ಝೆನ್‌ ಅಲ್ಟ್ರಾಟ್ಯಾಬ್‌ ಎ700 3ಜಿ ಟ್ಯಾಬ್ಲೆಟ್‌ ಬಿಡುಗಡೆ

Posted By: Staff
ಝೆನ್‌ ಅಲ್ಟ್ರಾಟ್ಯಾಬ್‌ ಎ700 3ಜಿ ಟ್ಯಾಬ್ಲೆಟ್‌ ಬಿಡುಗಡೆ

ಝೆನ್‌ ಅಲ್ಟ್ರಾಟ್ಯಾಬ್‌ ಎ900 ಟ್ಯಾಬ್ಲೆಟ್‌ ಬಿಡುಗಡೆಯ ನಂತರ, ಝೆನ್‌ ಮೊಬೈಲ್ಸ್‌ ಸಂಸ್ಥೆಯು ಇದೀಗ ಮತ್ತೊಂದು ನೂತನ ಆಂಡ್ರಾಯ್ಡ್ ಚಾಲಿತ ಟ್ಯಾಬ್ಲೆಟ್‌ ಆದಂತಹ ಝೆನ್‌ ಅಲ್ಟ್ರಾ ಟ್ಯಾಬ್‌ ಎ700 3ಜಿ ಟ್ಯಾಬ್ಲೆಟ್‌ ಅನ್ನು ರೂ. 9,499 ದರದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಂದಹಾಗೆ ಝೆನ್‌ ಮೊಬೈಲ್ಸ್‌ ಸಂಸ್ಥೆಯು ಜನಪ್ಇಯ ಆನ್‌ಲೈನ್‌ ಮಳಿಗೆಯಾದಂತಹ ಹೋಮ್‌ಶಾಪ್‌18 ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಈ ಮೂಲಕ ಮಾರುಕಟ್ಟೆಗೆ ವಿತರಣೆಯಾಗಲಿದೆ.

ಅಂದಹಾಗೆ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ಬಜೆಟ್‌ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ಗಳು ಲಭ್ಯವಿದ್ದು ಅವೆಲ್ಲವುಗಳಿಗಿಂತಲೂ ಮಿಗಿಲಾಗಿ ನೂತನ ಝೆನ್‌ ಅಲ್ಟ್ರಾಬುಕ್‌ ಎ700 ಟ್ಯಾಬ್ಲೆಟ್‌ನಲ್ಲಿ ಯಾವ ಫೀಚರ್ಸ್‌ಗಳನ್ನು ನೀಡಲಾಗಿದೆ ಎಂಬುದನ್ನು ಒಮ್ಮೆ ನೋಡಿ ಬರೋಣ.

ವಿಶೇಷತೆ:

ದರ್ಶಕ: ಝೆನ್‌ ಅಲ್ಟ್ರಾಟ್ಯಾಬ್‌ ಎ700 3ಜಿ ಟ್ಯಾಬ್ಲೆಟ್‌ನಲ್ಲಿ 7.5 ಇಂಚಿನ ಪಾಯಿಂಟ್‌ ಮಲ್ಟಿ-ಟಚ್‌ ಕೆಪಾಸಿಟೀವ್‌ ಟಚ್‌ ಸ್ಕ್ರೀನ್‌ ದರ್ಶಕ ನೀಡಲಾಗಿದೆ.

ಪ್ರೊಸೆಸರ್‌ ಹಾಗೂ ಸ್ಟೋರೇಜ್‌: 1.2GHz ARM ಕಾರ್ಟೆಕ್ಸ್‌ ಎ8 ಪ್ರೊಸೆಸರ್‌ ನೊಂದಿಗೆ 512ಎಂಬಿ RAM, 4ಜಿಬಿ ಆಂತರಿಕ ಸ್ಟೋರೇಜ್‌ ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ನೀಡಲಾಗಿದ್ದು 32ಜಿಬಿ ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.

ಆಪರೇಟಿಂಗ್‌ ಸಿಸ್ಟಂ: ಬಜೆಟ್‌ ಟ್ಯಾಬ್ಲೆಟ್‌ ಆದ್ದರಿಂದ ನೂತನ ಟ್ಯಾಬ್ಲೆಟ್‌ನಲ್ಲಿ ಆಂಡ್ರಾಯ್ಡ್‌ 4.0 ಐಸ್‌ ಕ್ರೀಂ ಸ್ಯಾಂಡ್ವಿಚ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಕ್ಯಾಮೆರಾ: ವಿಡಿಯೋ ಕರೆಗಾಗಿ ಮುಂಬದಿಯ 1.3 ಎಂಪಿ ಕ್ಯಾಮೆರಾ ನೀಡಲಾಗಿದ್ದು,ಹಿಂಬದಿಯ ಕ್ಯಾಮೆರಾ ಹಾಗೂ ಉತ್ತಮ ರೆಸೆಲ್ಯೂಷನ್‌ ಹೊಂದಿಲ್ಲ.

ಕನೆಕ್ಟಿವಿಟಿ: ವೈ-ಫೈ, ಡಾಂಗಲ್‌ ಮೂಲಕ 3ಜಿ ಹಾಘೂ ಸಿಮ್‌ ಕಾರ್ಟ್ ಸಪೋರ್ಟ್‌ ನೀಡಲಾಗಿದ್ದು, ಬ್ಲೂಟೂತ್ ಸಹ ಹೊಂದಿದೆ.

ಬ್ಯಾಟರಿ: 3,000 mAh ಬ್ಯಾಟರಿ ನೀಡಲಗಿದ್ದು ಕ್ಷಮತೆ ಕುರಿತಾಗಿ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ.

ಬೆಲೆ ಹಾಗೂ ಲಭ್ಯತೆ

ಖರೀದಿಸುವುದಾದರೆ ನೂತನ ಝೆನ್‌ ಅಲ್ಟ್ರಾಟ್ಯಾಬ್‌ ಎ700 3ಜಿ ಟ್ಯಾಬ್ಲೆಟ್ ರೂ. 9,499 ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಹೋಮ್‌ಶಾಪ್‌18 ಮೂಲಕ ಖರೀದಿಸಬಹುದಾಗಿದೆ.

2012 ರಲ್ಲಿನ ಮೋಸ್ಟ್‌ ಸರ್ಚ್‌ಡ್‌ ಟ್ಯಾಬ್ಲೆಟ್‌ಗಳು

ಟಾಪ್‌ 5 ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಟ್ಯಾಬ್ಲೆಟ್ಸ್‌

ಕಡಿಮೆ ದರದಲ್ಲಿನ ಟಾಪ್‌ 5 ಲ್ಯಾಪ್‌ಟಾಪ್‌ಗಳು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot