ಫೇಸ್‌ಬುಕ್ ನಲ್ಲಿ 360 ಡಿಗ್ರಿ ಪೋಟೋ ಪೋಸ್ಟ್‌ ಮಾಡುವುದು ಹೇಗೆ..?

Written By:

  ಕಳೆದ ವರ್ಷ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಹೊಸದಾಗಿ 360 ಡಿಗ್ರಿ ಪೋಟೋವನ್ನು ಪೋಸ್ಟ್‌ ಮಾಡುವ ಹೊಸದೊಂದು ಆಯ್ಕೆಯನ್ನು ನೀಡಿತ್ತು. ಆದರೆ ಸಾಮಾನ್ಯ ಜನರು ಈ ಪೋಟೋಗಳನ್ನು ನೋಡಲು ಮಾತ್ರ ಸಾಧ್ಯವಾಗಿತ್ತು. ಆದರೆ ಅಂತಹ ಪೋಟೋವನ್ನು ತೆಗೆದು ಪೋಸ್ಟ್‌ ಮಾಡಲು ಸಾಧ್ಯವಾಗಿರಲಿಲ್ಲ. ಕಾರಣ ಎಲ್ಲರ ಬಳಿ 360 ಡಿಗ್ರಿ ಪೋಟೋ ತೆಗೆಯುವ ಕ್ಯಾಮೆರಾ ಲಭ್ಯವಿರಲಿಲ್ಲ.

  ಫೇಸ್‌ಬುಕ್ ನಲ್ಲಿ 360 ಡಿಗ್ರಿ ಪೋಟೋ ಪೋಸ್ಟ್‌ ಮಾಡುವುದು ಹೇಗೆ..?

  ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನ ವೇಗ ಹೆಚ್ಚಿಸುವುದು ಹೇಗೆ ಅಂತೀರಾ...?

  ಈ ಬಾರಿ ನಮ್ಮ ಕೈನಲ್ಲಿರುವ ಪೋನಿಂದಲೇ ಪೋಟೋ ತೆಗೆದು ಹೇಗೆ ಅನ್ನು 360 ಡಿಗ್ರಿ ಪೋಟೋವಾಗಿ ಬದಲಾಯಿಸಿ ಫೇಸ್‌ಬುಕ್‌ನಲ್ಲಿ ಪ್ರಕಟಿಸುವುದು ಎನ್ನುವುದನ್ನು ಈ ಮುಂದಿನ ಸ್ಲೈಡರ್ ಗಳಲ್ಲಿ ತಿಳಿದುಕೊಳ್ಳುವ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  360 ಡಿಗ್ರಿ ಪೋಟೋ ಹೇಗಿರುತ್ತೇ..?

  360 ಡಿಗ್ರಿ ಪೋಟೋದಲ್ಲಿ ಹಿಂದೆ, ಮುಂದೆ, ಮೇಲೆ ಮತ್ತು ಕೆಳಗೆ ಸೇರಿದಂತೆ ಎಲ್ಲಾ ಕಡೆಯಿಂದಲೂ ನೋಡಬಹುದಾಗಿದೆ, ಈ ಪೋಟೋವನ್ನು ಸಾಮಾನ್ಯ ಕ್ಯಾಮೆರಾದಿಂದ ತೆಗೆಯಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಇದಕ್ಕಾಗಿಯೇ 360 ಡಿಗ್ರಿ ಕ್ಯಾಮೆರಾ ಬೇಕಿದೆ.

  ಪೋನಿನಲ್ಲಿ 360 ಡಿಗ್ರಿ ಪೋಟೋ ತೆಗೆಯುವುದು ಹೇಗೆ..?

  360 ಡಿಗ್ರಿ ಪೋಟೋ ಪೋಟೋಗಾಗಿಯೇ ಕ್ಯಾಮೆರಾ ಕೊಳ್ಳಲು ಸಾಧ್ಯವಿಲ್ಲವಾದವರು ಐಪೋನಿನಲ್ಲಿ ಇಲ್ಲವೇ ಸ್ಮಾಮ್‌ಸಂಗ್ ಗ್ಯಾಲಾಕ್ಸಿ ಪೋನುಗಳಲ್ಲಿ ಪನೋರಮ ಪೋಟೊ ತೆಗೆದು ಅದನ್ನು 360 ಡಿಗ್ರಿ ಪೋಟೋವಾಗಿ ಬದಲಾವಣೆ ಮಾಡಿಕೊಳ್ಳಬಹುದು.

  ಯಾವ ಕ್ಯಾಮೆರಾ ಆಪ್ ಸಹಯಕಾರಿ?

  ನಿಮ್ಮ ಪೋನಿನಲ್ಲಿ 360 ಡಿಗ್ರಿ ಪೋಟೋ ತೆಗೆಯಲು ಹಲವರು ಕ್ಯಾಮೆರಾ ಆಪ್ ಗಳು ಸಹಾಯಕಾರಿಯಾಗಲಿದೆ. ಸ್ಟ್ರೀಟ್ ವ್ಯೂ ಮತ್ತೆ ಗೂಗಲ್ ಕ್ಯಾಮೆರಾಗಳು ಈ ರೀತಿಯ ಪೋಟೋಗಳನ್ನು ತೆಗೆಯಲು ಸಹಾಯಕಾರಿಯಾಗಿವೆ,

  ಪೋಟೋವನ್ನು ಪೋಸ್ಟ್‌ ಮಾಡುವುದು ಹೇಗೆ?

  360 ಡಿಗ್ರಿ ಪೋಟೋ ಪೋಟೋವನ್ನು ಪೋಸ್ಟ್‌ ಮಾಡಲು ಸಾಮಾನ್ಯ ಪೋಟೋವನ್ನು ಪೋಸ್ಟ್‌ ಮಾಡಿದ ರೀತಿಯಲ್ಲೇ ಮಾಡಬಹುದಾಗಿದ್ದು, ನ್ಯೂಸ್ ಫಿಡ್ಸ್ ನಲ್ಲಿ ವಿಡಿಯೋ ಅಥವಾ ಪೋಟೊವನ್ನು ಆಯ್ಕೆ ಮಾಡಿಕೊಂಡು ನೀವು ತೆಗೆದ ಪೋಟೋವನ್ನು ಅಲ್ಲಿ ಅಪ್ಲೋಡ್ ಮಾಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  a feature allowing users to upload photos with a 360-degree view. With this, users can view a scene from all angles - top, down, front and back. A 360-degree photo can either be created using a special 360 camera or by simply taking a panorama on your iPhone. to konw more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more