Subscribe to Gizbot

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಲಾಂಚ್: ಒಂದೇ ಕ್ಲಿಕ್‌ನಿಂದ ಫೀಚರ್ ಪಡೆಯಿರಿ!

Written By:

ವಾಟ್ಸಾಪ್ ವೀಡಿಯೊ ಕರೆ ಫೀಚರ್‌ ಅನ್ನು ಅಂತಿಮವಾಗಿ ಇಂದು (ನವೆಂಬರ್ 15) ಆಂಡ್ರಾಯ್ಡ್, ಐಓಎಸ್ ಮತ್ತು ವಿಂಡೋಸ್ 10 ವೇದಿಕೆಗಳಿಗೆ ಲಾಂಚ್‌ ಆಗಿದೆ. ಈ ಹಿಂದೆ ಗಿಜ್‌ಬಾಟ್‌ನಲ್ಲಿ ವಾಟ್ಸಾಪ್ ವೀಡಿಯೊ ಕರೆ ಫೀಚರ್ ಪಡೆಯಲು ಬೀಟಾ ವರ್ಸನ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದೆವು. ಆದರೆ ಇಂದು ವಾಟ್ಸಾಪ್‌ ಅಧಿಕೃತವಾಗಿ ವೀಡಿಯೊ ಕರೆ ಫೀಚರ್‌ ಅನ್ನು ಪ್ರಪಂಚದ ಎಲ್ಲಾ ವಾಟ್ಸಾಪ್‌ ಬಳಕೆದಾರರಿಗಾಗಿ ಲಾಂಚ್‌ ಮಾಡಿದೆ. ವೀಡಿಯೊ ಕರೆ ಫೀಚರ್ ಪಡೆಯಲು ಬೀಟಾ ವರ್ಸನ್ ಇನ್‌ಸ್ಟಾಲ್‌ ಮಾಡದೇ ಜಸ್ಟ್‌ ಅಪ್‌ಡೇಟ್‌ ಮಾಡಿದರೆ ಸಾಕು.

ವಾಟ್ಸಾಪ್ 2009 ರಲ್ಲಿ ಮೆಸೇಜ್‌ ಸೇವೆಯ ಆಪ್‌ ಆಗಿ ಲಾಂಚ್ ಆಗಿತ್ತು. ನಂತರದಲ್ಲಿ ವಾಯ್ಸ್ ಕರೆ ಫೀಚರ್‌ ಅನ್ನು 2015 ರಲ್ಲಿ ಪಡೆದಿತ್ತು. ಪ್ರಸ್ತುತದಲ್ಲಿ 1 ಶತಕೋಟಿಗೂ ಹೆಚ್ಚು ಬಳಕೆದಾರರಿರುವ ವಾಟ್ಸಾಪ್‌ ವೀಡಿಯೊ ಕರೆ ಫೀಚರ್‌ ಅನ್ನು ಲಾಂಚ್‌ ಪ್ರಖ್ಯಾತ ಆಂಡ್ರಾಯ್ಡ್, ಐಓಎಸ್ ಮತ್ತು ವಿಂಡೋಸ್ 10 ಓಎಸ್ ವೇದಿಕೆಗಳಿಗೆ ಲಾಂಚ್‌ ಮಾಡಿದೆ.

ವಾಟ್ಸಾಪ್ ಲೇಟೆಸ್ಟ್ ವರ್ಸನ್ ಡೌನ್‌ಲೋಡ್‌ ಮಾಡಿ ವೀಡಿಯೊ ಕರೆ ಫೀಚರ್ ಪಡೆಯುವುದು ಹೇಗೆ?

ವಾಟ್ಸಾಪ್ ವೀಡಿಯೊ ಕರೆ(WhatsApp Video call) ಫೀಚರ್ ಹೇಗೆ ವರ್ಕ್‌ ಆಗುತ್ತದೆ, ವೀಡಿಯೊ ಕರೆ ಫೀಚರ್ ಅನ್ನು ಒಂದೇ ಕ್ಲಿಕ್‌'ನಿಂದ ಪಡೆಯುವುದು ಹೇಗೆ ಎಂದು ತಿಳಿಯಲು ಮುಂದೆ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ವೀಡಿಯೊ ಕರೆ ಫೀಚರ್ ಯಾವ ಡಿವೈಸ್‌ಗಳಿಗೆ ಲಭ್ಯ?

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಯಾವ ಡಿವೈಸ್‌ಗಳಿಗೆ ಲಭ್ಯ?

ವಾಟ್ಸಾಪ್‌ ವೀಡಿಯೊ ಕರೆ ಫೀಚರ್ ಆಂಡ್ರಾಯ್ಡ್ 4.1 ಮತ್ತು ನಂತರದ ಅಪ್‌ಡೇಟೆಡ್ ಓಎಸ್‌, ಎಲ್ಲಾ ಐಓಎಸ್‌ಗಳು ಮತ್ತು ವಿಂಡೋಸ್ 10 ವೇದಿಕೆಗಳಿಗೆ ಲಭ್ಯ. ಈ ಎಲ್ಲಾ ಡಿವೈಸ್‌ಗಳ ಬಳಕೆದಾರರು ತಮ್ಮ ಡಿವೈಸ್‌ನಲ್ಲಿನ ವಾಟ್ಸಾಪ್ ಆಪ್‌ ಅನ್ನು ಅಪ್‌ಗ್ರೇಡ್ ಮಾಡಬೇಕು.

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಎನೇಬಲ್ ಮಾಡುವುದು ಹೇಗೆ?

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಎನೇಬಲ್ ಮಾಡುವುದು ಹೇಗೆ?

* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಪ್ಲೇ ಸ್ಟೊರ್ ಓಪನ್ ಮಾಡಿ ವಾಟ್ಸಾಪ್‌ ಸರ್ಚ್‌ ಮಾಡಿ
* ಗೂಗಲ್‌ ಪ್ಲೇ ಆಪ್‌ ಲೀಸ್ಟ್‌ನಲ್ಲಿ ವಾಟ್ಸಾಪ್ ಆಪ್‌ ಓಪನ್ ಮಾಡಿ
* ನಂತರ ಓಪನ್ ಆದ ಪೇಜ್‌ನಲ್ಲಿ ಕೆಳಭಾಗದವರೆಗೂ ಸ್ಕ್ರಾಲ್‌ ಮಾಡಿ.
* ನಂತರ ಬೀಟಾ ಟೆಸ್ಟ್‌ಗಾಗಿ 'I'M IN ಟ್ಯಾಪ್ ಮಾಡಿ
* ನಂತರದ ಪೇಜ್‌ನಲ್ಲಿ ಖಚಿತ ಪಡಿಸಿ, ಕೆಲವು ನಿಮಷ ಕಾಯಿರಿ
* ಗೂಗಲ್‌ ಪ್ಲೇನಲ್ಲಿ ಹಿಂದಕ್ಕೆ ಬನ್ನಿ. ಬೀಟಾ ವರ್ಸನ್‌ಗೆ ಅಪ್‌ಡೇಟ್‌ ಮಾಡಲು ಆಪ್ಶನ್ ಕಾಣುತ್ತದೆ.
* ಆಪ್‌ ಅಪ್‌ಡೇಟ್ ಮಾಡಿ. ನಂತರ ಲೇಟೆಸ್ಟ್ ಬೀಟಾ ವರ್ಸನ್ ಆಪ್‌ ಅನ್ನು ನಿಮ್ಮ ಆಂಡ್ರಾಯ್ಡ್‌ನಲ್ಲಿ ಹೊಂದಿರುತ್ತೀರಿ. ಇದು ವಾಟ್ಸಾಪ್ ವೀಡಿಯೊ ಕರೆ ಫೀಚರ್ ಹೊಂದಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಟ್ಸಾಪ್‌ ವೀಡಿಯೊ ಕರೆ ಹೇಗೆ?

ವಾಟ್ಸಾಪ್‌ ವೀಡಿಯೊ ಕರೆ ಹೇಗೆ?

ಲೇಟೆಸ್ಟ್ ವಾಟ್ಸಾಪ್‌ ಬೇಟಾ ವರ್ಸನ್‌ ಪಡೆದಿದ್ದಲ್ಲಿ ವೀಡಿಯೊ ಕರೆ ಸುಲಭ.

* ವಾಟ್ಸಾಪ್ ಓಪನ್ ಮಾಡಿ
* ನಂತರ ಕಾಂಟ್ಯಾಕ್ಟ್‌ಗೆ ಟ್ಯಾಬ್‌ಗೆ ಹೋಗಿ
* ನೀವು ವಾಟ್ಸಾಪ್‌ ವೀಡಿಯೊ ಕರೆ ಮಾಡಬೇಕಾದ ಕಾಂಟ್ಯಾಕ್ಟ್ ಆಯ್ಕೆ ಮಾಡಿ ಟ್ಯಾಪ್‌ ಮಾಡಿ.
* ಕಾಂಟ್ಯಾಕ್ಟ್ ಟ್ಯಾಪ್ ಮಾಡಿದ ನಂತರ ಸ್ಕ್ರೀನ್ ಟಾಪ್‌ನಲ್ಲಿ ಕಾಣುವ ಫೋನ್‌ ಐಕಾನ್ ಟ್ಯಾಪ್‌ ಮಾಡಿ.
* ನಂತರ ಪಾಪಪ್ ಆದ ಆಪ್ಶನ್‌ಗಳಲ್ಲಿ, ವೀಡಿಯೊ ಕರೆ ಮೇಲೆ ಕ್ಲಿಕ್ ಮಾಡಿ.

ವೀಡಿಯೊ ಕರೆ ಮಾಡುವವರಿಗೆ ಸೂಚನೆ

ವೀಡಿಯೊ ಕರೆ ಮಾಡುವವರಿಗೆ ಸೂಚನೆ

ವೀಡಿಯೊ ಕರೆ ಮಾಡಲು, ಕರೆ ಯಾರಿಗೆ ಮಾಡಬೇಕು ಎಂದುಕೊಂಡಿದ್ದೀರೋ ಅವರು ಸಹ ವಾಟ್ಸಾಪ್ ಲೇಟೆಸ್ಟ್ ಬೀಟಾ ವರ್ಸನ್‌ ಅನ್ನು ಅಪ್‌ಡೇಟ್‌ ಪಡೆದಿರಬೇಕು.

ಹೆಚ್ಚಿನ ಫೀಚರ್‌ಗಳು

ಹೆಚ್ಚಿನ ಫೀಚರ್‌ಗಳು

ವಾಟ್ಸಾಪ್ ವೀಡಿಯೊ ಕರೆ ವೇಳೆ ಫೇಸ್ ಅನ್ನು ಫ್ರಂಟ್ ಮತ್ತು ಹಿಂಭಾಗ ಕ್ಯಾಮೆರಾಗೆ ಫಾರ್ವರ್ಡ್‌ ಮಾಡಬಹುದು, ಕರೆ ಮ್ಯೂಟ್ ಮಾಡಬಹುದು, ರೆಡ್‌ ಬಟನ್‌ ಟ್ಯಾಪ್‌ ಮಾಡಿ ಕರೆ ಹ್ಯಾಂಗ್ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
WhatsApp Video Calling Launched: How to Get the Feature Without Waiting. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot