ಬಳಕೆದಾರರಿಗೆ ಹೊಸ ಈವೆಂಟ್‌ ಪರಿಚಯಿಸಿದ ಟಿಂಡರ್‌ ಅಪ್ಲಿಕೇಶನ್‌!

|

ಜನಪ್ರಿಯ ಡೇಟಿಂಗ್‌ ಆಪ್‌ಗಳಲ್ಲಿ ಒಂದಾದ ಟಿಂಡರ್‌ ತನ್ನ interactive event 'Swipe Night' in India ಅನ್ನು ಪರಿಚಯಿಸಿದೆ. ಇನ್ನು ಈ ಈವೆಂಟ್‌ ಗೇಮ್/ವಿಡಿಯೋ ಸರಣಿಯಲ್ಲಿ ಲಭ್ಯವಾಗಲಿದ್ದು, ಈವೆಂಟ್‌ ಅನ್ನು ಟಿಂಡರ್‌ ಅಪ್ಲಿಕೇಶನ್‌ನಲ್ಲಿಯೇ ಅನುಭವಿಸಬಹುದಾಗಿದೆ. ಇನ್ನು ಈ ಈವೆಂಟ್‌ ಕಳೆದ ವರ್ಷ ಯುಎಸ್‌ನಲ್ಲಿ ಬಿಡುಗಡೆ ಆಗಿತ್ತು. ಅಲ್ಲದೆ ಭಾರತದಲ್ಲಿಯೂ ಈಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ ಬಿಡುಗಡೆ ಆಗುವುದು ತಡವಾಗಿತ್ತು. ಆದರೆ ಇದೀಗ ಈ ಈವೆಂಟ್‌ ಭಾರತದಲ್ಲಿ ಬಿಡುಗಡೆ ಆಗಿದ್ದು, ಇದೇ ಸೆಪ್ಟೆಂಬರ್‌ 12 ರಿಂದ ಬಳಕೆದಾರರು ಸ್ವೈಪ್‌ನೈಟ್‌ ಅನ್ನು ಅನುಭವಿಸಬಹುದಾಗಿದೆ.

ಟಿಂಡರ್

ಹೌದು, ಟಿಂಡರ್ ಅಪ್ಲಿಕೇಶನ್‌ ತನ್ನ interactive event ‘ಸ್ವೈಪ್ ನೈಟ್' ಅನ್ನು ಭಾರತದಲ್ಲಿಯೂ ಬಿಡುಗಡೆ ಮಾಡಿದೆ. ಸ್ವೈಪ್ ನೈಟ್ ಒಂದು ಸಂವಾದಾತ್ಮಕ ಇಂಟರ್‌ಆಕ್ಟಿವ್‌ ಈವೆಂಟ್ ಗೇಮ್ ಸರಣಿಯಾಗಿದ್ದು ಇದನ್ನು ಟಿಂಡರ್ ಅಪ್ಲಿಕೇಶನ್‌ನಲ್ಲಿಯೇ ಅನುಭವಿಸಬಹುದಾಗಿದೆ. ಅಲ್ಲದೆ ಇದು ಕಥೆಯಾಧಾರಿತ ಈವೆಂಟ್‌ ಅಗಿದ್ದು, ಇಲ್ಲಿ ಬಳಕೆದಾರರಿಗೆ ಎರಡು ಆಯ್ಕೆಗಳನ್ನ ನೀಡಲಾಗಿರುತ್ತೆ ಎಂದು ಹೇಳಲಾಗಿದೆ. ಜೊತೆಗೆ ಈ ಎರಡು ಆಯ್ಕೆಗಳಲ್ಲಿ ಒಂದು ಆಯ್ಕೆಯನ್ನ ಬಳಕೆದಾರರು ಆಯ್ಕೆ ಮಾಡಿಕೊಂಡು ಈ ಈವೆಂಟ್‌ನಲ್ಲಿ ಮುಂದುವರೆಯಬಹುದಾಗಿದೆ. ಇನ್ನು ಈ ಈವೆಂಟ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಟಿಂಡರ್‌

ಟಿಂಡರ್‌ ಅಪ್ಲಿಕೇಶನ್‌ ಪರಿಚಯಿಸಿರುವ interactive event ‘ಸ್ವೈಪ್ ನೈಟ್' ಒಂದು ಕಥೆಯಾಧಾರಿತ ಗೇಮ್‌/ ವಿಡಿಯೋ ಸರಣಿಯಾಗಿದೆ. ಇದರಲ್ಲಿ ಎರಡು ಆಯ್ಕೆಗಳನ್ನ ನೀಡಲಾಗಿರುತ್ತೆ. ಇದರಲ್ಲಿ ಬಳಕೆದಾರರು ಯಾವುದಾದರೂ ಒಂದನ್ನು ಆರಿಸಬೇಕಾಗುತ್ತದೆ. ನಂತರ ಬಳಕೆದಾರರ ನಿರ್ಧಾರವನ್ನು ಆಧರಿಸಿ ಈವೆಂಟ್‌ ಸ್ಟೋರಿ ಮುಂದುವರಿಯಲಿದೆ. ಇನ್ನು ಇದರಲ್ಲಿರುವ ಎಪಿಸೋಡ್‌ಗಳು ಮತ್ತು ಆಯ್ಕೆಗಳು ಗೇಮ್‌ ಮಾದರಿಗೆ ಹೋಲಿಕೆ ಆಗಲಿವೆ. ಆದರೆ ಟಿಂಡರ್‌ನಲ್ಲಿ, ಸ್ವೈಪ್ ನೈಟ್ ಅನ್ನು ನೈ ಚಿತ್ರದಂತೆ ಚಿತ್ರೀಕರಿಸಲಾಗಿದೆ. ಅಲ್ಲದೆ, ಈ ಈವೆಂಟ್‌ನಲ್ಲಿ ಬಳಕೆದಾರರ ಆಯ್ಕೆಗಳ ಆಧಾರದ ಮೇಲೆ ಅವರು ಒಂದೇ ಉತ್ತರಗಳನ್ನು ಆಯ್ಕೆ ಮಾಡಿದ ಜನರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿರುತ್ತೆ.

ಸ್ವೈಪ್ ನೈಟ್

ಇನ್ನು ಸ್ವೈಪ್ ನೈಟ್‌ನ ಸ್ಟೋರಿ ಸಬ್ಜೆಕ್ಟ್‌ "end of the world" ಥೀಮ್ ಅನ್ನು ಒಳಗೊಂಡಿದೆ. ಇನ್ನು ಈ ಈವೆಂಟ್‌ ಶುರುವಾಗುವುದೇ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಮೊಶನ್‌ ಫಿಕ್ಚರ್‌ ಮಾದರಿಯ ಮೂಲಕ ಇದು ವಿಶ್ವದ ಅಂತ್ಯವನ್ನು ಸೂಚಿಸುತ್ತದೆ. ಇನ್ನು ಪ್ರತಿ ಈವೆಂಟ್‌ ಕೂಡ ಬಳಕೆದಾರರ ಆಯ್ಕೆಯ ಮೇಲೆಯೆ ನಿರ್ಧಾರಿತವಾಗಲಿದೆ. ಪ್ರತಿ ನಿರ್ಧಾರಕ್ಕೂ, ಬಳಕೆದಾರರಿಗೆ ಆಯ್ಕೆ ಮಾಡಲು ಕೇವಲ ಕೆಲವೇ ಸೆಕೆಂಡುಗಳ ಆವಕಾಶವನ್ನ ಮಾತ್ರ ನೀಡಲಾಗಿರುತ್ತೆ. ಇನ್ನು ಯುಎಸ್‌ನಲ್ಲಿ ಈ ಸ್ವೈಪ್‌ನೈಟ್‌ ಈವೆಂಟ್‌ ಪರಿಚಯಿಸಿದ ನಂತರ ಬಳಕೆದಾರರ ಸಂದೇಶಗಳು 12% ಹೆಚ್ಚಾಗಿದೆ "ಎಂದು ಟಿಂಡರ್ ಹೇಳಿಕೊಂಡಿದೆ.

ಸ್ವೈಪ್ ನೈಟ್‌

ಸದ್ಯ ಸ್ವೈಪ್ ನೈಟ್‌ನಲ್ಲಿ ಕೇವಲ ಮೂರು ಕಂತುಗಳಿವೆ ಮತ್ತು ಇವುಗಳನ್ನು ಸಾಂಕ್ರಾಮಿಕ ರೋಗದ ಮೊದಲು ಕಳೆದ ವರ್ಷ ಚಿತ್ರೀಕರಿಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ವಿಷಯವನ್ನು ತರಲು ಟಿಂಡರ್ ಯೋಜಿಸಿದೆ. ಸೆಪ್ಟೆಂಬರ್ 12 ರಂದು ಬೆಳಿಗ್ಗೆ 10 ಗಂಟೆಗೆ ಮೂರು ಕಂತುಗಳೊಂದಿಗೆ ಸ್ವೈಪ್ ನೈಟ್ ಭಾರತದಲ್ಲಿ ಪ್ರಾರಂಭವಾಗಲಿದೆ. ಗೇಮ್‌ನಂತೆ ಭಾವಿಸಿದರೂ ಚಲನಚಿತ್ರದ ಅನುಭವ ನೀಡುವ ಈ ವಿಡಿಯೋ ಸರಣಿ ಬಳಕೆದಾರರನ್ನು ಇನ್ನಷ್ಟು ಆಕರ್ಷಿಸಲಿದೆ ಎಂದು ಹೇಳಲಾಗ್ತಿದೆ. ಸದ್ಯ ಈ ಈವೆಂಟ್‌ನ ಎರಡನೇ ಮತ್ತು ಮೂರನೇ ಸ್ವೈಪ್ ನೈಟ್ ಕಂತುಗಳು ಕ್ರಮವಾಗಿ ಸೆಪ್ಟೆಂಬರ್ 19 ಮತ್ತು 26 ರಂದು ಪ್ರಸಾರವಾಗಲಿವೆ ಎಂದು ಹೇಳಲಾಗಿದೆ.

Most Read Articles
Best Mobiles in India

Read more about:
English summary
Tinder's Swipe Night will be available in India starting September 12 with three episodes each week.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X