ಈ 10 ಆಂಡ್ರಾಯ್ಡ್‌ ಆಪ್‌ಗಳು ನಿಮ್ಮ ಜೀವನ ಬದಲಿಸುಬಹುದು..!

By GizBot Bureau

  ಆಂಡ್ರಾಯ್ಡ್ ಮೊಬೈಲ್ ಫೋನ್ ಗಳನ್ನು ಹೆಚ್ಚಿನ ಮಂದಿ ಇಷ್ಟ ಪಡುತ್ತಾರೆ ಯಾಕೆಂದರೆ ಈ ಪ್ಲಾಟ್ ಫಾರ್ಮ್ ನಲ್ಲಿ ಹಲವು ರೀತಿಯ ಟೂಲ್ ಗಳಿದ್ದು ಅವುಗಳು ನಮ್ಮ ದಿನನಿತ್ಯದ ಹಲವಾರು ಕೆಲಸಗಳಿಗೆ ಬಳಕೆಗೆ ಬರುತ್ತದೆ. ಹಾಗಾಗಿ ನಾವು ಕೆಲವು ಆಪ್ ಗಳು ನಿಮ್ಮ ಜೀವನವನ್ನು ಹೇಗೆ ಏಳಿಗೆ ಕಾಣಿಸುತ್ತವೆ ಎಂಬುದನ್ನು ಇದರಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.

  ಬಿಟ್ಟರೆ ಇನ್ನೆಂದೂ ಸಿಗದ ಆಫರ್!.1999 ರೂ.ಒಳಗೆ ಖರೀದಿಸಿ ಈ 10 ಶಾಕಿಂಗ್ ಗ್ಯಾಜೆಟ್ಸ್!!

  ಕೇವಲ ಮಾತುಕತೆಗಾಗಿ ಮಾತ್ರ ಫೋನನ್ನು ಬಳಕೆ ಮಾಡುವ ಕಾಲ ಹೋಗಿ ಬಹಳಷ್ಟು ದಿನಗಳಾದವು. ನಾವು ಯಾವ ಪ್ರಪಂಚದಲ್ಲಿ ಬದುಕಿದ್ದೇವೆ ಎಂದರೆ, ನಮ್ಮ ಸ್ಮಾರ್ಟ್ ಫೋನ್ ಗಳು ಈಗ ಒಂದು ಬಲಿಷ್ಟ ಕಂಪ್ಯೂಟರ್ ನಂತೆ ವರ್ತಿಸುತ್ತವೆ ಮತ್ತು ನಾವದನ್ನು ನಮ್ಮ ಕಿಸೆಯಲ್ಲೇ ಇಟ್ಟುಕೊಂಡು ಓಡಾಡುತ್ತೀವಿ. ಆಂಡ್ರಾಯ್ಡ್ ಮೊಬೈಲ್ ಫೋನ್ ಗಳನ್ನು ಹೆಚ್ಚಿನ ಮಂದಿ ಇಷ್ಟ ಪಡುತ್ತಾರೆ ಯಾಕೆಂದರೆ ಈ ಪ್ಲಾಟ್ ಫಾರ್ಮ್ ನಲ್ಲಿ ಹಲವು ರೀತಿಯ ಟೂಲ್ ಗಳಿದ್ದು ಅವುಗಳು ನಮ್ಮ ದಿನನಿತ್ಯದ ಹಲವಾರು ಕೆಲಸಗಳಿಗೆ ಬಳಕೆಗೆ ಬರುತ್ತದೆ.

  ಈ 10 ಆಂಡ್ರಾಯ್ಡ್‌ ಆಪ್‌ಗಳು ನಿಮ್ಮ ಜೀವನ ಬದಲಿಸುಬಹುದು..!

  ಒಂದು ವೇಳೆ ನೀವು ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿದರೆ, ನೀವು ಎಣಿಸಲು ಸಾಧ್ಯವಾಗದಷ್ಟು ಆಪ್ ಗಳನ್ನು ಅಲ್ಲಿ ಗಮನಿಸುತ್ತೀರಿ ಮತ್ತು ಅದರಲ್ಲಿ ಅತ್ಯದ್ಭುತವಾದ ಆಪ್ ಯಾವುದು ಎಂದು ಪರಿಗಣಿಸಿ ಹುಡುಕುವುದು ಕೂಡ ನಿಮಗೆ ಕಷ್ಟಸಾಧ್ಯವಾಗುವ ವಿಚಾರವಾಗಬಹುದು. ಹಾಗಾಗಿ ನಾವೊಂದು ನಿರ್ಧಾರ ಮಾಡಿದ್ದೇವೆ, ಇಲ್ಲಿ ನಿಮಗೆ ಕೆಲವು ಆಪ್ ಗಳನ್ನು ಪರಿಚಯಿಸಲಿದ್ದೇವೆ ಮತ್ತು ಅವು ನಿಮ್ಮ ಜೀವನದ ಶೈಲಿಯಲ್ಲೇ ಬದಲಿಸಿಕೊಳ್ಳಲು ನೆರವು ನೀಡಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1 ಕಾಮ್ – ಧ್ಯಾನಿಸಿ, ನಿದ್ರಿಸಿ, ಆರಾಮಾಗಿ (Calm – Meditate, Sleep, Relax )

  Calm ಅನುವುದು ಧ್ಯಾನವನ್ನು ಕೈಗೊಳ್ಳಲು ಇರುವ ಒಂದು ಅಧ್ಬುತ ಆಪ್ ಆಗಿದೆ. ನೀವು ನಿಮ್ಮ ಜೀವನದಲ್ಲಿ ಹೆಚ್ಚು ಸ್ಪಷ್ಟತೆ ಬಯಸುತ್ತಿದ್ದೀರಾದರೆ ಅದಕ್ಕೆ ಸರಿಯಾದ ಆಪ್ ಅಂದರೆ ಅದು ಕಾಮ್ ಆಪ್.. ನಿಮ್ಮ ನಿತ್ಯದ ಜೀವನಕ್ಕೆ ಹೆಚ್ಚು ಪ್ರಸ್ತುತವಾಗಿರುವ ಆಪ್ ಇದಾಗಿದ್ದು ಜೀವನದಲ್ಲಿ ಸ್ಪಷ್ಟತೆ, ಸಂತೋಷ ಮತ್ತು ನೆಮ್ಮದಿಯನ್ನು ಕರುಣಿಸಲು ಸಹಾಯ ಮಾಡುತ್ತೆ. ಈ ಆಪ್ ನಿಮಗೆ ಧ್ಯಾನದ ಅಭ್ಯಾಸವನ್ನು 3 ರಿಂದ 25 ನಿಮಿಷದ ವರೆಗೆ ಹೆಚ್ಚಿಸಲು ತಾಕತ್ತು ನೀಡುತ್ತದೆ.

  2 ಮೀಲ್ ಟೈಮ್ (Mealtime)

  ನೀವು ಮೀಲ್ ಟೈಮ್ ಆಪನ್ನು ಇನ್ಸ್ಟಾಲ್ ಮಾಡಿದರೆ ನಿಮ್ಮ ಆಂಡ್ರಾಯ್ಡ್ ಆಪ್ ಡಯಟೀಷಿಯನ್ ನಂತೆ ವರ್ತಿಸುತ್ತದೆ. ನೀವು ಎಷ್ಟು ಆಹಾರವನ್ನು ಸೇವಿಸಬೇಕು, ಯಾವ ಆಹಾರವನ್ನು ತ್ಯಜಿಸಬೇಕು ಮತ್ತು ಯಾವುದು ನಿಮಗಿಷ್ಟವಿಲ್ಲದ ಆಹಾರವೋ ಅದನ್ನು ಬಿಟ್ಟು ಹೇಗೆ ಆಹಾರ ಪಡೆಯಬೇಕು ಎಂಬಿತ್ಯಾದಿ ಮಾಹಿತಿ ನೀಡುತ್ತದೆ. 30 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಹೇಗೆ ಆರೋಗ್ಯಕರವಾದ ಆಹಾರವನ್ನು ತಯಾರಿಸಿಕೊಳ್ಳುವುದು ಎಂಬ ಬಗ್ಗೆಯೂ ಮಾಹಿತಿ ನೀಡುತ್ತದೆ.

  3 ಮೂವ್ಸ್( Moves)

  ಒಂದು ವೇಳೆ ನಿಮ್ಮ ಜೀವನದ ದಾರಿಯನ್ನು ಹೊಸ ರೀತಿಯಲ್ಲಿ ನೀವು ಆಲೋಚಿಸುತ್ತಿದ್ದರೆ , ಈ ಮೂವ್ಸ್ ಆಪ್ ನಿಮಗೆ ಸರಿಯಾದ ಮಾರ್ಗಸೂಚಿಯಾಗಿದೆ. ಈ ಆಪ್ ನಿಮ್ಮ ಜೀವನದ ಪ್ರತಿಯೊಂದನ್ನು ಇದು ಟ್ರ್ಯಾಕ್ ಮಾಡುತ್ತದೆ. ಬಳಕೆದಾರರು ತಮ್ಮ ಪಾಕೆಟ್ ನಲ್ಲಿ ತಮ್ಮ ಫೋನನ್ನು ಇಟ್ಟುಕೊಂಡಿರಬೇಕು ಆಗ ಅವರ ಪ್ರತಿ ಹೆಜ್ಜೆಯನ್ನೂ ಅದು ಎಲ್ಲಿಡುತ್ತಿದ್ದಾರೆ ಎಂಬುದನ್ನು ತಿಳಿಸುತ್ತದೆ.

  4 ಫಾಸ್ಟ್ ಕಸ್ಟಮರ್( Fast Customer)

  ಗ್ರಾಹಕರ ಕೇಂದ್ರದ ಜೊತೆ ಸಂಪರ್ಕ ಸಾಧಿಸುವಾಗ ನಿಮ್ಮನ್ನು ಹೋಲ್ಡ್ ಮಾಡಿ ಇರುವುದನ್ನು ಪ್ರತಿಯೊಬ್ಬರೂ ಕೂಡ ದ್ವೇಷಿಸುತ್ತಾರೆ. ಆ ಮೂಲಕ ಯಾರು ಕಾಯುತ್ತಲೇ ಇರುತ್ತಾರೆ ಎಂಬುದು ಎಲ್ಲರ ಅಂಬೋಣ. ಕಸ್ಟಮರ್ ಕೇರ್ ಸೇವೆಯಲ್ಲಿ ನೀವು ಕಾಯುತ್ತಲೇ ಇರುವ ಸಮಸ್ಯೆಯನ್ನು ಈ ಆಪ್ ನಿಂದ ದೂರವಾಗಿಸಿಕೊಳ್ಳಬಹುದು. ಈ ಆಪ್ ನಲ್ಲಿ ಕೇವಲ ನೀವು ಕಂಪೆನಿಯ ಹೆಸರು ಹೇಳಿದರೆ ಸಾಕು ಮತ್ತು " ಹ್ಯಾವ್ ಸಂವನ್ ಕಾಲ್ ಮಿ" ಎಂದು ತಿಳಿದರೆ ಸಾಕು, ಆ ಕಂಪೆನಿಯ ಕಸ್ಟಮರ್ ಕೇರ್ ಏಜೆಂಟರು ನಿಮ್ಮನ್ನು ಸಂಪರ್ಕಿಸುವಂತೆ ಮಾಡುತ್ತದೆ ಈ ಆಪ್

  5 ಡಾಲರ್ ಬಿಡ್ (DollarBid)

  ಈ ಆಪ್ ಮುಖಾಂತರ ನೀವು ನಿಮ್ಮ ಹಣದ ಟ್ರ್ಯಾಕ್ ರೆಕಾರ್ಡ್ ನ್ನು ದಿನಾಂಕದ ಆಧಾರದಲ್ಲಿ ಇಟ್ಟುಕೊಂಡಿರಬಹುದು. ಇದು ಒಂದು ಹಣವನ್ನು ನಿಭಾಹಿಸುವ ಟೂಲ್ ಆಗಿದ್ದು, ಇದು ನೀವು ಹಣ್ಣವನ್ನು ಎಲ್ಲಿ ಮತ್ತು ಯಾವ ಕಾರಣಕ್ಕೆ ವೆಚ್ಚ ಮಾಡಿದಿರಿ ಎಂಬುದರ ಟ್ರ್ಯಾಕ್ ರೆಕಾರ್ಡ್ ನ್ನು ಇಟ್ಟಿರುತ್ತದೆ. ಇದರಲ್ಲಿ ನೀವು ಭವಿಷ್ಯದ ಪೇಮೆಂಟ್ ಆಯ್ಕೆಯನ್ನು ಕೂಡ ಸೆಟ್ ಮಾಡಿ ಇಟ್ಟಿರಬಹುದಾಗಿದೆ. ತಿಂಗಳ ಬಿಲ್ ಪಾವತಿಯನ್ನು ಕೂಡ ಇದರಲ್ಲಿ ಸೆಟ್ ಮಾಡಬಹುದು.

  6 ವಾಕೀ (Wakie)

  ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಪಡೆಯಿರಿ, ಸಲಹೆಗಳನ್ನು ಕೊಡಿ, ಇತರರಿಗೆ ಸಹಾಯ ಮಾಡಿ ಮತ್ತು ಹೊಸ ವ್ಯಕ್ತಿಗಳನ್ನು ಭೇಟಿ ಮಾಡಿ. ಯಾವಾಗ ನೀವು ಬೋರ್ ಆಗುತ್ತೀರೋ ಆಗ ಸಮಾಜಮುಖಿಯಾಗಿ. ವಾಯ್ಸ್ ಕಾಲ್ ಮುಖಾಂತರ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ.. ವಾಕಿ, ಒಂದು ಸಾಮಾಜಿಕ ಆಪ್ ಆಗಿದ್ದು,ಫೋನ್ ಕಾಲ್ ಮುಖಾಂತರ ಎಲ್ಲವನ್ನೂ ನಿಭಾಯಿಸಬಹುದಾಗಿದೆ. ನಿಮ್ಮ ವಿಚಾರಗಳಿಗೆ ಸ್ಪಂದಿಸುವ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದುವ ಅವಕಾಶವನ್ನು ವಾಕಿ ಆಪ್ ಕಲ್ಪಿಸಿಕೊಡಲಿದೆ.

  7 ಸೇಫ್ ಟ್ರೆಕ್ (SafeTrek)

  ನೀವು ಸುರಕ್ಷಿತವಾಗಿರದ ಸಂದರ್ಬದಲ್ಲಿ ಈ ಆಪ್ ನಿಮ್ಮ ನೆರವಿಗೆ ಬರಲಿದೆ. ನೀವು ಎಲ್ಲೋ ಸಂಚರಿಸುವಾಗ ಯಾವುದೇ ಅಪಾಯಕ್ಕೆ ಸಿಲುಕಿದರೆ ಜಸ್ಟ್ ಈ ಆಪ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಸಂಬಂಧ ಪಟ್ಟ ಇಲಾಖೆಗೆ ಅದರ ಮಾಹಿತಿ ನೀಡುತ್ತೆ ಮತ್ತು ಇಲಾಖೆಯು ಅರ್ಥಾತ್ ಪೋಲೀಸ್ ನೆರವು ನಿಮಗೆ ಕೂಡಲೇ ಸಿಗುವಂತೆ ಮಾಡಲಾಗುತ್ತೆ.

  8 ಟ್ಯಾಬ್ (Tab)

  ಕೈಗಳಿಂದ , ಪೇಪರ್ ಹಿಡಿದು ಕಠಿಣ ಬೀಜಗಣಿತಗಳನ್ನು ಮಾಡುವ ಅಗತ್ಯ ಈಗ ಖಂಡಿತ ಇಲ್ಲ. ಟ್ಯಾಬ್ ಆಪ್ ಇನ್ಸ್ಟಾಲ್ ಮಾಡಿದರೆ ಸಾಕು, ನೀವು ನಿಮ್ಮ ಲೆಕ್ಕಾಚಾರಗಳನ್ನು ಮಾಡಬಹುದು ಮತ್ತು ಬಿಲ್ ಗಳನ್ನು ಹಂಚಿಕೆ ಮಾಡಬಹುದು, ಯಾವೆಲ್ಲ ವಸ್ತುಗಳಿಗೆ ಎಷ್ಟು ಬೆಲೆ ಕೊಟ್ಟಿದ್ದೀರಿ ಎಂಬುದನ್ನು ಲೆಕ್ಕ ಹಾಕಿ ಸರಿಯಾದ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಲು ಇದು ನಿಮಗೆ ನೆರವಾಗುತ್ತದೆ. ಸ್ನೇಹಿತರ ನಡುವೆ ಬಿಲ್ ಹಂಚಿಕೆ ಮಾಡಿಕೊಳ್ಳಲೂ ಕೂಡ ಇದು ಸಹಕಾರಿ.

  9 ಸ್ಪಿಟ್ ವೈಸ್ (Splitwise)

  ನಿಮ್ಮ ರೂಮ್ ಮೇಟ್ಸ್ ಗಳ ಜೊತೆ ನಿಮ್ಮ ಮನೆಯ ಖರ್ಚುವೆಚ್ಚದ ಬಿಲ್ ಗಳನ್ನು ಹಂಚಿಕೊಳ್ಳಲು ಇದು ನೆರವು ನೀಡುತ್ತದೆ. ಗುಂಪಿನಲ್ಲಿ ಹೇಗೆ ಹಣ ಹಂಚಿಕೆಯಾಗಬೇಕು ಎಂಬುದನ್ನು ಈ ಆಪ್ ತಿಳಿಸುತ್ತದೆ. ಉದಾಹರಣೆಗೆ ಎಲ್ಲೋ ಸ್ನೇಹಿತರೆಲ್ಲ ಸೇರಿ ಪ್ರವಾಸ ಕೈಗೊಂಡಾಗ ಒಬ್ಬೊಬ್ಬರ ತಲೆಮೇಲೆ ಎಷ್ಟು ಖರ್ಚಾಗಿದೆ, ಯಾರು ಎಷ್ಟು ಪಾವತಿ ಮಾಡಬೇಕು ಎಂಬ ಬಗ್ಗೆ ಬಿಲ್ ಹಂಚಿಕೆ ಮಾಡಲು ಇದು ನೆರವಾಗುತ್ತದೆ.

  10 ಹ್ಯಾಪಿಯರ್( Happier)

  ಹ್ಯಾಪಿಯರ್ ಆಪ್ ಮೂಲಭೂತವಾಗಿ ಒಂದು ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿದ್ದು ಇದು ನಿಮ್ಮ ಸಮುದಾಯದೊಂದಿಗೆ ಕೃತಜ್ಞತೆಯ ಪತ್ರಿಕೆಯ ಪರಿಕಲ್ಪನೆಯನ್ನು ಮೂಡಿಸುತ್ತೆ ಮತ್ತು ಇದು ನಿಮ್ಮ ಪ್ರಸ್ತುತ ಸಮಸ್ಯೆಗಳಿಗೆ ಕೆಲಸ ಮಾಡುವುದನ್ನು ಸುಲಭಗೊಳಿಸುತ್ತದೆ. ಈ ಅಪ್ಲಿಕೇಶನ್ ತಮ್ಮ ಜೀವನದ ಸಂತೋಷದ ಕ್ಷಣಗಳನ್ನು ಉಳಿಸಲು ಮತ್ತು ಟ್ರ್ಯಾಕ್ ಮಾಡಲು ಬಳಕೆದಾರರನ್ನು ಪ್ರೇರೇಪಿಸುತ್ತದೆ.

  11 ರನ್ ಪೀ(RunPee)

  ಒಂದು ವೇಳೆ ನೀವು ಥಿಯೇಟರ್ ನಲ್ಲಿ ಒಂದು ಮೂವಿಯನ್ನು ನೋಡುತ್ತಿದ್ದೀರಿ ಎಂದಿಟ್ಟುಕೊಳ್ಳೋಣ ಆಗ ನಿಮಗೆ ಮೂತ್ರವಿಸರ್ಜನೆಗೆ ತೆರಳಬೇಕಾಗಿ ಬರುತ್ತದೆ. ಇಂತಹ ಸಂದರ್ಬದಲ್ಲಿ ಈ ಆಪ್ ನಿಮಗೆ ಸಹಾಯಕ್ಕೆ ಬರುತ್ತದೆ. ನಗಬೇಡಿ.. ಅಲ್ಲ ರೀ ಆಪ್ ನಲ್ಲಿ ಉಚ್ಚೆ ಹೊಯ್ಯೋಕೆ ಆಗುತ್ತಾ ಅಂತ ಕೇಳಬೇಡಿ. ನಾವು ಹೇಳುತ್ತಿರುವ ಅರ್ಥ ಹಾಗಲ್ಲ.. ರನ್ ಪೀ ಆಪ್ ಮುಖಾಂತರ ನೀವು ಫಿಲ್ಮ್ ನ ಯಾವ ಭಾಗದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದರೆ, ಕಥೆಯನ್ನು ಅರ್ಥ ಮಾಡಿಕೊಳ್ಳಬಹುದು ಅಥವಾ ಮೂವಿಯಲ್ಲಿ ಅಷ್ಟು ಮಹತ್ವವಲ್ಲದ ದೃಶ್ಯಗಳು ಯಾವಾಗ ಬರುತ್ತದೆ ಎಂಬುದನ್ನು ಇದು ತಿಳಿಸುತ್ತದೆ. ಅರ್ಥಾತ್ ನೀವು ಹಾಗೆ ಮಹತ್ವವಿರದ ದೃಷ್ಯಗಳು ಬರುವಾಗ ಮೂತ್ರ ವಿಸರ್ಜನೆಗೆ ತೆರಳಿ ಬರಬಹುದು.

  12 Pzizz

  ಹಲವಾರು ಮಂದಿ ಇದ್ದಾರೆ ಅವರು ರಾತ್ರಿಯ ಹೊತ್ತು ನಿದ್ದೆ ಮಾಡಲು ಕಷ್ಟ ಪಡುತ್ತಾರೆ. ಇನ್ಸೋಮ್ನೇನಿಯಾ ಪರಿಸ್ಥಿತಿಯನ್ನು ಹೆಚ್ಚಿನವರು ಎದುರಿಸುತ್ತಿರುತ್ತಾರೆ ಮತ್ತು ಅವರು ರಾತ್ರಿಯ ವೇಳೆ ಎಚ್ಚರವಾಗಿಯೇ ಇರುತ್ತಾರೆ. Pzizz ಆಪ್ ಒಂದು ಅಧ್ಬುತವಾದ ವೈಜ್ಞಾನಿಕ ಆಪ್ ಆಗಿದ್ದು ಇದು ಮನೋವಿಶ್ಲೇಷಣೆಗೆ ನೆರವು ನೀಡುತ್ತದೆ. ಇದು ನಿದ್ದೆಗೆ ಸಂಬಂಧಿಸಿದ ಸರಣಿ ವಿಚಾರಗಳನ್ನು ತಿಳಿಸುತ್ತೆ ಮತ್ತು ಶಬ್ಧ ಮ್ಯೂಸಿಕ್ ಮುಖಾಂತರ ಪ್ರತಿ ರಾತ್ರಿಯನ್ನು ವಿಭಿನ್ನಗೊಳಿಸುತ್ತೆ. ನೀವು ಉತ್ತಮ ರೀತಿಯಲ್ಲಿ ನಿದ್ದೆಗೆ ಜಾರಬೇಕು ಎಂದು ಅಂದುಕೊಂಡಿದ್ದರೆ ಈ ಆಪ್ ನಿಮಗೆ ನೆರವು ನೀಡುತ್ತದೆ. ಹಾಗಾಗಿ ನಿದ್ದೆಯ ವಿಚಾರಕ್ಕೆ ಇದು ಅಧ್ಬುತ ಆಪ್ ಆಗಿದೆ.

  13 ವಿಕಿಮೆಡ್(WikiMed)

  ವಿಕಿಮೆಡ್ ಅನ್ನುವುದು ಒಂದು ಅಧ್ಬುತ ವೈದ್ಯಕೀಯ ಆಪ್ ಆಗಿದ್ದು, ಪ್ರತಿಯೊಬ್ಬರೂ ಕೂಡ ತಮ್ಮ ಆಂಡ್ರಾಯ್ಡ್ ನಲ್ಲಿ ಇನ್ಸ್ಟಾಲ್ ಮಾಡುವುದು ಸೂಕ್ತವಾಗಿದೆ. ಇದರಲ್ಲಿ ಅತ್ಯಂತ ಹೆಚ್ಚು ಆರೋಗ್ಯ ಸಂಬಂಧಿ ಲೇಖನಗಳಿರುತ್ತದೆ ಮತ್ತು ವಿವಿಧ ರೀತಿಯ ಮೆಡಿಸಿನ್ ಗಳು, ಕಾಯಿಲೆಗಳು ಮತ್ತು ಅದರಿಂದ ಹೊರ ಬರುವುದು ಹೇಗೆ ಎಂಬ ವಿಚಾರವನ್ನು ಇದರಲ್ಲಿ ಪ್ರಸ್ತಾಪಿಸಲಾಗಿರುತ್ತದೆ. ಹಾಗಾಗಿ, ಈ ಎಲ್ಲಾ ಆಪ್ ಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲವು.,.. ನಿಮ್ಮ ಫೋನಿನಲ್ಲೂ ಇವುಗಳ ಅಗತ್ಯವಿದೆ ಎಂದೆನಿಸಿದರೆ ಖಂಡಿತ ಇನ್ಸ್ಟಾಲ್ ಮಾಡಿಕೊಳ್ಳಿ. ಮತ್ತು ಲೇಖನ ಇಷ್ಟವಾದರೆ ನಿಮ್ಮವರೊಂದಿಗೆ ಹಂಚಿಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  10+ Lesser Known Android Apps That Might Change Your Life. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more