Subscribe to Gizbot

ಆಕಾಶ್‌-4 ಟ್ಯಾಬ್ಲೆಟ್‌ ಮಾರ್ಚ್‌ನಲ್ಲಿ ಬಿಡುಗಡೆ: ಸಿಬಲ್‌

Posted By:

ಆರಂಭದಿಂದ ವಿದ್ಯಾರ್ಥಿಗಳ ಕೈ ಸೇರುವವರೆಗೆ ಗೊಂದಲದ ಗೂಡಾಗಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಕಾಶ್‌ 4 ಟ್ಯಾಬ್ಲೆಟ್‌ ಮಾರ್ಚ್‌ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಆಕಾಶ್‌ ಟ್ಯಾಬ್ಲೆಟ್‌ ಯೋಜನೆ ರೂವಾರಿ ಕೇಂದ್ರ ದೂರಸಂಪರ್ಕ ಸಚಿವ ಕಪಿಲ್‌ ಸಿಬಲ್‌ ಆಕಾಶ್‌ 4 ಟ್ಯಾಬ್ಲೆಟ್‌ನ್ನು 3,999 ಬೆಲೆಯಲ್ಲಿ ಮಾರ್ಚ್‌ ಕೊನೆಯ ವಾರದಲ್ಲಿ ವಿದ್ಯಾರ್ಥಿ‌ಗಳಿಗೆ ವಿತರಿಸುವುದಾಗಿ ಹೇಳಿದ್ದಾರೆ.

7 ಇಂಚಿನ ಕೆಪಾಸಿಟವ್‌ ಟಚ್‌ಸ್ಕ್ರೀನ್‌,4ಜಿಬಿ ಆಂತರಿಕ ಮೆಮೊರಿ,32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,ವೈಫೈ,3ಜಿ,4ಜಿ, ಮುಂದುಗಡೆ ಕ್ಯಾಮೆರಾದೊಂದಿಗೆ ಆಕಾಶ್‌-4 ಟ್ಯಾಬ್ಲೆಟ್‌  ಬಿಡುಗಡೆಯಾಗಲಿದೆ.

 ಆಕಾಶ್‌-4 ಟ್ಯಾಬ್ಲೆಟ್‌ ಮಾರ್ಚ್‌ನಲ್ಲಿ ಬಿಡುಗಡೆ: ಸಿಬಲ್‌

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಕಪಿಲ್ ಸಿಬಲ್‌‌ ವಿದ್ಯಾರ್ಥಿ‌‌ಗಳಿಗೆ ಕಡಿಮೆ ಬೆಲೆಯ ಆಕಾಶ್ ಟ್ಯಾಬ್ಲೆಟ್‌‌‌ ವಿತರಿಸುವ ಕನಸು ಕಂಡಿದ್ದರು.ಆರಂಭದಲ್ಲಿ ಭಾರತೀಯ ಮೂಲದ ಎಚ್‌ಸಿಎಲ್ ಕಂಪೆನಿ ಕಡಿಮೆ ಬೆಲೆಯ ಸಾಕ್ಷತ್‌ ಹೆಸರಿನ ಟ್ಯಾಬ್ಲೆಟ್‌ ಅಭಿವೃದ್ಧಿ ಪಡಿಸಿತ್ತು.ಆಂಡ್ರಾಯ್ಡ್‌‌ ಫ್ರೋ ಓಎಸ್‌ ಹೊಂದಿದ್ದ ಈ ಟ್ಯಾಬ್ಲೆಟ್‌ ಬಿಡುಗಡೆಯಾಗುವ ಮೊದಲೇ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಟ್ಯಾಬ್ಲೆಟ್‌‌‌ನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರಲಿಲ್ಲ.

ಎಚ್‌ಸಿಎಲ್‌ ಕಂಪೆನಿಯ ಬಳಿಕ ಆಕಾಶ್‌ ಟ್ಯಾಬ್ಲೆಟ್‌ನ ಗುತ್ತಿಗೆಯನ್ನು ಕೆನಡಾ ಮೂಲದ ಡೇಟಾವಿಂಡ್‌ ಪಡೆದುಕೊಂಡಿತ್ತು.ಮೊದಲ ಆಕಾಶ್‌ ಟ್ಯಾಬ್ಲೆಟ್‌ 2011 ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಬಳಿಕ ಇದರಲ್ಲೂ ಸಾಕಷ್ಟು ತೊಂದರೆ ಕಾಣಿಸಿಕೊಂಡಿತ್ತು.

ಆಕಾಶ್ ಟ್ಯಾಬ್ಲೆಟ್‌ ಉತ್ಪಾದನೆ ಸರಿಯಾಗಿ ಆಗದೇ ವಿದ್ಯಾರ್ಥಿ‌‌ಗಳಿಗೆ ಹೇಳಿದ ಸಮಯಕ್ಕೆ ಟ್ಯಾಬ್ಲೆಟ್‌ನ್ನು ವಿತರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿರಲಿಲ್ಲ.2013 ಅಗಸ್ಟ್‌‌ನಲ್ಲಿ ಹೊಸದಾಗಿ ಬಿಡುಗಡೆಯಾಗಲಿರುವ ಆಕಾಶ್‌-4 ಟ್ಯಾಬ್ಲೆಟ್‌ನ್ನು ಜನವರಿಯಲ್ಲಿ ಬಿಡುಗಡೆ ಮಾಡುವುದಾಗಿ ಕಪಿಲ್‌ ಸಿಬಲ್‌ ಪ್ರಕಟಿಸಿದ್ದರು.

ಕಳೆದ ಡಿಸೆಂಬರ್‌ನಲ್ಲಿ ಆಕಾಶ್‌ ಟ್ಯಾಬ್ಲೆಟ್‌‌ಗೆ ಸಂಬಂಧಿಸಿದಂತೆ ಸರ್ಕಾರ ಕೆಲವು ಇಲಾಖೆಯ ಅಸಹಕಾರದಿಂದಾಗಿ ಟ್ಯಾಬ್ಲೆಟ್‌ ಸರಿಯಾಗಿ ವಿತರಣೆಯಾಗುತ್ತಿಲ್ಲ ಎಂದು ಕಪಿಲ್‌ ಸಿಬಲ್‌ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot