ಮೋದಿ ಬ್ರ್ಯಾಂಡ್ ಉತ್ಪನ್ನ ಖರೀದಿಸಲು ಹೊಸ ಶಾಪಿಂಗ್ ತಾಣ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬ್ರ್ಯಾಂಡ್ ಉತ್ಪನ್ನಗಳನ್ನು ಖರೀದಿಸಲು ಹೊಸ ಆನ್‌ಲೈನ್ ಶಾಪಿಂಗ್ ತಾಣ ಆರಂಭವಾಗಿದೆ. ದಿ ನಮೋಸ್ಟೋರ್ ಹೆಸರಿನ ಆನ್‌ಲೈನ್ ಶಾಪಿಂಗ್ ತಾಣ ಆರಂಭವಾಗಿದ್ದು ಮೋದಿ ಅಭಿಮಾನಿಗಳು ಇಲ್ಲಿಂದಲೇ ನಮೋ ಬ್ರ್ಯಾಂಡ್ ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿದೆ.
ನಮೋ ಸ್ಟೋರ್‌ನಲ್ಲಿ ಟೇ ಶರ್ಟ್- ಸ್ಟೇಷನರಿ ವಸ್ತುಗಳಾದ,ಪೆನ್ ಸ್ಟ್ಯಾಂಡ್,ಡೈರಿ,ನೋಟ್ ಬುಕ್, ಪೆನ್‌ಡ್ರೈವ್‌ಗಳಿವೆ. ಮಂದಿನ ಕೆಲವು ದಿನಗಳಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ನಮೋ ಸ್ಟೋರ್ ರಿಟೇಲ್ ಅಂಗಡಿಯನ್ನು ತೆರೆಯಲು ಉದ್ದೇಶಿಲಾಗಿದೆ ಎಂದು ದಿ ನಮೋಸ್ಟೋರ್ ಹೇಳಿದೆ.

ನರೇಂದ್ರ ಮೋದಿ ಹೆಸರಿನಲ್ಲಿ ಈಗಾಗಲೇ ಮೋದಿ ರನ್ ಹೆಸರಿನ ಗೇಮಿಂಗ್ ಆಪ್ ತಯಾರಾಗಿದೆ. ಮಾರಿಯೋ ಆಟಗಳು ಹೇಗಿದಿಯೋ ಆದೇ ರೀತಿ ಆಟವನ್ನು ಅಭಿವೃದ್ಧಿಪಡಿಸಲಾಗಿದೆ. ಓಡಿಕೊಂಡು ಹೋಗುತ್ತಿರುವ ಮೋದಿ ಗೊಂಬೆ ಇದರಲ್ಲಿದ್ದು ಮಧ್ಯ ಮಧ್ಯೇ ಅಪಾಯಕಾರಿ ಗುಂಡಿಗಳಿದ್ದು ಅದನ್ನು ಹಾರಿಕೊಂಡು ಮೋದಿ ಗೊಂಬೆಯನ್ನು ಓಡಿಸಬೇಕು.
ಆಟದಲ್ಲಿ ಪ್ರತಿಯೊಂದು ಹಂತದ(level) ಬದಲಾಗಿ ರಾಜ್ಯವನ್ನೇ ಹಂತವನ್ನಾಗಿ ಮಾಡಿದ್ದಾರೆ!. ಆರಂಭದಲ್ಲಿ ಗುಜರಾತ್ ರಾಜ್ಯದಲ್ಲಿ ಮೋದಿಗೊಂಬೆ ಸಂಪೂರ್ಣವಾಗಿ ಓಡಿ ಗುರಿ ಮುಟ್ಟಿದ್ದರೆ ಮುಂದಿನ ಹಂತವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಓಡಬೇಕಾಗುತ್ತದೆ ಹೀಗೇ ಒಟ್ಟು12 ರಾಜ್ಯಗಳ ಹಂತಗಳು ಈ ಆಟದಲ್ಲಿದೆ.
ಮೋದಿ ಅಭಿಮಾನಿಗಳಿಗೆ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲಸ ಮಾಡಲಿರುವ ಬಿಜೆಪಿ ಕಾರ್ಯಕರ್ತರಿಗೆ ಸ್ಮಾರ್ಟ್‌ನಮೋ ಹೆಸರಿನ ಆಂಡ್ರಾಯ್ಡ್ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ: ಫೇಸ್‌ಬುಕ್ ಟ್ರೆಂಡ್ಸ್ 2013- ಮೋದಿ ನಂಬರ್ 1


Click it and Unblock the Notifications








