ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಚಿತ ಇಂಟರ್ನೆಟ್

By Shwetha
|

ಸರಳ ಇಂಟರ್ನೆಟ್ ಪ್ರವೇಶದ ಮೂಲಕ ಉಚಿತ ವೈಫೈ ಸೇವೆಯನ್ನು ಒದಗಿಸುತ್ತಿರುವ ದೇಶದ ಆಯ್ದ ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಒಂದಾಗಿದೆ.

ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಚಿತ ಇಂಟರ್ನೆಟ್

ಓದಿರಿ: ಆಂಡ್ರಾಯ್ಡ್ ಡಿವೈಸ್‌ನಲ್ಲಿ ವೈಫೈ ಪಾಸ್‌ವರ್ಡ್ ಮರೆತಾಗ ಹೀಗೆ ಮಾಡಿ

ಈ ಸೇವೆಯನ್ನು ಜುಲೈ 25 ರಂದು ಲಾಂಚ್ ಮಾಡಲಾಗಿದ್ದು, ಡೊಮೆಸ್ಟಿಕ್ ಮತ್ತು ಅಂತರಾಷ್ಟ್ರೀಯ ಟರ್ಮಿನಲ್‌ಗಳೆರಡರಲ್ಲೂ ಈ ಸೇವೆ ಲಭ್ಯವಿದೆ ಎಂದು ವಿಮಾನ ನಿಲ್ದಾಣದ ಡೈರೆಕ್ಟರ್ ಜೆಟಿ ರಾಧಾಕೃಷ್ಣ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಚಿತ ಇಂಟರ್ನೆಟ್

ಓದಿರಿ: ಸ್ಮಾರ್ಟ್‌ಫೋನ್ ವೈಫೈ ಕೊರತೆ ನೀಗಿಸುವುದು ಹೇಗೆ?

ಮೊದಲ 30 ನಿಮಿಷಗಳಿಗೆ ಸೇವೆ ಲಭ್ಯವಿದ್ದು ಲಭ್ಯವಿರುವ ಯೋಜನೆಗಳು ಮತ್ತು ಬಳಕೆಗೆ ಅನುಗುಣವಾಗಿ ದರ ನಿಗದಿಪಡಿಸಲಾಗುತ್ತದೆ. ದೇಶದಲ್ಲಿ ಇಂತಹ ವೈಫೈ ಸೇವೆ ಹಲವಾರು ವಿಮಾನ ನಿಲ್ದಾಣಗಳಲ್ಲಿ ಲಭ್ಯವಿದೆ. ಇತರ ವಿಮಾನ ನಿಲ್ದಾಣಗಳಲ್ಲಿ ಈ ಸೇವೆ 60 ನಿಮಿಷಗಳಿಗೆ ಉಚಿತವಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತ್ರ 30 ನಿಮಿಷಗಳಷ್ಟು ಸಮಯ ಲಭ್ಯವಿದೆ.

ಓದಿರಿ: ಇಂಟರ್ನೆಟ್ ಜಗತ್ತಿನ ಮುಖ್ಯ ಕೊಂಡಿ ವೈಫೈ ವಿಶೇಷತೆಗಳು

ಇನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂಟರ್ನೆಟ್ ವೇಗ 2 ಎಮ್‌ಬಿಪಿಎಸ್ ಆಗಿದ್ದು, ಸಿಗ್ನಲ್ ಬಲ ಅತ್ಯುತ್ತಮವಾಗಿದೆ ಮತ್ತು ವ್ಯವಸ್ಥೆಗೆ ಪ್ರವೇಶವು ಅತಿ ಸರಳವಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Best Mobiles in India

English summary
The Mangaluru International Airport (MIA) has become one of the select airports in the country to offer free Wi-Fi services to passengers allowing easy access to internet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X