Subscribe to Gizbot

ಗೋ ಟೆಕ್‌ ಫನ್‌ಟ್ಯಾಬ್‌ ಕ್ಲಾಸ್‌ 9.1 ಟ್ಯಾಬ್ಲೆಟ್‌ ಬಂದಿದೆ

Posted By: Super

ಗೋ ಟೆಕ್‌ ಫನ್‌ಟ್ಯಾಬ್‌ ಕ್ಲಾಸ್‌ 9.1 ಟ್ಯಾಬ್ಲೆಟ್‌ ಬಂದಿದೆ
ಬಜೆಟ್‌ ಟ್ಯಾಬ್ಲೆಟ್‌ ತಯಾರಿಕಾ ಸಂಸ್ಥೆಯೆಂದೇ ಗುರ್ತಿಸಿಕೊಂಡಿರುವ ಗೋ ಟೆಕ್‌ ಡಿಜಿಟಲ್‌ ಸಂಸ್ಥೆಯು ಫನ್‌ಟ್ಯಾಬ್ ಸರಣಿಯಲ್ಲಿ ಈಗಾಗಲೇ ಬಜೆಟ್ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಂದಹಾಗೆ ಗೋ ಟೆಕ್‌ ಇತ್ತೀಚೆಗಷ್ಟೇ ವಿದ್ಯಾರ್ಥಿಗಳಿಗೆಂದೇ ವಿಶೇಷವಾಗಿ ಫನ್‌ಟ್ಯಾಬ್‌ ಕ್ಲಾಸ್‌ 9.1 ಹೆಸರಿನ ಟ್ಯಾಬ್ಲೆಟ್‌ ತಂದಿದ್ದು ರೂ. 7,999 ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 9.1 ಇಂಚಿನ ದೊಡ್ಡ ದರ್ಶಕ ಹೊಂದಿರುವ ನೂತನ ಟ್ಯಾಬ್ಲೆಟ್‌ನಲ್ಲಿ ಆಂಡ್ರಾಯ್ಡ್‌ ಐಸ್‌ ಕ್ರೀಂ ಸ್ಯಾಂಡ್ವಿಚ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಹಾಗಿದ್ದಲ್ಲಿ ಬನ್ನಿ ವಿದ್ಯಾರ್ಥಿಗಳಿಗೆಂದೇ ಬಿಡುಗಡೆ ಮಾಡಲಾಗಿರುವ ಗೋ ಟೆಕ್‌ ಫನ್‌ಟ್ಯಾಬ್‌ ಕ್ಲಾಸ್‌ 9.1 ಟ್ಯಾಬ್ಲೆಟ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ಒಮ್ಮೆ ನೋಡಿ ಬರೋಣ.

ವಿಶೇಷತೆ:

ದರ್ಶಕ: ಫನ್‌ಟ್ಯಾಬ್‌ ಕ್ಲಾಸ್‌ 9.1 ಟ್ಯಾಬ್ಲೆಟ್‌ನಲ್ಲಿ 9.1 ಇಂಚಿನ 5 ಪಾಯಿಂಟ್‌ ಮಲ್ಟಿ-ಟಚ್‌ ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ದರ್ಶಕದೊಂದಿಗೆ 800 x 480 ನ ಪಿಕ್ಸಲ್‌ ರೆಸೆಲ್ಯೂಷನ್‌ ನೀಡಲಾಗಿದೆ.

ಪ್ರೊಸೆಸರ್‌: ಉತ್ತಮ ಸ್ಪೀಡ್‌ ಹೊಂದಿರುವ 1.5GHz ಪ್ರೊಸೆಸರ್‌ ನೀಡಲಾಗಿದೆ.

ಆಪರೇಟಿಂಗ್‌ ಸಿಸ್ಟಂ: ಉಳಿದೆಲ್ಲಾ ಬಜೆಟ್‌ ಟ್ಯಾಬ್ಲೆಟ್‌ಗಳಂತೆಯೇ ಫನ್‌ಟ್ಯಾಬ್‌ ಕ್ಲಾಸ್‌ 9.1 ನಲ್ಲಿಯೂ ಕೂಡಾ ಆಂಡ್ರಾಯ್ಡ್‌ ಐಸಿಎಸ್‌ 4.0 ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಕ್ಯಾಮೆರಾ: ವಿಡಿಯೋ ಕರೆಗಾಗಿ ಮುಂಬದಿಯ 0.3MP ಕ್ಯಾಮೆರಾ ನೀಡಲಾಗಿದ್ದು, ಹಿಂಬದಿಯ ಕ್ಯಾಮೆರಾ ಇಲ್ಲವಾಗಿದೆ.

ಸ್ಟೋರೇಜ್‌: ಈ ವಿಚಾರದಲ್ಲಿ ಫನ್‌ಟ್ಯಾಬ್‌ ಕ್ಲಾಸ್‌ 9.1 ಟ್ಯಾಬ್ಲೆಟ್‌ನಲ್ಲಿ 8 GB ಆನ್‌ಬೋರ್ಡ್‌ ಸ್ಟೋರೇಜ್‌, 1 GB RAM ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ನೀಡಲಾಗಿದ್ದು 32 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಕನೆಕ್ಟಿವಿಟಿ: ವೈ-ಫೈ ಹಾಘೂ ಡಾಂಗಲ್‌ ಮೂಲಕ 3ಜಿ ಕನೆಕ್ಟಿವಿಟಿ ಫೀಚರ್ಸ್‌ ನೀಡಲಾಗಿದೆ.

ಬ್ಯಾಟರಿ: ಫನ್‌ಟ್ಯಾಬ್‌ ಕ್ಲಾಸ್‌ 9.1 ಟ್ಯಾಬ್ಲೆಟ್‌ನಲ್ಲಿ 5,000 mAh ಬ್ಯಾಟರಿ ನೀಡಲಾಗಿದ್ದು 6 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೀಡುತ್ತದೆ.

ಹೆಚ್ಚುವರಿ ಫೀಚರ್ಸ್‌

ಅಲ್ಲದೆ ಫನ್‌ಟ್ಯಾಬ್‌ ಕ್ಲಾಸ್‌ 9.1 ಟ್ಯಾಬ್ಲೆಟ್‌ನಲ್ಲಿ ಮೈ ನ್ಯೂಸ್‌ ಆಪ್‌, ಎಡು ಟಿವಿ, ಇ-ಬುಕ್‌ ರೀಡರ್‌, ಹೆಲ್ತ್‌ ಆಪ್‌, ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ನಂತಹ ಪ್ರೀ ಲೋಡೆಡ್‌ ಆಪ್ಸ್‌ ನೀಡಲಾಗಿದೆ.

ಬೆಲೆ ಹಾಗೂ ಲಭ್ಯತೆ

ಖರೀದಿಸುವುದಾದರೆ ನೂತನ ಗೋ ಟೆಕ್‌ ಫನ್‌ಟ್ಯಾಬ್‌ ಕ್ಲಾಸ್‌ 9.1 ಆಂಡ್ರಾಯ್ಡ್‌ ಐಸಿಎಸ್‌ ಟ್ಯಾಬ್ಲೆಟ್‌ ರೂ. 7,999 ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

Read In English...

ಟಾಪ್‌ 5 ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಟ್ಯಾಬ್ಲೆಟ್ಸ್‌

10.1 ಇಂಚಿನ ಟಾಪ್‌ 5 ಆಂಡ್ರಾಯ್ಡ್‌ ಐಸಿಎಸ್‌ ಟ್ಯಾಬ್ಲೆಟ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot