Subscribe to Gizbot

ರೂ 999 ರ ಶ್ಯೋಮಿ ಎಮ್ಐ ಬ್ಯಾಂಡ್ ಬರೇ 1 ರೂಗೆ

Written By:

ಶ್ಯೋಮಿ ತನ್ನ ಗ್ಲೋಬಲ್ ಎಮ್ಐ ಫೋನ್ ಪ್ರೀಮಿಯರ್ ಈವೆಂಟ್‌ನಲ್ಲಿ ಎಮ್ಐ 4i ಜೊತೆಗೆ ಎಮ್ಐ ಬ್ಯಾಂಡ್ ಅನ್ನು ಲಾಂಚ್ ಮಾಡಿದ್ದು ಇದರ ಬೆಲೆ ರೂ 999 ಆಗಿದೆ.

ಓದಿರಿ: ಚೀನಾ ಆಪಲ್ ಶ್ಯೋಮಿ ಎಮ್ಐ 4 ಕುರಿತ 10 ಗುಟ್ಟುಗಳು

ರೂ 999 ರ ಶ್ಯೋಮಿ ಎಮ್ಐ ಬ್ಯಾಂಡ್ ಬರೇ 1 ರೂಗೆ

ಗುರುವಾರವೇ ಬ್ಯಾಂಡ್‌ಗಾಗಿ ನೋಂದಾವಣೆ ನಡೆದಿದ್ದು, ಮೊದಲ 1,000 ನೋಂದಾವಣೆಗಳಿಗೆ ಬ್ಯಾಂಡ್ ರೂ 1 ಕ್ಕೆ ದೊರೆಯುತ್ತಿದೆ. ಕಂಪೆನಿಯ ಎಮ್‌ಐ.ಕಾಮ್ ಪೋರ್ಟಲ್‌ ನಲ್ಲಿ ಬ್ಯಾಂಡ್ ಲಭ್ಯವಾಗುತ್ತಿದೆ.

ರೂ 999 ರ ಶ್ಯೋಮಿ ಎಮ್ಐ ಬ್ಯಾಂಡ್ ಬರೇ 1 ರೂಗೆ

ಮಾರುಕಟ್ಟೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಶ್ಯೋಮಿ ಎಮ್ಐ ಬ್ಯಾಂಡ್, ಬಳಕೆದಾರರ ಆರೋಗ್ಯಕ್ಕೆ ಗಮನವನ್ನು ನೀಡುವುದರ ಜೊತೆಗೆ ಫಿಟ್‌ನೆಸ್ ನಿದ್ದೆಯ ಸಮಯ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಓದಿರಿ: ವಜ್ರಕ್ಕಿಂತಲೂ ಕಠಿಣವಾದುದು ಆಪಲ್ ವಾಚ್‌ನಲ್ಲಿ ಏನಿದೆ?

ರೂ 999 ರ ಶ್ಯೋಮಿ ಎಮ್ಐ ಬ್ಯಾಂಡ್ ಬರೇ 1 ರೂಗೆ

ಸ್ಮಾರ್ಟ್‌ಫೋನ್‌ಗಳೊಂದಿಗೆ ಸಂಪರ್ಕ ಸಾಧಿಸಲು ಇದು ಬ್ಲ್ಯೂಟೂತ್ ವೈರ್‌ಲೆಸ್ ಸಂಪರ್ಕವನ್ನು ಪಡೆದುಕೊಂಡಿದ್ದು ಫಿಟ್‌ನೆಸ್ ಟ್ರ್ಯಾಕಿಂಗ್ ಬ್ಯಾಂಡ್ ಚೀನಾದಲ್ಲಿ ಕಳೆದ ವರ್ಷ ಜುಲೈನಲ್ಲೇ ಲಾಂಚ್ ಆಗಿದ್ದು, ಆಗಸ್ಟ್‌ನಲ್ಲಿ ಮಾರಾಟವಾಗಿದೆ. ಅಲ್ಯುಮಿನಿಯಮ್ ಸರ್ಫೇಸ್ ಜೊತೆಗೆ ಮೈಕ್ರೊ ಲೇಸರ್ ಪರ್ಫೆಕ್ಶನ್ ಬ್ಯಾಂಡ್ ಹೊಂದಿದ್ದು ಡಿಸ್‌ಪ್ಲೇ ಸ್ಕ್ರೀನ್ ಇಲ್ಲ. ಇದು ಜಲಪ್ರತಿರೋಧಕ ಅಂಶವನ್ನು ಹೊಂದಿದ್ದು, 30 ದಿನಗಳ ಸ್ಟ್ಯಾಂಡ್‌ಬೈ ದೀರ್ಘತೆಯನ್ನು ಪಡೆದುಕೊಂಡಿದೆ.

ಓದಿರಿ: ಖರೀದಿಸಿ ಸ್ಕ್ರಾಚೇ ಆಗದ ಟಾಪ್ 10 ಗೋರಿಲ್ಲಾ ಗ್ಲಾಸ್ ಫೋನ್ಸ್

ರೂ 999 ರ ಶ್ಯೋಮಿ ಎಮ್ಐ ಬ್ಯಾಂಡ್ ಬರೇ 1 ರೂಗೆ

ಒಮ್ಮೆ ಸ್ಮಾರ್ಟ್‌ಫೋನ್‌ನೊಂದಿಗೆ ಇದು ಹೊಂದಿಕೆಯಾದರೆ ಸಾಕು ಪಾಸ್‌ವರ್ಡ್ ಅಥವಾ ಪ್ಯಾಟ್ರನ್ ಅಗತ್ಯವಿಲ್ಲದೆಯೇ ಬಳಕೆದಾರರ ಸ್ಮಾರ್ಟ್‌ಫೋನ್ ಅನ್ನು ಅನ್‌ಲಾಕ್ ಮಾಡುತ್ತದೆ. ಬೇರೆ ಬೇರೆ ಬಣ್ಣಗಳಲ್ಲಿ ಕೂಡ ಈ ಬ್ಯಾಂಡ್ ಲಭ್ಯವಿದೆ.

English summary
Xiaomi at its Global Mi Phone Premiere event in New Delhi apart from the Xiaomi Mi 4i also launched the Mi Band in India, at Rs. 999. The fitness tracking band will go up for registrations on Tuesday, and the first 1,000 registrants will get the band at Re. 1.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot