್ನದೇ ಆದ ಆಪ್‌ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗುತ್ತಿವೆ. ಈ ಕಾರಣಕ್ಕಾಗಿ ಸದ್ಯ ಈ ಕ್ಷೇತ್ರದ ಪರಿಣಿತರಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಸರಾಸರಿ ವಾರ್ಷಿಕ ಸಂಬಳ: 90 ಸಾವಿರ ಡಾಲರ್‌( ಅಂದಾಜು 56 ಲಕ್ಷ ರೂಪಾಯಿ)

2014: ಹಾಟ್‌ 8 ಟೆಕ್‌ ಉದ್ಯೋಗಗಳು

2014: ಹಾಟ್‌ 8 ಟೆಕ್‌ ಉದ್ಯೋಗಗಳು


ಕಂಪೆನಿಯ ಆಂತರಿಕ ವಿಭಾಗದ ಮುಖ್ಯಸ್ಥರಾಗಿರುತ್ತಾರೆ ಜೊತೆಗೆ ಕಂಪೆನಿ ಬೇರೆ ಕಂಪೆನಿಗೆ ಅಭಿವೃದ್ಧಿ ಪಡಿಸಿದ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆಗಳು ಸೃಷ್ಟಿಯಾದಲ್ಲಿ
ಅದನ್ನು ಸರಿಪಡಿಸಿಕೊಡುವ ಜವಾಬ್ದಾರಿ ಈ ಹುದ್ದೆಯಲ್ಲಿದ್ದವರಿಗೆ ಇರಬೇಕಾಗುತ್ತದೆ.

ಸರಾಸರಿ ವಾರ್ಷಿಕ ಸಂಬಳ: 1ಲಕ್ಷ ಡಾಲರ್‌(ಅಂದಾಜು 62 ಲಕ್ಷ ರೂಪಾಯಿ)

2014: ಹಾಟ್‌ 8 ಟೆಕ್‌ ಉದ್ಯೋಗಗಳು

2014: ಹಾಟ್‌ 8 ಟೆಕ್‌ ಉದ್ಯೋಗಗಳು


ಎಂಜಿನಿಯರಿಂಗ್‌ ಪದವಿ ಇಲ್ಲದೇ ಐಟಿ ಕಂಪೆನಿಯಲ್ಲಿ ಲಕ್ಷಗಟ್ಟಲೇ ಸಂಪಾದನೆ ಮಾಡುವ ಹುದ್ದೆ. ಕಂಪೆನಿ ಮಾರಾಟ ವಿಭಾಗದಲ್ಲಿ ಕೆಲಸ ಮಾಡಿ ಕಂಪೆನಿಗೆ ಆದಾಯ ತರುವಲ್ಲಿ ಪ್ರಮುಖ ಪಾತ್ರ ವಹಿಸುವ ಜವಾಬ್ದಾರಿ ಈ ಹುದ್ದೆಯನ್ನು ಹೊಂದಿದವರಿಗೆ ಇರುತ್ತದೆ.

ಸರಾಸರಿ ವಾರ್ಷಿಕ ಸಂಬಳ: 48ಸಾವಿರ ಡಾಲರ್‌( ಅಂದಾಜು29 ಲಕ್ಷ ರೂಪಾಯಿ)

2014: ಹಾಟ್‌ 8 ಟೆಕ್‌ ಉದ್ಯೋಗಗಳು

2014: ಹಾಟ್‌ 8 ಟೆಕ್‌ ಉದ್ಯೋಗಗಳು


ದತ್ತಾಂಶಗಳನ್ನು ಶೇಖರಣೆ ಮಾಡುವುದು ಇಂದು ದೊಡ್ಡ ಕಷ್ಟದ ಕೆಲಸ. ಹಾಗಾಗಿ ಇಂದು ಅನೇಕ ಕಂಪೆನಿಗಳು ತಮ್ಮ ದಾಖಲೆಗಳ ರಕ್ಷಣೆಯ ಜವಾಬ್ದಾರಿಯನ್ನು ಬೇರೆ ಸಂಸ್ಥೆಗಳಲ್ಲಿ ವಹಿಸಿಕೊಡುತ್ತಿವೆ.ಈ ರೀತಿಯ ಕ್ಲೌಡ್ ಕಂಪ್ಯೂಟಿಂಗ್‌ ನಿರ್ವಾಹಣೆ ಮಾಡಲು ಡೇಟಾಬೇಸ್ ನಿರ್ವಾಹಕರ ಅಗತ್ಯವಿದೆ.ದತ್ತಾಂಶಗಳು ಶೇಖರಣೆ ಮತ್ತು ದತ್ತಾಂಶಗಳು ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಗೆ ಮಹಿತಿ ಸಿಗುವಂತೆ ದತ್ತಾಂಶಗಳನ್ನು ಜೋಡಿಸುವ ಸಾಮರ್ಥ್ಯವುಳ್ಳವರು ಡೇಟಾಬೇಸ್‌ ನಿರ್ವಾಹಕರಾಗಬಹುದು.

ಸರಾಸರಿ ವಾರ್ಷಿಕ ಸಂಬಳ: 63 ಸಾವಿರ ಡಾಲರ್‌(ಅಂದಾಜು 39 ಲಕ್ಷ ರೂಪಾಯಿ)

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X