ಯೂಟ್ಯೂಬ್‌ನಲ್ಲಿ ಬಂತೂ 3 ಹೊಸ ಫೀಚರ್‌..! ಸರ್ಚಿಂಗ್ ಈಗ ಇನ್ನೂ ಸುಲಭ..!

By Gizbot Bureau
|

ಗೂಗಲ್ ಒಡೆತನದ ಜಗತ್ತಿನ ಅತಿದೊಡ್ಡ ವಿಡಿಯೋ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಬಳಕೆದಾರರಿಗಾಗಿ ಪ್ರಮುಖ ಮೂರು ಬದಲಾವಣೆಗಳನ್ನು ಘೋಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ತಲುಪಲಿವೆ. ಹೊಸ ಫೀಚರ್‌ಗಳು ಬಳಕೆದಾರನಿಗೆ ಯೂಟ್ಯೂಬ್‌ ಹೋಮ್‌ ಪೇಜ್‌ನ್ನು ನಿಯಂತ್ರಿಸಲು ಹೆಚ್ಚಿನ ಆಯ್ಕೆಗಳನ್ನು ನೀಡುತ್ತವೆ. ನಿಮಗೆ ಬೇಕಾದ ವಿಡಿಯೋಗಳು, ಚಾನಲ್‌ಗಳು ಹೋಮ್‌ಪೇಜ್‌ನಲ್ಲಿ ಕಾಣುವಂತೆ ಮಾಡಿಕೊಳ್ಳುವ ಆಯ್ಕೆ ದೊರೆಯುತ್ತದೆ. ಇದರ ಜೊತೆ ಅನೇಕ ಬದಲಾವಣೆಗಳನ್ನು ಯೂಟ್ಯೂಬ್‌ ತನ್ನ ಬಳಕೆದಾರನಿಗೆ ನೀಡುತ್ತಿದೆ. ಅವು ಯಾವುವು ಅಂತಿರಾ..? ಮುಂದೆ ಓದಿ.

ಸುಲಭ ಸರ್ಚಿಂಗ್'

ಸುಲಭ ಸರ್ಚಿಂಗ್'

ಹೊಸ ಫೀಚರ್‌ನಿಂದ ವಿಡಿಯೋ ಸರ್ಚಿಂಗ್ ಇನ್ನು ಸುಲಭವಾಗಲಿದೆ. ಒಂದು ಅಥವಾ ಎರಡು ಪದಗಳ ಕೀವರ್ಡ್‌ಗಳಿಂದ ನೀವು ನೇರವಾಗಿ ವಿಡಿಯೋ ಸರ್ಚಿಂಗ್ ರಿಸಲ್ಟ್ ನೋಡಬಹುದಾಗಿದೆ. ಇದರಿಂದ ಮ್ಯಾನ್ಯುಯಲ್ ಆಗಿ ಟೈಫ್ ಮಾಡಿ ವಿಡಿಯೋ ಹುಡುಕುವ ಶ್ರಮ ಹಾಗೂ ಸಮಯ ತಪ್ಪುತ್ತದೆ. ನೀವು ಏನನ್ನು ವೀಕ್ಷಿಸುತ್ತಿರೋ ಆ ವಿಡಿಯೋಗಳು ಪರ್ಸನಲಾಯಜ್ ಆಗಿ ನಿಮ್ಮ ಹೋಮ್‌ಪೇಜ್‌ನಲ್ಲಿ ಬರುತ್ತದೆ. ಈ ಫೀಚರ್ ಸದ್ಯ ಯೂಟ್ಯೂಬ್ ಆಂಡ್ರಾಯ್ಡ್ ಆಪ್‌ನಲ್ಲಿ ಇಂಗ್ಲಿಷ್ ಸೈನಡ್‌ ಬಳಕೆದಾರರಿಗೆ ಲಭ್ಯವಿದ್ದು, iOS, ಡೆಸ್ಕ್‌ಟಾಪ್‌ ಮತ್ತು ಇತರೆ ಭಾಷೆಗಳಲ್ಲಿ ಈ ಫೀಚರ್‌ ಸದ್ಯದಲ್ಲಿಯೇ ಬರಲಿದೆ.

ಸುಧಾರಿತ ಸಲಹೆ

ಸುಧಾರಿತ ಸಲಹೆ

ಇನ್ನು, ಎರಡನೇ ಫೀಚರ್ ನೋಡುವುದಾದರೆ, ನೀವು ವೀಕ್ಷಿಸಲು ಇಷ್ಟಪಡದ ಚಾನಲ್‌ಗಳ ಸಲಹೆಗಳನ್ನು ರಿಮೂವ್ ಮಾಡುವ ಫೀಚರ್ ಆಗಿದೆ. ಮುಖಪುಟದಲ್ಲಿ ಅಥವಾ ಅಪ್ ನೆಕ್ಸ್ಟ್‌ ವೀಡಿಯೊದ ಪಕ್ಕದಲ್ಲಿರುವ ಮೂರು ಡಾಟ್ ಮೆನುವಿನ ಮೇಲೆ ಟ್ಯಾಪ್ ಮಾಡಿ ಮತ್ತು ಡೊಂಟ್ ರೆಕಮೆಂಡ್ ಚಾನೆಲ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇದರಿಂದ ನಿಮ್ಮ ಸರ್ಚ್ ಟ್ಯಾಬ್, ಸಬ್‌ಸ್ಕ್ರಿಪ್ಷನ್ ಅಥವಾ ಟ್ರೆಂಡಿಂಗ್ ಟ್ಯಾಬ್‌ನಿಂದ ಆ ಚಾನಲ್‌ನ ವಿಡಿಯೋಗಳು ಮಾಯವಾಗುತ್ತವೆ. ಈಗಾಗಲೇ ಈ ಫೀಚರ್ ಕೆಲವು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದ್ದು, ಶೀಘ್ರದಲ್ಲಿಯೇ ಡೆಸ್ಕ್‌ಟಾಪ್ ಆವೃತ್ತಿಗಳಲ್ಲೂ ಕಾಣಿಸಿಕೊಳ್ಳಲಿದೆ.

ವಿಡಿಯೋ ಮಾಹಿತಿ

ವಿಡಿಯೋ ಮಾಹಿತಿ

ಯೂಟ್ಯೂಬ್‌ನ ಹೊಸ ಫೀಚರ್ ಬಳಕೆದಾರರಿಗೆ ವಿಡಿಯೋ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಣ್ಣ ಬಾಕ್ಸ್‌ನಲ್ಲಿ ನೀಡಲು ಆರಂಭಿಸಿದೆ. ನೀವು ಚಂದಾದಾರಗಿಲ್ಲದ ಚಾನೆಲ್‌ಗಳ ವಿಡಿಯೋಗಳನ್ನು ಈ ಫೀಚರ್ ಪ್ರದರ್ಶಿಸುತ್ತದೆ. ಈ ಫೀಚರ್ ನೀವು ಇಷ್ಟಪಡಬಹುದಾದ ಹೊಸ ಚಾನಲ್‌ಗಳ ವಿಡಿಯೋಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಈ ವಿಡಿಯೋಗಳು ನಿಮ್ಮ ಮುಖಪುಟದಲ್ಲಿ ಏಕೆ ಬರುತ್ತಿವೆ ಎಂಬುದನ್ನು ತಿಳಿಸುವುದು ನಮ್ಮ ಗುರಿಯಾಗಿದೆ ಅಂತ ಯೂಟ್ಯೂಬ್‌ ಬ್ಲಾಗ್‌ನಲ್ಲಿ ವಿವರಿಸಲಾಗಿದೆ. ಈ ಫೀಚರ್ ಈಗಾಗಲೇ iOS ಆವೃತ್ತಿಯಲ್ಲಿ ಲಭ್ಯವಿದ್ದು, ಶೀಘ್ರದಲ್ಲಿಯೇ ಆಂಡ್ರಾಯ್ಡ್ ಮತ್ತು ಡೆಸ್ಕ್‌ಟಾಪ್‌ ಬಳಕೆದಾರರಿಗೆ ಸಿಗಲಿದೆ.

Best Mobiles in India

Read more about:
English summary
YouTube Silently Releases Three New Major Features

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X