ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಬಾರದ 8 ಪ್ರಮುಖ ಅಂಶಗಳು

By Suneel
|

ಬಹುಸಂಖ್ಯಾತರು ಒಂದು ದಿನ ಬೇಕಾದ್ರೆ ಉಪವಾಸ ಮಾಡುತ್ತಾರೆ. ಆದ್ರೆ ಸ್ಮಾರ್ಟ್‌ಫೋನ್‌ ಬಿಟ್ಟು, ವಾಟ್ಸಾಪ್ ಮತ್ತು ಫೇಸ್‌ಬುಕ್‌ ಬಳಸದೇ ಇರಲಾರರು. ಕಾರಣ ಇಂದು ಮೊಬೈಲ್‌ ದಿನನಿತ್ಯ ಜೀವನದ ಒಂದು ಮೂಲಭೂತ ವಸ್ತುವಾಗಿದೆ.

ಅಂದಹಾಗೆ ಯಾರು ಯಾವುದೇ ಸಾಮಾಜಿಕ ತಾಣ ವನ್ನು ಎಷ್ಟು ಸಮಯವಾದರೂ ಬಳಸಿ. ಆದ್ರೆ ಫೇಸ್‌ಬುಕ್‌ನ ತಮ್ಮ ತಮ್ಮ ವಯಕ್ತಿಕ ಪ್ರೊಫೈಲ್‌ಗಳಲ್ಲಿ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ತಿಳಿಸುವ 9 ಪ್ರಮುಖ ವಿಷಯಗಳನ್ನು ಶೇರ್‌ ಮಾಡದಿರಿ. ಅಂತಹ ವಿಷಯಗಳು ಯಾವುವು ಎಂದು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಸಾಮಾಜಿಕ ತಾಣಗಳಿಂದಲೇ ಫೇಮಸ್‌ ಆದ 10 ವ್ಯಕ್ತಿಗಳು

ಮನೆಯ ವಿಳಾಸ

ಮನೆಯ ವಿಳಾಸ

ಅಧಿಕೃತ ಮಾಹಿತಿಗಳ ಪ್ರಕಾರ ಕೆಲವು ಅಪರಾಧಿಗಳು ಫೇಸ್‌ಬುಕ್‌ ಮುಖಾಂತರ ಮನೆಯ ವಿಳಾಸ ತಿಳಿದು ಟಾರ್ಗೆಟ್‌ ಮಾಡಬಹುದು. ಈ ಪ್ರಮುಖ ಎಚ್ಚರಿಕೆಯ ವಿಷಯದಿಂದ ಯಾರು ಸಹ ತಮ್ಮ ಮನೆಯ ವಿಳಾಸವನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಬಾರದು ಎನ್ನಲಾಗಿದೆ.

ನೀವು ಕಾರ್ಯಕ್ರಮಕ್ಕೆ ಹೋಗುವುದು?

ನೀವು ಕಾರ್ಯಕ್ರಮಕ್ಕೆ ಹೋಗುವುದು?

ಕಾರ್ಯಕ್ರಮಕ್ಕೆ ಹೋಗುವ ಸ್ಟೇಟಸ್‌ಗಳನ್ನು ಪ್ರೊಫೈಲ್‌ನಲ್ಲಿ ಹಾಕುವುದು ಅಹಿತಕರ ಚಟುವಟಿಕೆಯಾಗಿದೆ. ಈ ಚಟುವಟಿಕೆಯನ್ನು ಕ್ರಿಮಿನಲ್‌ಗಳು ನಿಮ್ಮನ್ನು ಫಾಲೋ ಮಾಡಲು ಅನುಕೂಲವಾಗುತ್ತದೆ.

ಮಕ್ಕಳ ಬಗೆಗಿನ ಮಾಹಿತಿ ಅಪ್‌ಡೇಟ್‌

ಮಕ್ಕಳ ಬಗೆಗಿನ ಮಾಹಿತಿ ಅಪ್‌ಡೇಟ್‌

ಇಂದು ಮಕ್ಕಳ ಫೋಟೋಗಳನ್ನು, ಅವರ ಚಟುವಟಿಕೆ ನಿರತ ಮಾಹಿತಿಯನ್ನು ಪ್ರೊಫೈಲ್‌ನಲ್ಲಿ ಶೇರ್‌ ಮಾಡುವುದು ಸೋಶಿಯಲ್‌ ಇರಬಹುದು. ಆದರೆ ಮಕ್ಕಳನ್ನು ಅಪಹರಣ ಮಾಡುವವರ ಬಗ್ಗೆ ಮತ್ತು ಶಿಶುಕಾಮಿಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಆದ್ದರಿಂದ ಇಂತಹ ಮಾಹಿತಿಗಳನನ್ನು ಶೇರ್ ಮಾಡುವಾಗ ಎಚ್ಚರವಿರಲಿ.

ಪೋಸ್ಟ್‌ ನಕಲಿಸಿ ಪೇಸ್ಟ್‌ ಮಾಡಿ ಅಪ್‌ಡೇಟ್‌ ಮಾಡುವುದು

ಪೋಸ್ಟ್‌ ನಕಲಿಸಿ ಪೇಸ್ಟ್‌ ಮಾಡಿ ಅಪ್‌ಡೇಟ್‌ ಮಾಡುವುದು

ಫೇಸ್‌ಬುಕ್‌ ಬಳಸುವ ಹಲವರು ಮಾಡುವ ಚಟುವಟಿಕೆ ಇದು. ಇತರರ ಪೋಸ್ಟ್‌ಗಳನ್ನು ನಕಲಿಸಿ ಅಥವಾ ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಪ್ರೊಫೈಲ್‌ನಲ್ಲಿ ಅಪ್‌ಡೇಟ್ ಮಾಡುತ್ತಾರೆ. ಇಂತಹ ಚಟುವಟಿಕೆ ಮೂರ್ಖರನ್ನಾಗಿಸುವುದಲ್ಲದೇ ಅವಿದ್ಯಾವಂತ ಚಟುವಟಿಕೆಯಾಗಿದೆ. ಕೆಲವೊಮ್ಮೆ ಕೃತಿಚೌರ್ಯವು ಆಗಬಹುದು.

ನಿಮ್ಮ ಬಾಸ್‌ ಬಗೆಗಿನ ದೂರುಗಳು

ನಿಮ್ಮ ಬಾಸ್‌ ಬಗೆಗಿನ ದೂರುಗಳು

ವಿವಿಧ ರೀತಿಯಲ್ಲಿ ಉದ್ಯೋಗ ಮಾಡುತ್ತಿರುವ ಕಛೇರಿಯಲ್ಲಿನ ನಿಮ್ಮ ಬಾಸ್‌ ಬಗ್ಗೆ ಬರೆಯುವುದು, ಕಮೆಂಟ್‌ ಮಾಡುವುದು ಅಪಾಯಕಾರಿ. ಕಾರಣ ಅದೇ ಕಛೇರಿಯ ಇತರ ಉದ್ಯೋಗಿಗಳು ಹೆಚ್ಚು ಫೇಸ್‌ಬುಕ್‌ ಬಳಸುವುದರಿಂದ ನಿಮ್ಮ ಚಟುವಟಿಕೆಗಳು ಅವರಿಗೆ ತಿಳಿಯುತ್ತವೆ. ಅಲ್ಲದೇ ಈ ರೀತಿಯ ನಿಂದನಾರ್ಹ ಪೋಸ್ಟ್‌ಗಳಿಗೆ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಶಿಕ್ಷಾರ್ಹ ಅಪರಾಧವಾಗುವ ಅವಕಾಶವಿರುತ್ತದೆ.

ಬ್ಯುಸಿನೆಸ್‌ ಪೇಜ್‌

ಬ್ಯುಸಿನೆಸ್‌ ಪೇಜ್‌

ಫೇಸ್‌ಬುಕ್ ಬ್ಯುಸಿನೆಸ್‌ ಪೇಜ್‌ನಲ್ಲಿ ಲೈಕ್ ಮಾಡುವವರು ಪೇಜ್‌ನ ಪ್ರಾಡಕ್ಟ್‌ಗಾಗಿ ಮಾತ್ರ ಲೈಕ್‌ ಮಾಡಿರುತ್ತಾರೆ. ಆದರೆ ಅದೇ ಪೇಜ್‌ನಲ್ಲಿ ಇತರೆ ಅನಾವಶ್ಯಕ ಪೋಸ್ಟ್‌ಗಳನ್ನು ಹಾಕಬಾರದು.

ರಾಜಕೀಯ ಮತ್ತು ಧಾರ್ಮಿಕ ನಂಬಿಕೆ

ರಾಜಕೀಯ ಮತ್ತು ಧಾರ್ಮಿಕ ನಂಬಿಕೆ

ನೀವು ಮೋದಿ ಪ್ರಿಯರೇ ಆಗಿರಬಹುದು, ಅಥವಾ ಇತರೆ ಧಾರ್ಮಿಕ ಆಚರಣೆಯ ಪ್ರಿಯರೇ ಆಗಿರಬಹುದು. ಆದರೆ ಈ ವಿಷಯಗಳ ಕುರಿತು ನಿಮ್ಮ ಅನಿಸಿಕೆಯನ್ನು ಬ್ಯುಸಿನೆಸ್‌ ಫೇಜ್‌ಗಳಲ್ಲಿ ಪೋಸ್ಟ್‌ ಮಾಡುವುದು ಪ್ರಾಡಕ್ಟ್‌ ಪ್ರಿಯರ ಮೇಲೆ ಗಮನಾರ್ಹವಾಗುತ್ತದೆ. ಇಂತಹ ಮಾಹಿತಿಗಳನ್ನು ವಯಕ್ತಿಕ ಪ್ರೊಫೈಲ್‌ನಲ್ಲಿ ಅಂಟಿಸುವುದು ಸಹ ಒಂದು ರೀತಿಯ ಬ್ರ್ಯಾಂಡ್‌ ಆಗುತ್ತದೆ.

ಪೇಜ್‌ ಲೈಕ್‌ ಮಾಡಲು ಕೇಳಿಕೊಳ್ಳುವುದು

ಪೇಜ್‌ ಲೈಕ್‌ ಮಾಡಲು ಕೇಳಿಕೊಳ್ಳುವುದು

ಫ್ಯಾನ್ಸ್‌ಗಳನ್ನು ತಮ್ಮ ಫೇಜ್‌ ಅನ್ನು ಲೈಕ್‌ ಮಾಡಿ ಎಂದು ಬೇಡಿಕೊಳ್ಳುವುದು ಮುಜುಗರದ ಸಂಗತಿ. ಅಲ್ಲದೇ ಪೇಜ್‌ ಅನ್ನು ನಿಮ್ಮ ಗೆಳೆಯರಿಗೆ "ನಿಮ್ಮ ಗೆಳೆಯರಿಗೆ ಶೇರ್‌ ಮಾಡಿ' ಎಂದು ಹೇಳುವುದು ಸಹ ಒಂದು ರೀತಿಯ ಮುಜುಗರ ಸಂಗತಿ ಆದ್ದರಿಂದ ನಿಮ್ಮ ನಿಮ್ಮ ಬ್ರ್ಯಾಂಡ್‌ಗಳಿಗೆ ಬೇಡಿಕೆಯನ್ನು ನೀವೆ ಹೆಚ್ಚಿಸಿಕೊಳ್ಳಬೇಕು.

ಗಿಜ್‌ಬಾಟ್‌

ಗಿಜ್‌ಬಾಟ್‌

ಒಂದೇ ಕ್ಲಿಕ್‌ನಿಂದ ಯೂಟ್ಯೂಬ್ ವೀಡಿಯೋ ಪ್ಲೇಲೀಸ್ಟ್ ಡೌನ್‌ಲೋಡ್‌ ಹೇಗೆ?ಒಂದೇ ಕ್ಲಿಕ್‌ನಿಂದ ಯೂಟ್ಯೂಬ್ ವೀಡಿಯೋ ಪ್ಲೇಲೀಸ್ಟ್ ಡೌನ್‌ಲೋಡ್‌ ಹೇಗೆ?

ಫೇಸ್‌ಬುಕ್‌ನಲ್ಲಿ ಸ್ಥಳೀಯ ಭಾಷೆಯಲ್ಲಿ ಬರೆಯುವುದು ಹೇಗೆ?ಫೇಸ್‌ಬುಕ್‌ನಲ್ಲಿ ಸ್ಥಳೀಯ ಭಾಷೆಯಲ್ಲಿ ಬರೆಯುವುದು ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
8 Things You Should NEVER Share on Facebook. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X