ಎಲ್ ಜಿ ಎ 520: ನೋಡಿ ಇದು 3ಡಿ ಲ್ಯಾಪ್ ಟಾಪ್

Posted By: Staff

ಎಲ್ ಜಿ ಎ 520: ನೋಡಿ ಇದು 3ಡಿ ಲ್ಯಾಪ್ ಟಾಪ್
ಗ್ರಾಹಕ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಎಲ್ ಜಿ ಯಾವತ್ತೂ ಮುಂದು. ಇದೀಗ ಕಂಪನಿಯು LG A520 3D ಲ್ಯಾಪ್ ಟಾಪ್ ಹೊರತಂದಿದೆ. ಲ್ಯಾಪ್ ಟಾಪ್ ನಲ್ಲಿ ಚಿತ್ರಗಳನ್ನು, ದೃಷ್ಯಗಳನ್ನು ತ್ರಿಡಿ ರೂಪದಲ್ಲಿ ನೋಡಲು ಬಯಸುವರಿಗೆ ಇದು ಖಂಡಿತಾ ಉತ್ತಮ ಆಯ್ಕೆ. ಇದರಲ್ಲಿರುವ ಫೀಚರ್ಸ್ ಮತ್ತು ವಿಶೇಷತೆಗಳು ನಿಮಗೆ ಖಂಡಿತಾ ಇಷ್ಟವಾಗಬಹುದು.

ಇದರಲ್ಲಿರುವ ಕ್ವಿಕ್ ಆಂಡ್ ಈಸಿ ಕಂಪ್ಯೂಟಿಂಗ್ ನಿಮಗೆ ಇಷ್ಟವಾಗಬಹುದು. ಅಂದ್ರೆ ಇದು ಎರಡನೇ ತಲೆಮಾರಿನ ನೂತನ ಕ್ವಾಡ್ ಪವರ್ ಹೊಂದಿದೆ. ಸುಲಭವಾಗಿ ನಿರ್ವಹಿಸಬಹುದಾದ ಇದರ ಫೀಚರುಗಳೊಂದಿಗೆ ಅನನ್ಯ 3ಡಿ ವೀಕ್ಷಣೆ ಬೋನಸ್ ಆಗಿ ದೊರಕುತ್ತದೆ.

LG A520 3ಡಿ ಲ್ಯಾಪ್ ಟಾಪ್ 54 ಬಿಟ್ ಪ್ರೊಸೆಸರ್, ವಿಂಡೋಸ್ 7 ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದರಲ್ಲಿ ಎರನೇ ಪೀಳಿಗೆಯ ಇಂಟೆಲ್ ಕೋರ್ ಐ7 ಪ್ರೊಸೆಸರ್ ಇದೆ. ಅಂದ ಹಾಗೆ ಈ ಲ್ಯಾಪ್ ಟಾಪ್ ದರ ಎಷ್ಟು ಎಂದು ಕೇಳುತ್ತೀರಾ? ಜಾಸ್ತಿಯೇನಿಲ್ಲ. 55 ಸಾವಿರ ರು.ನಿಂದ 65 ಸಾವಿರ ರು. ಆಸುಪಾಸಿನಲ್ಲಿ ಈ ಲ್ಯಾಪ್ ಟಾಪ್ ಖರೀದಿಸಬಹುದು.

ಇಷ್ಟು ದುಡ್ಡು ಕೊಡಲು ಇದರಲ್ಲಿ ಏನಿದೆ ಅಂತ ಪ್ರಶ್ನಿಸದಿರಿ. ಏನಿಲ್ಲ ಎಂದು ಅಂದುಕೊಂಡು ಮುಂದಿನ ಫೀಚರ್ಸ್ ಮತ್ತು ವಿಶೇಷತೆಗಳ ಮೇಲೆ ಕಣ್ಣಾಡಿಸಿ. ಇಷ್ಟವಾದರೆ ಖರೀದಿಸಿ. ಇಲ್ಲವಾದರೆ ನಿಮಗೆ ಇಷ್ಟವಾಗುವ ಲ್ಯಾಪ್ ಟಾಪ್ ಇಲ್ಲಿ ಆಯ್ಕೆ ಮಾಡಿರಿ.

ವಿಶೇಷತೆಗಳು
* 3ಡಿ ಸೌಲಭ್ಯ
* ಇಂಟೆಲ್ ಕೋರ್ ಐ7 ಪ್ರೊಸೆಸರ್
* ವಿಂಡೋಸ್ 7 ಅಪರೇಟಿಂಗ್ ಸಿಸ್ಟಮ್
* 15.6 ಇಂಚಿನ 3ಡಿ, ಎಲ್ ಇಡಿ ಎಲ್ ಸಿಡಿ ಡಿಸ್ ಪ್ಲೇ
* 8 ಜಿಬಿ ಮೆಮೊರಿ ಸಂಗ್ರಹ ಸಾಮರ್ಥ್ಯ
* 750 ಜಿಬಿ ಹಾರ್ಡ್ ಡ್ರೈವ್ ಸಾಮರ್ಥ್ಯ
* NVIDIA ಗ್ರಾಫಿಕ್ಸ್ ಮೆಮೊರಿ ಕಾರ್ಡ್
* 802.11 b/g/ n ವೈಫೈ ಕನೆಕ್ಟಿವಿಟಿ, ಬ್ಲೂಟೂಥ್
* ಲ್ಯಾಪ್ ಟಾಪ್ ತೂಕ: 2.70 ಕೆ.ಜಿ.
* ಫಿಂಗರ್ ಪ್ರಿಂಟ್ ರೀಡರ್ ಇತ್ಯಾದಿ ಭದ್ರತಾ ಫೀಚರುಗಳು
* 2ಡಿ ಮತ್ತು 3ಡಿ ಪರಿವರ್ತನೆಗೆ ಏಕೀಕೃತ ಎಲ್ ಇಡಿ ಇಂಡಿಕೇಟರ್
* DLNA ತಂತ್ರಜ್ಞಾನದ 3ಡಿ ಸೌಂಡ್ ಸೌಲಭ್ಯ
* RAM ಸಾಮರ್ಥ್ಯ: 4ಜಿಬಿ ಡಿಡಿಆರ್3 RAM
* 1.3 ಮೆಗಾ ಫಿಕ್ಸೆಲ್ ವೆಬ್ ಕ್ಯಾಮ್(ವಿಡಿಯೋ ಚಾಟ್ ಸೂಪರ್)
* ದರ: 55-65 ಸಾವಿರ ರು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot