Subscribe to Gizbot

ಚೀನಾ ಆಪಲ್ ಶ್ಯೋಮಿ ಎಮ್ಐ 4 ಕುರಿತ 10 ಗುಟ್ಟುಗಳು

Written By:

ಏಪ್ರಿಲ್ 23 ರ ಈವೆಂಟ್ ಒಂದರಲ್ಲಿ ಶ್ಯೋಮಿ ತನ್ನ ನೆಕ್ಸ್ಟ್ ಜನರೇಶನ್ ಫ್ಲ್ಯಾಗ್‌ಶಿಪ್ ಎಮ್ಐ 4i ಕೋಡ್ ಹೆಸರು ಶ್ಯೋಮಿ ಫೆರಾರಿಯನ್ನು ಲಾಂಚ್ ಮಾಡಲಿದೆ ಎಂಬ ಮಾಹಿತಿ ದೊರೆತಿದೆ. [ಐದರ ಹರೆಯದ ಶ್ಯೋಮಿ ಮಾಡಿದ್ದಾದರೂ ಏನು?]

ಅದೂ ಅಲ್ಲದೆ ಚೀನಾ ಮೂಲದ ಕಂಪೆನಿ ಎಮ್ಐ 4 ಬೆಲೆಯನ್ನು ಭಾರತದ ಮಾರುಕಟ್ಟೆಯಲ್ಲಿ ಕಡಿಮೆ ಮಾಡಿದೆ. ಇಷ್ಟೆಲ್ಲಾ ಸಂಭ್ರಮದ ವಿಚಾರಗಳ ಜೊತೆಗೇನೇ ಶ್ಯೋಮಿಯ ಎಮ್ಐ 4 ಕುರಿತ ಅಮೂಲಾಗ್ರ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶುಭ ಸಮಾಚಾರ

ಭಾರತದಲ್ಲಿ ದರಕಡಿತ

ಶ್ಯೋಮಿ ಎಮ್ಐ 4 ಅನ್ನು ಖರೀದಿಸುವವರಿಗೆ ಒಂದು ಶುಭ ಸಮಾಚಾರ ಇದೆ. ಈ 16 ಜಿಬಿ ಆವೃತ್ತಿಯ ಫೋನ್ ರೂ 17,999 ರಲ್ಲಿ ದೊರೆಯುತ್ತಿದ್ದರೆ 64 ಜಿಬಿ ಆವೃತ್ತಿ ಬೆಲೆ ರೂ 21,999 ಆಗಿದೆ. ಇದರ ಮೂಲ ಬೆಲೆ ರೂ 19,999 ಮತ್ತು 23,999 ಆಗಿದೆ.

ಲಾಕ್ ಸ್ಕ್ರೀನ್

ಲಾಕ್ ಸ್ಕ್ರೀನ್ ಮಲ್ಟಿಫಂಕ್ಷನಲ್ ಅಪ್ಲಿಕೇಶನ್

ಲಾಕ್ ಸ್ಕ್ರೀನ್ MIUI ಮಲ್ಟಿಫಂಕ್ಷನಲ್ ಅಪ್ಲಿಕೇಶನ್ ಹೊಂದಿದೆ. ಹಲವಾರು ಅಧಿಸೂಚನೆಗಳನ್ನು ಬಳಕೆದಾರರು ಲಾಕ್ ಸ್ಕ್ರೀನ್‌ನಲ್ಲಿಯೇ ನೋಡಬಹುದಾಗಿದ್ದು ಫೋನ್ ಅನ್ನು ಅನ್‌ಬ್ಲಾಕ್ ಮಾಡದೆಯೇ ಎಸ್‌ಎಮ್‌ಎಸ್ ಅಥವಾ ಇಮೇಲ್ ಸಂದೇಶವನ್ನು ಓದಬಹುದಾಗಿದೆ.

ಹೊಸ ಫೀಚರ್

ಶ್ಯೋಮಿ ಎಮ್ಐ ಎಸ್‌ಎಮ್‌ಎಸ್ ಹೊಸ ಫೀಚರ್

MIUI ಬಳಕೆದಾರರು ಎಸ್‌ಎಮ್‌ಎಸ್ ಅನ್ನು ಬರೆಯಬಹುದಾಗಿದ್ದು, ಸರಳ ನೋಟ್ ಅಥವಾ ವಾಯ್ಸ್ ರೆಕಾರ್ಡಿಂಗ್ ಅನ್ನು ಕರೆಮಾಡುತ್ತಿರುವಾಗ ಮಾಡಬಹುದಾಗಿದೆ.

ಪಿನ್

ಶ್ಯೋಮಿ ಎಮ್ಐ4 ಮುಖ್ಯ ಸಂದೇಶಗಳನ್ನು ಪಿನ್ ಮಾಡಬಹುದು

MIUI ಬಳಕೆದಾರರು ಮೇಲ್ಭಾಗದಲ್ಲಿ ಅತಿಮುಖ್ಯ ಸಂದೇಶಗಳನ್ನು ಹೋಲ್ಡ್ ಮಾಡುವಲ್ಲಿ ಪಿನ್ ಬಳಸಬಹುದು. ಪ್ರೈವೇಟ್ ಮೋಡ್‌ನಲ್ಲಿ ಬಳಕೆದಾರರು ಸಂದೇಶಗಳನ್ನು ಮರೆಮಾಡಬಹುದಾಗಿದ್ದು, ಪಾಸ್‌ವರ್ಡ್ ಸುರಕ್ಷೆ ಕೂಡ ಇದಕ್ಕೆ ಲಭ್ಯವಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಇನ್ನು ಎಮ್ಐ 4 ನ ಕ್ಯಾಮೆರಾ ಬಿಎಸ್ಐ ಸೋನಿ 13 ಎಮ್‌ಪಿ ಕ್ಯಾಮೆರಾವನ್ನು ಹೊಂದಿದ್ದು ಸೆನ್ಸಾರ್ ಅಂತೆಯೇ ಅದ್ಭುತ ಆಪ್ಟಿಕ್ ಸಿಸ್ಟಮ್ ಅನ್ನು ಹೊಂದಿದೆ. ಕ್ಯಾಮೆರಾ ಹೆಚ್ಚು ಗುಣಮಟ್ಟದ ಸಾಫ್ಟ್‌ವೇರ್ ಅನ್ನು ಕೂಡ ಹೊಂದಿದೆ. ಕ್ಯುಆರ್ ಕೋಡ್ ಅನ್ನು ಸ್ವಯಂಚಾಲಿತವಾಗಿ ಎಮ್ಐ 4 ಕ್ಯಾಮೆರಾ ಓದಬಹುದಾಗಿದ್ದು ದೊಡ್ಡ ಧ್ವನಿ ಅಥವಾ ಕಿರುಚುವಿಕೆಯ ಮುಖಾಂತರ ಶಾಟ್ ಅನ್ನು ಮಾಡಬಹುದು.

ವಯಸ್ಸನ್ನು ಗುರುತಿಸುತ್ತದೆ

ಕ್ಯಾಮೆರಾ ಸ್ವಯಂಚಾಲಿತವಾಗಿ ವಯಸ್ಸನ್ನು ಗುರುತಿಸುತ್ತದೆ

ಫೋನ್‌ನ ಮುಂಭಾಗದಲ್ಲಿರುವ ಕ್ಯಾಮೆರಾ ವಯಸ್ಸನ್ನು ಪತ್ತೆಹಚ್ಚಲಿದ್ದು ಹಲವಾರು ಫಿಲ್ಟರ್‌ಗಳು ಮತ್ತು ಸ್ಕಿನ್ ಟ್ರೀಟ್‌ಮೆಂಟ್‌ಗಳೊಂದಿಗೆ ಇದು ಬಂದಿದೆ.

ಡೇಟಾ ಬಳಕೆ ನಿಯಂತ್ರಣ

ಪ್ರತೀ ಅಪ್ಲಿಕೇಶನ್ ಡೇಟಾ ಬಳಕೆ ನಿಯಂತ್ರಣ

ಪ್ರತೀ ಅಪ್ಲಿಕೇಶನ್‌ನ ಡೇಟಾ ಬಳಕೆಯನ್ನು ಬಳಕೆದಾರರು ನಿಯಂತ್ರಿಸಬಹುದಾಗಿದ್ದು ಡೇಟಾ ಮಿತಿಯನ್ನು ನಿಮಗೆ ಇದರಲ್ಲಿ ಹೊಂದಿಸಬಹುದಾಗಿದೆ. ಜಿಪಿಎಸ್ ಡೇಟಾ ಅಥವಾ ಕರೆಗಳು, ಇಂಟರ್ನೆಟ್ ಟ್ರಾಫಿಕ್ ಅನ್ನು ಇದು ನಿಯಂತ್ರಿಸುತ್ತದೆ.

ಕ್ಲೀನರ್ ಅಪ್ಲಿಕೇಶನ್

ಇನ್ ಬಿಲ್ಟ್ ಕ್ಲೀನರ್ ಅಪ್ಲಿಕೇಶನ್

ಕ್ಲೀನರ್ ಅಪ್ಲಿಕೇಶನ್‌ನೊಂದಿಗೆ ಬಳಕೆದಾರರು ಉಪಯೋಗಿಸದೇ ಇರುವ ಡೇಟಾವನ್ನು ಬಳಕೆದಾರರು ಅಳಿಸಬಹುದಾಗಿದ್ದು, ಸಿಸ್ಟಮ್ ಕ್ಯಾಶ್ ಹಾಗೂ ಅನಗತ್ಯ ಡೇಟಾವನ್ನು ತೆರವುಗೊಳಿಸಬಹುದು.

ಗೂಗಲ್ ಖಾತೆ

ಗೂಗಲ್ ಖಾತೆಗೆ ಬೆಂಬಲ

MIUI ಗೂಗಲ್ ಖಾತೆ ಮತ್ತು ತನ್ನದೇ ಎಮ್ಐ ಕ್ಲೌಡ್ ಸ್ಟೊರೇಜ್‌ಗೆ ಬೆಂಬಲವನ್ನು ಒದಗಿಸುತ್ತಿದ್ದು, ತಮ್ಮ ಎಲ್ಲಾ ಡೇಟಾವನ್ನು ಮತ್ತು ಸೆಟ್ಟಿಂಗ್‌ಗಳನ್ನು ಬಳಕೆದಾರರು ಬ್ಯಾಕಪ್ ಮಾಡಿಡಬಹುದಾಗಿದೆ.

ಬ್ಯಾಕಪ್

ಹಲವಾರು ಸ್ಥಳಗಳಿಂದ ಬ್ಯಾಕಪ್

ಬ್ಯಾಕಪ್ ಅಪ್ಲಿಕೇಶನ್‌ಗಳು ತಮ್ಮ ಎಲ್ಲಾ ಡೇಟಾವನ್ನು ಸೆಟ್ಟಿಂಗ್ಸ್ ಅಂತೆಯೇ ಅಪ್ಲಿಕೇಶನ್‌ಗಳನ್ನು ಹಲವಾರು ಸ್ಥಾನಗಳಿಂದ ಬ್ಯಾಕಪ್ ಮಾಡಲು ಅನುಮತಿಯನ್ನು ನೀಡುತ್ತಿದ್ದು, ಕ್ಲೌಡ್ ಸೇವೆ, ಪಿಸಿ ಅಥವಾ ಲ್ಯಾಪ್‌ಟಾಪ್‌ಗಳು ಎಸ್‌ಡಿ ಕಾರ್ಡ್‌ನಿಂದ ಕೂಡ ಇದು ಬ್ಯಾಕಪ್ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Just before the April 23rd event, where, Xiaomi is rumored to launch its next-gen flagship Mi 4i codenamed Xiaomi Ferrari. Consequently, the China-based company has reduced the price of Mi 4 smartphone in the Indian market. So here's our first fact for the hot-selling smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot