ಬ್ರಿಟಿಷ್ ಮಹಿಳೆಯ ಖಾತೆಯನ್ನು ಬ್ಯಾನ್ ಮಾಡಿದ ಫೇಸ್‌ಬುಕ್; ಹೆಸರು ISIS
ಫೇಸ್‌ಬುಕ್ ಬಳಕೆ ಪ್ರಾರಂಭಮಾಡಿದಾಗ ಬಹುಸಂಖ್ಯಾತರು ಚೆನ್ನಾಗಿರೋ ಫೇಸ್ ಅನ್ನು ಅಪ್‌ಲೋಡ್ ಮಾಡೋಕೆ ಅಂತ ತಿಳಿದುಕೊಂಡಿದ್ದರು. ಆದರೆ ಇಂದು ಫೇಸ್‌ಬುಕ್ ಪ್ರಮುಖವಾಗಿ ಅತಿ ಹೆಚ್ಚು ಮಾಹಿತಿ ನೀಡುವ ವೇದಿಕೆ ಎಂದು ತಿಳಿದಿದೆ.
ಅಂದಹಾಗೆ 27 ವರ್ಷದ ಐಸಿಸ್(ISIS) ಎಂಬ ಬ್ರಿಟಿಷ್ ಮಹಿಳೆಯನ್ನು ಫೇಸ್‌ಬುಕ್ ಆಕೆ ತನ್ನ ಫೇಸ್‌ಬುಕ್ ಖಾತೆ ಬಳಸದಂತೆ ಬ್ಯಾನ್ ಮಾಡಿದೆ. ಐಸಿಸ್ ಫೇಸ್‌ಬುಕ್ ಬ್ಯಾನ್ ಮಾಡುವಂತ ಯಾವುದೇ ಅಪರಾಧ ಮಾಡಿದವಳಲ್ಲ, ಅಥವಾ ಅಪರಾಧ ಆಗುವಂತಹ ಯಾವುದೇ ವೀಡಿಯೋ, ಫೋಟೋ, ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಸಹ ಮಾಡಿಲ್ಲ. ಆದ್ರೂ ಫೇಸ್‌ಬುಕ್ ಆಕೆಯನ್ನು ಬ್ಯಾನ್ ಮಾಡಿದ್ದಾದರೂ ಏಕೆ? ಎಂಬ ಕುತೂಹಲಕಾರಿ ಮಾಹಿತಿಯನ್ನು ಲೇಖನದ ಸ್ಲೈಡರ್ ಕ್ಲಿಕ್ಕಿಸಿ ಓದಿರಿ.
ಫೇಸ್‌ಬುಕ್‌ನಲ್ಲಿ ಶೇರ್ ಮಾಡಬಾರದ 8 ಪ್ರಮುಖ ಅಂಶಗಳು

ಫೇಸ್‌ಬುಕ್ ನೀತಿಗಳು
ಕಳೆದ ಇತ್ತೀಚಿನ ತಿಂಗಳಲ್ಲಿ ಸಾಮಾಜಿಕ ನೆಟ್‌ವರ್ಕ್ ದೈತ್ಯ 'ಫೇಸ್‌ಬುಕ್' ತನ್ನ ಕೆಲವು ನೀತಿಗಳಿಂದ ವಿವಾದಕ್ಕೆ ಒಳಗಾಗಿತ್ತು. ಅಲ್ಲದೇ ಫೇಸ್‌ಬುಕ್ ಕೆಲವು ವೀಡಿಯೊ, ಫೋಟೋಗಳು ಮಾತ್ರವಲ್ಲದೇ ವ್ಯಕ್ತಿಗಳ ಹೆಸರುಗಳ( ಫೇಸ್‌ಬುಕ್ ನೀತಿಗಳನ್ನು ಉಲ್ಲಂಘಿಸುವ ಹೆಸರುಗಳು) ಮೇಲು ಸೆನ್ಸಾರ್ ಹೇರಿತ್ತು.

ಬ್ರಿಸ್ಟೋಲ್
ಫೇಸ್‌ಬುಕ್ ನೀತಿಯನ್ನು ಉಲ್ಲಂಘಿಸುವ ಹೆಸರನ್ನು ಬ್ರಿಸ್ಟೋಲ್ ಪ್ರದೇಶದ ಮಹಿಳೆಯೊಬ್ಬರು ಹೊಂದಿದ್ದರು. ಆದ್ದರಿಂದ ಈಗ 27 ವರ್ಷದ ಮಹಿಳೆ ಫೇಸ್‌ಬುಕ್ ಬಳಸದಂತೆ ಬ್ಯಾನ್ ಮಾಡಲಾಗಿದೆ.

ವರದಿ ಹೇಳಿದ್ದೇನು?
ವರದಿ ಪ್ರಕಾರ ಮಹಿಳೆಯ ಹೆಸರು ಐಸಿಸ್ ಥಾಮಸ್ (ISIS Thomas)ಆಗಿದ್ದು, ಆಕೆಯನ್ನು ಫೇಸ್‌ಬುಕ್ ಬಳಕೆಯಿಂದ ಬ್ಯಾನ್ ಮಾಡಲಾಗಿದೆ. ಅಲ್ಲದೇ ಫೇಸ್‌ಬುಕ್ ಆಕೆಯ ಗುರುತಿನ ಪ್ರೂಫ್ ಅನ್ನು ಕಳುಹಿಸುವಂತೆ ಹೇಳಿದೆ.

ಐಸಿಸ್ ಥಾಮಸ್ (ISIS Thomas)
ಐಸಿಸ್ ಥಾಮಸ್ (ISIS Thomas) ರವರು ಜೂನ್ 27 ರಂದು ತಮ್ಮ ಫೇಸ್‌ಬುಕ್ ಪ್ರೊಫೈಲ್‌ಗೆ ಲಾಗಿನ್ ಆಗಲು ಪ್ರಯತ್ನಿಸಿದ್ದಾರೆ. ಅಲ್ಲದೇ ಫೇಸ್‌ಬುಕ್ ಪ್ರೊಫೈಲ್ ಹೆಸರು ಬದಲಿಸಲು ಪ್ರಯತ್ನಿಸಿದ್ದಾರೆ. ಐಸಿಸ್ ಫೇಸ್‌ಬುಕ್ ಲಾಗಿನ್ ಆಗುವಾಗ 'ಐಸಿಸ್ ವೋರ್ಸೆಸ್ಟರ್' ಎಂದು ಬಳಸುತ್ತಿದ್ದರು. ಇತ್ತೀಚೆಗೆ ಹೆಸರನ್ನು 'ಐಸಿಸ್ ಥಾಮಸ್ (ISIS Thomas)' ಎಂದು ಬದಲಿಸಿದ್ದರು. ಕಾರಣ ಹಿಂದಿನ ಹೆಸರು ಅವರ ನಿಜವಾದ ಹೆಸರಾಗಿರಲಿಲ್ಲ.

ಐಸಿಸ್ ಹೇಳಿದ್ದೇನು?
" 'ಐಸಿಸ್ ವೋರ್ಸೆಸ್ಟರ್' ನನ್ನ ಸರ್ ನೇಮ್ ಎಂದುಕೊಂಡಿದ್ದೆ, ಆದ್ದರಿಂದ ಐಸಿಸ್ ಥಾಮಸ್ ಎಂದು ಬದಲಿಸಿದೆ. ಆದರೆ ಐಸಿಸ್ ಥಾಮಸ್ ಹೆಸರು ಲಾಗಿನ್ ಆಗಲು ಸಹಕರಿಸುತ್ತಿಲ್ಲ. ಫೇಸ್‌ಬುಕ್‌ನವರು ಐಸಿಸ್(ISIS) ಹೆಸರು ಇರುವುದರಿಂದ ಸಮಸ್ಯೆ ಉಂಟುಮಾಡಿದ್ದಾರೆ ಎಂದು ಐಸಿಸ್ ಹೇಳಿದ್ದಾರೆ.

ಫೇಸ್‌ಬುಕ್ ಕೇಳಿದ ಮಾಹಿತಿ
ಫೇಸ್‌ಬುಕ್ ಐಸಿಸ್ ರವರಿಗೆ "Isis' ಹೆಸರನ್ನು ಕಂಪನಿ ನಿಯಮ ಪ್ರಕಾರ ಖಾತೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಗುರುತಿನ ಚೀಟಿ ಕಳುಹಿಸಿಕೊಡಿ ಎಂದು ಕೇಳಿದೆ.

ಐಸಿಸ್‌ಗೆ ಕೊನೆಗೂ ಸಿಗದ ಫೇಸ್‌ಬುಕ್ ಬಳಕೆ ಅವಕಾಶ
'ಹಲವು ಬಾರಿ ಫೇಸ್‌ಬುಕ್ ಖಾತೆ ಬಳಸಲು ಪುನಃ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಐಸಿಸ್ ಎಂಬ ಮಹಿಳೆಯನ್ನು ಪತ್ತೆಹಚ್ಚಿದ್ದು, ಫೇಸ್‌ಬುಕ್ ಆಕೆಯನ್ನು ಮೂರು ಭಾರಿ ಗುರುತಿನ ಚೀಟಿ ಕಳುಹಿಸಲು ಕೇಳೀದ್ದ ಕಾರಣ ಅವರು ಟ್ವಿಟರ್ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.

ನಾನು ನನ್ನ ಹೆಸರು ಬದಲಿಸುವುದಿಲ್ಲ
ಐಸಿಸ್‌ಅವರ ತಾಯಿ ಸಿಯಾನ್'ರವರು ಐಸಿಸ್‌ಗೆ ಈಜಿಪ್ಟ್‌ನ ಪ್ರಾಚೀನ ಕಾಲದ ಮಾದರಿ ತಾಯಿ ಎಂದು ಪೂಜಿಸುತ್ತಿದ್ದ ದೇವರ ಹೆಸರನ್ನು ಇಟ್ಟಿದ್ದರಂತೆ.

ಉಗ್ರಗಾಮಿ ಗುಂಪು ISIS
"ಈ ಎಲ್ಲಾ ಸಮಸ್ಯೆಗಳು ಪ್ರಾರಂಭವಾಗಲು ಉಗ್ರಗಾಮಿ ಗುಂಪು ISIS ಎಂದು ಘೋಷಿಸಿರುವುದು ಕಾರಣ. ಆದರೂ ಸಹ ನನ್ನ ಹೆಸರನ್ನು ಬದಲಿಸಿಕೊಳ್ಳಲು ಯಾವುದೇ ಚಿಂತನೆ ನಡೆಸಿಲ್ಲ. ಅಲ್ಲದೇ ನನ್ನ ಹೆಸರನ್ನು ನಾನು ಪ್ರೀತಿಸುತ್ತೇನೆ. ಫೇಸ್‌ಬುಕ್‌ಗೆ ಇದೇ ನನ್ನ ನಿಜವಾದ ಹೆಸರು ಎಂದು ಸ್ಪಷ್ಟಪಡಿಸುತ್ತೇನೆ" ಎಂದು ಐಸಿಸ್ ಹೇಳಿದ್ದಾರೆ.



Click it and Unblock the Notifications








