ಎಲ್ ಜಿ ಈಗ ಅಲ್ಟ್ರಾ ಬುಕ್ ಕುಟುಂಬದ ಜೊತೆ

|
ಎಲ್ ಜಿ ಈಗ ಅಲ್ಟ್ರಾ ಬುಕ್ ಕುಟುಂಬದ ಜೊತೆ

LG ಈಗ ಅಲ್ಟ್ರಾ ಬುಕ್ ಕುಟುಂಬದ ಜೊತೆ ಸೇರಿಕೊಂಡಿದೆ. ಏಸರ್, ಲೆನೊವೊ ಗಳು ಹೊಸ ಮಾಡಲ್ ಗಳಿಂದ ತಮ್ಮ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಬೇಕೆಂಬ ಗುರಿಯನ್ನು ಹೊಂದಿದೆ. ಹಾಗೆಯೆ ಕೂಡ LG ಅಲ್ಟ್ರಾ ಬುಕ್ ಮಾಡಲ್ ತಂದಿದ್ದು ಅದನ್ನು Z330 ಎಂದು ಹೆಸರಿಸಲಾಗಿದೆ.

ಈ LG Z330 ಅಲ್ಟ್ರಾ ಬುಕ್ ಮಾಡಲ್ ಮುಖ್ಯವಾಗಿ ಈ ಕೆಳಗಿನ ಪ್ರಮುಖ ಲಕ್ಷಣವನ್ನು ಹೊಂದಿದೆ.

* ಹಗುರವಾದ ತೂಕ

* 13 ಇಂಚಿನ ಡಿಸ್ ಪ್ಲೇ

* ಇಂಟಲ್ ಸೆಕಂಡ್ ಜನರೇಶನ್ ಪ್ರೊಸೆಸರ್

* ಬ್ಲೂಟೂಥ್

* ವೈಫೈ ಸೌಲಭ್ಯ

ಈ ಅಲ್ಟ್ರಾ ಬುಕ್ ನೋಡಲು ಸುಂದರವಾಗಿದ್ದು ಇದರ ಶೀಘ್ರವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಮ್ಯಾಕ್ ಬುಕ್ ಅಥವಾ ಆಪಲ್ ಮಾಡಲ್ ಗಳನ್ನು ಹೋಲುತ್ತದೆ. ಈ ಅಲ್ಟ್ರಾ ಬುಕ್ 0.6 ಇಂಚಿನ ದಪ್ಪವನ್ನು ಹೊಂದಿದ್ದು 1.22 ಕೆಜಿಗಿಂತ ಕಡಿಮೆ ತೂಕವನ್ನು ಹೊಂದಿದೆ. ಆದ್ದರಿಂದ ಇದನ್ನು ಜೊತೆಗೆ ಕೊಂಡೊಯ್ಯಲು ಸುಲಭವಾಗಿದೆ.ಇದು 13 ಇಂಚಿನ ಸ್ಕ್ರೀನ್ ಹೊಂದಿದ್ದು, ಇದರಲ್ಲಿ ವೀಡಿಯೊ ಮತ್ತು ಹೈ ಡೆಫಿನೆಷಿನ್ ಸಿನಿಮಾಗಳನ್ನು ಕೂಡ ನೋಡಬಹುದಾದಷ್ಟು ಅಗ್ಯತದ ರೆಶ್ಯೂಲೇಶನ್ ಹೊಂದಿದೆ.

ಈ ಅಲ್ಟ್ರಾ ಬುಕ್ ನಲ್ಲಿ 1.6 GHz ಇಂಟಲ್ i5 ಮತ್ತು 1.8GHz i7 ಎಂಬ 2 ರೀತಿಯ ಪ್ರೊಸೆಸರ್ ಇದ್ದು ಬಳಕೆದಾರರು ತಮಗೆ ಇಷ್ಟವಾದ ಪ್ರೊಸೆಸರ್ ಬಳಸಬಹುದಾಗಿದೆ. ಅಲ್ಲದೆ 120 GB ಮತ್ತು 256 GB ಸಾಮರ್ಥ್ಯದ ಹಾರ್ಡ್ ಡಿಸ್ಕ್ ಇದ್ದು ಬಳಕೆದಾರರು ತಮಗೆ ಇಷ್ಟ ಬಂದ ಪ್ರೊಸೆಸರ್ ಆಯ್ಕೆ ಮಾಡಬಹುದಾಗಿದೆ.

ಇದರಲ್ಲಿ ಬ್ಲೂಟೂಥ್ ಸಂಪರ್ಕ, ವೈಫೈ ಮತ್ತು USB ಪೋರ್ಟ್ಸ್ ಸೌಲಭ್ಯವಿದ್ದು ಇದರಲ್ಲಿ ಬ್ಲೂಟೂಥ್ 3.0 ಆಯಾಮವನ್ನು ಬಳಸಲಾಗಿದೆ.

ಇದರ ಮಾರುಕಟ್ಟೆ ಬೆಲೆ ರು.75, 000-1,00,000 ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದ್ದು ಇದರ ಜೊತೆ ಮೈಕ್ರೊSD ಕಾರ್ಡ್ ರೀಡರ್ ಕೂಡ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X