Subscribe to Gizbot

1 ಆಂಡ್ರಾಯ್ಡ್ ಫೋನ್‌ನಲ್ಲಿ 2 ಫೇಸ್‌ಬುಕ್ ಖಾತೆಗಳ ಬಳಕೆ ಹೇಗೆ?

Written By:

ಹಲವರು ಕೇವಲ ಒಂದೇ ಒಂದು ಫೇಸ್‌ಬುಕ್‌ ಖಾತೆಯನ್ನು ಹೊಂದಿರುತ್ತಾರೆ. ಆದರೆ ಎರಡು ಫೇಸ್‌ಬುಕ್‌ ಖಾತೆಗಳನ್ನು ಹೊಂದಿದ್ದರೂ ಸಹ ಹೆಚ್ಚು ಕಾರ್ಯನಿರ್ವಹಣೆ ನಡೆಯುವುದು ಮಾತ್ರ ನಿಜವಾದ ಹೆಸರು ಇರುವ ರಿಯಲ್‌ ಖಾತೆಯಲ್ಲಿ ಮಾತ್ರ. ಆದ್ರೆ ಕೆಲವರು ಕೆಲವು ಕಾರಣಗಳಿಂದ ಫೇಸ್‌ಬುಕ್‌ನಲ್ಲಿ ಎರಡು ಖಾತೆಗಳನ್ನು ಹೊಂದಿರುತ್ತಾರೆ. ಅಂತಹವರು ಒಂದೇ ಆಂಡ್ರಾಯ್ಡ್ ಫೋನ್‌ನಲ್ಲಿ ಎರಡು ಫೇಸ್‌ಬುಕ್ ಖಾತೆಗಳನ್ನು ನಿರ್ವಹಿಸುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಫೇಸ್‌ಬುಕ್‌ನಿಂದ 2 ಆಪ್‌ಗಳು

ಫೇಸ್‌ಬುಕ್‌ನಿಂದ 2 ಆಪ್‌ಗಳು

ಫೇಸ್‌ಬುಕ್‌ ಪ್ರಿಯರು ಎರಡು ಖಾತೆಗಳನ್ನು ಬಳಸಲು ಕಂಪನಿ ಸರಳ ಮಾರ್ಗ ನೀಡಿದೆ. ಹೌದು, ಫೇಸ್‌ಬುಕ್‌ ಕಂಪನಿ ಎರಡು ಫೇಸ್‌ಬುಕ್ ಆಪ್‌ಗಳನ್ನು ನೀಡಿದೆ. ಆದರೆ ನಾವು ಮಾತನಾಡುತ್ತಿರುವುದು ಫೇಸ್‌ಬುಕ್ ಮೆಸೇಂಜರ್‌ ಆಪ್‌ ಬಗ್ಗೆ ಮಾತ್ರ ಅಲ್ಲ.

ಎರಡು ಆಪ್‌ಗಳಲ್ಲಿ ಲಾಗಿನ್ ಆಗಿ

ಎರಡು ಆಪ್‌ಗಳಲ್ಲಿ ಲಾಗಿನ್ ಆಗಿ

ಒಂದೇ ಆಂಡ್ರಾಯ್ಡ್ ಫೋನ್‌ನಲ್ಲಿ ಎರಡು ಖಾತೆಗಳನ್ನು ಎರಡು ಆಪ್‌ಗಳಲ್ಲಿ ಲಾಗಿನ್‌ ಮಾಡಬಹುದು. ಒಂದೇ ಆಪ್‌ನಲ್ಲಿ ಎರಡು ಖಾತೆಗಳನ್ನು ಲಾಗಿನ್‌ ಮಾಡಿದರೆ ಬಹುಶಃ ಗೊಂದಲ ಉಂಟಾಗುತ್ತದೆ. ಆದರೆ ಫೇಸ್‌ಬುಕ್‌ ಈ ಸಮಸ್ಯೆಯನ್ನು ತಡೆಯಲೆಂದೇ ಎರಡು ಆಪ್‌ಗಳನ್ನು ಬಳಕೆದಾರರಿಗೆ ನೀಡಿದೆ.

ಫೇಸ್‌ಬುಕ್‌ ಅಧಿಕೃತ ಆಪ್‌

ಫೇಸ್‌ಬುಕ್‌ ಅಧಿಕೃತ ಆಪ್‌

ನೀವು ಹೆಚ್ಚು ಆದ್ಯತೆ ನೀಡುವ ಪ್ರಾಥಮಿಕ ಫೇಸ್‌ಬುಕ್ ಖಾತೆಯನ್ನು ನಿರ್ವಹಿಸಲು ಅಧಿಕೃತ ಫೇಸ್‌ಬುಕ್ ಆಪ್‌ ಅನ್ನು ಆಂಡ್ರಾಯ್ಡ್ ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿ.
ಫೇಸ್‌ಬುಕ್‌ ಅಧಿಕೃತ ಆಪ್‌ಗಾಗಿ ಕ್ಲಿಕ್ ಮಾಡಿ

ಫೇಸ್‌ಬುಕ್‌ ಲೈಟ್‌ ಆಪ್‌

ಫೇಸ್‌ಬುಕ್‌ ಲೈಟ್‌ ಆಪ್‌

ಎರಡನೇ ಖಾತೆಯನ್ನು ನಿರ್ವಹಿಸಲು 'ಫೇಸ್‌ಬುಕ್‌ ಲೈಟ್'‌ ಆಪ್ ಅನ್ನು ಇನ್‌ಸ್ಟಾಲ್‌ ಮಾಡಿ. ಕಂಪನಿಯು 'ಫೇಸ್‌ಬುಕ್ ಲೈಟ್' ಆಪ್‌ ಅನ್ನು 2015 ರಲ್ಲಿ ಲಾಂಚ್‌ ಮಾಡಿತು. ಇದು ಕಡಿಮೆ ಡಾಟಾ ವರ್ಸನ್‌ ಆಪ್‌ ಆಗಿದೆ.
ಫೇಸ್‌ಬುಕ್‌ ಲೈಟ್‌ ಆಪ್‌ಗಾಗಿ ಕ್ಲಿಕ್ ಮಾಡಿ

ಎರಡು ಆಪ್‌ಗಳ ವ್ಯತ್ಯಾಸವೇನು?

ಎರಡು ಆಪ್‌ಗಳ ವ್ಯತ್ಯಾಸವೇನು?

ಅಂದಹಾಗೆ ಎರಡು ಆಪ್‌ಗಳ ನಡುವೆ ವ್ಯತ್ಯಾಸವಿದೆ. 'ಫೇಸ್‌ಬುಕ್‌ ಲೈಟ್' ಆಪ್‌ ಮುಖ್ಯ ಆಪ್‌ನಷ್ಟು ಉತ್ತಮ ಅನುಭವ ನೀಡುವುದಿಲ್ಲ. ಆದರೆ ಕಡಿಮೆ ಡಾಟಾ ಬಳಸುತ್ತದೆ, 2G ನೆಟ್‌ವರ್ಕ್‌ನಲ್ಲೂ ಉತ್ತಮವಾಗಿ ವರ್ಕ್‌ ಆಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
How to use 2 Facebook accounts on 1 Android phone. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot