ಜಿಯೋ 4G ಲಾಂಚ್‌; ಏರ್‌ಟೆಲ್‌ನಿಂದ ಶೇ.50 ಡಾಟಾ ಬ್ಯಾಕ್‌ ಬಂಪರ್ ಆಫರ್ǃ

By Suneel
|

ಉನ್ನತ ಪ್ರತಿಸ್ಪರ್ಧಿಗಳನ್ನು ಎದುರಿಸುವ ಸಲುವಾಗಿ ಉಚಿತ ವಾಯ್ಸ್‌ ಸರ್ವೀಸ್ ಮತ್ತು ಅತ್ಯುತ್ತಮ ಡಾಟಾ ಪ್ಯಾಕ್‌ಗಳನ್ನು ನೀಡುವ ಯೋಜನೆಯೊಂದಿಗೆ ರಿಲಾಯನ್ಸ್‌ ಜಿಯೋ 4G ಸೇವೆ ಶೀಘ್ರದಲ್ಲಿ ಆರಂಭವಾಗುತ್ತಿದೆ. ವಿಶೇಷ ಅಂದ್ರೆ ಇತರೆ ಮೊಬೈಲ್‌ ಆಪರೇಟರ್‌ಗಳಿಗಿಂತ ಶೇಕಡ 25 ರಷ್ಟು ಕಡಿಮೆ ಬೆಲೆಯಲ್ಲಿ ರಿಲಾಯನ್ಸ್‌ ಜಿಯೋ ತನ್ನ ಸೇವೆಗಳನ್ನು ನೀಡಲಿದೆ.

ರಿಲಾಯನ್ಸ್‌ನಿಂದ 93 ರೂ.ಗೆ 10GB 4G ಡಾಟಾ; ಬಂಪರ್‌ ಆಫರ್

'ರಿಲಾಯನ್ಸ್‌ ಜಿಯೋ 4G'ಗೆ ಪ್ರತಿಸ್ಪರ್ಧಿಯಾಗಿರುವ ಭಾರತದ ಅತಿದೊಡ್ಡ ನೆಟ್‌ವರ್ಕ್‌ ಏರ್‌ಟೆಲ್‌ 'ಜಿಯೋ 4G' ಲಾಂಚ್‌ ಹಿನ್ನೆಲೆಯಲ್ಲಿ ತನ್ನ ಗ್ರಾಹಕರನ್ನು ತನ್ನತ್ತ ಕೇಂದ್ರಿಕರಿಸಿಕೊಳ್ಳಲು ತನ್ನ ಪ್ರೀಪೇಡ್‌ ಗ್ರಾಹಕರಿಗಾಗಿ 'ಹ್ಯಾಪಿ ಅವರ್ಸ್' ಸೇವೆಯನ್ನು ಪ್ರಕಟಿಸಿದೆ.

ಏರ್‌ಟೆಲ್‌ನ 'ಹ್ಯಾಪಿ ಅವರ್ಸ್' ಸೇವೆಯಿಂದ ಪ್ರೀಪೇಡ್‌ ಗ್ರಾಹಕರು ಶೇಕಡ 50 ರಷ್ಟು ಡಾಟಾ ಬಳಕೆಯನ್ನು ಮರುಪಡೆಯಬಹುದಾಗಿದೆ. ಪ್ರೀಪೇಡ್ ಬಳಕೆದಾರರು ಬೆಳಗಿನ 3-5 ಗಂಟೆ ನಡುವೆ ಬಳಸಿದ ಅಪ್ಲಿಕೇಶನ್‌ ಅಂಶಗಳ ಡೌನ್‌ಲೋಡ್‌ ಡಾಟಾದಲ್ಲಿ ಶೇಕಡ 50 ರಷ್ಟು ಡಾಟಾ ಮರುಪಡೆಯಬಹುದಾಗಿದೆ. ನೀವು ಏರ್‌ಟೆಲ್‌ ಬಳಕೆದಾರರೇ ಆಗಿದ್ದಲ್ಲಿ 'ಹ್ಯಾಪಿ ಅವರ್ಸ್' ಸೇವೆಯಿಂದ ದೊರೆಯುವ ಇತರೆ ಬಂಪರ್‌ ಆಫರ್‌ಗಳು ಯಾವುವು ಎಂದು ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಏರ್‌ಟೆಲ್‌ನಿಂದ ವಿಶೇಷ 'ಕಬಾಲಿ' ಪ್ರಾಡಕ್ಟ್‌ ಮತ್ತು ಸೇವೆಗಳು ಲಾಂಚ್‌

ಹ್ಯಾಪಿ ಅವರ್ಸ್

ಹ್ಯಾಪಿ ಅವರ್ಸ್

'ಹ್ಯಾಪಿ ಅವರ್ಸ್' ಪ್ಲಾನ್‌ ಏರ್‌ಟೆಲ್‌ನ ಎಲ್ಲಾ ಪ್ರೀಪೇಡ್‌ ಗ್ರಾಹಕರಿಗೆ ದೊರೆಯಲಿದ್ದು, ಶೇಕಡ 50 ರಷ್ಟು ಡಾಟಾ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪುನಃ ಕ್ರೆಡಿಟ್‌ ಆಗಲಿದೆ. ಉದಾಹರಣೆಗೆ ಗ್ರಾಹಕ 100MB ಯ ವೀಡಿಯೊವನ್ನು ಡೌನ್‌ಲೋಡ್‌ಗೆ ಸೆಡ್ಯೂಲ್ ಮಾಡಿದ್ದಲ್ಲಿ, 6 ಗಂಟೆ ನಂತರ 50MB ಡಾಟಾ ಗ್ರಾಹಕರಿಗೆ ಪುನಃ ಕ್ರೆಡಿಟ್‌ ಆಗುತ್ತದೆ.

ಡಾಟಾ ಮರು ಕ್ರೆಡಿಟ್‌

ಡಾಟಾ ಮರು ಕ್ರೆಡಿಟ್‌

ಪುನಃ ಕ್ರೆಡಿಟ್‌ ಆಗುವ ಶೇಕಡ 50 ಡಾಟಾವು ದೈನಂದಿನ ಎಲ್ಲಾ ಪ್ರೀಪೇಡ್‌ ಪ್ಯಾಕ್‌ಗಳಿಗೆ ಸಿಗಲಿದೆ. ಆದರೆ ರಾತ್ರಿ ವೇಳೆಯ ಡಬಲ್‌ ಡಾಟಾ ಪ್ಯಾಕ್‌ಗಳಿಗೆ ಈ ಸೇವೆ ಸಿಗುವುದಿಲ್ಲ.

ಡಾಟಾ ಪ್ಯಾಕ್‌ ಇಲ್ಲದವರಿಗೆ

ಡಾಟಾ ಪ್ಯಾಕ್‌ ಇಲ್ಲದವರಿಗೆ

ಡಾಟಾ ಪ್ಯಾಕ್‌ ಬಳಸದ ಪ್ರೀಪೇಡ್‌ ಗ್ರಾಹಕರಿಗೆ 'ಹ್ಯಾಪಿ ಅವರ್ಸ್‌' ಸೇವೆಯ ಸಮಯದಲ್ಲಿ 10KB ಗೆ 0.4 ಪೈಸೆ ಚಾರ್ಜ್‌ ಆಗಲಿದೆ.

ಅಪ್ಲಿಕೇಶನ್‌ ಅಭಿವೃದ್ದಿಗಾರರು

ಅಪ್ಲಿಕೇಶನ್‌ ಅಭಿವೃದ್ದಿಗಾರರು

ಅಪ್ಲಿಕೇಶನ್‌ ಅಭಿವೃದ್ದಿಗಾರರು ಏರ್‌ಟೆಲ್‌ನ 'ಹ್ಯಾಪಿ ಅವರ್ಸ್‌' ಪ್ಲಾನ್‌ನೊಂದಿಗೆ ಸಹಭಾಗಿತ್ವ ಹೊಂದಬಹುದು ಮತ್ತು ಬಳಕೆದಾರರಿಗೆ ಡೌನ್‌ಲೋಡ್‌ ಸ್ವಯಂ ಸೆಡ್ಯೂಲ್‌ ಆಯ್ಕೆ ನೀಡಬಹುದು.

ಸ್ಮಾರ್ಟ್‌ ಆಫ್‌ಲೈನ್‌

ಸ್ಮಾರ್ಟ್‌ ಆಫ್‌ಲೈನ್‌

ಪ್ರೀಪೇಡ್‌ ಬಳಕೆದಾರರು ಯೂಟ್ಯೂಬ್‌ನಲ್ಲಿ 'ಸ್ಮಾರ್ಟ್‌ ಆಫ್‌ಲೈನ್‌' ಫೀಚರ್‌ ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೇ ಬೆಳಗಿನ 3-5 ಗಂಟೆ ನಡುವಿನ 'ಹ್ಯಾಪಿ ಅವರ್ಸ್‌ನಲ್ಲಿ ರಾತ್ರಿ ಪೂರ್ಣ ವೀಡಿಯೊ ಡೌನ್‌ಲೋಡ್‌ ಸೆಡ್ಯೂಲ್‌ ಮಾಡಬಹುದು.

ಆಪ್‌ ಡೆವಲಪರ್‌ ಸಹಭಾಗಿತ್ವ

ಆಪ್‌ ಡೆವಲಪರ್‌ ಸಹಭಾಗಿತ್ವ

ಆಪ್‌ ಡೆವಲಪರ್‌ ಸಹಭಾಗಿತ್ವ ಏಕೀಕರಣ ಕಿಟ್‌ ಡೆವಲಪರ್‌ಗಳಿಗೆ ವೆಬ್‌ಸೈಟ್‌ www.airtel.in/happyhours/ ನಲ್ಲಿ ಲಭ್ಯ.

 ಹ್ಯಾಪಿ ಅವರ್ಸ್‌

ಹ್ಯಾಪಿ ಅವರ್ಸ್‌

'ಹ್ಯಾಪಿ ಅವರ್ಸ್' ಸೇವೆಯು ಏರ್‌ಟೆಲ್‌ನ ಹೊಸ ಕಾರ್ಯಕ್ರಮವಾಗಿದ್ದು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡಲಿದೆ. ಆದರೆ 'ಹ್ಯಾಪಿ ಅವರ್ಸ್' ಸೇವೆಯು ಏರ್‌ಟೆಲ್‌ ಪ್ರೀಪೇಡ್‌ ಗ್ರಾಹಕರಿಗೆ 'ರಿಲಾಯನ್ಸ್‌ ಜಿಯೋ 4G' ಆರಂಭವಾಗುವ ಆಗಸ್ಟ್‌ 15 ರಿಂದಲೇ ಸಿಗಲಿದೆ.

ರಿಲಾಯನ್ಸ್‌ ಜಿಯೋ 4G

ರಿಲಾಯನ್ಸ್‌ ಜಿಯೋ 4G

'ರಿಲಾಯನ್ಸ್‌ ಜಿಯೋ 4G' ಸೇವೆಯು ವಾಯ್ಸ್ ಮತ್ತು ವೀಡಿಯೋ ಕರೆ, ಅನ್‌ಲಿಮಿಟೆಡ್‌ ಮೆಸೇಜಿಂಗ್‌, ಡಾಟಾ, ಹಲವು ಆಪ್‌ಗಳನ್ನು ಆಫರ್ ಮಾಡಲಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ರೂ.290 ಕ್ಕೆ ಶ್ಯೋಮಿ'ಯ 'ಮಿ ಸೊಳ್ಳೆ ನಿವಾರಕ' ಗ್ಯಾಜೆಟ್ ಲಾಂಚ್‌ರೂ.290 ಕ್ಕೆ ಶ್ಯೋಮಿ'ಯ 'ಮಿ ಸೊಳ್ಳೆ ನಿವಾರಕ' ಗ್ಯಾಜೆಟ್ ಲಾಂಚ್‌

ಏರ್‌ಟೆಲ್‌ನಿಂದ ವಿಶೇಷ 'ಕಬಾಲಿ' ಪ್ರಾಡಕ್ಟ್‌ ಮತ್ತು ಸೇವೆಗಳು ಲಾಂಚ್‌ಏರ್‌ಟೆಲ್‌ನಿಂದ ವಿಶೇಷ 'ಕಬಾಲಿ' ಪ್ರಾಡಕ್ಟ್‌ ಮತ್ತು ಸೇವೆಗಳು ಲಾಂಚ್‌

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Ahead of Jio launch, Airtel announces 50 pc data back offer for downloads. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X