Subscribe to Gizbot

ರಿಲಾಯನ್ಸ್ ಜಿಯೋ 4G ಸಿಮ್ ಉಚಿತವಲ್ಲ: ಖರೀದಿ ಬೆಲೆ ರೂ.500

Written By:

ಮುಕೇಶ್‌ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಟೆಲಿಕಾಂ ಕ್ಷೇತ್ರದಲ್ಲಿ ಕಳೆದ 2 ತಿಂಗಳಿಂದ ಶಾಕ್‌ ಮೇಲೆ ಶಾಕ್ ಕೊಡುತ್ತಲೇ ಇದೆ. ಅದ್ರೆ ಈ ಶಾಕ್‌ ಉಚಿತ ಡಾಟಾ, ಕರೆ ಮತ್ತು ಎಸ್‌ಎಂಎಸ್‌ಗೆ ಮಾತ್ರ ಸೀಮಿತವಾಗಿತ್ತು. ಅಲ್ಲದೇ ಜಿಯೋ ಉಚಿತ ಸೇವೆ ಡಿಸೆಂಬರ್‌ ಅಂತ್ಯದವರೆಗೆ ಎಂಬುದು ಗಿಜ್‌ಬಾಟ್‌ ಓದುಗರಿಗೆ ಈಗಾಗಲೇ ತಿಳಿದಿದೆ. ಆದ್ರೆ ಜಿಯೋ ಸಿಮ್ ಖರೀದಿಸಲು ಬಯಸುವವರಿಗೆ ಈಗ ಇನ್ನೊಂದು ಶಾಕ್‌ ಕಟ್ಟಿಟ್ಟ ಬುತ್ತಿ. ಅದೇನು ಎಂದು ಮುಂದೆ ಓದಿ.

ರಿಲಾಯನ್ಸ್ ಜಿಯೋಗೆ ನಿಮ್ಮ ನಂಬರ್ ಪೋರ್ಟ್‌ ಮಾಡದಿರಿ: 6 ಕಾರಣಗಳು

ರಿಲಾಯನ್ಸ್ ಡಿಜಿಟಲ್ ಮಳಿಗೆಗಳು ಮತ್ತು ಭಾರತದಾದ್ಯಂತದ ಇತರೆ ಅಧಿಕೃತ ಮೊಬೈಲ್ ಅಂಗಡಿಗಳು ಈಗ ಜಿಯೋ ಸಿಮ್ ಖರೀದಿಸಲು ಬರುವವರಿಗೆ ಸಿಮ್‌ಗಾಗಿ ರೂ.50 ರಿಂದ ರೂ.500 ವರೆಗೂ ಚಾರ್ಜ್‌ ಮಾಡುತ್ತಿವೆ. ರಿಲಾಯನ್ಸ್ ಜಿಯೋ 4G ಸಿಮ್‌ ಉಚಿತ ಮತ್ತು ಸೇವೆ ಡಿಸೆಂಬರ್‌ ಅಂತ್ಯದ ವರೆಗೆ ಉಚಿತವಾಗಿದ್ದು, ಜನವರಿ ಮೊದಲನೆ ದಿನದಿಂದ ಡಾಟಾಗೆ ರೀಚಾರ್ಜ್‌ ಪಡೆಯಬೇಕು ಎಂಬುದು ಹಿಂದಿನ ವಿಷಯ. ಆದ್ರೆ ಈಗ ಜಿಯೋ(Jio) ಸಬ್‌ಸ್ಕ್ರೈಬರ್‌ಗಳು ಬೇರೆಯದೇ ಆದ ಶಾಕ್‌ ಅನುಭವಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಶಾಕ್‌ ವಿಷಯಗಳನ್ನು ಸ್ಲೈಡರ್‌ಗಳಲ್ಲಿ ಓದಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೀಪಕ್‌ ವರ್ಮ

ದೀಪಕ್‌ ವರ್ಮ

ಗಾಜಿಯಾಬಾದ್ ಮೂಲದ ನಿವಾಸಿ ದೀಪಕ್ ವರ್ಮ'ರವರು ತಮ್ಮ ಹತ್ತಿರದ ರಿಲಾಯನ್ಸ್ ಜಿಯೋ ಮಳಿಗೆಯಲ್ಲಿ ಮೊದಲಿಗೆ ಉಚಿತ ಸಿಮ್ ಪಡೆದರಂತೆ. ಆದರೆ ಅದೇ ಮಳಿಗೆಯಲ್ಲಿ ಈಗ ಒಂದು ಜಿಯೋ ಸಿಮ್‌ಗೆ ರೂ.250 ಚಾರ್ಜ್‌ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಎಲ್ಲವೂ ಡಿಜಿಟಲಿ ಆಕ್ಟಿವೇಟ್‌ ಆಗಿದೆ, ಆದರೆ ಸಿಮ್‌ಗಾಗಿ ಚಾರ್ಜ್ ಮಾಡುತ್ತಿರುವ ಹಣಕ್ಕೆ ಯಾವುದೇ ಬಿಲ್‌ ನೀಡುತ್ತಿಲ್ಲ ಎಂದು ದೂರಿದ್ದಾರೆ.

ರಾಧಾ ಮಿಶ್ರ

ರಾಧಾ ಮಿಶ್ರ

HR ಎಕ್ಸಿಕ್ಯೂಟಿವ್ ಆದ ರಾಧಾ ಮಿಶ್ರ, ಅಕ್ರೋಬರ್ 10 ರಂದು ಮೇಲೆ ತಿಳಿಸಿದ ರಿಲಾಯನ್ಸ್ ಮಳಿಗೆಯಲ್ಲಿ ಜಿಯೋ ಸಿಮ್‌ ಅನ್ನು 250 ರೂಗೆ ಖರೀದಿಸಿದ್ದಾರೆ. ಆದರೆ ಸಿಮ್‌ ಇನ್ನೂ ಆಕ್ಟಿವೇಟ್ ಆಗಿಲ್ಲ. ದಿನನಿತ್ಯ ಸ್ಟೋರ್‌ಗೆ ಹೋಗಿ ವಿಚಾರಿಸಿದರೆ ಟೆಕ್ನಿಕಲ್ ಸಮಸ್ಯೆ ಎಂದು ಹೇಳುತ್ತಿದ್ದಾರೆ ಎಂದು ದೂರಿದ್ದಾರೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿನ್ನಿ ಜೈನ್‌

ವಿನ್ನಿ ಜೈನ್‌

ಮೀರತ್‌ ಮೂಲದ ವಿನ್ನಿ ಜೈನ್'ರವರು ಮೀರತ್‌ನಲ್ಲಿ ಜಿಯೋ ಸಿಮ್‌ಗೆ ರೂ.500 ನೀಡಿ ಖರೀದಿಸಿದ್ದಾರೆ. ಅಲ್ಲದೇ ಪತ್ರಕರ್ತರೊಬ್ಬರು ಮುಂಬೈನಲ್ಲಿ ಜಿಯೋ ಸಿಮ್‌ಗೆ ರೂ.50 ನೀಡಿ ಖರೀದಿಸಿದ್ದಾರೆ. ಅವರು ಸಿಮ್‌ ಖರೀದಿಸಿದ ಸ್ಟೋರ್‌ಕೀಪರ್ 'ದಿನನಿತ್ಯ 150 ಸಿಮ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ದಿನನಿತ್ಯ 7500 ರೂ ಲಾಭ ಬರುತ್ತದೆ' ಎಂದು ಮಾಹಿತಿ ನೀಡಿದ್ದಾರೆ.

ಆಧಾರ್ ಕಾರ್ಡ್‌ನಿಂದ ಆಕ್ಟಿವೇಶನ್‌ ಸುಲಭ

ಆಧಾರ್ ಕಾರ್ಡ್‌ನಿಂದ ಆಕ್ಟಿವೇಶನ್‌ ಸುಲಭ

ದೇಶದಾದ್ಯಂತ ಜಿಯೋ ಸಿಮ್ ಅನ್ನು ಸುಲಭವಾಗಿ ನೀಡಲು ರಿಲಾಯನ್ಸ್ 3,100 ಸಿಟಿಗಳಲ್ಲಿ ಆಧಾರ್‌ ಕಾರ್ಡ್ ಆಧಾರಿತ ಬಯೋಮೆಟ್ರಿಕ್ ಸಿಸ್ಟಮ್‌ ಆಕ್ಟಿವೇಶನ್‌ ಅನ್ನು ಪರಿಚಯಿಸಿತ್ತು. ಈ ಸಿಸ್ಟಮ್‌ನಿಂದ ಸಿಮ್‌ ಆಕ್ಟಿವೇಶನ್ ಕೇವಲ 10 ನಿಮಿಷದೊಳಗೆ ಪೂರ್ಣಗೊಳ್ಳುತ್ತಿತ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 16 ದಶಲಕ್ಷ ಸಬ್‌ಸ್ಕ್ರೈಬರ್‌ಗಳು

16 ದಶಲಕ್ಷ ಸಬ್‌ಸ್ಕ್ರೈಬರ್‌ಗಳು

ಜಿಯೋ ಲಾಂಚ್‌ ಆದ ಮೊದಲ ಒಂದು ತಿಂಗಳಲ್ಲೇ 16 ದಶಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಹೊಂದಲಾಯಿತು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Users charged from Rs 50 to 500 for Jio SIM card. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot