Subscribe to Gizbot

ಐಐಟಿ ವಿದ್ಯಾರ್ಥಿ‌ಗಳಿಗೆ ಟೆಕ್‌ ಕಂಪೆನಿಗಳಿಂದ ಕೋಟಿ ಕೋಟಿ ಆಫರ್‍

Posted By:

ಭಾರತೀಯ ಐಟಿ ಕಂಪೆನಿಗಳು ಟೆಕ್ಕಿಗಳಿಗೆ ಕಡಿಮೆ ಸಂಬಳ ನೀಡುವ ಮೂಲಕ ಸುದ್ದಿಯಾದರೆ,ವಿದೇಶಿ ಐಟಿ ಕಂಪೆನಿಗಳು ಐಐಟಿ ವಿದ್ಯಾರ್ಥಿ‌ಗಳಿಗೆ ಕೋಟಿ ಕೋಟಿ ಸಂಬಳ ನೀಡಿ ಖರೀದಿಸುವ ಮೂಲಕ ಸುದ್ದಿಯಾಗುತ್ತಿವೆ.

ದೇಶದಲ್ಲಿರುವ ಐಐಟಿ ವಿದ್ಯಾರ್ಥಿ‌ಗಳ ಕ್ಯಾಂಪಸ್‌ ಸೆಲೆಕ್ಷನ್‌ ಡಿಸೆಂಬರ್‌ 1ರಿಂದ ಆರಂಭಗೊಂಡಿದ್ದು ಟೆಕ್‌ ಕಂಪೆನಿಗಳು ಐಐಟಿ ಪದವಿಧರರನ್ನು ಕೋಟಿ ಸಂಬಳದ ಆಫರ್‌ ನೀಡುವ ತಮ್ಮ ಕಂಪೆನಿಗೆ ಸೇರಲು ಆಹ್ವಾನ ನೀಡಲು ಆರಂಭಿಸಿವೆ. 21 ವರ್ಷದ ಇಬ್ಬರು ಕಾನ್ಪುರದ ಐಐಟಿ ಎಂಜಿನಿಯರ್‌ಗಳಿಗೆ ಒರೆಕಲ್‌ 1.31 ಕೋಟಿ ಪ್ಯಾಕೇಜ್‌ ಉದ್ಯೋಗದ ಆಫರ್‌ ನೀಡಿತ್ತು.ಆದರೆ ವಿದ್ಯಾರ್ಥಿ‌ಗಳು ಗೂಗಲ್‌ನ 68.34 ಲಕ್ಷ, ಅಮೆರಿಕದ ಟವರ್‌ ರಿಸರ್ಚ್ ಕ್ಯಾಪಿಟಲ್‌ 74.55 ಲಕ್ಷದ ಪ್ಯಾಕೇಜ್‌ಗೆ ಸಹಿ ಹಾಕುವ ಒರೆಕಲ್‌ನ ಆಫರ್‌ನ ತಿರಸ್ಕರಿಸಿದ್ದಾರೆ.

ಮದ್ರಾಸ್‌ ಐಐಟಿಯ ವಿದ್ಯಾರ್ಥಿ‌ಗಳಿಗೆ ಕೋಟಿ ಪ್ಯಾಕೇಜ್‌ ನೀಡಿ ತಮ್ಮ ಕಂಪೆನಿಯಲ್ಲಿ ಉದ್ಯೋಗ ನೀಡಲು ಒರೆಕಲ್‌ ಮುಂದಾಗಿದೆ.ಐಐಟಿ ಮದ್ರಾಸ್‌ ವಿದ್ಯಾರ್ಥಿಗಳಿಗೆ ಕಳೆದ ವರ್ಷ‌ ಕಂಪೆನಿಗಳು 28.82 ಲಕ್ಷದ ಆಫರ್‌ ನೀಡುತ್ತಿದ್ದರೆ, ಈ ವರ್ಷ‌ ಆರಂಭಿಕವಾಗಿ 48.68 ಲಕ್ಷದ ಪ್ಯಾಕೇಜ್‌ ನೀಡಲು ಆರಂಭಿಸಿದೆ.

ಐಐಟಿ ಬಾಂಬೆಯಲ್ಲಿ ಈಗಾಗಲೇ 41 ಕಂಪೆನಿಗಳು ಕ್ಯಾಂಪಸ್‌ ಸೆಲೆಕ್ಷನ್‌ ಮಾಡುತ್ತಿವೆ. ಬಾಂಬೆ ಐಐಟಿ ವಿದ್ಯಾರ್ಥಿ‌ಗೆ ಸ್ಯಾಮ್‌ಸಂಗ್‌ 84 ಲಕ್ಷದ ಪ್ಯಾಕೇಜ್‌ ನೀಡಿದೆ. ಇನ್ನೂ ಗೂಗಲ್‌ ಮತ್ತು ಮೈಕ್ರೋಸಾಫ್ಟ್‌ ವಿದ್ಯಾರ್ಥಿ‌ಗಳ ಶಾರ್ಟ್‌ ಲಿಸ್ಟ್‌ ಮಾಡಿದ್ದು,ಈ ವಿದ್ಯಾರ್ಥಿ‌ಗಳಿಗೆ 68 ಲಕ್ಷ ನೀಡಲು ಮುಂದಾಗಿದೆ.

ರೂಪಾಯಿ ಅಪಮೌಲ್ಯದಿಂದಾಗಿ ಟೆಕ್‌ ಕಂಪೆನಿಗಳು ಕಳೆದ ವರ್ಷದ ಪ್ಯಾಕೇಜ್‌ಗಿಂತ ಈ ವರ್ಷ‌ ಶೇ.3ರಿಂದ 5ರಷ್ಟು ಏರಿಕೆ ಮಾಡಿದ್ದು,ಈ ಕಾರಣಕ್ಕಾಗಿ ಐಐಟಿ ವಿದ್ಯಾರ್ಥಿ‌ಗಳಿಗೆ ಭರ್ಜರಿ ಆಫರ್‌ ನೀಡುತ್ತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಟೆಕ್ಕಿಗಳಿಗೆ ಅತಿ ಹೆಚ್ಚು ಸಂಬಳ ನೀಡುತ್ತಿರುವ ಸಾಫ್ಟ್‌ವೇರ್‌ ಕಂಪೆನಿಗಳು

1


ಮಾಹಿತಿ: ಗ್ಲಾಸ್‌ಡೂರ್‍

 ಟೆಕ್ಕಿಗಳಿಗೆ ಅತಿ ಹೆಚ್ಚು ಸಂಬಳ ನೀಡುತ್ತಿರುವ ಸಾಫ್ಟ್‌ವೇರ್‌ ಕಂಪೆನಿಗಳು

2


ಮಾಹಿತಿ: ಗ್ಲಾಸ್‌ಡೂರ್‍

 ಟೆಕ್ಕಿಗಳಿಗೆ ಅತಿ ಹೆಚ್ಚು ಸಂಬಳ ನೀಡುತ್ತಿರುವ ಸಾಫ್ಟ್‌ವೇರ್‌ ಕಂಪೆನಿಗಳು

3


ಮಾಹಿತಿ: ಗ್ಲಾಸ್‌ಡೂರ್‍

 ಟೆಕ್ಕಿಗಳಿಗೆ ಅತಿ ಹೆಚ್ಚು ಸಂಬಳ ನೀಡುತ್ತಿರುವ ಸಾಫ್ಟ್‌ವೇರ್‌ ಕಂಪೆನಿಗಳು

4


ಮಾಹಿತಿ: ಗ್ಲಾಸ್‌ಡೂರ್‍

ಇದನ್ನೂ ಓದಿ: ವಿಶ್ವದ ಜನಪ್ರಿಯ ಟಾಪ್‌ 10 ಟೆಕ್‌ ಕಂಪೆನಿಗಳು
ಇದನ್ನೂ ಓದಿ: ಭಾರತದ ಶ್ರೀಮಂತ ಐಟಿ ಕಂಪೆನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot