ಕಾಂಟ್ಯಾಕ್ಟ್‌ ಲೆಸ್ ಪೇಮೆಂಟ್ ಟೆಕ್ನಾಲಜಿ ಹೊಂದಿರುವ ಟೈಟಾನ್‌ ವಾಚ್‌ ಬಿಡುಗಡೆ!

|

ಜನಪ್ರಿಯ ವಾಚ್‌ ತಯಾರಕ ಟೈಟಾನ್‌ ಸಂಸ್ಥೆ ಐದು ಹೊಸ ಮಾದರಿಯ ವಾಚ್‌ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಆದರೆ ಇವು ಸ್ಮಾರ್ಟ್ ವಾಚ್‌ಗಳಲ್ಲ. ಬದಲಿಗೆ ಕಂಟ್ಯಾಕ್ಟ್‌ಲೆಸ್ ಪೇಮೆಂಟ್‌ 'ಸ್ಮಾರ್ಟ್' ಫೀಚರ್ಸ್‌ ಅನ್ನು ಒಳಗೊಂಡಿರುವ ವಾಚ್‌ ಆಗಿದೆ. ಸದ್ಯ ಈ ವಾಚ್‌ಗಳನ್ನ ತಯಾರಿಸಲು ಟೈಟಾನ್‌ ಸಂಸ್ಥೆ ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಪಾಲುದಾರಿಕೆ ಹೊಂದಿದೆ. ಇನ್ನು ಈ ವಾಚ್‌ ಹೊಸ ಮಾದರಿಯ ಫೀಚರ್ಸ್‌ ಅನ್ನು ಹೊಂದಿದ್ದು, ಕಂಟ್ಯಾಕ್ಟ್‌ಲೆಸ್‌ ಪೇಮೆಂಟ್‌ ಪಿಓಎಸ್ ಯಂತ್ರಗಳಿಗೆ ಟೈಟಾನ್ ವಾಚ್ ಅನ್ನು ಟ್ಯಾಪ್ ಮಾಡಬಹುದಾಗಿದೆ.

ಟೈಟಾನ್‌

ಹೌದು, ಟೈಟಾನ್‌ ಸಂಸ್ಥೆ ತನ್ನ ಐದು ಹೊಸ ವಾಚ್‌ಗಳನ್ನ ಭಾರತದಲ್ಲಿ ಪರಿಚಯಿಸಿದೆ. ಇನ್ನು ಈ ವಾಚ್‌ನ ವಿಶೇಷತೆಯೆಂದರೆ ಇದರ ಮೂಲಕ ನೀವು ಕಂಟ್ಯಾಕ್ಟ್‌ಲೆಸ್‌ ಪೇಮೆಂಟ್‌ ಅನ್ನು ಮಾಡಬಹುದಾಗಿದೆ. ಇದಕ್ಕಾಗಿ ಈ ವಾಚ್‌ ಗಳು ಕಂಟ್ಯಾಕ್ಟ್‌ ಲೆಸ್‌ ಪೇಮೆಂಟ್‌ ಸ್ಮಾರ್ಟ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದರ ಮೂಲಕ ಎಲ್ಲಾ ಬಳಕೆದಾರರು POS ಮೂಲಕ ಪೇಮೆಂಟ್‌ ಅನ್ನು ಮಾಡಬಹುದಾಗಿದೆ. ಅಲ್ಲದೆ ಇದು ಎಸ್‌ಬಿಐನೊಂದಿಗೆ ಸಂಬಂಧ ಹೊಂದಿರುವುದರಿಂದ, ಇದು ಎಸ್‌ಬಿಐ ಬ್ಯಾಂಕ್ ಕಾರ್ಡ್ ಹೊಂದಿರುವ ಬಳಕೆದಾರರು ಮಾತ್ರ ಕಂಟ್ಯಾಕ್ಟ್‌ ಲೆಸ್ ಪೇಮೆಂಟ್‌ ಅನ್ನು ಮಾಡಬಹುದಾಗಿರುತ್ತೆ. ಇನ್ನುಳಿದಂತೆ ಈ ವಾಚ್‌ ಒಳಗೊಂಡಿರುವ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೈಟಾನ್‌

ಇನ್ನು ಟೈಟಾನ್‌ ಪರಿಚಯಿಸಿರುವ ಹೊಸ ವಾಚ್‌ಗಳ ಮೂಲಕ ನಿವು ಕಂಟ್ಯಾಕ್ಟ್‌ಲೆಸ್‌ ಪೇಮೆಂಟ್‌ ಅನ್ನು ಮಾಡಬಹುದಾಗಿದೆ. ಅದರಲ್ಲೂ ಎಸ್‌ಬಿಐ ಬ್ಯಾಂಕ್‌ ಕಾರ್ಡ್‌ ಹೊಂದಿರುವ ಬಳಕೆದಾರರು ಮಾತ್ರ ಮಾಡಬಹುದು. ಅಲ್ಲದೆ ಇದರ ಮೂಲಕ ಒಂದೇ ವಹಿವಾಟಿನಲ್ಲಿ, 2,000ರೂ ಪಾವತಿಯನ್ನು ಮಾಡಬಹುದಾಗಿದೆ. ಜೊತೆಗೆ 2,000 ಕ್ಕಿಂತ ಹೆಚ್ಚಿನ ಮೊತ್ತವನ್ನು ಹೊಂದಿರುವ ಪಾವತಿಗಳಿಗೆ ನೀವು ಪಿನ್ ಅನ್ನು ಸೆಟ್‌ಮಾಡಬೇಕಿರುತ್ತದೆ. ಅಲ್ಲದೆ ಪಿನ್‌ ಅನ್ನು ಫಿಡ್‌ ಮಾಡುವ ಮೂಲಕ ಪೇಮೆಂಟ್‌ ಮಾಡಬೇಕಾಗುತ್ತೆ.

ವಾಚ್

ಸದ್ಯ ಈ ವಾಚ್‌ಗಳ ಮೂಲಕ ಪೇಮೆಂಟ್‌ಗಳನ್ನು ಸಹ ಮಾಡಬಹುದಾಗಿದ್ದು, ಇದು ಬಳಕೆದಾರರಿಗೆ ಸಾಕಷ್ಟು ಉಪಯುಕ್ತವಾಗಿದೆ. ಇನ್ನು ಈ ವಾಚ್ ಸ್ಟ್ರಾಪ್ ಒಳಗೆ ನಿಯರ್-ಫೀಲ್ಡ್ ಕಮ್ಯುನಿಕೇಷನ್ (NFC) ಚಿಪ್ ಇರುವುದರಿಂದ ಪೇಮೆಂಟ್‌ ಅನ್ನು ಕಳುಹಿಸುವುದಕ್ಕೆ ಸಾಧ್ಯವಾಗಲಿದೆ. ಈ ರೀತಿಯ ಕಂಟ್ಯಾಕ್ಟ್‌ಲೆಸ್‌ ಪೇಮೆಂಟ್‌ ಮಾಡುವುದಕ್ಕೆ ಅವಕಾಶವಿರುವುದರಿಂದ ಈ ವಾಚ್‌ ಸಾಕಷ್ಟು ಆಕರ್ಷಣೀಯವಾಗಿದೆ. ಇದಲ್ಲದೆ ಈ ವಾಚ್‌ ಪುರುಷರು ಮತ್ತು ಮಹಿಳೆಯರಿಗಾಗಿ ಐದು ವಿಭಿನ್ನ ಆವೃತ್ತಿಗಳಲ್ಲಿ ಬರುತ್ತವೆ. ಅವುಗಳಲ್ಲಿ ಮೂರು ವಾಚ್‌ಗಳನ್ನ ಪುರುಷರಿಗಾಗಿ ವಿನ್ಯಾಸಗೊಳಿಸಿದ್ದರೆ, ಇನ್ನುಳಿದ ಎರಡು ವಾಚ್‌ಗಳನ್ನ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ.

ವಾಚ್

ಇನ್ನು ಈ ವಾಚ್ ಕ್ಲಾಸಿಕ್ ಬ್ಲ್ಯಾಕ್ ಮತ್ತು ಬ್ರೌನ್ ಲೆದರ್ ಸ್ಟ್ರಾಪ್‌ಗಗಳನ್ನ ಹೊಂದಿರುವ ರೌಂಡ್ ಡಯಲ್‌ಗಳೊಂದಿಗೆ ಬರುತ್ತದೆ. ಗೋಲ್ಡ್ ಅಚ್ಛೇನ್ಟ್ಸ್, ಡೆಡಿಕೇಟೆಡ್ ಪೇಮೆಂಟ್ ಬಟನ್ಸ್ ಅಂಡ್ ಅಡಿಷನಲ್ ಡೈಲ್ಸ್ ಫಾರ್ ಡೇ ಅಂಡ್ ಡೇಟ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ವಾಚ್‌ಗಳ ಬೆಲೆ ಸಾಕಷ್ಟು ವಿಭಿನ್ನ ವಾಗಿದೆ. ಇದರಲ್ಲಿ ಪುರುಷರ ವಾಚ್‌ಗಳ ಬೆಲೆ 2,995ರೂ, 3,995ರೂ, ಮತ್ತು 5,995ರೂ ಬೆಲೆಯನ್ನ ಹೊಂದಿದೆ.ಮಹಿಳೆಯರ ವಾಚ್‌ಗಳ ಬೆಲೆ 3,895ರೂ ಮತ್ತು, 4,395 ರೂ.ಬೆಲೆಯನ್ನು ಹೊಂದಿದೆ.

Best Mobiles in India

English summary
The transaction takes place as there is a Near-Field Communication (NFC) chip placed inside the watch strap.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X