ಓಲಾ ಮತ್ತು ಉಬರ್‌ ಕ್ಯಾಬ್‌ ಬುಕ್‌ಗಾಗಿ ಜಸ್ಟ್ ಗೂಗಲ್‌ಗೆ ಹೇಳಿ

Written By:

ಗೂಗಲ್, ಓಲಾ ಮತ್ತು ಊಬರ್ ನೊಂದಿಗೆ ಜೊತೆಗೂಡಿ ಕ್ಯಾಬ್‌ ಬುಕ್‌ ಮಾಡುವ ಪ್ರಕ್ರಿಯೆಯನ್ನು ತೀರ ಸರಳಗೊಳಿಸಿದೆ. ಇನ್ನುಮುಂದೆ ಕೇವಲ ಗೂಗಲ್ ಸರ್ಚ್‌ ಆಪ್‌ ಅಥವಾ ಮೊಬೈಲ್‌ ಸರ್ಚ್‌ ಬ್ರೌಸರ್'ನಲ್ಲಿ ಡೈರೆಕ್ಷನ್‌ ಹೇಳಿ ನಂತರ ಟ್ಯಾಕ್ಸಿ ಸರ್ವೀಸ್‌ ಅನ್ನು ನೇರವಾಗಿ ಆಯ್ಕೆ ಮಾಡಬಹುದು.

ಗೂಗಲ್‌ ವಾಯ್ಸ್ ಸರ್ಚ್ ಹಿಸ್ಟರಿ ಡಿಲೀಟ್‌ ಹೇಗೆ?

ಓಲಾ ಮತ್ತು ಉಬರ್‌ ಕ್ಯಾಬ್‌ ಬುಕ್‌ಗಾಗಿ ಜಸ್ಟ್ ಗೂಗಲ್‌ಗೆ ಹೇಳಿ

ಅಂದಹಾಗೆ ಈ ಹೊಸ ಸೇವೆಯು ಈ ವರ್ಷದ ಲೇಟೆಸ್ಟ್ ಗೂಗಲ್‌ ಮ್ಯಾಪ್‌ ವರ್ಸನ್‌ನಲ್ಲಿ ಲಭ್ಯ. ಈ ಹೊಸ ಸೇವೆಯಲ್ಲಿ ಹೊಸ ಟ್ಯಾಬ್‌ನಲ್ಲಿ ಕ್ಯಾಬ್‌ ಸರ್ವೀಸ್‌ ಮಾಹಿತಿ, ಪಬ್ಲಿಕ್‌ ಟ್ರ್ಯಾನ್ಸ್‌ಪೋರ್ಟ್, ವಾಕಿಂಗ್ ಆಪ್ಶನ್‌, ಇತರೆ ಅನುಕೂಲಗಳು ಏನು ಎಂದು ಇರುತ್ತದೆ. ಅಲ್ಲದೇ ಬಳಕೆದಾರರು ಸರ್ಚ್‌ನಲ್ಲಿ ನೇರವಾಗಿ ಡೈರೆಕ್ಷನ್‌ ಮತ್ತು ರೈಡ್‌ ಅನ್ನು ಹೇಳಬಹುದು.

ಉದಾಹರಣೆಗೆ ಗೂಗಲ್‌ ಹೇಳಿರುವ ಪ್ರಕಾರ ಬಳಕೆದಾರರು "Taxi to Bangalore airport", "Uber to Bangalore airport", "Ola to Bangalore airport" ಎಂದು ಸರ್ಚ್‌ನಲ್ಲಿ ಹೇಳಿದರೆ, ಆಪ್‌ ನೇರವಾಗಿ ಓಪನ್‌ ಆಗಿ ರೈಡ್‌ ಬುಕ್ ಮಾಡಲು ಅನುಕೂಲವಾಗುತ್ತದೆ. ಎಲ್ಲಾ ಕೆಲಸವು ಕೇವಲ ಒಂದು ಟ್ಯಾಪ್‌ನಿಂದ ಮುಗಿಯುತ್ತದೆ. ಆಪ್‌, ಬಳಕೆದಾರರ ಡಿವೈಸ್‌ನಲ್ಲಿ ಇನ್‌ಸ್ಟಾಲ್‌ ಆಗಿಲ್ಲದಿದ್ದರೇ, ಗೂಗಲ್‌ ಸರ್ಚ್‌ ನೇರವಾಗಿ ಇನ್‌ಸ್ಟಾಲ್ ಲಿಂಕ್‌ ಅನ್ನು ತೋರಿಸುತ್ತದೆ.

ಇನ್ನು ಓಲಾದಲ್ಲಿ ಮಾಡಿ ಕುಳಿತಲ್ಲೇ ಶಾಪಿಂಗ್

ಓಲಾ ಮತ್ತು ಉಬರ್‌ ಕ್ಯಾಬ್‌ ಬುಕ್‌ಗಾಗಿ ಜಸ್ಟ್ ಗೂಗಲ್‌ಗೆ ಹೇಳಿ

ಈ ಹೊಸ ಫೀಚರ್‌ ಓಲಾ ಮತ್ತು ಊಬರ್‌ ಎರಡಕ್ಕೂ ಸಹ ಆಂಡ್ರಾಯ್ಡ್‌ನಲ್ಲಿ ಉತ್ತಮವಾಗಿ ವರ್ಕ್‌ ಆಗುತ್ತದೆ. ಐಫೋನ್‌ 7 ನಲ್ಲಿ ಕ್ಯಾಬ್‌ ಸರ್ವೀಸ್‌ ಸರ್ಚ್‌ ಮಾಡಿದ್ದಲ್ಲಿ, ಯಾವ ವಿಧದ ರೈಡಿಂಗ್‌ ಬಯಸುತ್ತೀರಿ ಎಂದು ಲೀಸ್ಟ್‌ ಅನ್ನು ಸಹ ನೀಡಲಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
You can now ask Google Now to book an Ola or Uber. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot