ರಿಲಾಯನ್ಸ್ ಜಿಯೋಗೆ ನಿಮ್ಮ ನಂಬರ್ ಪೋರ್ಟ್‌ ಮಾಡದಿರಿ: 6 ಕಾರಣಗಳು

By Suneel
|

'ರಿಲಾಯನ್ಸ್ ಜಿಯೋ 4G' ಇತ್ತೀಚಿನ ಎರಡು ತಿಂಗಳಿಂದ ಹೆಚ್ಚು ಜನರು ಮಾತನಾಡಲ್ಪಟ್ಟ ಟೆಲಿಕಾಂ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಂದಹಾಗೆ ಈಗಾಗಲೇ ಇತರೆ ಟೆಲಿಕಾಂ ಸೇವೆ ಬಳಸುತ್ತಿರುವ ಸ್ಮಾರ್ಟ್‌ಫೋನ್ ಬಳಕೆದಾರರು ಸಹ ರಿಲಾಯನ್ಸ್ ಜಿಯೋ ಸಿಮ್‌ ಪಡೆದು ಪ್ರಿವೀವ್‌ ಆಫರ್‌ ಪಡೆಯಲು ಉತ್ಸುಹರಾಗಿದ್ದಾರೆ.

ರಿಲಾಯನ್ಸ್ ಜಿಯೋ 4G ಸಿಮ್‌ಗೆ ಉತ್ತಮ ಪ್ರತಿಕ್ರಿಯೆ ಪಡೆದ ಕಂಪನಿ ಈಗ ಪೋರ್ಟ್‌ ನೀಡಲು ಆರಂಭಿಸಿದೆ. ಏರ್‌ಟೆಲ್‌, ವೊಡಾಫೋನ್‌, ಬಿಎಸ್‌ಎನ್‌ಎಲ್‌ ಮತ್ತು ಇತರೆ ಟೆಲಿಕಾಂ ಬಳಕೆದಾರರಿಂದ ರಿಲಾಯನ್ಸ್‌ ಜಿಯೋ MNP(Mobile Number Porting) ಅನ್ನು ಸ್ವೀಕರಿಸುತ್ತಿದೆ.

ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡುವುದು ಹೇಗೆ?

ರಿಲಾಯನ್ಸ್ ಜಿಯೋ ಸೇವೆ ಇನ್ನೂ ಸಹ ಪ್ರಾಥಮಿಕ ಹಂತದಲ್ಲಿದ್ದು, ಅಂತೆಯೇ ಹಲವು ತೊಂದರೆಗಳನ್ನು ಸಹ ಒಳಗೊಂಡಿದೆ. ಅವುಗಳಲ್ಲಿ ವೇಗದ ಸಮಸ್ಯೆ, ಆಕ್ಟಿವೇಶನ್‌ ತಡವಾಗುವಿಕೆ ಮತ್ತು ಇತರೆ. ಅಂದಹಾಗೆ ಇತರೆ ಟೆಲಿಕಾಂ ಬಳಕೆದಾರರು ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ಗೆ ಪೋರ್ಟ್‌ ಮಾಡಿಕೊಳ್ಳಲು ಯೋಚಿಸುತ್ತಿದ್ದರೆ, ಜಿಯೋ ನೆಟ್‌ವರ್ಕ್ ಸ್ಥಿರವಾಗುವವರೆಗೆ ಕಾಯಬೇಕಿದೆ.

ಪ್ರಸ್ತುತದಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಅನ್ನು ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ಗೆ ಪೋರ್ಟ್‌ ಮಾಡಿಕೊಳ್ಳಲೇಬಾರದು. ಕಾರಣಗಳೇನು ಏನು ಎಂದು ತಿಳಿಯಲು ಕೆಳಗಿನ ಸ್ಲೈಡರ್‌ಗಳನ್ನು ಓದಿರಿ. ಅಂದಹಾಗೆ ಈ ಕಾರಣಗಳು ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ ಸ್ಥಿರವಾಗುವವರೆಗೆ.

ರಿಲಾಯನ್ಸ್ ಜಿಯೋ e-KYC ಆಕ್ಟಿವೇಶನ್: ಸಿಮ್ 15 ನಿಮಿಷದಲ್ಲಿ ಆಕ್ಟಿವೇಟ್‌

 4G ನೆಟ್‌ವರ್ಕ್ ಕವರೇಜ್ ಸಾಕಷ್ಟಿಲ್ಲ

4G ನೆಟ್‌ವರ್ಕ್ ಕವರೇಜ್ ಸಾಕಷ್ಟಿಲ್ಲ

ರಿಯಲಾಯನ್ಸ್ ಜಿಯೋ 4G ನೆಟ್‌ವರ್ಕ್ ಇರುವ ಪ್ರದೇಶಗಳಲ್ಲಿ ಇತರೆ ಟೆಲಿಕಾಂಗಳ ಸ್ಪರ್ಧೆಯಿಂದ 3G ಸೇವೆಯು ಸಹ ಸ್ಥಿರವಾಗಿಲ್ಲ. ಆದ್ದರಿಂದ 4G ಸೇವೆಯು ಬ್ಯುಸಿ ಪ್ರದೇಶಗಳಲ್ಲಿ ಖಾಲಿಯಾಗಿಯೇ ಉಳಿಯುತ್ತದೆ. ಹಲವು ಜಿಯೋ ಸಿಮ್‌ ಬಳಕೆದಾರರು ಪ್ರವಾಸದಿಂದ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

4G ಫೋನ್‌ ಅಪ್‌ಗ್ರೇಡ್ ಹೊಂದಲೇಬೇಕು

4G ಫೋನ್‌ ಅಪ್‌ಗ್ರೇಡ್ ಹೊಂದಲೇಬೇಕು

4G VoLTE ಸಪೋರ್ಟ್‌ ಮಾಡುವ ಫೋನ್‌ ಹೊಂದಿರದಿದ್ದಲ್ಲಿ, ನೀವು ರಿಲಾಯನ್ಸ್ ಜಿಯೋ 4G ಸೇವೆ ಎಂಜಾಯ್‌ ಮಾಡಲು 4G ಫೋನ್‌ಗೆ ಅಪ್‌ಗ್ರೇಡ್‌ ಹೊಂದಲೇಬೇಕು.

ವೆಲ್ಕಮ್‌ ಆಫರ್‌ಗೆ ವಲಸೆ

ವೆಲ್ಕಮ್‌ ಆಫರ್‌ಗೆ ವಲಸೆ

ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ನ ಅಧಿಕೃತ ಲಾಂಚ್‌ಗೂ ಮುನ್ನ, ಲೈಫ್ ಬಳಕೆದಾರರು ಅನ್‌ಲಿಮಿಟೆಡ್‌ 4G ಡಾಟಾ, ಕರೆ ಮತ್ತು ಮೆಸೇಜ್‌ ಅನ್ನು ಉಚಿತವಾಗಿ 90 ದಿನಗಳವರೆಗೆ ಪ್ರೀವಿವ್‌ ಆಫರ್‌ನಲ್ಲಿ ಎಂಜಾಯ್ ಮಾಡುತ್ತಿದ್ದರು. ಆದರೆ ಈಗ ರಿಲಾಯನ್ಸ್ ಜಿಯೋ ಬಳಕೆದಾರರನ್ನು ಪ್ರಿವೀವ್ ಆಫರ್‌ನಿಂದ ವೆಲ್ಕಮ್‌ ಆಫರ್‌ಗೆ ವಲಸೆ ಮಾಡಿದೆ. ವೆಲ್ಕಮ್‌ ಆಫರ್ ನಿಜವಾಗಿಯೂ ಅನ್‌ಲಿಮಿಟೆಡ್‌ ಅಲ್ಲ. ಕಾರಣ 4GB 4G ಡಾಟಾ ಬಳಕೆ ನಂತರ, ಇಂಟರ್ನೆಟ್‌ ವೇಗ 128kbps ಕುಗ್ಗಲಿದೆ.

ಸಿಮ್‌ ಆಕ್ಟಿವೇಶನ್‌ ತಡವಾಗುವಿಕೆ

ಸಿಮ್‌ ಆಕ್ಟಿವೇಶನ್‌ ತಡವಾಗುವಿಕೆ

ತಕ್ಷಣವೇ ರಿಲಾಯನ್ಸ್ ಜಿಯೋ ಸಿಮ್‌ಗೆ ಬೇಡಿಕೆ ಹೆಚ್ಚಿತು. ಕಂಪನಿಯು eKYC ಆಕ್ಟಿವೇಶನ್ ಅನ್ನು ಸಹ ಪರಿಚಯಿಸಿತು. ಆದರೆ ಈ ಯೋಜನೆಯನ್ನು ಎಲ್ಲಾ ರಿಲಾಯನ್ಸ್ ಜಿಯೋ ಸ್ಟೋರ್‌ಗಳಲ್ಲಿ ಅಭಿವೃದ್ದಿಪಡಿಸಲಿಲ್ಲ. ಆದ್ದರಿಂದ ಜಿಯೋ ಸಿಮ್‌ ಆಕ್ಟಿವೇಶನ್‌ ಆಗಲು 10 ದಿನಗಳು ತಡವಾಗುತ್ತಿದೆ.

4G ವೇಗದಲ್ಲಿ ಕುಸಿತ

4G ವೇಗದಲ್ಲಿ ಕುಸಿತ

ರಿಲಾಯನ್ಸ್ ಜಿಯೋ ಪ್ರಿವೀವ್ ಆಫರ್‌ ಅನ್ನು ಪ್ರಕಟಣೆಗೊಳಿಸಿತು. ಆದರೆ ರಿಲಾಯನ್ಸ್ ಜಿಯೋ ವೇಗದ ಬಗ್ಗೆ ಹೆಚ್ಚಿನ ದೂರುಗಳು ಸಹ ಬಂದವು. ಕಿಕ್ಕಿರಿದ ಪ್ರದೇಶಗಳಲ್ಲಿ ಜಿಯೋ ಬಳಕೆದಾರರು ಹೆಚ್ಚು ವೇಗದ ಸಮಸ್ಯೆ ಎದುರಿಸುತ್ತಿದ್ದು, ಜಿಯೋದ ಹಲವು ಆಪ್‌ಗಳು ಅನ್‌ಲಿಮಿಟೆಡ್‌ ಮಾಹಿತಿ ಡೌನ್‌ಲೋಡ್‌ ಅನ್ನು ಉಚಿತವಾಗಿ ನೀಡುವುದರಿಂದ, ಅದೇ ಕಿಕ್ಕಿರಿದ ಪ್ರದೇಶಗಳಲ್ಲಿ ವೇಗದ ಸಮಸ್ಯೆ ಎದುರಾಗಿದೆ.

ಉಚಿತ ರಾತ್ರಿ ಡಾಟಾ

ಉಚಿತ ರಾತ್ರಿ ಡಾಟಾ

ರಿಲಾಯನ್ಸ್ ಜಿಯೋ ಉಚಿತ ರಾತ್ರಿ ಡಾಟಾ ಪ್ರಕಟಣೆಗೊಳಿಸಿದೆ. ಆದರೆ ಟ್ಯಾರಿಫ್‌ ಪ್ಲಾನ್‌ನ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಪರಿಶೀಲನೆ ನೆಡೆಸಿದರೆ, ರಾತ್ರಿ ಉಚಿತ ಡಾಟಾ ಒಂದು ಆಕರ್ಷಣೆಯಾಗಿದೆ. ಉಚಿತ ರಾತ್ರಿ ಡಾಟಾವು 2am ನಿಂದ 5am ವರೆಗೆ ಮಾತ್ರವಾಗಿದೆ.

Best Mobiles in India

English summary
Dont Port your number to Reliance Jio; 5 Reasons. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X