Subscribe to Gizbot

ಸ್ಯಾಮ್‌ಸಂಗ್ 10.5 ಟ್ಯಾಬ್ಲೆಟ್ ವೀಡಿಯೊ ವಿಶ್ಲೇಷಣೆ

Written By:

ಕೆಲವು ವರ್ಷಗಳಿಂದೀಚೆಗೆ ಕ್ಯುಪರ್ಟಿನೋ ಮೂಲದ ಆಪಲ್ ಟ್ಯಾಬ್ಲೆಟ್ ಮಾರುಕಟ್ಟೆಯನ್ನು ಆಳುತ್ತಿದೆ. ನಿಜಕ್ಕೂ ವಿಶ್ವದಾದ್ಯಂತ ಟ್ಯಾಬ್ಲೆಟ್ ಮಾರಾಟದ ವಿಷಯ ಬಂದಾಗ ಆಪಲ್ ಪ್ರಥಮ ಸ್ಥಾನದಲ್ಲಿದೆ. ಗ್ರಾಹಕರೂ ಕೂಡ ಆಪಲ್ ತಯಾರಿತ ಟ್ಯಾಬ್ಲೆಟ್ ಕಡೆಗೆ ಹೆಚ್ಚಿನ ಮನವನ್ನು ನೀಡುತ್ತಿದ್ದು ಇದರಿಂದ ಇದರ ಬೇಡಿಕೆ ಕಡಿಮೆಯಾಗದೇ ಹೆಚ್ಚಾಗುತ್ತಿದೆ.

ಇದೀಗ ಆಪಲ್‌ಗೂ ಪೈಪೋಟಿ ಕೊಡುವ ಇನ್ನೊಂದು ಸಾಮರ್ಥ್ಯಶಾಲಿ ಕಂಪೆನಿ ಬಂದಾಗಿದೆ. ದಕ್ಷಿಣ ಕೊರಿಯಾದ ಈ ಮಹಾನ್ ಪ್ರತಿಭೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 10.5 ಮೂಲಕ ಬಂದಿದೆ. ಮಾರುಕಟ್ಟೆಯಲ್ಲಿ ಸದ್ಯಕ್ಕೆ ಈ ಟ್ಯಾಬ್ ಕುರಿತ ಚರ್ಚೆಯೇ ಹೆಚ್ಚುಸ ಸುದ್ದಿ ಗ್ರಾಸವಾಗುತ್ತಿದೆ.

ಆಪಲ್‌ಗೆ ಪೈಪೋಟಿ ನೀಡಲಿರುವ 10.5 ಟ್ಯಾಬ್ಲೆಟ್

ಈ ಟ್ಯಾಬ್ಲೆಟ್ 10.5 ಮತ್ತು 8.4 ಇಂಚಿನ ಡಿಸ್‌ಪ್ಲೇ ಗಾತ್ರಗಳಲ್ಲಿ ಲಭ್ಯವಾಗುತ್ತಿದ್ದು, ಟ್ಯಾಬ್ ಎಸ್ ಶ್ರೇಣಿಯು ಜಾಗತಿಕವಾಗಿ ಹೊಸ ಅಲೆಯನ್ನು ಉಂಟುಮಾಡುತ್ತಿದೆ. ಇದು ಸೂಪರ್ AMOLED ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಶಕ್ತಿಯುತ ಹಾರ್ಡ್‌ವೇರ್ ಅನ್ನು ಹೊಂದಿದೆ. ಇಂದಿನ ಲೇಖನದಲ್ಲಿ ಟ್ಯಾಬ್ 10.5 ವೀಡಿಯೊ ವಿಶ್ಲೇಷಣೆಯನ್ನು ಗಮನಿಸೋಣ.

ಇದು ಆಕರ್ಷಕ ವಿನ್ಯಾಸದಲ್ಲಿ ಮನಸೆಳೆಯುವಂತಿದ್ದು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಟ್ಯಾಬ್ಲೆಟ್ ಆಪಲ್ ಐಪ್ಯಾಡ್ ಏರ್‌ಗಿಂತ ಹೆಚ್ಚು ತೆಳುವಾಗಿದ್ದು, 6.6mm ದಪ್ಪನಾಗಿದೆ. ಇದರ ಮೆಟಲ್ ಫ್ರೇಮ್ ನಿಜಕ್ಕೂ ಮನವನ್ನು ಕದಿಯುವಂತಿದ್ದು ಇದು ಮೈಕ್ರೋ ಎಸ್‌ಡಿ ಮತ್ತು ಸಿಮ್ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ. ಟ್ಯಾಬ್ಲೆಟ್‌ನ ಮೇಲ್ಭಾಗದಲ್ಲಿ IR ಎಮಿಟರ್ ಕೂಡ ಇದೆ.

ಗ್ಯಾಲಕ್ಸಿ S5 ಗೆ ಹೋಲಿಸಿದಾಗ ಇದರ ರಚನಾ ಗುಣಮಟ್ಟ ತುಸು ಸಪ್ಪೆ ಎಂದೆನಿಸುತ್ತದೆ. ಆದರೂ ಮೆಟಲ್ ಡಿವೈಸ್ ಅನ್ನು ಉತ್ಪಾದಿಸಿ ಕಂಪೆನಿ ಸೈ ಎನ್ನಿಸಿಕೊಂಡಿದೆ. ಇದರಲ್ಲಿ ಕಿಟ್‌ಕ್ಯಾಟ್ 4.4 ಚಾಲನೆಯಾಗುತ್ತಿದ್ದು ಇದು ಸೂಪರ್ AMOLED WQVGA ಡಿಸ್‌ಪ್ಲೇಯನ್ನು ಹೊಂದಿದೆ ಇದರ ರೆಸಲ್ಯೂಶನ್ 2560 x 1600 ಪಿಕ್ಸೆಲ್‌ಗಳಾಗಿವೆ. ಇದು ಬೆರಳಚ್ಚು ತಂತ್ರಜ್ಞಾನವನ್ನು ಕೂಡ ಹೊಂದಿದೆ.

<center><iframe width="100%" height="510" src="//www.youtube.com/embed/Q8WCQCoXazc" frameborder="0" allowfullscreen></iframe></center>

Read more about:
English summary
This article tells about Samsung galaxy tab 10.5 video review and features.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot