ನವೆಂಬರ್‌ನಲ್ಲಿ ಗೂಗಲ್ ಹೊಸ ಟ್ಯಾಬ್ಲೆಟ್ ಭಾರತದಲ್ಲಿ ಬಿಡುಗಡೆ
ಗೂಗಲ್ ಹೊಸ ನೆಕ್ಸಸ್ 7 ಟ್ಯಾಬ್ಲೆಟ್ 2 ಭಾರತದಲ್ಲಿ ಖರೀದಿಸಬೇಕು ಎಂದು ಯೋಚಿಸುತ್ತಿರುವ ನೆಕ್ಸಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್.ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ 2 ಮುಂದಿನ ತಿಂಗಳು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಏಸಸ್ ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಕಳೆದ ಜುಲೈನಲ್ಲಿ ಆಂಡ್ರಾಯ್ಡ್ ಜೆಲ್ಲಿ ಬೀನ್ 4.3 ಅಪ್‌ಡೇಟ್ ಆವೃತ್ತಿ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು.ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ ಭಾರತದ ಮಾರುಕಟ್ಟೆಯಲ್ಲಿ ಇನ್ನೂ ಬಿಡುಗಡೆಯಾಗಿರಲಿಲ್ಲ.
ಗೂಗಲ್ ಭಾರತದ ಮಾರುಕಟ್ಟೆಗೆ ನೆಕ್ಸಸ್ ಸರಣಿಯ ಯಾವುದೇ ಹೊಸ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಬಿಡುಗಡೆಯಾದ ಮೂರೇ ತಿಂಗಳಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಉದಾಹರಣೆ ಇಲ್ಲ.ಈ ಹಿಂದೆ ಬಿಡುಗಡೆಯಾದ ನೆಕ್ಸಸ್ 7 ಟ್ಯಾಬ್ಲೆಟ್‌ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾದ 9 ತಿಂಗಳ ಬಳಿಕ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು.
ಆದರೆ ಈ ಬಾರಿ ಮುಂದಿನ ತಿಂಗಳು ಆಪಲ್ ಐಫೋನ್ 5 ಎಸ್ ಮತ್ತು 5 ಸಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಈ ಹೊಸ ಟ್ಯಾಬ್ಲೆಟ್‌ನ್ನು ಗೂಗಲ್ ಬಿಡುಗಡೆ ಮಾಡಲು ಮುಂದಾಗುತ್ತಿದೆ.ಹೀಗಾಗಿ ಹೊಸದಾಗಿ ಬೆಂಗಳೂರು ಮತ್ತು ನೋಯ್ಡಾದಲ್ಲಿ ಆರಂಭವಾಗಿರುವ ಆಂಡ್ರಾಯ್ಡ್‌ಲ್ಯಾಂಡ್‌ನಲ್ಲಿ ಈ ಟ್ಯಾಬ್ಲೆಟ್ ಆರಂಭದಲ್ಲಿ ಲಭ್ಯವಾಗಲಿದೆ.
ನೆಕ್ಸಸ್ 7 ಟ್ಯಾಬ್ಲೆಟ್ 2 ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ವಿಶೇಷತೆ:
7 ಇಂಚಿನ ಎಚ್‌ಡಿ ಐಪಿಎಸ್‌ಸ್ಕ್ರೀನ್(1920x1200 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿಬೀನ್ ಓಎಸ್
1.5GHz ಕ್ವಾಡ್ ಕೋರ್ ಪ್ರೊಸೆಸರ್
16/32GB ಆಂತರಿಕ ಮೆಮೋರಿ
2GB RAM
1.2 ಎಂಪಿ ಮುಂದುಗಡೆ ಕ್ಯಾಮೆರಾ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮೈಕ್ರೋ ಯುಎಸ್‌ಬಿ,ಬ್ಲೂಟೂತ್,ವೈಫೈ,ಎನ್‌ಎಫ್‌ಸಿ,ಜಿಪಿಎಸ್
3950 mAh ಬ್ಯಾಟರಿ
ಇದನ್ನೂ ಓದಿ: ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಬೆಲೆ ದಿಢೀರ್ ಇಳಿಕೆ
ಇದನ್ನೂ ಓದಿ:ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್ ಒಳಗಡೆ ಹೇಗಿದೆ ನೋಡಿದ್ದೀರಾ?


Click it and Unblock the Notifications








