ವಾಟ್ಸಾಪ್ ವೀಡಿಯೊ ಕರೆಯಲ್ಲೇ ಇವೆ 5 ಅತ್ಯಾಕರ್ಷಕ ಫೀಚರ್‌ಗಳು..!

By Suneel
|

ವಾಟ್ಸಾಪ್‌ ಇತ್ತೀಚೆಗೆ ತಾನೆ ಆಂಡ್ರಾಯ್ಡ್, ಐಓಎಸ್, ವಿಂಡೋಸ್ ವೇದಿಕೆಗಳಿಗೆಲ್ಲಾ ಅಧಿಕೃತವಾಗಿ ತನ್ನ ವೀಡಿಯೊ ಕರೆ ಫೀಚರ್ ಲಾಂಚ್‌ ಮಾಡಿದೆ. ವಾಟ್ಸಾಪ್ ವೀಡಿಯೊ ಕರೆ ಫೀಚರ್ ಕೇವಲ ವೀಡಿಯೊ ಕರೆ ಮಾಡಲು ಮಾತ್ರವಲ್ಲದೇ, ಹಲವು ಕುತೂಹಲಕಾರಿ ಉಪಯೋಗಗಳನ್ನು ಹೊಂದಿದೆ.

ವಾಟ್ಸಾಪ್, ವೀಡಿಯೊ ಕರೆ ಬಳಕೆದಾರ ಸ್ನೇಹಿ ಫೀಚರ್ ಆಗಿದ್ದು, ವಾಯ್ಸ್ ಕರೆಗಿಂತಲೂ ಹೆಚ್ಚು ಕಂಪರ್ಟ್ ಮತ್ತು ಡಾಟಾ ಕಡಿಮೆ ಬಳಕೆ ಫೀಚರ್ ಹೊಂದಿದೆ. ವಾಟ್ಸಾಪ್‌ನಲ್ಲಿನ ವೀಡಿಯೊ ಕರೆ ಎಂಡ್ ಟು ಎಂಡ್ ಗೂಢಲಿಪೀಕರಣವಾಗಿದ್ದು, ಬಳಕೆದಾರರಿಗೆ ಹೆಚ್ಚು ಸುರಕ್ಷತೆ ಒದಗಿಸುತ್ತದೆ. ಹಾಗಿದ್ರೆ ವಾಟ್ಸಾಪ್‌ ವೀಡಿಯೊ ಕರೆಯಲ್ಲಿನ ಇನ್ನಿತರ ಹಲವು ಉಪಯೋಗಗಳು ಏನು ಎಂದು ತಿಳಿಯಿರಿ.

ಎಲ್ಲರ ಸ್ಟೇಟಸ್ ಚೇಂಜ್‌ ಮಾಡೋ 12 ವಾಟ್ಸಾಪ್‌ ಸ್ಟೇಟಸ್‌ಗಳು

ಹೆಚ್ಚುವರಿ ವೀಡಿಯೊ ಕರೆ ಐಕಾನ್ ಇಲ್ಲ

ಹೆಚ್ಚುವರಿ ವೀಡಿಯೊ ಕರೆ ಐಕಾನ್ ಇಲ್ಲ

ವೀಡಿಯೊ ಕರೆ ಫೀಚರ್ ಲಾಂಚ್‌ ಆದಾಗಿನಿಂದಲು ಬಳಕೆದಾರರು ವೀಡಿಯೊ ಕರೆ ಆಪ್ಶನ್ ಪಡೆಯುವುದಲ್ಲಿ ಎಂದು ಕುತೂಹಲ ಹೊಂದಿದ್ದರು. ಆದರೆ ಹೆಚ್ಚುವರಿಯಾಗಿ ವೀಡಿಯೊ ಕರೆ ಐಕಾನ್ ಡಿಸ್‌ಪ್ಲೇ ಆಗುವುದಿಲ್ಲ. ಆದ್ದರಿಂದ ವೀಡಿಯೊ ಕರೆ ಮಾಡಲು ಜಸ್ಟ್‌ ಕರೆ ಆಪ್ಶನ್‌ ಕ್ಲಿಕ್ ಮಾಡಿದರೆ ನಂತರ ವಾಯ್ಸ್ ಕರೆ, ವೀಡಿಯೊ ಕರೆ, ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ವೀಡಿಯೊ ಕರೆ ಪಿಕ್ ಮಾಡುವ ಮುನ್ನ ಸ್ನೇಹಿತರು ನಿಮ್ಮನ್ನು ನೋಡಬಹುದು

ವೀಡಿಯೊ ಕರೆ ಪಿಕ್ ಮಾಡುವ ಮುನ್ನ ಸ್ನೇಹಿತರು ನಿಮ್ಮನ್ನು ನೋಡಬಹುದು

ಉದಾಹರಣೆಗೆ ನೀವು ಯಾರಿಗಾದರೂ ವೀಡಿಯೊ ಕರೆ ಮಾಡಿರುತ್ತೀರಿ. ಅವರು ನಿಮ್ಮ ವೀಡಿಯೊ ಕರೆ ಪಿಕ್ ಮಾಡದೇ ನಿಮ್ಮ ಚಟುವಟಿಕೆಗಳನ್ನು ನೋಡಬಹುದು. ಆದ್ದರಿಂದ ಯಾರಿಗಾದರೂ ಕರೆ ಮಾಡುವ ಮುನ್ನ ರೆಡಿಯಾಗಿ ನಂತರ ಕರೆ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

"Do Not Disturb' ಮೆಸೇಜ್‌ ಸೆಂಡ್‌ ಮಾಡಿ

ನೀವು ಬ್ಯುಸಿ ಇರುವ ವೇಳೆ ನಿಮ್ಮ ಸ್ನೇಹಿತರು ವೀಡಿಯೊ ಕರೆ ಮಾಡಿದಲ್ಲಿ, ಜಸ್ಟ್ '"Do Not Disturb' ಮೆಸೇಜ್‌ ಸೆಂಡ್‌ ಮಾಡಬಹುದು.

ವೀಡಿಯೊ ಕರೆಯಲ್ಲಿ ನಿರತರಾಗಿದ್ದಲ್ಲಿಯೂ ಚಾಟ್‌ ಮಾಡಬಹುದು

ವೀಡಿಯೊ ಕರೆಯಲ್ಲಿ ನಿರತರಾಗಿದ್ದಲ್ಲಿಯೂ ಚಾಟ್‌ ಮಾಡಬಹುದು

ವೀಡಿಯೊ ಕರೆಯಲ್ಲಿ ನಿರತರಾಗಿದ್ದಲ್ಲಿಯೂ, ಇತರರೊಂದಿಗೆ ಮೆಸೇಜ್‌ ಮೂಲಕ ಚಾಟ್ ಮಾಡಬಹುದು.

ವೀಡಿಯೊ ಕರೆ ಮ್ಯೂಟ್ ಅಥವಾ ಪಾಸ್

ವೀಡಿಯೊ ಕರೆ ಮ್ಯೂಟ್ ಅಥವಾ ಪಾಸ್

ವೀಡಿಯೊ ಕರೆಯಲ್ಲಿ ಇದ್ದಾಗ, ಇತರೆ ಕೆಲಸಗಳನ್ನು ತಕ್ಷಣ ಮಾಡಬೇಕಾದಲ್ಲಿ, ಬಳಕೆದಾರರು ಸಿಂಪಲ್ಲಾಗಿ ಕರೆ ಮ್ಯೂಟ್ ಮಾಡಬಹುದು ಅಥವಾ ತಾತ್ಕಾಲಿಕ ವಿರಾಮ ನೀಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
WhatsApp Video Calling Feature: Here's What Else Can You Do Other Than Video Calls. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X