ತಮಿಳುನಾಡು ಜನರಿಗೆ ಸ್ಕ್ರ್ಯಾಚ್ ಕಾರ್ಡ್ ನಿಲ್ಲಿಸಿದ ಗೂಗಲ್ ಪೇ!

By Gizbot Bureau
|

ನಮಗೆಲ್ಲರಿಗೂ ತಿಳಿದಿರುವಂತೆ ಗೂಗಲ್ ಪೇ ಮೂಲಕ ಸ್ಮಾರ್ಟ್ ಫೋನ್ ಸಹಾಯದಿಂದ ಹಣವನ್ನು ಇನ್ನೊಬ್ಬರಿಗೆ ಕಳುಹಿಸುವುದು ಅಥವಾ ಪಡೆಯುವುದನ್ನು ಮಾಡುವುದಕ್ಕೆ ಸಾಧ್ಯವಿದೆ. ಒಮ್ಮೆ ಟ್ರಾನ್ಸ್ಯಾಕ್ಷನ್ ಮುಗಿದ ನಂತರ ಪ್ರತಿ ಬಾರಿಯೂ ಕೂಡ ಬಳಕೆದಾರರ ರಿವಾರ್ಡ್ಸ್ ವಿಭಾಗದಲ್ಲಿ ಗೂಗಲ್ ಪೇ ಸ್ಕ್ರ್ಯಾಚ್ ಕಾರ್ಡ್ ಲಭ್ಯವಾಗುತ್ತದೆ. ಅದೃಷ್ಟವಶಾತ್ ಈ ಸ್ಕ್ಯಾಚ್ ಕಾರ್ಡ್ ನ್ನು ಉಜ್ಜಿದಾಗ ಆಪ್ ನಲ್ಲಿ ಅವರಿಗೆ ಹಣದ ಬಹುಮಾನ ಲಭ್ಯವಾಗುವ ಸಾಧ್ಯತೆ ಇರುತ್ತದೆ.

ತಮಿಳುನಾಡಿಗರಿಗಿಲ್ಲ ರಿವಾರ್ಡ್ಸ್ ಭಾಗ್ಯ:

ತಮಿಳುನಾಡಿಗರಿಗಿಲ್ಲ ರಿವಾರ್ಡ್ಸ್ ಭಾಗ್ಯ:

ಇದೀಗ ತಮಿಳುನಾಡು ಜನರಿಗೆ ಗೂಗಲ್ ಪೇ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ತಮಿಳುನಾಡು ಜನರಿಗೆ ಗೂಗಲ್ ಪೇ ಸ್ಕ್ರ್ಯಾಚ್ ಕಾರ್ಡ್ ನ್ನು ನೀಡುವುದಿಲ್ಲ. ಕೇವಲ ಸ್ಕ್ರ್ಯಾಚ್ ಕಾರ್ಡ್ ಮಾತ್ರವಲ್ಲ ಬದಲಾಗಿ ಯಾವುದೇ ರೀತಿಯ ರಿವಾರ್ಡ್ ಗಳು ಕೂಡ ತಮಿಳುನಾಡು ಜನರಿಗೆ ಗೂಗಲ್ ಪೇ ಮೂಲಕ ಲಭ್ಯವಾಗುವುದಿಲ್ಲ. ಉದಾಹರಣೆಗೆ ದೀಪಾವಳಿ ಸ್ಟಾಂಪ್ ಗಳು ಇತ್ಯಾದಿ ಯಾವುದೂ ಕೂಡ ಸಿಗುವುದಿಲ್ಲ.

ಲಾಟರಿ ನಿಷೇಧ ಕಾನೂನು:

ಲಾಟರಿ ನಿಷೇಧ ಕಾನೂನು:

ವರದಿಗಳ ಪ್ರಕಾರ ಗೂಗಲ್ ಪೇ ತಮಿಳುನಾಡಿನಲ್ಲಿ ಲಾಟರಿ ನಿಷೇಧ ನಿಯಮವನ್ನು ಉಲ್ಲಂಘಿಸಿದೆ. 2003 ರಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ರೀತಿಯ ಲಾಟರಿ ಮಾರಾಟವನ್ನು ನಿಷೇಧಿಸಿ ನಿಯಮವನ್ನು ಜಾರಿಗೆ ತಂದಿದ್ದರು. ಅದರಲ್ಲಿ ಆನ್ ಲೈನ್ ಲಾಟರಿ ಕೂಡ ಸೇರಿದೆ. ಇದು ಜನರನ್ನು ಜೂಜಾಟದಿಂದ ದೂರವಿಡುವ ಉದ್ದೇಶದಿಂದ ತೆಗೆದುಕೊಂಡ ನಿರ್ಧಾರವಾಗಿತ್ತು.2003 ರ ಈ ನಿಯಮದ ಪ್ರಕಾರ ಗೂಗಲ್ ಪೇ ಕೂಡ ಜೂಜಿನ ರೀತಿಯ ಸ್ಕ್ರ್ಯಾಚ್ ಕಾರ್ಡ್ ನೀಡುವುದು ಕಾನೂನು ಬಾಹಿರ ಅನ್ನಿಸಿಕೊಳ್ಳುತ್ತದೆ.

ಗೂಗಲ್ ಪೇ ಜೂಜಾಟ:

ಗೂಗಲ್ ಪೇ ಜೂಜಾಟ:

ವರದಿಗಳು ತಿಳಿಸುವ ಪ್ರಕಾರ ಗೂಗಲ್ ಪೇ ಕೂಡ ಜೂಜಾಟದ ರೀತಿಯೇ ಆಗಿದ್ದು ಜನರಿಗೆ ರಿವಾರ್ಡ್ಸ್ ಗಳನ್ನು ಪಡೆಯುವುದಕ್ಕೆ ಜನರನ್ನು ಪ್ರೇರೇಪಿಸುತ್ತದೆ. ಇದೇ ಕಾರಣಕ್ಕೆ ಇದೀಗ ಗೂಗಲ್ ಪೇ ರಿವಾರ್ಡ್ಸ್ ನ್ನು ತಮಿಳುನಾಡಿನಲ್ಲಿ ಸ್ಥಗಿತಗೊಳಿಸಲಾಗಿದೆ. ಆದರೆ ಈ ನಿರ್ಧಾರವು ಗೂಗಲ್ ಪೇ ಆಪ್ ಬಳಕೆಯನ್ನು ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗಿಸುವ ಸಾಧ್ಯತೆ ಇದೆ. ಯಾಕೆಂದರೆ ಭಾರತದಲ್ಲಿ ತಮಿಳುನಾಡು ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದ್ದು ಒಂದು ವೇಳೆ ತಮಿಳುನಾಡಿನಲ್ಲಿ ಆಪ್ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾದರೆ ಗೂಗಲ್ ಪೇ ದೊಡ್ಡ ಮಟ್ಟದಲ್ಲಿ ಬಳಕೆದಾರರ ಬಳಗವನ್ನು ತಮಿಳುನಾಡಿನಲ್ಲಿ ಕಳೆದುಕೊಳ್ಳಭೇಕಾಗುತ್ತದೆ.

ಗೂಗಲ್ ವಾದ:

ಗೂಗಲ್ ವಾದ:

ಆದರೆ ಗೂಗಲ್ ಈ ಬಗ್ಗೆ ವಾದ ಮಾಡುತ್ತಿದೆ. ಲಾಟರಿ ನಿಷೇಧ ಆಧಾರದ ಮೇಲೆ ಡಿಜಿಟಲ್ ಉತ್ಪನ್ನಗಳನ್ನು ನಿರ್ಬಂಧಿಸುವುದು ಆಫ್ ಲೈನ್ ವಿತರಣಾ ಜಾಲಗಳ ಮೇಲೆ ನಿರ್ಬಂಧ ಹೇರಿದಷ್ಟು ಸರಳವಲ್ಲ ಎಂದು ಹೇಳುತ್ತಿದೆ.ಡಿಜಿಟಲ್ ಉತ್ರನ್ನಗಳಿಗೆ ಜಾಗತಿಕ ವ್ಯಾಪ್ತಿ ಇದ್ದು ಇದಕ್ಕೆ ಈ ನಿಷೇಧ ಹೇರುವುದು ಸರಿಯಲ್ಲ ಎಂದು ಹೇಳುತ್ತಿದೆ. ಆಯ್ದ ಬಳಕೆದಾರರಿಗೆ ಅಂದರೆ ಕೇವಲ ತಮಿಳುನಾಡಿನವರಿಗೆ ಮಾತ್ರವೇ ಗ್ರಾಹಕ ಅನುಭವವನ್ನು ಬದಲಿಸುವುದು ಹೆಚ್ಚು ಸಂಕೀರ್ಣವಾಗಿರುವ ಕೆಲಸವಾಗಿದೆ ಎಂದು ಗೂಗಲ್ ಅಭಿಪ್ರಾಯ ಪಟ್ಟಿದೆ. ಯಾಕೆಂದರೆ ಗ್ರಾಹಕರ ದೇಶದ ಯಾವುದೇ ಪ್ರದೇಶದಿಂದ ಬೇಕಿದ್ದರೂ ಕೂಡ ಮೊಬೈಲ್ ಮೂಲಕ ಆಪ್ ನ್ನು ಆಕ್ಸಿಸ್ ಮಾಡುವುದಕ್ಕೆ ಅವಕಾಶವಿರುತ್ತದೆ ಎಂದು ಅದು ಹೇಳಿದೆ.

ಗೂಗಲ್ ಪೇ ಮೇಲೆ ಪರಿಣಾಮ:

ಗೂಗಲ್ ಪೇ ಮೇಲೆ ಪರಿಣಾಮ:

ಗೂಗಲ್ ಪೇ ಆಪ್ ನಲ್ಲಿ ಜನರು ಟ್ರಾನ್ಸ್ಯಾಕ್ಷನ್ ಮಾಡುವುದಕ್ಕೆ ಇರುವ ಪ್ರಮುಖ ಕಾರಣವೇ ಗೂಗಲ್ ಪೇ ನಲ್ಲಿ ಲಭ್ಯವಾಗುವ ರಿವಾರ್ಡ್ ಗಳು ಎಂದು ಹೇಳಲಾಗುತ್ತದೆ. ಒಂದು ವೇಳೆ ಆಪ್ ಇದೀಗ ರಿವಾರ್ಡ್ಸ್ ಗಳಿಗೆ ನಿರ್ಬಂಧ ಹೇರಿಕೊಂಡರೆ ಗೂಗಲ್ ಪೇ ಬಳಕೆಯ ಮೇಲೆ ಭವಿಷ್ಯದಲ್ಲಿ ಪರಿಣಾಮವಾಗುವುದು ಗ್ಯಾರೆಂಟಿ ಎಂಬುದು ಹಲವರ ಅಭಿಪ್ರಾಯ. ಆದರೆ ಇದಕ್ಕೆ ಜನರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಕಾದುನೋಡಬೇಕಿದೆ.

Best Mobiles in India

English summary
Google Pay Scratch Cards Will Not Be Available In Tamilnadu

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X