Home
Social media

ಫೇಸ್‌ಬುಕ್‌ನಲ್ಲಿ ನೀವು ಹಾಕುವ ವಿಡಿಯೋಗೆ ಹಣ ಸಿಗುತ್ತೇ..! ಹೌದು ಇದು ನಿಜ!!

ಈಗಾಗಲೇ ಈ ರೀತಿಯಲ್ಲಿ ವಿಡಿಯೋಗಳ ಮಧ್ಯೆ 'ಮಿಡ್ ರೋಲ್' ಜಾಹಿರಾತುಗಳನ್ನು ಪ್ರಸಾರ ಮಾಡಿ ಯೂಟೂಬ್ ಅತೀ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದು,ವಿಡಿಯೋ ಹಾಕುವವರಿಗೂ ಆದಾಯದಲ್ಲಿ ಪಾಲು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಹೀಗೆ ಮಾಡಲಿದೆ.

By Srinidhi

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಹೊಸದೊಂದು ಚಿಂತನೆ ಮಾಡಿದ್ದು, ಮತ್ತಷ್ಟು ಆದಾಯವನ್ನು ಗಳಿಸುವ ಸಲುವಾಗಿ ಸದ್ಯ ಖ್ಯಾತಿಯ ಉತ್ತುಂಗದಲ್ಲಿರುವ ವಿಡಿಯೋಗಳ ಮಧ್ಯೆ ಆಡ್‌ಗಳನ್ನು ಪ್ರಸಾರ ಮಾಡಲು ಮುಂದಾಗಲಿದೆಯಂತೆ. ಹೀಗಾಗಿ ವಿಡಿಯೋ ಹಾಕಿದವರಿಗೂ ಆದಾಯ ಮಾಡಿಕೊಡಲಿದೆಯಂತೆ.

ಫೇಸ್‌ಬುಕ್‌ನಲ್ಲಿ ನೀವು ಹಾಕುವ ವಿಡಿಯೋಗೆ ಹಣ ಸಿಗುತ್ತೇ..!

5000mAh ಬ್ಯಾಟರಿ ಸಾಮಾರ್ಥ್ಯದ ಆಸಸ್ ಜೆನ್‌ಪೋನ್ ಪೆಗಾಸಸ್ 3ಎಸ್

ಈಗಾಗಲೇ ಈ ರೀತಿಯಲ್ಲಿ ವಿಡಿಯೋಗಳ ಮಧ್ಯೆ 'ಮಿಡ್ ರೋಲ್' ಜಾಹಿರಾತುಗಳನ್ನು ಪ್ರಸಾರ ಮಾಡಿ ಯೂಟೂಬ್ ಅತೀ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದು, ವಿಡಿಯೋ ಹಾಕುವವರಿಗೂ ಆದಾಯದಲ್ಲಿ ಪಾಲು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಸಹ ಇದೇ ಹಾದಿಯಲ್ಲಿ ಸಾಗುವ ಚಿಂತನೆ ನಡೆಸಿದೆ.

ವಿಡಿಯೋ ಹಾಕಿದವರಿಗೆ ಸಮಪಾಲು

ವಿಡಿಯೋ ಹಾಕಿದವರಿಗೆ ಸಮಪಾಲು

ಈಗಾಗಲೇ ಈ ಕುರಿತು ಒಂದು ಸುತ್ತಿನ ಯೋಜನೆಯನ್ನು ಸಿದ್ಧಪಡಿಸಿಕೊಂಡಿರುವ ಫೇಸ್‌ಬುಕ್, ವಿಡಿಯೋಗಳ ಮಧ್ಯ ತಾನು ಪ್ರಸಾರ ಮಾಡುವ ಜಾಹಿರಾತಿನಿಂದ ಬರುವ ಆದಾಯದಲ್ಲಿ ವಿಡಿಯೋ ಹಾಕುವವರಿಗೂ ಸಮಪಾಲನ್ನು ನೀಡುವುದಾಗಿ ತಿಳಿಸಿದೆ. ಮೂಲಗಳ ಪ್ರಕಾರ ಶೇ 55ರಷ್ಟು ಆದಾಯ ವಿಡಿಯೋ ಪ್ರಕಾಶಕರಿಗೆ ದೊರೆಯಲಿದೆ.

ಯೂಟೂಬ್ ಮಾದರಿ ಅನುಸರಿಸುತ್ತಿರುವ ಫೇಸ್‌ಬುಕ್

ಯೂಟೂಬ್ ಮಾದರಿ ಅನುಸರಿಸುತ್ತಿರುವ ಫೇಸ್‌ಬುಕ್

ಯೂಟೂಬ್ ಮಾದರಿಯನ್ನು ಅನುಸರಿಸಲು ಮುಂದಾಗಿರುವ ಫೇಸ್‌ಬುಕ್ ವಿಡಿಯೋ ಪ್ರಸಾರವಾಗುವ ವೇಳೆಯಲ್ಲಿ ಪಾಪ್‌ ಆಪ್ ಜಾಹಿರಾತು, ವಿಡಿಯೋ ಆರಂಭದಲ್ಲಿ ಸ್ಕಿಪ್ ಮಾಡಬಹುದುದಾದ ಜಾಹಿರಾತು, ವಿಡಿಯೋ ಮಧ್ಯದಲ್ಲಿ ಜಾಹಿರಾತು ಮತ್ತು ವಿಡಿಯೋದ ಕೊನೆಯಲ್ಲೂ ಜಾಹಿರಾತನ್ನು ಹಾಕಲು ಸಿದ್ಧತೆ ನಡೆಸಿದೆ.

ಹೊಸ ವಿಧಾನದ ಆಯ್ಕೆ

ಹೊಸ ವಿಧಾನದ ಆಯ್ಕೆ

ಇದರೊಂದಿಗೆ ವಿಡಿಯೋ ನೋಡಿದರವ ಅಂಕೆ-ಸಂಖ್ಯೆಯನ್ನು ಅಳತೆ ಮಾಡಲು, ಜಾಹಿರಾತು ನೀಡಿದವರಿಗೆ ಸಹಾಯವಾಗಲಿ ಎಂದು ಹೊಸದೊಂದು ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ.

ಅಧ್ಯಯನ ಶುರುಮಾಡಿದ ಫೇಸ್‌ಬುಕ್

ಅಧ್ಯಯನ ಶುರುಮಾಡಿದ ಫೇಸ್‌ಬುಕ್

ಒಟ್ಟಿನಲ್ಲಿ ಯಾವುದೇ ಅಡೆ ತಡೆ ಇಲ್ಲದೇ ಪ್ರಸಾರವಾಗುತ್ತಿದ್ದ ಫೇಸ್‌ಬುಕ್ ವಿಡಿಯೋಗಳ ಮಧ್ಯೆ ಈಗ ಜಾಹಿರಾತು ತೂರಿಕೊಳ್ಳುತ್ತಿದ್ದು, ಬಳಕೆದಾರರು ಇದನ್ನ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಅರಿತುಕೊಳ್ಳಲು ಈಗಾಗಲೇ ಫೇಸ್‌ಬುಕ್ ಸರ್ವೇ ಆರಂಭಿಸಿದೆಯಂತೆ.

Best Mobiles in India

English summary
In this way, the midst of 'Mid-roll "advertisements broadcast on YouTube gaining the highest incomes, the Facebook goes along the way. to konw more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+