Home
Social media

ಫೇಸ್‌ಬುಕ್‌ ಪ್ರೊಫೈಲ್‌ ಅನ್ನು ಯಾರು ನೋಡಿದ್ದಾರೆ ತಿಳಿಯುವುದು ಹೇಗೆ?

ನಿಮ್ಮ ಫೇಸ್‌ಬುಕ್‌ ಪ್ರೊಫೈಲ್‌ಗೆ ವೈಯಕ್ತಿಕವಾಗಿ ಯಾರು ಭೇಟಿ ನೀಡಿದ್ದಾರೆ ಎಂದು ತಿಳಿಯಲು ಈ ಟ್ರಿಕ್ಸ್.

By Suneel

ಸಾಮಾಜಿಕ ತಾಣಗಳು ಮತ್ತು ಸ್ಮಾರ್ಟ್‌ಫೋನ್‌ ಯುಗದಲ್ಲಿರುವ ಎಲ್ಲರಿಗೂ ಕುತೂಹಲ ಅನ್ನೋದು ಮುಂಜಾನೆ ಬೆಡ್‌ ಮೇಲಿನಿಂದ ಹೇಳುವಾಗಲೇ ನೆನ್ನೆ ರಾತ್ರಿ ತಡವಾಗಿ ಯಾರ್‌ ನನಗೆ ವಾಟ್ಸಾಪ್‌ ಮೆಸೇಜ್‌ ಮಾಡಿರಬಹುದು ಎಂಬುದನ್ನು ಚೆಕ್‌ ಮಾಡುವುದರಿಂದ ಪ್ರಾರಂಭವಾಗುತ್ತದೆ. ನಂತರ ಫೇಸ್‌ಬುಕ್‌ ಲೈಕ್‌ಗಳು, ವಿಮರ್ಶೆಗಳು, ಮೆಸೇಜ್‌ಗಳನ್ನು ಚೆಕ್‌ ಮಾಡೋದು.

ನಿಮ್ಮ ರಹಸ್ಯ ಬಯಲು ಮಾಡುವ ಫೇಸ್‌ಬುಕ್, ವಾಟ್ಸಾಪ್

ಅಂದಹಾಗೆ ಪ್ರಪಂಚದ ಸಾಮಾಜಿಕ ತಾಣ ದೈತ್ಯ ಫೇಸ್‌ಬುಕ್‌ ಎಲ್ಲರ ಅಚ್ಚುಮೆಚ್ಚಿನ, ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಫೇಸ್‌ಬುಕ್ ಬಳಕೆದಾರರು ತಮ್ಮ ಪ್ರೊಫೈಲ್‌ ಅನ್ನು ಯಾರು ನೋಡಿರಬಹುದು ಎಂದು ತಿಳಿಯಬಹುದಾದ ಫೀಚರ್‌ ಅನ್ನು ಕಂಪನಿ ಅಭಿವೃದ್ದಿಪಡಿಸಿದೆ. ಇತ್ತೀಚೆಗೆ ಹಲವು ಬಳಕೆದಾರರಿಗೆ ತಮ್ಮ ಫೇಸ್‌ಬುಕ್‌ ಪ್ರೊಫೈಲ್‌ ಅನ್ನು ಯಾರು ಯಾರು ನೋಡಿರಬಹುದು ಎಂದು ತಿಳಿಯುವ ಕುತೂಹಲ ಹೆಚ್ಚಾಗಿದೆ. ಆದರೆ ಅದನ್ನು ತಿಳಿಯುವುದು ಹೇಗೆ ಎಂದು ಹಲವರು ಪ್ರಶ್ನೆ ಮಾಡಿದ್ದರು. ಆದ್ದರಿಂದ ಇಂದಿನ ಲೇಖನದಲ್ಲಿ ಫೇಸ್‌ಬುಕ್ ಬಳಕೆದಾರರು ತಮ್ಮ ಪ್ರೊಫೈಲ್‌ ಅನ್ನು ಯಾರು ನೋಡಿದ್ದಾರೆ ಎಂದು ತಿಳಿಯುವ ಟ್ರಿಕ್ಸ್ ಅನ್ನು ನಾವು ನಿಮಗೆ ಪರಿಚಯಿಸುತ್ತಿದ್ದೇವೆ.

#1

#1

ಫೇಸ್‌ಬುಕ್ ಖಾತೆಗೆ ಲಾಗಿನ್‌ ಆಗಿ, ನಂತರ ನಿಮ್ಮ ಪ್ರೊಫೈಲ್‌ ಅನ್ನು ಒಪನ್‌ ಮಾಡಿ.

#2

#2

ಫೇಸ್‌ಬುಕ್‌ ಪ್ರೊಫೈಲ್‌ ಪೇಜ್‌ ಒಪನ್‌ ಆದ ನಂತರ ಪೇಜ್‌ನಲ್ಲಿಯೇ ಮೌಸ್‌ ಪಾಯಿಂಟ್‌ ಇಟ್ಟು ಬಲಭಾಗದ ಬಟನ್ ಕ್ಲಿಕ್‌ ಮಾಡಿ "View page Source" ಆಯ್ಕೆ ಮಾಡಿ. ಈ ಚಿತ್ರ ನೋಡಿ ತಿಳಿಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#3

#3

ಈ ಹಂತದಲ್ಲಿ CTRL+F ಪ್ರೆಸ್‌ ಮಾಡಿ 'initialchat' ಎಂದು ಟೈಪಿಸಿ ಎಂಟರ್‌ ಬಟನ್‌ ಪ್ರೆಸ್‌ ಮಾಡಿ. ಚಿತ್ರ ನೋಡಿ ಸಹ ತಿಳಿಯಿರಿ.

#4

#4

ಚಿತ್ರದಲ್ಲಿರುವಂತೆ ನೀವು ಟೈಪಿಸಿದ ಪದ ಸಿಗುತ್ತದೆ ಮತ್ತು ಹೆಚ್ಚಿನ ಫೇಸ್‌ಬುಕ್ ಐಡಿಗಳ ಪಟ್ಟಿ ತೆರೆದುಕೊಳ್ಳುತ್ತದೆ. ಚಿತ್ರ ನೋಡಿರಿ.

#5

#5

ಉದಾಹರಣೆಗೆ (100009387769920) ಫೇಸ್‌ಬುಕ್‌ ಐಡಿಗಳನ್ನು ಕಾಪಿ ಮಾಡಿ ಮಾಡಿ ಅದನ್ನು ಬ್ರೌಸರ್‌ನ ಯುಆರ್‌ಎಲ್‌ ನಲ್ಲಿ www.facebook.com/100009387769920 ಎಂದು ಟೈಪಿಸಿ ಎಂಟರ್‌ ಮಾಡಿ.

#6

#6

ಫೇಸ್‌ಬುಕ್‌ ಐಡಿ ಎಂಟರ್‌ ಮಾಡಿದ ನಂತರ ನಿಮ್ಮ ಪ್ರೊಫೈಲ್‌ಗೆ ಇತ್ತೀಚೆಗೆ ಭೇಟಿ ನೀಡಿರುವ ಸ್ನೇಹಿತರ ಪ್ರೊಫೈಲ್‌ ಒಪನ್‌ ಆಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here is how to know who visited your Facebook profile in 24 hours. To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+