ಪೊಲೀಸ್‌ ನಾಯಿಗಳಿಗಾಗಿ ಜಿಪಿಎಸ್‌ ಬ್ಯಾಕ್‌ಪ್ಯಾಕ್‌

By Ashwath
|

ಇಲ್ಲಿವರೆಗೆ ವಾಸನೆಯನ್ನು ಗ್ರಹಿಸಿ ಬೇಕಾದ ವಸ್ತುವನ್ನ ಪತ್ತೆ ಹಚ್ಚುತ್ತಿದ್ದ ಪೊಲೀಸ್‌ ನಾಯಿಗಳೊಂದಿಗೆ ಪೊಲೀಸರು ಹೋಗಬೇಕಿತ್ತು.ಆದರೆ ಇನ್ನೂ ಮುಂದೆ ಕುಳಿತ ಸ್ಥಳದಿಂದಲೇ ರಿಮೋಟ್‌ ಕಂಟ್ರೋಲ್‌ ಮೂಲಕ ಪೊಲೀಸರು ಪೊಲೀಸ್‌ ನಾಯಿಗಳ ಚಲನವಲನಗಳನ್ನು ಕಂಡುಹಿಡಿಯಬಹುದು.ಅಮೆರಿಕದ ಸಂಶೋಧಕರು ಪೊಲೀಸ್‌ ನಾಯಿಗಳಿಗಾಗಿ ಹೊಸ ಜಿಪಿಎಸ್‌ ಬ್ಯಾಕ್‌ಪ್ಯಾಕ್‌ನ್ನು ಅಭಿವೃದ್ಧಿ ಪಡಿಸಿದ್ದಾರೆ.

ಹೌದು.ಅಮೆರಿಕದ ಆಬರ್ನ್ ವಿಶ್ವವಿದ್ಯಾಲಯದ ಸಂಶೋಧಕರು ಪೊಲೀಸ್‌/ಮಿಲಿಟರಿ ನಾಯಿಗಳನ್ನು ದೂರದಿಂದಲೇ ನಿಯಂತ್ರಿಸಲು ಹೊಸ ಜಿಪಿಎಸ್‌ ತಂತ್ರಜ್ಞಾನವನ್ನು ಹೊಂದಿರುವ ಬ್ಯಾಕ್‌ಪ್ಯಾಕ್‌ನ್ನು ಅಭಿವೃದ್ಧಿ ಪಡಿಸಿದ್ದಾರೆ.ಜಿಪಿಎಸ್,ವೈರ್‌ಲೆಸ್‌ಸ್‌ ರೇಡಿಯೋ,ಮೈಕ್ರೋಪ್ರೊಸೆಸರ್‌ ಚಿಪ್‌ ಒಳಗೊಂಡಿರುವ 0.7 ಗ್ರಾಂ ತೂಕದ ಬ್ಯಾಕ್‌ಪಾಕ್‌ನ್ನು ನಾಯಿಗಳ ಬೆನ್ನಿನ ಮೇಲೆ ಇರಿಸಿದರೆ ಆಯಿತು. ಆ ನಾಯಿಯ ಸಾಗುವ ದಾರಿಯ ಸಂಪೂರ್ಣ‌ ಚಿತ್ರಣ ನಿಮ್ಮ ಕೈಯಲ್ಲಿರುವ ಜಿಪಿಎಸ್‌ ರಿಸೀವರ್‌ನಲ್ಲಿರುತ್ತದೆ.

ನಾಯಿಯನ್ನು ಚೆನ್ನಾಗಿ ಪಳಗಿಸಿದ್ದಲ್ಲಿ ರಿಮೋಟ್‌ ಕಂಟ್ರೋಲ್‌ ಮೂಲಕವೇ ನಾಯಿಯ ಪಥವನ್ನು ನಿಯಂತ್ರಿಸಬಹುದಂತೆ!ಪರೀಕ್ಷಾ ಪ್ರಯೋಗದಲ್ಲಿಈ ಜಿಪಿಎಸ್‌ ಸಾಧನ ಶೇ.97 ಪರಿಪೂರ್ಣವಾಗಿದೆ ಕೆಲಸ ನಿರ್ವಹಿಸಿದೆ.

ಪ್ರಾಕೃತಿಕ ವಿಕೋಪ ಸಂಭವಿಸಿದಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ಜನರನ್ನ ಶೀಘ್ರದಲ್ಲೇ ಪತ್ತೆ ಹಚ್ಚಲು ಈ ಗ್ಯಾಜೆಟ್‌ ತುಂಬಾ ಸಹಕಾರಿಯಾಗಲಿದೆ. ಮುಂದಿನ ದಿನದಲ್ಲಿ ಈ ಜಿಪಿಎಸ್‌ ಗ್ಯಾಜೆಟ್‌ಗೆ ವಿಡಿಯೋ ಕ್ಯಾಮೆರಾ ಮತ್ತು ಸೆನ್ಸರ್‌ ಅಳವಡಿಸಿ ಮತ್ತಷ್ಟು ಅಭಿವೃದ್ಧಿ ಪಡಿಸಲಿರುವುದಾಗಿ ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ:ಸ್ಮಾರ್ಟ್‌ಫೋನ್‌ಲ್ಲೇ ಮಗುವಿನ ಆರೋಗ್ಯದ ಪರೀಕ್ಷೆ ಹೇಗೆ?

ಇನ್ನು ರಿಮೋಟ್‌ನಲ್ಲೇ ಪೊಲೀಸ್‌ ನಾಯಿಯಗಳನ್ನು ನಿಯಂತ್ರಿಸಬಹುದು!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X