TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಶ್ಯೋಮಿ ಎಮ್ಐ ನೋಟ್ ಸ್ಮಾರ್ಟ್‌ಫೋನ್‌ನ ವಿಶೇಷ ಆವೃತ್ತಿಯನ್ನು ಶ್ಯೋಮಿ ಮಂಗಳವಾರ ಲಾಂಚ್ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಶ್ಯೋಮಿ ಸಹ ಸ್ಥಾಪಕರಾದ ಲಿನ್ ಬಿನ್ ವೇಬೋ ಪೋಸ್ಟ್‌ನಲ್ಲಿ ಲಾಂಚ್ ಅನ್ನು ದೃಢೀಕರಿಸಿದ್ದಾರೆ.
ಓದಿರಿ: ಇನ್ನು ನಮ್ಮ ಪೋಲೀಸರಿಗೆ ನೂರಾನೆ ಬಲ!!!
ಶ್ಯೋಮಿ ಎಮ್ಐ ನೋಟ್, ಎರಡು ಭಾಗದಲ್ಲಿ ಕರ್ವ್ ಗ್ಲಾಸ್ ಅನ್ನು ಹೊಂದಲಿದ್ದು, ಐಫೋನ್ 6 ಪ್ಲಸ್‌ಗಿಂತಲೂ ಹೆಚ್ಚು ಹಗುರ ಮತ್ತು ತೆಳು ರೂಪದಲ್ಲಿ ಕಾಣಿಸಿಕೊಳ್ಳಲಿದೆ. ದೊಡ್ಡ ಸ್ಕ್ರೀನ್, ಅನ್ನು ಪಡೆದುಕೊಳ್ಳಲಿರುವ ಈ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರಿಗೂ ಅದ್ಭುತ ಅನುಭವವನ್ನು ನೀಡಲಿದೆ. ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಹ ಮಾದರಿಯಲ್ಲಿ ಎಮ್ಐ ನೋಟ್ ಸ್ಮಾರ್ಟ್‌ಫೋನ್ ಅಡಿಇಡಲಿದೆ ಎಂದು ವೇಬೋ ಪೋಸ್ಟ್‌ನಲ್ಲಿ ಬಿನ್ ತಿಳಿಸಿದ್ದಾರೆ.
ಓದಿರಿ: ನಾಯಿಗೂ ಬೇಕು ಲ್ಯಾಪ್‌ಟಾಪ್! ಇದು ಎಂಥಾ ಕಾಲವಯ್ಯಾ?
ಡ್ಯುಯಲ್ ಸಿಮ್ ಮತ್ತು ಡ್ಯುಯಲ ಸ್ಟ್ಯಾಂಡ್‌ಬೈ ಶ್ಯೋಮಿ ಎಮ್ಐ ನೋಟ್ ಮೈಕ್ರೊ ಸಿಮ್ ಮತ್ತು ನ್ಯಾನೊ ಸಿಮ್ ಅನ್ನು ಒಳಗೊಂಡಿದೆ. 5.7 ಇಂಚಿನ ಪೂರ್ಣ ಎಚ್‌ಡಿ ಲ್ಯಾಮಿನೇಶನ್ ಅನ್ನು ಇದು ಒಳಗೊಂಡಿದ್ದು ಪಿಕ್ಸೆಲ್ ಡೆನ್ಸಿಟಿ 386 ಪಿಪಿಐ ಆಗಿದೆ. ಗೋರಿಲ್ಲಾ ಗ್ಲಾಸ್ 3 ಭದ್ರತೆಯನ್ನು ಡಿವೈಸ್ ಹೊಂದಿದ್ದು ಮೆಟಲ್ ಫ್ರೇಮ್ ರಚನೆ ಫೋನ್‌ನಲ್ಲಿದೆ. ಇದರ ತೂಕ 161 ಗ್ರಾಮ್ ಆಗಿದೆ.
ಓದಿರಿ: ದುಬಾರಿ ಫೋನ್ಸ್ ಮೇಲೆ ಫ್ಲಿಪ್‌ಕಾರ್ಟ್ ವಿನಾಯಿತಿ ಕೊಡುಗೆ
ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಸೋನಿ CMOS ಸೆನ್ಸಾರ್, ಟು ಟೋನ್ ಫ್ಲ್ಯಾಶ್ ಅನ್ನು ಫೋನ್ ಹೊಂದಿದೆ. ಇನ್ನು ಡಿವೈಸ್ ಮುಂಭಾಗ ಕ್ಯಾಮೆರಾ 4 ಮೆಗಾಪಿಕ್ಸೆಲ್ ಆಗಿದೆ. ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಇದರಲ್ಲಿದ್ದು 2.5GHZ ಜೊತೆಗೆ 3 ಜಿಬಿ RAM ಡಿವೈಸ್ ಹೊಂದಿದೆ. 4ಜಿ ಎಲ್‌ಟಿಇ ಸಂಪರ್ಕಕ್ಕೆ ಡಿವೈಸ್ ಬೆಂಬಲವನ್ನು ಒದಗಿಸುತ್ತಿದ್ದು 3000mAh ಬ್ಯಾಟರಿಯನ್ನು ಫೋನ್ ಒಳಗೊಂಡಿದೆ.