ಸುರಕ್ಷಾ ಪ್ರಯಾಣಕ್ಕಾಗಿ ಉಬರ್ ಟ್ಯಾಕ್ಸಿಗೆ ಪೋಲೀಸ್ ನೆರವು

Posted By:

ಸುರಕ್ಷಾ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸುವುದಕ್ಕಾಗಿ ಉಬರ್ ನಗರದ ಪೋಲೀಸ್‌ರೊಂದಿಗೆ ಕೈಜೋಡಿಸುತ್ತಿದ್ದು ನಗರದಲ್ಲಿ ಸಂಚರಿಸಲಿರುವ ಎಲ್ಲಾ ಉಬರ್ ಟ್ಯಾಕ್ಸಿಗಳ ಮೇಲೆ ಇನ್ನು ಪೋಲೀಸರ ಹದ್ದಿನ ಕಣ್ಣು ನಿಗಾವಹಿಸಲಿದೆ.

ಓದಿರಿ: ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?

ಸುರಕ್ಷಾ ಪ್ರಯಾಣಕ್ಕಾಗಿ ಉಬರ್ ಟ್ಯಾಕ್ಸಿಗೆ ಪೋಲೀಸ್ ನೆರವು

ಉಬರ್‌ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಕೂಡ ಈ ವ್ಯವಸ್ಥೆಯಡಿಯಲ್ಲಿ ಪೋಲೀಸರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಉಬರ್‌ನ ಬೆಂಗಳೂರು ಜನರಲ್ ಮ್ಯಾನೇಜರ್ ಭಾವಿಕ್ ರಾಥೋಡ್ ಹೇಳುವಂತೆ ಪ್ರಯಾಣಿಕರ ಸುರಕ್ಷತಾ ಹಿತದೃಷ್ಟಿಯಿಂದ ನಾವು ಉಬರ್ ಪ್ರಯಾಣವನ್ನು ಇನ್ನಷ್ಟು ಭದ್ರಪಡಿಸುತ್ತಿದ್ದೇವೆ.

ಓದಿರಿ: ದಿನವಿಡೀ ಫೋನ್ ಚಾರ್ಜ್ ಮಾಡಿ ನಿಶ್ಚಿಂತೆಯಿಂದಿರಿ

ಸುರಕ್ಷಾ ಪ್ರಯಾಣಕ್ಕಾಗಿ ಉಬರ್ ಟ್ಯಾಕ್ಸಿಗೆ ಪೋಲೀಸ್ ನೆರವು

ಇನ್ನು ನಗರದ ಪೋಲೀಸರ ಸಹಾಯವನ್ನು ಪಡೆದುಕೊಳ್ಳುತ್ತಿರುವುದು ನಮಗೆ ಹೆಚ್ಚಿನ ಬಲವನ್ನು ಒದಗಿಸುತ್ತಿದ್ದು ಪ್ರಯಾಣಿಕರಲ್ಲಿ ಅಭದ್ರತೆ ಉಂಟಾಗದಂತೆ ನೋಡಿಕೊಳ್ಳಲು ಇದು ಸಹಾಯಕವಾಗಿದೆ.

ಓದಿರಿ: ಅರಳು ಹುರಿದಂತೆ ಇಂಗ್ಲೀಷ್ ಮಾತನಾಡಲು ಈ ಅಪ್ಲಿಕೇಶನ್ ಸಾಕು

ಸುರಕ್ಷಾ ಪ್ರಯಾಣಕ್ಕಾಗಿ ಉಬರ್ ಟ್ಯಾಕ್ಸಿಗೆ ಪೋಲೀಸ್ ನೆರವು

ಉಬರ್‌ನ ಎಸ್‌ಓಎಸ್ ಸೂಚನೆ ಪರಿಹಾರ ತಮ್ಮ ಕಂಟ್ರೋಲ್ ರೂಮ್‌ಗಳಲ್ಲಿ ಇನ್ನಷ್ಟು ಭದ್ರ ವ್ಯವಸ್ಥೆಗಳನ್ನು ಅಳವಡಿಸುತ್ತಿದೆ. ತಂತ್ರಜ್ಞಾನ ವ್ಯವಸ್ಥೆಯಡಿಯಲ್ಲಿ ಪೋಲೀಸರ ನೆರವಿನೊಂದಿಗೆ ಕಟ್ಟುನಿಟ್ಟಿನ ಭದ್ರತೆಯನ್ನು ಉಬರ್ ಟ್ಯಾಕ್ಸಿ ಪ್ರಯಾಣಿಕರಿಗೆ ನಾವು ನೀಡಲಿದ್ದೇವೆ ಎಂದವರು ತಿಳಿಸಿದ್ದಾರೆ.

English summary
To provide a safe journey experience, Uber is joining hands with the city police to keep a watchful eye on all their taxis moving in the city.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot