ವಾಟ್ಸ್‌ಆಪ್‌ನ ಈ ಹೊಸ ಆಯ್ಕೆಯನ್ನು ಬಳಕೆ ಮಾಡುವ ಮುನ್ನ ಎಚ್ಚರ! ಸಮಸ್ಯೆ ಎದುರಿಸಬೇಕಾಗಬಹುದು!
ವಾಟ್ಸ್‌ಆಪ್ ಈಗಾಗಲೇ ಡಿಲೀಟ್ ಫಾರ್ ಎವರಿವನ್ ಆಯ್ಕೆಯನ್ನು ಬಿಡುಗಡೆ ಮಾಡಿತ್ತು. ಇದು ನೀವು ಕಳುಹಿಸಿದ ಮೇಸೆಜ್ ಅನ್ನು ಬೇಡ ಎನ್ನಿಸಿದಲ್ಲಿ ನೀವು ಡೀಲಿಟ್ ಮಾಡಬಹುದಾಗಿತ್ತು. ಅದುವೇ ಅವರು ಓದುವ ಮುನ್ನವೇ ಡಿಲೀಟ್ ಮಾಡಬಹುದಾಗಿದೆ ಆದರೆ ಆ ಮೇಸೆಜ್ ಇನ್ನುವೇ ಡಿವೈಸ್‌ನಲ್ಲಿ ಇರಲಿದೆ. ನೀವು ಡಿಲೀಟ್ ಮಾಡಿದ ಮೇಸೆಜ್ ಅನ್ನು ಸ್ವೀಕರಿಸಿದರು ಓದಬಹುದಾಗಿದೆ.

ಓದಿರಿ: UC ಬ್ರೌಸರ್ ಬಳಕೆ ತಕ್ಷಣವೇ ನಿಲ್ಲಿಸಿ: ಪ್ಲೇ ಸ್ಟೋರಿನಿಂದ ಗೂಗಲ್ ಈ ಆಪ್ ತೆಗೆದು ಹಾಕಿದ್ದು ಆತಂಕಕ್ಕೆ ಕಾರಣವಾಗಿದೆ.!
ಈ ಕುರಿತು ಹಲವು ಬ್ಲಾಗರ್ ಗಳು ಮಾಹಿತಿಯನ್ನು ಹಂಚಿಕೊಂಡಿದ್ದು, ಡಿಲೀಟ್ ಮಾಡಿದ ಮೇಸೆಜ್ ಗಳು ಆಂಡ್ರಾಯ್ಡ್ ಫೋನಿನ ನೋಟಿಫಿಕೇಷನ್ ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದರಿಂದಾಗಿ ನೀವು ಕಳುಹಿಸಿದ ಮೇಸೆಜ್ ಅನ್ನು ಅವರು ಓದುವ ಸಾಧ್ಯತೆ ದಟ್ಟವಾಗಿದೆ.

ಈ ಸೇವೆ ಬಳಸು ಮುನ್ನ ಎಚ್ಚರ:
ಕಳುಹಿಸಿದ ಮೇಸೆಜ್ ಡಿಲೀಟ್ ಮಾಡಬಹುದು ಎನ್ನುವ ಧೈರ್ಯದಿಂದ ನೀವು ಮೇಸೆಜ್ ಅನ್ನು ಕಳುಹಿಸಿದರೆ ಅದು ನಿಮ್ಮ ತಪ್ಪಾಗಲಿದೆ. ಏಕೆಂದರೆ ನೀವು ಮೇಸೆಜ್ ಡಿಲೀಟ್ ಮಾಡಿದರು ಸಹ ಅವರು ಓದಬಹುದಾಗಿದೆ. ಇದರಿಂದಾಗಿ ಎಚ್ಚರದಿಂದ ಇರುವುದು ಅಗತ್ಯ.

ಇದನ್ನು ಹ್ಯಾಕ್ ಮಾಡಬಹುದು:
ಪ್ಲೇ ಸ್ಟೋರಿನಲ್ಲಿಯೇ ಲಭ್ಯವಿರುವ ಥರ್ಡ್ ಪಾರ್ಟಿ ಆಪ್‌ಗಳ ಸಹಾಯದಿಂದ ವಾಟ್ಸ್‌ಆಪ್ ಡಿಲೀಟ್ ಮೇಸೆಜ್ ಅನ್ನು ಓದುವ ಅವಕಾಶವು ಲಭ್ಯವಿದೆ ಎನ್ನಲಾಗಿದೆ. ಇದಕ್ಕಾಗಿ ನೋಟಿಫೀಕೇಷನ್ ಹಿಸ್ಟರಿ ಎನ್ನುವ ಆಪ್‌ವೊಂದು ಸಹಾಯ ಮಾಡಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ನ್ಯಾಗದಲ್ಲಿ:
ಆಂಡ್ರಾಯ್ಡ್ ನ್ಯಾಗಾಗಿಂತಲೂ ಹೆಚ್ಚಿನ ಆಂಡ್ರಾಯ್ಡ್ ಬಳಸುತ್ತಿರುವವರು ಡಿಲೀಟ್ ಮಾಡಿದ ಮೇಸೆಜ್ ಅನ್ನು ಸಹ ನೋಡಬಹುದಾಗಿದೆ. ಇದರಿಂದಾಗಿ ನೀವು ಮೇಸೆಜ್ ಡಿಲೀಟ್ ಮಾಡಿದರು ಯಾವುದೇ ಪ್ರಯೋಜನವಿಲ್ಲ ಎನ್ನಲಾಗಿದೆ.

ಶೀಘ್ರವೇ ಸರಿ ಮಾಡಲಿದೆ:
ಈ ಆಯ್ಕೆಯನ್ನು ಶೀಘ್ರವೇ ವಾಟ್ಸ್‌ಆಪ್ ಬದಲಾಯಿಸಲಿದೆ ಎನ್ನಲಾಗಿದೆ. ಇದಕ್ಕೆ ಪರಿಹಾರ ನೀಡುವ ಸಲುವಾಗಿ ವಾಟ್ಸ್‌ಆಪ್ ಡೆವಲಪರ್ ಗಳು ಕಾರ್ಯನಿರತರಾಗಿದ್ದಾರೆ ಎನ್ನಲಾಗಿದೆ.


Click it and Unblock the Notifications








