Subscribe to Gizbot

ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

Written By:

ಫೇಸ್‌ಬುಕ್‌ ಪ್ರಪಂಚದ ಅತಿದೊಡ್ಡ ಸಾಮಾಜಿಕ ಜಾಲತಾಣ. ಒಮ್ಮೆ ಫೇಸ್‌ಬುಕ್‌ ಖಾತೆ ಓಪನ್ ಮಾಡಿದರೆ ಸಾಕು, ಫೇಸ್‌ಬುಕ್‌ ಮುಖಾಂತರ ಯಾವುದೇ ದೇಶದ ವ್ಯಕ್ತಿಯನ್ನು ಸಹ ಸಂಪರ್ಕಿಸಬಹುದು. ಅಲ್ಲದೇ ಫೇಸ್‌ಬುಕ್ ಖಾತೆ ಓಪನ್‌ ಮಾಡುವುದರಿಂದ ಫೇಸ್‌ಬುಕ್‌ ಬಳಕೆದಾರರು ತಮ್ಮ ಐಡೆಂಟಿಟಿ ತೋರಿಸಿಕೊಳ್ಳಲು ಸಹಾಯಕವಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ ಫೇಸ್‌ಬುಕ್‌ ಯಾವುದೇ ಒಂದು ಉದ್ಯಮ ಮತ್ತು ಬ್ರ್ಯಾಂಡ್‌ಗಳ ಅಭಿವೃದ್ದಿಗಾಗಿ ಬಳಸಲ್ಪಡುವ ಪ್ರಭಾವಿ ಮಾಧ್ಯಮವಾಗಿದೆ.

ಅಂದಹಾಗೆ ಫೇಸ್‌ಬುಕ್‌ ಅನ್ನು ನಿರಂತರವಾಗಿ ಬಳಕೆ ಮಾಡದವರು ಸಹ ಖಾತೆಯನ್ನು ಓಪನ್ ಮಾಡುತ್ತಾರೆ. ಹಾಗೆ ಕೆಲವರು ಖಾತೆ ಓಪನ್‌ ಮಾಡಿ ಬಹಳಷ್ಟು ದಿನ ಬಳಸಿ ಬೇಸರವೆನಿಸಿದರೆ ಡಿಲೀಟ್‌ ಮಾಡಬೇಕು ಎಂದು ಪ್ರಯತ್ನಿಸುತ್ತಾರೆ. ಆದರೆ ಬಹುಶಃ ಶೇಕಡ 70 ರಷ್ಟು ಫೇಸ್‌ಬುಕ್‌ ಬಳಕೆದಾರರಿಗೆ ಫೇಸ್‌ಬುಕ್ ಖಾತೆ ಡಿಲೀಟ್‌ ಮಾಡುವ ಆಯ್ಕೆಯನ್ನು ಸಹ ಹುಡುಕಲು ಆಗುವುದಿಲ್ಲ. ಆದ್ರೆ ಜಸ್ಟ್‌ ಡಿಆಕ್ಟೀವ್‌ ಮಾಡಬಹುದು ಅಷ್ಟೆ. ನಂತರ ಬೇಕಾದ್ರೆ ಮತ್ತೆ ಆಕ್ಟೀವ್‌ ಮಾಡಬಹುದು. ಆದರೆ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಸುಖಾಸುಮ್ಮನೆ ಹಲವು ಫೇಸ್‌ಬುಕ್‌ ಖಾತೆ ತೆರೆದು ಅವುಗಳನ್ನು ಡಿಲೀಟ್‌ ಮಾಡಬೇಕು ಎಂದು ಬಯಸುವವರು ಶಾಶ್ವತವಾಗಿ ಖಾತೆ ಡಿಲೀಟ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಫೇಸ್‌ಬುಕ್‌ ಖಾತೆ ಶಾಶ್ವತವಾಗಿ ಡಿಲೀಟ್ ಮಾಡಲು ಪ್ರಕ್ರಿಯೆಯು 14 ದಿನಗಳನ್ನು ತೆಗೆದುಕೊಳ್ಳುತ್ತದೆ. ಲೇಖನದ ಸ್ಲೈಡರ್‌ನಲ್ಲಿ ನೀಡಲಾದ ಎಲ್ಲಾ ಹಂತಗಳನ್ನು ಎಚ್ಚರದಿಂದ ಪಾಲಿಸಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

1

ಮೊದಲಿಗೆ ನೀವು ಡಿಲೀಟ್‌ ಮಾಡಬೇಕು ಎಂದು ನಿರ್ಧರಿಸಿರುವ ಫೇಸ್‌ಬುಕ್‌ ಖಾತೆಯನ್ನು ಓಪನ್‌ ಮಾಡಿ.

ಹಂತ 2

2

ಫೇಸ್‌ಬುಕ್‌ ಖಾತೆ ಡಿಲೀಟ್ ಮಾಡಲು ಈಗ ಇಲ್ಲಿ ಕ್ಲಿಕ್ ಮಾಡಿ

https://www.facebook.com/help/delete_account

 ಹಂತ 3

3

ಹಿಂದಿನ ಸ್ಲೈಡರ್‌ನಲ್ಲಿ ತಿಳಿಸಿದ ಲಿಂಕ್‌ ಕ್ಲಿಕ್ ಮಾಡಿದ ನಂತರ ಓಪನ್‌ ಆದ ಪೇಜ್‌ನಲ್ಲಿ "Delete My Account" ಎಂಬಲ್ಲಿ ಕ್ಲಿಕ್ ಮಾಡಿ.

ಹಂತ 4

4

ಈ ಹಂತದಲ್ಲಿ ಸೆಕ್ಯೂರಿಟಿ ಚೆಕ್‌ ಬಾಕ್ಸ್‌ ಓಪನ್‌ ಆಗುತ್ತಿದೆ. ಅಲ್ಲಿ ನಿಮ್ಮ ಫೇಸ್‌ಬುಕ್‌ ಖಾತೆಯ ಪಾಸ್‌ವರ್ಡ್‌ ಎಂಟರ್‌ ಮಾಡಿ ನಂತರ ಕ್ಯಾಪ್‌ಚ ಟೆಕ್ಸ್ಟ್‌ ಅನ್ನು ನೀಡಿ ಮುಂದುವರಿಸಿ.

 ಹಂತ 5

5

ಈ ಹಂತದಲ್ಲಿ ನಿಮ್ಮ ಫೇಸ್‌ಬುಕ್‌ ಖಾತೆ ಡಿಆಕ್ಟೀವ್‌ ಆಗುವ ಬಗ್ಗೆ ಮತ್ತು ನಂತರದ 14 ದಿನಗಳ ನಂತರ ನಿಮ್ಮ ಫೇಸ್‌ಬುಕ್‌ ಖಾತೆ ಶಾಶ್ವತವಾಗಿ ಡಿಲೀಟ್‌ ಆಗುವ ಬಗ್ಗೆ ಮೆಸೇಜ್‌ ಬರುತ್ತದೆ.

 ಹಂತ 6

6

14 ದಿನಗಳ ನಂತರ ನಿಮ್ಮ ಫೇಸ್‌ಬುಕ್‌ ಖಾತೆ ಸಂಪೂರ್ಣವಾಗಿ ಡಿಲೀಟ್‌ ಆಗುತ್ತದೆ. ಆದರೆ ನೀವು 14 ದಿನಗಳ ಮಧ್ಯ ಏನಾದರೂ ಫೇಸ್‌ಬುಕ್‌ ಖಾತೆಗೆ ಲಾಗಿನ್‌ ಆದಲ್ಲಿ ನಿಮ್ಮ ಖಾತೆ ಪುನಃ ಆಕ್ಟಿವೇಟ್‌ ಆಗುತ್ತದೆ.

 ಹಂತ 7

7

ನಿಮ್ಮ ಫೇಸ್‌ಬುಕ್‌ ಖಾತೆಗೆ ಲಾಗಿನ್‌ ಆದಲ್ಲಿ ಚಿತ್ರದಲ್ಲಿ ತೋರಿಸಲಾದ ಮೆಸೇಜ್‌ ಬರುತ್ತದೆ. ನಿಮ್ಮ ಫೇಸ್‌ಬುಕ್‌ ಖಾತೆ ಡಿಲೀಟ್‌ ಪ್ರಕ್ರಿಯೆ ಕ್ಯಾನ್ಸೆಲ್‌ ಆಗುತ್ತದೆ. ವೀಡಿಯೋ ನೋಡಿ ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್ ಮಾಡವುದನ್ನು ತಿಳಿಯಲು ಮುಂದಿನ ಸ್ಲೈಡರ್‌ ನೋಡಿ.

rn

8

ವೀಡಿಯೋ ಸಹ ನೋಡಿ ಫೇಸ್‌ಬುಕ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ ಎಂದು ತಿಳಿಯಿರಿ.
ವೀಡಿಯೋ ಕೃಪೆ: sandeep singh

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?

ಫೇಸ್‌ಬುಕ್‌ ಬಗೆಗಿನ 12 ಕುತೂಹಲಕಾರಿ ವಿಷಯಗಳು ಬಹಿರಂಗ

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How To Delete Facebook Account Permanently. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot