Subscribe to Gizbot

ಗೂಗಲ್‌ ವಾಯ್ಸ್ ಸರ್ಚ್ ಹಿಸ್ಟರಿ ಡಿಲೀಟ್‌ ಹೇಗೆ?

Written By:

ಗೂಗಲ್‌ ಅಸಿಸ್ಟಂಟ್ ನಿಜವಾಗಿಯೂ ವಾಯ್ಸ್ ಅಸಿಸ್ಟಂಟ್‌ ಅಲ್ಲ. ಏಕಂದ್ರೆ ಗೂಗಲ್‌ ವಾಯ್ಸ್ ಸರ್ಚ್, ಆಂಡ್ರಾಯ್ಡ್ ಡಿವೈಸ್‌ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಡಿವೈಸ್ ಟಚ್‌ ಮಾಡದೆಯೇ ಡಿವೈಸ್‌ಗಳ ನಿಯಂತ್ರಣ ಮಾಡಬಹುದಾದ ಅತಿಹೆಚ್ಚು ಉಪಯೋಗದ ಫೀಚರ್‌ ಆಗಿದೆ.

ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

ಗೂಗಲ್‌ ವಾಯ್ಸ್ ಸರ್ಚ್ (ಗೂಗಲ್‌ ಅಸಿಸ್ಟಂಟ್) ಫೀಚರ್‌ನ ಇನ್ನೊಂದು ಆಘಾತಕಾರಿ ವಿಷಯವೆಂದರೆ, ಗೂಗಲ್‌ ಈ ಫೀಚರ್‌ ಮೂಲಕ ನಿಮ್ಮ ವಾಯ್ಸ್‌ಗಳನ್ನು ಟ್ರ್ಯಾಕ್‌ ಮಾಡಿ ಜಾಹಿರಾತು ಸೇವೆ ನೀಡಲು ಬಳಸಿಕೊಳ್ಳುತ್ತಿದೆ. ಅಲ್ಲದೇ ನಿಮ್ಮ ಎಲ್ಲಾ ವಾಯ್ಸ್ ರೆಕಾರ್ಡಿಂಗ್ ಅನ್ನು ತನ್ನ ಸರ್ವರ್‌ನಲ್ಲಿ ಸ್ಟೋರ್‌ ಮಾಡಿಕೊಳ್ಳುತ್ತಿದೆ. ಆದರೆ ಮಾಹಿತಿಯನ್ನು ಯಾರೊಂದಿಗೂ ಸಹ ಶೇರ್‌ ಮಾಡುತ್ತಿಲ್ಲ. ಈ ಅಂಶಗಳೇ ಬಹುಶಃ ಗೂಗಲ್‌ ಅಸಿಸ್ಟಂಟ್ ಕಂಫರ್ಟ್ ಅಲ್ಲ ಎಂದು ಹೇಳಲು ಸಾಕು.

ಅಂದಹಾಗೆ ವಾಯ್ಸ್ ಅಸಿಸ್ಟಂಟ್‌ನಲ್ಲಿನ ಡಾಟಾ ನಿಮಗೆ ಮತ್ತು ಗೂಗಲ್‌ಗೆ ಬಿಟ್ಟರೆ ಇತರೆ ಯಾರಿಗೂ ಸಹ ಪ್ರದರ್ಶನವಾಗುವುದಿಲ್ಲ. ಅಲ್ಲದೇ ಈ ವಾಯ್ಸ್‌ ಡಾಟಾವನ್ನು ಡಿಲೀಟ್‌ ಮಾಡುವ ಅವಕಾಶವನ್ನು ಗೂಗಲ್‌(Google) ನೀಡಿದೆ. ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ಇಂಟರ್ನೆಟ್ ಹಂಗಿಲ್ಲದೆ ಗೂಗಲ್ ಮ್ಯಾಪ್ಸ್ ಬಳಕೆ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಎಲ್ಲಾ ವಾಯ್ಸ್ ಚಟುವಟಿಕೆಗಳನ್ನು ಚೆಕ್‌ ಮಾಡಿ

ನಿಮ್ಮ ಎಲ್ಲಾ ವಾಯ್ಸ್ ಚಟುವಟಿಕೆಗಳನ್ನು ಚೆಕ್‌ ಮಾಡಿ

ಮೊದಲಿಗೆ ನಿಮ್ಮ ಎಲ್ಲಾ ಗೂಗಲ್‌ ವಾಯ್ಸ್ ಸರ್ಚ್‌ ಅನ್ನು My Activity ಗೆ ಹೋಗಿ ಚೆಕ್‌ ಮಾಡಿ. ಇದು My Account ಟ್ಯಾಬ್‌ನಲ್ಲಿ ಬರುತ್ತದೆ. ಗೂಗಲ್‌ ಐಡಿ ಮತ್ತು ಪಾಸ್‌ವರ್ಡ್‌ನಿಂದ ಸೈನ್‌ ಇನ್‌ ಆಗಿರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ವಾಯ್ಸ್ ಕಮ್ಯಾಂಡ್ಸ್‌ ಅನ್ನು ಪಡೆಯಿರಿ

ನಿಮ್ಮ ವಾಯ್ಸ್ ಕಮ್ಯಾಂಡ್ಸ್‌ ಅನ್ನು ಪಡೆಯಿರಿ

ಈ ಹಂತದಲ್ಲಿ ನಿಮಗೆ ನಿಮ್ಮ ಎಲ್ಲಾ ವಾಯ್ಸ್ ಕಮ್ಯಾಂಡ್‌ಗಳ ಲೀಸ್ಟ್‌ ಪ್ರದರ್ಶನವಾಗುತ್ತದೆ.

 ವಾಯ್ಸ್ ಕಮ್ಯಾಂಡ್ಸ್ ಅನ್ನು ಕೇಳಿ

ವಾಯ್ಸ್ ಕಮ್ಯಾಂಡ್ಸ್ ಅನ್ನು ಕೇಳಿ

ಗೂಗಲ್ ವಾಯ್ಸ್ ರೆಕಾರ್ಡಿಂಗ್‌ನಲ್ಲಿರುವ ಆಡಿಯೋಗಳನ್ನು ಕೇಳಲು 'PLAY' ಬಟನ್ ಮೇಲೆ ಕ್ಲಿಕ್ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೆಲೆಕ್ಟ್ ಮಾಡಿದ ಕಮ್ಯಾಂಡ್ ಡಿಲೀಟ್ ಮಾಡಿ

ಸೆಲೆಕ್ಟ್ ಮಾಡಿದ ಕಮ್ಯಾಂಡ್ ಡಿಲೀಟ್ ಮಾಡಿ

ನಿರ್ಧಿಷ್ಟ ಕಮ್ಯಾಂಡ್‌ ಅನ್ನು ಡಿಲೀಟ್ ಮಾಡಲು ಮೂರು ಡಾಟ್‌ಗಳಿರುವ ಮೆನು ಮೇಲೆ ಕ್ಲಿಕ್ ಮಾಡಿ 'Delete' ಸೆಲೆಕ್ಟ್ ಮಾಡಿ.

ದಿನಾಂಕದ ಆಧಾರದಲ್ಲಿ ಡಿಲೀಟ್ ಮಾಡಿ

ದಿನಾಂಕದ ಆಧಾರದಲ್ಲಿ ಡಿಲೀಟ್ ಮಾಡಿ

ವಾಯ್ಸ್ ಕಮ್ಯಾಂಡ್‌ಗಳನ್ನು ದಿನದ ಆಧಾರದಲ್ಲಿ ಅಥವಾ ದಿನಾಂಕದ ಆಧಾರದಲ್ಲಿ ಡಿಲೀಟ್ ಮಾಡಲು, ಮೂರು ಡಾಟ್‌ ಇರುವ ಮೆನು ಮೇಲೆ ಕ್ಲಿಕ್ ಮಾಡಿ. ನಂತರ 'Delete Activitiy' ಕ್ಲಿಕ್ ಮಾಡಿ ದಿನಾಂಕ ಆಯ್ಕೆ ಮಾಡಿ ಅಥವಾ Today ಆಯ್ಕೆ ಮಾಡಿ ನಂತರ Delete ಸೆಲೆಕ್ಟ್ ಮಾಡಿ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್ಲಾ ವಾಯ್ಸ್ ಕಮ್ಯಾಂಡ್ಸ್‌ ಅನ್ನು ಒಮ್ಮೆಯೇ ಡಿಲೀಟ್ ಮಾಡಿ

ಎಲ್ಲಾ ವಾಯ್ಸ್ ಕಮ್ಯಾಂಡ್ಸ್‌ ಅನ್ನು ಒಮ್ಮೆಯೇ ಡಿಲೀಟ್ ಮಾಡಿ

ಎಲ್ಲಾ ಆಡಿಯೋಗಳನ್ನು ಒಮ್ಮೆಯೇ ಡಿಲೀಟ್‌ ಮಾಡಲು, ಹಿಂದಿನ ಪ್ರಕ್ರಿಯೆಗಳನ್ನೇ ಫಾಲೋ ಮಾಡಿ. ಆದರೆ ದಿನಾಂಕ ಆಯ್ಕೆ ಮಾಡುವ ಬದಲು 'All Time' ಎಂಬುದನ್ನು ಮೆನುವಿನಲ್ಲಿ ಸೆಲೆಕ್ಟ್ ಮಾಡಿ ಪ್ರೆಸ್ ಮಾಡಿ.

ಗೂಗಲ್ ವಾಯ್ಸ್ ರೆಕಾರ್ಡಿಂಗ್‌ ಸೇವ್‌ ಮಾಡುವುದನ್ನು ಸ್ಟಾಪ್‌ ಮಾಡಿ

ಗೂಗಲ್ ವಾಯ್ಸ್ ರೆಕಾರ್ಡಿಂಗ್‌ ಸೇವ್‌ ಮಾಡುವುದನ್ನು ಸ್ಟಾಪ್‌ ಮಾಡಿ

Google My Activity>> Controls page> Scroll down to Voice & Audio Activity> 'Off' ಕ್ಲಿಕ್‌ ಮಾಡಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here's How You Can Delete Google Voice Search History. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot